ಧರ್ಮಗ್ರಂಥ ಗಳಲ್ಲಿ ಪ್ರಕಾರ ಯಾವುದೇ ಕಾರಣಕ್ಕೂ ಅಧಿಕ ಮಾಸದಲ್ಲಿ ಈ ಕೆಲಸಗಳನ್ನು ಮಾಡಬೇಡಿ !

ಧರ್ಮಗ್ರಂಥ ಗಳಲ್ಲಿ ಪ್ರಕಾರ ಯಾವುದೇ ಕಾರಣಕ್ಕೂ ಅಧಿಕ ಮಾಸದಲ್ಲಿ ಈ ಕೆಲಸಗಳನ್ನು ಮಾಡಬೇಡಿ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಅಧಿಕ ಮಾಸ ಆರಂಭವಾಗಿದೆ. ಈ ತಿಂಗಳು ಒಂದು ಪವಿತ್ರ ತಿಂಗಳು ಎಂದು ಧರ್ಮ ಗ್ರಂಥಗಳು ಹೇಳುತ್ತವೆ, ಈ ತಿಂಗಳಿನಲ್ಲಿ ಪೂಜೆ ಮಾಡುವುದರಿಂದ ಹತ್ತುಪಟ್ಟು ಹೆಚ್ಚಿನ ಫಲ ಸಿಗುತ್ತದೆ ಎಂದು ನಂಬಲಾಗಿದೆ. ಈ ತಿಂಗಳನ್ನು ವಿಶೇಷವಾಗಿ ವಿಷ್ಣುವಿಗೆ ಅರ್ಪಿಸಲಾಗುತ್ತದೆ. ಆದರೆ ಈ ತಿಂಗಳಿನಲ್ಲಿ ಕೆಲವೊಂದು ಕಾರ್ಯಗಳು ಹಾಗೂ ಕೆಲಸಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ. ಪುರಾಣಗಳ ಪ್ರಕಾರ ಈ ತಿಂಗಳನ್ನು ಕೆಟ್ಟದು ಎಂದು ಭಾವಿಸಲಾಗುತ್ತಿತ್ತು, ಆದರೆ ನಂತರ ಮಹಾವಿಷ್ಣುವು ಈ ತಿಂಗಳಿಗೆ ಹೆಸರು ನೀಡಿದ ಮೇಲೆ ಈ ತಿಂಗಳನ್ನು ಬಹಳ ಶುಭವೆಂದು ಪರಿಗಣಿಸಿಲಾಗುತ್ತದೆ. ಅದೇ ಕಾರಣಕ್ಕಾಗಿ ಈ ತಿಂಗಳನ್ನು ಪುರುಷೋತ್ತಮ ತಿಂಗಳು ಎಂದು ಕೂಡ ಕರೆಯಲಾಗುತ್ತದೆ. ಆದರೂ ಕೂಡ ಈ ತಿಂಗಳಿನಲ್ಲಿ ಕೆಲವು ಕೆಲಸಗಳನ್ನು ಮಾಡುವುದು ತಪ್ಪಿಸಬೇಕು ಎಂದು ಧರ್ಮ ಗ್ರಂಥಗಳು ಹೇಳುತ್ತವೆ.

ಮೊದಲನೆಯದಾಗಿ ಈ ಸಮಯದಲ್ಲಿ ಮದುವೆಗಳು ನಡೆಯುವುದಿಲ್ಲ, ಯಾಕೆಂದರೆ ಧರ್ಮಗ್ರಂಥಗಳ ಪ್ರಕಾರ ಈ ಸಮಯದಲ್ಲಿ ಮದುವೆಯಾದರೆ ಜೋಡಿಗಳ ನಡುವೆ ಭಾವನಾತ್ಮಕ ಸಂತೋಷ ಇರುವುದಿಲ್ಲ ಹಾಗೂ ಬಿರುಕು ಮೂಡುವ ಸಾಧ್ಯತೆಗಳು ಹೆಚ್ಚು ಎಂದು ಹೇಳಲಾಗುತ್ತದೆ.

ಇನ್ನು ತಿಂಗಳಿನಲ್ಲಿ ಯಾವುದೇ ಹೊಸ ವ್ಯಾಪಾರ ವಾಗಲಿ ಅಥವಾ ವ್ಯವಹಾರವಾಗಲಿ ಆರಂಭಿಸಬಾರದು. ಯಾಕೆಂದರೆ ಒಂದು ವೇಳೆ ಅಧಿಕಮಾಸದಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸುವುದರಿಂದ ಆರ್ಥಿಕ ಬಿಕ್ಕಟ್ಟು ಎದುರಾಗುತ್ತದೆ ಎಂಬ ನಂಬಿಕೆ ಇದೆ.

ಇನ್ನು ಈ ತಿಂಗಳಿನಲ್ಲಿ ಗುರು ಹಾಗೂ ಹಿರಿಯರನ್ನು ಬಹಳ ಗೌರವದಿಂದ ಕಾಣಬೇಕು ಯಾವುದೇ ಕಾರಣಕ್ಕೂ ಗುರು ಹಿರಿಯರಿಗೆ ಅವಮಾನವಾಗುವಂತೆ ನಡೆದುಕೊಳ್ಳಬಾರದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ತುಳಸಿ ಸಸ್ಯಕ್ಕೆ ಈ ತಿಂಗಳಲ್ಲಿ ಯಾವುದೇ ಕಾರಣಕ್ಕೂ ಅಗೌರವ ತೊರಬಾರದು ಎಂದು ಕೂಡ ತಿಳಿಸಲಾಗಿದೆ. ಈ ಸಮಯದಲ್ಲಿ ತುಳಸಿ ಗಿಡವನ್ನು ಮನೆಯಿಂದ ಹೊರ ಹಾಕಬಾರದು ಎಂದು ಕೂಡ ತಿಳಿಸಲಾಗಿದೆ.

ಅಷ್ಟೇ ಅಲ್ಲದೇ ಈ ಸಮಯದಲ್ಲಿ ಯಾವುದೇ ಮಂಗಳಕಾರ್ಯ ವಾಗಲಿ ಅಥವಾ ಹೊಸ ಮನೆಗಳ ನಿರ್ಮಾಣ ಮತ್ತು ಆಸ್ತಿ ಖರೀದಿ ಮಾಡಬಾರದು ಇದರಿಂದ ಮನೆಯಲ್ಲಿ ಅಶಾಂತಿ ಹಾಗೂ ಸಂತೋಷವನ್ನು ಕಾಪಾಡಿಕೊಳ್ಳಲು ಕಷ್ಟವಾಗುತ್ತದೆ ಎಂದು ಹೇಳಲಾಗಿದೆ. ಇನ್ನು ಸಾಧ್ಯವಾದರೆ ಮಾಂಸಹಾರ ಹಾಗೂ ಮ’ದ್ಯವನ್ನು ತ್ಯಜಿಸಿ ತಿಂಗಳಿನಲ್ಲಿ ಪೂಜೆಯಲ್ಲಿ ನಿರತರಾಗಬೇಕು.