ಬಾಳೆಹಣ್ಣು ಪೌಷ್ಟಿಕ ಎಂದು ಗೊತ್ತು, ಆದರೆ ಇದನ್ನು ಪ್ರತಿದಿನ ತಿನ್ನುವುದರಿಂದ ಸಿಗುವ 5 ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ?

ನಮಸ್ಕಾರ ಸ್ನೇಹಿತರೇ, ಬಾಳೆಹಣ್ಣಿನಲ್ಲಿ ಅನೇಕ ಪೌಷ್ಟಿಕಾಂಶಗಳು ನಮ್ಮ ದೇಹಕ್ಕೆ ಅಗತ್ಯವಾದ ತ್ವರಿತ ಶಕ್ತಿಯನ್ನು ನೀಡುತ್ತವೆ ಎಂಬುದು ನಿಮಗೆಲ್ಲರಿಗೂ ಬಹುಶಃ ತಿಳಿದೇ ಇರುತ್ತದೆ. ಇದನ್ನು ಸೇವಿಸುವುದರಿಂದ ನಿಮ್ಮ ಹೊಟ್ಟೆ ಬಹಳ ಸುಲಭವಾಗಿ ತುಂಬುತ್ತದೆ. ಇದರಿಂದ ನಿಮಗೆ ಬಹುಬೇಗನೆ ಹಸಿವಾಗುವುದಿಲ್ಲ, ಅದೇ ಕಾರಣಕ್ಕಾಗಿ ಸಾಮಾನ್ಯವಾಗಿ ಬಹುತೇಕ ಜನರು ಪ್ರತಿದಿನ ಬಾಳೆಹಣ್ಣನ್ನು ಸೇವಿಸುತ್ತಾರೆ. ಆದರೆ ಸ್ನೇಹಿತರೇ ನಾವು ಪ್ರತಿದಿನ ಬಾಳೆಹಣ್ಣನ್ನು ಸೇವಿಸುವುದರಿಂದ ನಿಮಗೆ ಉಂಟಾಗುವ ಪ್ರಮುಖ 5 ಲಾಭಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ. ಬಹುಶಹ ಕೆಲವು ಅಂಶಗಳು ಈಗಾಗಲೇ ನಿಮಗೆ ತಿಳಿದಿರಬಹುದು ಅಥವಾ ತಿಳಿಯದೇ ಇರಬಹುದು. ಬನ್ನಿ ನಾವು ಇಂದು ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡುತ್ತೇವೆ. ಆದರೆ ಸ್ನೇಹಿತರೇ ಈ ಲೇಖನ ಓದಿದ ನಂತರ ಖಂಡಿತ ನೀವು ನಿಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಎನರ್ಜಿ ಡ್ರಿಂಕ್ ಗಳ ಮೊರೆಹೋಗುವ ಬದಲು ಬಾಳೆಹಣ್ಣು ಬಳಸುವುದು ಸೂಕ್ತ ಎಂಬುದನ್ನು ತಿಳಿದುಕೊಳ್ಳುತ್ತೀರಿ.

ಮೊದಲನೆಯದಾಗಿ ಬಾಳೆಹಣ್ಣಿನಲ್ಲಿರುವ ಪೌಷ್ಟಿಕಾಂಶಗಳು ನಿಮ್ಮ ಚರ್ಮವು ಹಳೆಯದಾದಂತೆ ನೋಡಿಕೊಳ್ಳುತ್ತವೆ. ಅಂದರೆ ನೀವು ಪ್ರತಿ ದಿನ ಬಾಳೆಹಣ್ಣು ಸೇವಿಸುತ್ತಿದ್ದರೇ ಅದು ನಿಮ್ಮ ಚರ್ಮದ ಮೇಲೆ ವಯಸ್ಸಾದ ಚಿನ್ಹೆಗಳನ್ನು ತಡೆಯುತ್ತದೆ. ಇದಕ್ಕೆ ಒಂದು ಕಾರಣವೆಂದರೆ ಬಾಳೆ ಹಣ್ಣುಗಳಲ್ಲಿ ವಿಟಮಿನ್ ಸಿ ಹಾಗೂ ಮ್ಯಾಂಗನೀಸ್ ಅಂಶಗಳು ಬಹಳ ಉತ್ತಮವಾಗಿದ್ದು, ಇದು ನಿಮ್ಮ ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ವಿಟಮಿನ್-ಸಿ ನಿಮ್ಮ ಚರ್ಮಕ್ಕೆ ಉತ್ಕರ್ಷಣ ನಿರೋಧಕ ವಾಗಿ ಕಾರ್ಯನಿರ್ವಹಿಸಲಿದ್ದು, ಇದು ನಿಮ್ಮ ಜೀವಕೋಶಗಳು ಮತ್ತು ಅಂಗಾಂಶಗಳನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲದೆ ವಿಟಮಿನ್ ಸಿ ಮತ್ತು ಮ್ಯಾಂಗನೀಸ್ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಲು ಹಾಗೂ ಸುಕ್ಕುಗಳು ಬರದಂತೆ ತಡೆಯಲು ಅಗತ್ಯವಿರುವ ಅಂಶಗಳನ್ನು ಹೆಚ್ಚಿಸುತ್ತದೆ.

ಇನ್ನು ಎರಡನೆಯದಾಗಿ ಬಹುತೇಕ ಜನರು ತೂಕವನ್ನು ಹೆಚ್ಚಿಸಿಕೊಳ್ಳಲು ಬಾಳೆಹಣ್ಣನ್ನು ತಿನ್ನುತ್ತಾರೆ. ಆದರೆ ತೂಕ ಇಳಿಸಿಕೊಳ್ಳಲು ಕೂಡ ಬಾಳೆಹಣ್ಣನ್ನು ನೀವು ಸೇವಿಸಬಹುದು, ಸ್ನೇಹಿತರೇ ಸಾಮಾನ್ಯವಾಗಿ ಹಾಲಿನೊಂದಿಗೆ ಬಾಳೆಹಣ್ಣು ಸೇವಿಸಿದಾಗ ಅದು ನಿಮ್ಮ ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ನೀವು ಕೇವಲ ಬಾಳೆಹಣ್ಣು ಮಾತ್ರ ಸೇವಿಸಿದಾಗ ಇದು ನಿಮ್ಮ ತೂಕವನ್ನು ಕಡಿಮೆ ಮಾಡುತ್ತದೆ. ಯಾಕೆಂದರೆ ಒಂದು ಬಾಳೆಹಣ್ಣಿನಲ್ಲಿ ಸರಿ ಸುಮಾರು ನೂರು ಕ್ಯಾಲೋರಿಗಳು ಕಂಡು ಬರಲಿದ್ದು, ಮಧ್ಯಮ ಗಾತ್ರದ 2-3 ಬಾಳೆಹಣ್ಣುಗಳು ಸೇವಿಸಿದರೆ ಸಾಕು ನಿಮ್ಮ ಹೊಟ್ಟೆ ತುಂಬುತ್ತದೆ. ಇದರಿಂದ ನಿಮಗೆ ಹಸಿವು ಕಡಿಮೆಯಾಗುತ್ತದೆ ಅಷ್ಟೇ ಅಲ್ಲದೆ ನಿಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಒಂದು ವೇಳೆ ನೀವು ತೂಕ ಕಡಿಮೆ ಮಾಡಿಕೊಳ್ಳಲು ಬಯಸಿದರೇ, ಹೆಚ್ಚು ಹಣ್ಣಾದ ಬಾಳೆಹಣ್ಣುಗಳನ್ನು ಸೇವಿಸಬೇಡಿ, ಅಂದರೆ ಕಡಿಮೆ ಮಾಗಿದ ಹಣ್ಣುಗಳನ್ನು ಬಳಸಿ ಇದರಿಂದ ನಿಮಗೆ ತೂಕ ಇಳಿಸಿಕೊಳ್ಳಲು ಬೇಕಾದ ಎಲ್ಲಾ ಅಂಶಗಳು ಲಭ್ಯವಾಗುತ್ತವೆ.

ಸ್ನೇಹಿತರೇ, ನೀವು ಜಾಹೀರಾತುಗಳಲ್ಲಿ ನೋಡಿರಬಹುದು, ತ್ವರಿತ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಎನರ್ಜಿ ಡ್ರಿಂಕ್ ಗಳನ್ನು ಸೇವಿಸಿ ಎಂದು ತೋರಿಸಲಾಗುತ್ತದೆ. ಆದರೆ ಸ್ನೇಹಿತರೇ ಹೇರಳವಾಗಿ ಸಿಗುವ ಬಾಳೆಹಣ್ಣುಗಳನ್ನು ಸೇವಿಸಿದರೆ ನಿಮಗೆ ಅಗತ್ಯವಿರುವ ತ್ವರಿತ ಶಕ್ತಿ ಲಭ್ಯವಾಗುತ್ತದೆ. ಬಾಳೆಹಣ್ಣು ನೈಸರ್ಗಿಕವಾಗಿದ್ದು ನಿಮಗೆ ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ. ಇನ್ನು ಬಾಳೆಹಣ್ಣಿನಲ್ಲಿ ಯಾವುದೇ ರೀತಿಯ ಕೊಬ್ಬಿನ ಅಂಶಗಳು ಇರುವುದಿಲ್ಲ, ಇದು ನೈಸರ್ಗಿಕ ಸಕ್ಕರೆಯ ಅಂಶಗಳನ್ನು ಹೊಂದಿದ್ದು ನಿಮಗೆ ಎನರ್ಜಿ ಡ್ರಿಂಕ್ ಗಳಲ್ಲಿರುವ ಅಂಶಗಳಿಗಿಂತ ಹೆಚ್ಚು ಶಕ್ತಿಯನ್ನು ಹೊಂದಿದೆ. ಅದಕ್ಕಾಗಿ ಜನರು ವ್ಯಾಯಾಮ ಅಥವಾ ಪ್ರಯಾಣದ ಸಂದರ್ಭದಲ್ಲಿ ಬಾಳೆಹಣ್ಣು ಸೇವಿಸಿದರೆ ಬಹಳ ಉತ್ತಮ ಎಂಬುದು ವೈದ್ಯಶಾಸ್ತ್ರ ದಿಂದ ಸಾಬೀತಾಗಿದೆ.

ಇನ್ನು ರಕ್ತದ ಒತ್ತಡವನ್ನು ಕಡಿಮೆ ಮಾಡಲು ಬಾಳೆಹಣ್ಣು ಬಹಳ ಸಹಕಾರಿಯಾಗಿದೆ, ಬಾಳೆಹಣ್ಣನ್ನು ರಕ್ತದ ಒತ್ತಡವನ್ನು ಎದುರಿಸುತ್ತಿರುವ ಜನರಿಗೆ ನೀಡಿದರೇ ಇದು ಬಹಳ ಪ್ರಯೋಜನಕಾರಿ ಕೆಲಸ ಮಾಡುತ್ತದೆ ಎಂದು ವೈದ್ಯ ಶಾಸ್ತ್ರ ತಿಳಿಸುತ್ತದೆ. ಯಾಕೆಂದರೆ ಸ್ನೇಹಿತರೆ ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಅಂಶಗಳು ಕಡಿಮೆ ಇದ್ದು, ಇದು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ನೀಡುತ್ತದೆ. ಒಂದು ದೊಡ್ಡ ಬಾಳೆಹಣ್ಣನ್ನು ಸೇವಿಸುವುದರಿಂದ ನಿಮ್ಮ ದೈನಂದಿನ ಅವಶ್ಯಕತೆಯ ಹತ್ತು ಪರ್ಸೆಂಟ್ ಪೋಟಸಿಯಂ ನಿಮ್ಮ ದೇಹಕ್ಕೆ ಸೇರುತ್ತದೆ. ಇದರಿಂದ ನಿಮ್ಮ ರಕ್ತದೊತ್ತಡ ಕಡಿಮೆ ಮಾಡಲು ನಿಮ್ಮ ದೇಹಕ್ಕೆ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಬಾಳೆಹಣ್ಣು ನಿಮ್ಮ ಹೃದಯ ಹಾಗೂ ಮೂತ್ರಪಿಂಡಕ್ಕೂ ಬಹಳ ಉಪಯುಕ್ತವೆನಿಸಿದೆ.

ಇನ್ನು ಗರ್ಭಾವಸ್ಥೆಯಲ್ಲಿಯೂ ಕೂಡ ಬಾಳೆಹಣ್ಣು ಸುರಕ್ಷಿತ ಎನಿಸಿದ್ದು, ಇದರಿಂದ ಯಾವುದೇ ಸಮಸ್ಯೆಗಳು ಕಂಡು ಬರುವುದಿಲ್ಲ ಎಂಬುದು ವೈದ್ಯಶಾಸ್ತ್ರ ದಿಂದ ಸಾಬೀತಾಗಿದೆ. ಅದರಲ್ಲಿಯೂ ಈ ಸಮಯದಲ್ಲಿ ಅನುಭವಿಸುವ ರಕ್ತದ ಒತ್ತಡ, ವಾಂತಿ ಅಥವಾ ವಾಕರಿಕೆ ಮತ್ತು ಮಲಬದ್ಧತೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಬಾಳೆಹಣ್ಣು ಬಹಳ ಪ್ರಯೋಜನಕಾರಿಯಾಗಿದೆ.

banana benefits in kannadabanana health tipsbanana useBest newshealth tipshealth tips in kannadaKannadakannada health tipsKannada NewsKarunaada Vaaniಆರೋಗ್ಯ ಟಿಪ್ಸ್ಆರೋಗ್ಯ ಸಲಹೆಗಳುಕನ್ನಡಕನ್ನಡ ನ್ಯೂಸ್ಕರುನಾಡ ವಾಣಿಬಾಳೆಹಣ್ಣು