ಮಹೇಶ್ ಬಾಬು ಚಿತ್ರಕ್ಕೆ ಕನ್ನಡದ ಸ್ಟಾರ್ ನಟನನ್ನು ವಿಲನ್ ಮಾಡಲು ಚಿಂತನೆ ! ಯಾರು ಗೊತ್ತಾ??

ಮಹೇಶ್ ಬಾಬು ಚಿತ್ರಕ್ಕೆ ಕನ್ನಡದ ಸ್ಟಾರ್ ನಟನನ್ನು ವಿಲನ್ ಮಾಡಲು ಚಿಂತನೆ ! ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ಚಿತ್ರಗಳಲ್ಲಿ ವಿಲನ್ ಗಳಿಗೆ ಕೂಡ ಸಾಕಷ್ಟು ಪ್ರಾಮುಖ್ಯತೆ ನೀಡಿ ಉತ್ತಮ ನಟರನ್ನು ಆಯ್ಕೆ ಮಾಡಲಾಗುತ್ತದೆ. ಹೀರೋ ಗಳಷ್ಟೇ ಪ್ರಾಮುಖ್ಯತೆ ಪಡೆದುಕೊಳ್ಳುವ ಪಾತ್ರಗಳಿಗೆ ಉತ್ತಮರನ್ನು ಆಯ್ಕೆ ಮಾಡಿದರೇ ಖಂಡಿತ ಅಭಿಮಾನಿಗಳು ವಿಲನ್ ಗಳನ್ನು ನೋಡಲು ಕೂಡ ಥಿಯೇಟರಿಗೆ ಬರುತ್ತಾರೆ ಎಂಬುದು ಈಗಾಗಲೇ ಸಾಬೀತಾಗಿದೆ. ಅದೇ ಕಾರಣಕ್ಕಾಗಿ ಒಂದು ಚಿತ್ರಕ್ಕೆ ಹೀರೋ ಆಯ್ಕೆ ಮಾಡುವ ಮುನ್ನ ಎಷ್ಟು ಲೆಕ್ಕಾಚಾರಗಳು ನಡೆಯುತ್ತವೆಯೋ ವಿಲನ್ ಆಯ್ಕೆ ಮಾಡುವಾಗಲೂ ಕೂಡಾ ಅಷ್ಟೇ ಲೆಕ್ಕಾಚಾರಗಳನ್ನು ಮಾಡಿ ಆಯ್ಕೆ ಮಾಡಲಾಗುತ್ತದೆ. ಪಾತ್ರಕ್ಕೆ ಸೂಕ್ತವಾದ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ.

ಇನ್ನು ತೆಲುಗು ಚಿತ್ರರಂಗದಲ್ಲಿ ಇದು ಸರ್ವೇ ಸಾಮಾನ್ಯ, ಈಗಿನಿಂದ ಅಲ್ಲ ಮೊದಲಿನಿಂದಲೂ ವಿಲನ್ಗಳ ಪಾತ್ರಕ್ಕೆ ಉತ್ತಮರನ್ನು ಆಯ್ಕೆ ಮಾಡಲು ಇನ್ನಿತರ ಚಿತ್ರರಂಗದ ಬಾಗಿಲು ತಟ್ಟುವುದು ಕೂಡ ತೆಲುಗು ಚಿತ್ರರಂಗಕ್ಕೆ ಹೊಸದಲ್ಲ. ಅದರಲ್ಲಿಯೂ ಸ್ಟಾರ್ ನಟರ ಚಿತ್ರಗಳಲ್ಲಿ ವಿಲನ್ ಪಾತ್ರ ನಿರ್ವಹಿಸಲು ಇತರ ಚಿತ್ರರಂಗದ ನಟರನ್ನು ಕರೆತರುವುದು ಟ್ರೆಂಡ್ ಆಗಿದೆ. ಇದೀಗ ಭಾರಿ ನಿರೀಕ್ಷೆ ಮೂಡಿಸಿರುವ ಮಹೇಶ್ ಬಾಬುರವರ ಮುಂದಿನ ಚಿತ್ರವಾದ ಸರ್ಕಾರ ವಾರಿ ಪಾಠ ಎಂಬ ಚಿತ್ರಕ್ಕೆ ಇತರ ಚಿತ್ರರಂಗದಿಂದ ನಟರನ್ನು ಕರೆ ತರಲು ಚಿಂತನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಈ ಮಾಹಿತಿಯ ಪ್ರಕಾರ ಕನ್ನಡದ ಸ್ಟಾರ್ ಮಹೇಶ್ ಬಾಬುರವರ ಚಿತ್ರದಲ್ಲಿ ವಿಲನ್ ಆಗಿ ನಟಿಸಲು ನಿರ್ದೇಶಕರು ಹಾಗೂ ಚಿತ್ರತಂಡ ಬಯಸಿದೆ ಎನ್ನಲಾಗುತ್ತಿದೆ. ಆ ನಟ ಮತ್ತ್ಯಾರು ಅಲ್ಲ ನಟ ಕಿಚ್ಚ ಸುದೀಪ್. ಇವರು ಪ್ರಮುಖ ವಿಲನ್ ಆಗುತ್ತಾರಾ ಅಥವಾ ವಿಲನ್ ರವರ ಜೊತೆಯಲ್ಲಿ ಮತ್ತೊಂದು ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬುದು ಇನ್ನೂ ಪ್ರಶ್ನೆಯಾಗಿ ಉಳಿದಿದೆ. ಆದರೆ ಸರ್ಕಾರಿ ವಾರು ಪಾಠ ಚಿತ್ರತಂಡ ಮಾತ್ರ ಕನ್ನಡ ಚಿತ್ರರಂಗದಿಂದ ಸುದೀಪ್ ಅವರನ್ನು ಆಯ್ಕೆ ಮಾಡಲು ಚಿಂತನೆ ನಡೆಸುತ್ತಿದೆ ಎಂಬುದು ಬಹಿರಂಗಗೊಂಡಿದೆ. ಒಂದು ವೇಳೆ ಅದೇ ನಡೆದಲ್ಲಿ ಮತ್ತೊಂದು ತೆಲುಗು ಚಿತ್ರದಲ್ಲಿ ‌ಸುದೀಪ್ ರವರು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.