ಆರೋಗ್ಯಕ್ಕೆ ಬಹಳ ಉಪಕಾರಿಯಾಗಿರುವ ತುಳಸಿಯನ್ನು ಅಗಿದು ತಿನ್ನಬಾರದೇಕೆ? ಹೇಗೆ ಸೇವಿಸಬೇಕು ಗೊತ್ತೇ?

ಆರೋಗ್ಯಕ್ಕೆ ಬಹಳ ಉಪಕಾರಿಯಾಗಿರುವ ತುಳಸಿಯನ್ನು ಅಗಿದು ತಿನ್ನಬಾರದೇಕೆ? ಹೇಗೆ ಸೇವಿಸಬೇಕು ಗೊತ್ತೇ?

ನಮಸ್ಕಾರ ಸ್ನೇಹಿತರೇ, ನಮ್ಮ ಪೂರ್ವಜರು, ಆಯುರ್ವೇದ ಹಾಗೂ ಹಿಂದಿನ ವೈಜ್ಞಾನಿಕ ಜಗತ್ತು ಕೂಡ ತುಳಸಿ ಎಲೆಗಳನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಇದರಿಂದ ಮಾನವನ ದೇಹಕ್ಕೆ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ ಎಂಬ ಮಾಹಿತಿಯನ್ನು ಒಪ್ಪಿಕೊಳ್ಳುತ್ತವೆ. ತುಳಸಿ ಎಲೆಗಳನ್ನು ಕ್ರಮೇಣ ನಾವು ಸೇವಿಸುತ್ತಾ ಹೋದರೇ ಪ್ರಮುಖವಾಗಿ ಕೆಮ್ಮು, ಶೀತಾ ಹಾಗೂ ಕಫದ ಚಿಕಿತ್ಸೆಯಲ್ಲಿ ಬಹಳ ಸಹಕಾರಿಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ಅದರಲ್ಲಿಯೂ ಪ್ರಮುಖವಾಗಿ ಎರಡು ಅಥವಾ ಮೂರು ತುಳಸಿ ಎಲೆಗಳನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮನುಷ್ಯರು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದಾಗಿದೆ.

ಹೀಗೆ ತುಳಸಿ ಎಲೆಗಳನ್ನು ಸೇವಿಸುವ ಕಾರಣ ನಮಗೆ ಹಲವಾರು ಲಾಭಗಳು ದೊರೆಯುತ್ತವೆ, ಆದರೆ ಇತ್ತೀಚಿನ ವರದಿಯ ಪ್ರಕಾರ ತುಳಸಿ ಎಲೆಗಳನ್ನು ನಾವು ನೇರವಾಗಿ ನಮ್ಮ ಬಾಯಿಗೆ ಹಾಕಿಕೊಂಡು ಅಗಿಯಬಾರದು ಎಂಬುದು ತಿಳಿದುಬಂದಿದೆ. ಕೇವಲ ಅಗಿಯಬಾರದಷ್ಟೇ, ಆದರೆ ಸೇವನೆ ನಿಲ್ಲಿಸಬೇಡಿ. ಹೌದು ಸ್ನೇಹಿತರೇ ತುಳಸಿ ಎಲೆಗಳನ್ನು ಕ್ರಮೇಣ ಬಾಯಿಯಲ್ಲಿ ಅಗಿಯುವುದರಿಂದ ಉತ್ಪತ್ತಿಯಾಗುವ ಪಾದರಸವು ಕರುಳಿನ ಕಾರ್ಯದಲ್ಲಿ ಕೆಲವು ತೊಡಕುಗಳು ಉಂಟು ಮಾಡುತ್ತದೆ ಹಾಗೂ ನಿಮ್ಮ ಹಲ್ಲುಗಳನ್ನು ಹ’ದಗೆ’ಡಿಸುತ್ತದೆ ಎಂಬುದು ತಿಳಿದುಬಂದಿದೆ. ತುಳಸಿ ಎಲೆಗಳು ಸ್ವಲ್ಪ ಮಟ್ಟದಲ್ಲಿ ಆಮ್ಲಿಯ ಸ್ವರೂಪವನ್ನು ತಮ್ಮಲ್ಲಿ ಅಡಗಿಸಿಕೊಂಡಿದ್ದು ಅದೇ ಕಾರಣಕ್ಕಾಗಿ ನೇರವಾಗಿ ಸೇವಿಸುವುದನ್ನು ಕೊಂಚ ಕಡಿಮೆ ಮಾಡಿದರೇ ಒಳ್ಳೆಯದು ಎಂದು ವರದಿಯಿಂದ ತಿಳಿದುಬಂದಿದೆ.

ಆದರೆ ತುಳಸಿಯನ್ನು ಸೇವಿಸಲು ಇನ್ನೂ ಹತ್ತು ಹಲವಾರು ಸುಲಭವಾದ ಮಾರ್ಗಗಳಿದ್ದು, ಮುಂಜಾನೆ ಚಹಾದಲ್ಲಿ ಸೇರಿಸುವುದು ಬಹಳ ಉತ್ತಮವೆನಿಸಿದೆ. ಅಷ್ಟೇ ಅಲ್ಲದೆ ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ ನೀರನ್ನು ಕುಡಿಯುವುದು, ಅಥವಾ ನೀರಿನ ರುಚಿಯನ್ನು ಹೆಚ್ಚಿಸಿಕೊಳ್ಳಲು ಜೇನುತುಪ್ಪ ಮತ್ತು ನಿಂಬೆಯನ್ನು ಕೂಡ ಸೇರಿಸಬಹುದಾಗಿದೆ. ಅಷ್ಟೇ ಅಲ್ಲದೆ ತುಳಸಿ ಎಲೆಗಳನ್ನು ಒಣಗಿಸಿ ಪುಡಿಮಾಡಿಕೊಂಡು, ಎರಡು ಚಮಚ ತುಪ್ಪದೊಂದಿಗೆ ಅರ್ಧ ಟೀ ಚಮಚ ತುಳಸಿ ಪುಡಿಯನ್ನು ಮಿಶ್ರಣ ಮಾಡಿ ರೊಟ್ಟಿ ಅಥವಾ ಚಪಾತಿ ಗಳೊಂದಿಗೆ ಸೇವಿಸಿದರೇ ಬಹಳ ಲಾಭಗಳು ಸಿಗುತ್ತದೆ ಎಂಬುದು ತಿಳಿದುಬಂದಿದೆ.