ಆರೋಗ್ಯಕರ ಮತ್ತು ಮೃದುವಾದ ಕೂದಲಿಗೆ ದುಬಾರಿ ಚಿಕಿತ್ಸೆಗಳ ಬದಲು ಈ ಮನೆಮದ್ದುಗಳನ್ನು ಪ್ರಯತ್ನಿಸಿ

ನಮಸ್ಕಾರ ಸ್ನೇಹಿತರೇ, ಇಂದಿನ ಆಧುನಿಕ ಜಗತ್ತಿನಲ್ಲಿ ಕೂದಲು ಉದುರುವಿಕೆ ಸಾಮಾನ್ಯವಾಗಿಬಿಟ್ಟಿದೆ. ಡಿಜಿಟಲ್ ಯುಗದಲ್ಲಿ ಚಿಕ್ಕ ವಯಸ್ಸಿನಿಂದಲೇ ಕೂದಲು ಉದುರುವಿಕೆ ಆರಂಭವಾಗುತ್ತದೆ. ಬಿಳಿ ಕೂದಲಿನ ಸಮಸ್ಯೆಯು ಕೂಡ ಕಾಣಿಸಿಕೊಳ್ಳುತ್ತದೆ. ಯುವ ಜನಾಂಗದವರು ಇದರ ಕುರಿತು ಹೆಚ್ಚು ಚಿಂತನೆ ಮಾಡಿ ಆಸ್ಪತ್ರೆ, ಪಾರ್ಲರ್ ಎಂದು ಹಣ ವ್ಯತಯ ಮಾಡುತ್ತಾರೆ. ಆದರೆ ಸ್ನೇಹಿತರೇ, ರಾಸಾಯಿನಕಗಳು ಯಾವತ್ತೂ ರಾಸಾಯನಿಕಗಳು ಎಂಬುದನ್ನು ಮರೆಯಬಾರದು. ರಾಸಾಯನಿಕಗಳಿಂದ ಏನೇ ಮಾಡಿದರೂ ಅದು ಕೇವಲ ತಾತ್ಕಾಲಿಕ. ಹಾಗಿದ್ದರೆ ಕೂದಲಿನ ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇ? ಯಾರು ಹೇಳಿದ್ದು ಇದೆ, ಕೇವಲ ಮನೆಮದ್ದುಗಳ ಮೂಲಕ ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಇಂದು ನಾವು ಕೆಲವನ್ನು ತಿಳಿಸಿಕೊಡುತ್ತೇವೆ.

ಸ್ನೇಹಿತರೇ ನಾವು ದಿನನಿತ್ಯ ಬಳಸುವ ಆಲೂಗಡ್ಡೆಯಲ್ಲಿ ನಮ್ಮ ಕೂದಲುಗಳಿಗೆ ಅಗತ್ಯವಾದ ವಿಟಮಿನ್ ಎ, ಬಿ ಮತ್ತು ಸಿ ಗಳು ಹೇರಳವಾಗಿ ಸಿಗುತ್ತವೆ. ನೀವು ಮಾಡಬೇಕಾಗಿರುವುದೆಲ್ಲಾ ಇಷ್ಟೇ, ಇದರ ರಸವನ್ನು ಕೂದಲಿಗೆ ಹಚ್ಚಬೇಕು. ಆಲೂಗಡ್ಡೆಯ ರಸವನ್ನು ತೆಗೆಯಲು ಮೂರರಿಂದ ನಾಲ್ಕು ಆಲೂಗಡ್ಡೆಯನ್ನು ತೆಗೆದುಕೊಳ್ಳಿ. ಅವುಗಳನ್ನು ಕಟ್ ಮಾಡಿ, ರಸವನ್ನು ತೆಗೆಯಿರಿ. ಈ ರಸದಿಂದ ನಿಮ್ಮ ಕೂದಲಿಗೆ ಚೆನ್ನಾಗಿ ಮಸ್ಸಾಜ್ ಮಾಡಿ, ಹೀಗೆ ಮಾಡಿದ ಒಂದು ಗಂಟೆಯ ಬಾಳಿಕೆ ಉಗುರು ಬೆಚ್ಚಗಿನ ನೀರಿನಲ್ಲಿ ಶಂಪೂ ಬಳಸಿ ತೊಳೆಯಿರಿ. ಒಂದು ವೇಳೆ ನಿಮ್ಮ ಕೂದಲು ಬಹಳ ಒಣಗಿದ್ದರೆ ಅಥವಾ ನಿರ್ಜೀವವಾಗಿದ್ದರೆ ಈ ಆಲೂಗಡ್ಡೆ ರಸದೊಂದಿದೆ ಒಂದು ಮೊಟ್ಟೆಯನ್ನು ಸೇರಿಸಿ, ತದನಂತರ ಮಸಾಜ್ ಮಾಡಿ.

ಎರಡನೆಯದಾಗಿ ಮೆಂತ್ಯ ಬಳಸಿಕೊಂಡು ನೀವು ತಲೆ ಕೂದಲಿನೆ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಹೌದು ಸ್ನೇಹಿತರೇ, ಮೆಂತ್ಯ ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶಗಳು ಇರುತ್ತವೆ. ಈ ಪೌಷ್ಟಕಾಂಶಗಳು ಕೂದಲಿಗೆ ಅತ್ಯಗತ್ಯವಾದ ಅಂಶಗಳನ್ನು ನೀಡಿ ಕೂದಲನ್ನು ಚೆನ್ನಾಗಿ ಕಾಣುವಂತೆ ಮಾಡುತ್ತವೆ. ಅಷ್ಟೇ ಅಲ್ಲಾ, ಇದರಲ್ಲಿರುವ ಕೆಲವು ಅಂಶಗಳು ಕೂದಲನ್ನು ಬಲಿಷ್ಠ ಮಾಡುತ್ತವೆ. ನೀವು ಏನು ಮಾಡಬೇಕು ಎಂದರೇ, ಮೆಂತ್ಯ ಬೀಜಗಳನ್ನು ರಾತ್ರಿ ನೆನೆಹಾಕಿ. ಬೆಳಗ್ಗೆ ಎದ್ದ ನಂತರ ನೀರಿನಿಂದ ಹೊರತೆಗೆದು, ಪೇಸ್ಟ್ ರೂಪದಲ್ಲಿ ರುಬ್ಬಿಕೊಳ್ಳಿ. ತದನಂತರ ಕೊಬ್ಬರಿ ಎಣ್ಣೆ ತೆಗೆದುಕೊಂಡು, ಮೊದಲು ನಿಮ್ಮ ಕೂದಲಿಗೆ ಹಚ್ಚಿ. ಆಮೇಲೆ ಈ ಮೆಂತ್ಯ ಪೇಸ್ಟ್ ಅನ್ನು ಲೇಪಿಸಿ. ಒಂದು ಗಂಟೆಗಳ ಕಾಲ ಒಣಗಲು ಬಿಡಿ. ಇದರಿಂದ ಕೂದಲು ಬಲಿಷ್ಠವಾಗಿ, ಉದುರುವಿಕೆ ನಿಲ್ಲುತ್ತದೆ ಹಾಗೂ ಹೊಳೆಯುತ್ತದೆ.

Best newsHair in kannadaHair tips in kannadahealth tipsKannadakannada health tipsKannada NewsKarunaada Vaaniಆರೋಗ್ಯ ಟಿಪ್ಸ್ಆರೋಗ್ಯ ಸಲಹೆಗಳುಕನ್ನಡಕನ್ನಡ ನ್ಯೂಸ್ಕರುನಾಡ ವಾಣಿಕೂದಲು ಉದುರುವಿಕೆ