ಧಾರಾವಾಹಿಯ ಮೂಲಕ ಚಿತ್ರರಂಗದಲ್ಲಿ ಮಿಂಚುವ ಭರವಸೆ ಮಾಡಿಸಿರುವ ಟಾಪ್ 5 ನಟಿಯರು ಯಾರ್ಯಾರು ಗೊತ್ತಾ??

ಧಾರಾವಾಹಿಯ ಮೂಲಕ ಚಿತ್ರರಂಗದಲ್ಲಿ ಮಿಂಚುವ ಭರವಸೆ ಮಾಡಿಸಿರುವ ಟಾಪ್ 5 ನಟಿಯರು ಯಾರ್ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಕನ್ನಡ ಕಿರುತೆರೆಯಲ್ಲಿ ಸಾಲು-ಸಾಲು ಧಾರವಾಹಿಗಳು ಯಶಸ್ವಿ ಗೊಳ್ಳುತ್ತಿವೆ. ಸತ್ಯ ಹೇಳಬೇಕು ಎಂದರೇ ಹಲವಾರು ಸಿನಿಮಾಗಳ ಗಳಿಕೆಯನ್ನು ಕೂಡ ಈ ಧಾರಾವಾಹಿಗಳು ಮೀರಿಸಿವೆ. ಧಾರಾವಾಹಿಗಾಗಿ ಮೀಸಲಿಡುವ ಬಜೆಟ್ ಕೂಡ ದಿನೇದಿನೇ ಹೆಚ್ಚುತ್ತಿದೆ. ಇದಕ್ಕೆಲ್ಲ ಕಾರಣ ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳು ಉತ್ತಮ ಟಿಆರ್ಪಿ ಪಡೆದುಕೊಂಡು ರಾಜ್ಯದಲ್ಲೆಡೆ ಮನೆಮಾತಾಗಿವೆ. ಇನ್ನು ಈ ಧಾರಾವಾಹಿಗಳಲ್ಲಿ ಅಭಿನಯಿಸುವ ಕಥಾ ನಾಯಕ ಹಾಗೂ ಕಥಾ ನಾಯಕಿ ರವರಿಗೂ ಕೂಡ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟು ಕೊಂಡಿದ್ದಾರೆ. ಕೆಲವೊಂದು ಪಾತ್ರಗಳಂತೂ ಮನೆಮಾತಾಗಿವೆ. ಕನ್ನಡಿಗರು ಹಲವಾರು ಧಾರವಾಹಿಗಳ ಜೊತೆ ಭಾವನಾತ್ಮಕವಾಗಿ ಸಂಬಂಧ ಬೆಸೆದುಕೊಂಡು ತಪ್ಪದೇ ಧಾರಾವಾಹಿಗಳನ್ನು ವೀಕ್ಷಿಸುತ್ತಾರೆ. ಹೀಗಿರುವಾಗ ನಾವು ಇಂದು ಈ ಎಲ್ಲಾ ಧಾರವಾಹಿಗಳಲ್ಲಿ ತಮ್ಮ ಅಭಿನಯದ ಮೂಲಕ ಜನರ ಮನ ಗೆದ್ದು ಮನೆಮಾತಾಗಿರುವ ಹಾಗೂ ಇವರ ಅಭಿಮಾನಿ ಬಳಗ ಹಾಗೂ ನಟನೆಯನ್ನು ನೋಡುತ್ತಿದ್ದರೆ ಬೆಳ್ಳಿಪರದೆಯಲ್ಲಿ ಮಿಂಚಿ ಉತ್ತಮ ಹೆಸರು ಗಳಿಸಬಹುದಾದ ಟಾಪ್ 5 ನಟಿಯರ ಬಗ್ಗೆ ತಿಳಿದುಕೊಳ್ಳೋಣ.

1.ನಮ್ರತಾ ಗೌಡ: ಕಿರುತೆರೆಯಲ್ಲಿ ವಿವಿಧ ಧಾರಾವಾಹಿಗಳಲ್ಲಿ ಅಭಿನಯ ಮಾಡಿ ಸೈ ಎನಿಸಿಕೊಂಡಿರುವ ನಮ್ರತಾ ಗೌಡ ರವರು ಕನ್ನಡದ ಬೆಳ್ಳಿ ಪರದೆಯಲ್ಲಿ ಮಿಂಚುವ ಬರವಸೆ ಮೂಡಿಸಿರುವುದು ಸುಳ್ಳಲ್ಲ. ಕನ್ನಡದ ಖ್ಯಾತ ಧಾರವಾಹಿಗಳಲ್ಲಿ ಒಂದಾದ ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಅಭಿನಯ ಮಾಡುವ ಮೂಲಕ ಕರ್ನಾಟಕದ ಮನೆಮಾತಾಗಿದ್ದ ನಮ್ರತಾ ಗೌಡರವರು ತದನಂತರ ಇದೀಗ ನಾಗಿಣಿ 2 ಧಾರವಾಹಿಯಲ್ಲಿ ಅದ್ಭುತ ನಟನೆಯ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ನಿರೂಪಿಸಿದ್ದಾರೆ. ಅತ್ಯುತ್ತಮವಾಗಿ ನೃತ್ಯ ಮಾಡುವ ಸಾಮರ್ಥ್ಯವನ್ನು ಹೊಂದಿರುವ ನಮ್ರತಾ ಗೌಡರವರು ಖಂಡಿತ ಅವಕಾಶ ಸಿಕ್ಕರೇ ಬೆಳ್ಳಿಪರದೆಯಲ್ಲಿ ಮಿಂಚುವುದು ಖಚಿತ. 2011ರಲ್ಲಿ ಕೃಷ್ಣ-ರುಕ್ಮಿಣಿ ಎಂಬ ಧಾರವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಬಳಿಕ ಪುಟ್ಟಗೌರಿ ಮದುವೆ ಧಾರವಾಹಿ ಯಲ್ಲಿ ಹಿಮ ಎಂಬ ಪಾತ್ರಕ್ಕೆ ಜೀವ ತುಂಬಿದ್ದರು. ತದನಂತರ 2019ರಲ್ಲಿ ತಕದಿಮಿತ ಡ್ಯಾನ್ಸ್ ಶೋನಲ್ಲಿ ಅತ್ಯುತ್ತಮವಾದ ಪ್ರದರ್ಶನ ನೀಡಿ ಟಾಪ್ 5 ಸ್ಪರ್ಧಿಗಳ ಲಿಸ್ಟಿನಲ್ಲಿ ಸ್ಥಾನ ಪಡೆದಿದ್ದರು. ಇದೀಗ ಇತ್ತೀಚಿಗೆ ನಾಗಿಣಿ ಧಾರಾವಾಹಿ ಯಲ್ಲಿ ಪ್ರಮುಖ ಪಾತ್ರದಲ್ಲಿ ಅತ್ಯದ್ಭುತವಾಗಿ ನಟನೆ ಮಾಡಿ ನಟನಾ ಸಾಮರ್ಥ್ಯವನ್ನು ತೋರಿಸಿದ್ದಾರೆ.

4. ಅಮೂಲ್ಯ ಗೌಡ: ಕಳೆದ ಹಲವಾರು ತಿಂಗಳುಗಳಿಂದ ಕನ್ನಡದ ಟಾಪ್ ಧಾರಾವಾಹಿಗಳಲ್ಲಿ ಒಂದಾಗಿರುವ ಕಮಲಿ ಧಾರಾವಾಹಿಯಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿರುವ ಅಮೂಲ್ಯ ಗೌಡ ರವರು ತಮ್ಮ ನಟನೆಯ ಮೂಲಕ ಹಲವಾರು ಜನರ ಮನಗೆದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುವ ನಟಿ ಅಮೂಲ್ಯ ಗೌಡ ರವರು, ಮುಂದೊಂದು ದಿನ ಸ್ಯಾಂಡಲ್ವುಡ್ನಲ್ಲಿ ನಟಿಯಾಗಿ ಮಿಂಚುವ ಎಲ್ಲಾ ಸಾಧ್ಯತೆಗಳು ಇವೆ. 2014ರಲ್ಲಿ ಸ್ವಾತಿಮುತ್ತು ಎಂಬ ಧಾರವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಅಮೂಲ್ಯ ಗೌಡರವರು ವಿವಿಧ ಪಾತ್ರಗಳಿಗೆ ಜೀವ ತುಂಬಿದ ನಂತರ ಕಮಲಿ ಎಂಬ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಕ್ಕೆ ಆಯ್ಕೆ ಆದರು. ತದನಂತರ ತಮ್ಮ ನಟನಾ ಸಾಮರ್ಥ್ಯವನ್ನು ನಿರೂಪಿಸಿ ಜನರ ಮನ ಗೆದ್ದಿದ್ದಾರೆ.

3. ಮೊಕ್ಷಿತ ಪೈ: ಕನ್ನಡದ ಖ್ಯಾತ ಚಾನೆಲ್ಗಳಲ್ಲಿ ಒಂದಾಗಿರುವ ಜೀ ಕನ್ನಡ ಧಾರವಾಹಿಯ ಧಾರಾವಾಹಿಗಳಲ್ಲಿ ಒಂದಾದ ಪಾರು ಧಾರವಾಹಿ ಪ್ರಧಾನ ಪಾತ್ರದಲ್ಲಿ ನಾಯಕಿಯಾಗಿ ನಟಿಸಿರುವ ಮೋಕ್ಷಿತ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಇವರು ಇದೇ ಪಾರು ಧಾರವಾಹಿಯಾ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು, ಜಿ ವಾಹಿನಿಯ ಪಾರು ಎಂಬ ಪಾತ್ರಕ್ಕೆ ಜೀವ ತುಂಬಿರುವ ಮೊಕ್ಷಿತ ಪೈ ರವರು ಬಹಳ ಅದ್ಭುತ ನಟನೆಯ ಮೂಲಕ ನಟನಾ ಸಾಮರ್ಥ್ಯವನ್ನು ಸಾಬೀತು ಮಾಡಿ ಸ್ಯಾಂಡಲ್ವುಡ್ನಲ್ಲಿ ಮಿಂಚುವ ಭರವಸೆ ನೀಡಿದ್ದಾರೆ. ಕೆಲವು ಮಾಹಿತಿಗಳ ಪ್ರಕಾರ ಇನ್ನೂ ಹೆಸರಿಡದ ಸ್ಯಾಂಡಲ್ವುಡ್ ಚಿತ್ರಕ್ಕೆ ಈಗಾಗಲೇ ಅವರಿಗೆ ಆಫರ್ ಬಂದಿರುವುದು ತಿಳಿದುಬಂದಿದೆ.

2. ಮೇಘ ಶೆಟ್ಟಿ: ಬಹುಶಹ ಇವರ ಬಗ್ಗೆ ನಿಮಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ, ತಮಗೆ ಸಿಕ್ಕ ಮೊದಲ ಅವಕಾಶವನ್ನು ಬಹುದೊಡ್ಡ ಯಶಸ್ಸಾಗಿ ಪರಿವರ್ತಿಸಿರುವ ಮೇಘ ಶೆಟ್ಟಿ ರವರು ಕನ್ನಡದ ಖ್ಯಾತ ಧಾರವಾಹಿಗಳಲ್ಲಿ ಒಂದಾದ ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ನಾಯಕಿಯ ಪಾತ್ರವಾದ ಅನು ಸಿರಿಮನೆ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಬಾರಿ ಅಭಿಮಾನಿ ಬಳಗವನ್ನು ಹೊಂದಿರುವ ಮೇಘ ಶೆಟ್ಟಿ ರವರು ಮುಂದೊಂದು ದಿನ ಸ್ಯಾಂಡಲ್ವುಡ್ನಲ್ಲಿ ಮಿಂಚುವ ಭರವಸೆಯನ್ನು ಮೂಡಿಸಿದ್ದಾರೆ. ಈಗಾಗಲೇ ಬಾರಿ ಅಭಿಮಾನಿ ಬಳಗವನ್ನು ಹೊಂದಿರುವ ಇವರು ಸ್ಯಾಂಡಲ್ವುಡ್ನಲ್ಲಿ ಅವಕಾಶಗಳನ್ನು ಪಡೆಯಲು ಹೆಚ್ಚು ಶ್ರಮ ಪಡಬೇಕಾಗಿಲ್ಲ, ಇವರು ಒಪ್ಪಿಕೊಂಡರೇ ಸಾಕು ಅವಕಾಶಗಳು ಬಹಳ ಸುಲಭವಾಗಿ ಸಿಗಲಿದೆ ಎಂಬುದು ಗಾಂಧಿನಗರದ ಲೆಕ್ಕಾಚಾರ.

1.ನಿಶಾ ರವಿಕೃಷ್ಣನ್: ಕನ್ನಡದ ಟಾಪ್ ಧಾರವಾಹಿಗಳಲ್ಲಿ ಒಂದಾಗಿರುವ ಗಟ್ಟಿಮೇಳ ಧಾರವಾಹಿಯಲ್ಲಿ ಅಮೂಲ್ಯ ಎಂಬ ಪಾತ್ರಕ್ಕೆ ಜೀವ ತುಂಬಿರುವ ನಿಶಾ ರವಿಕೃಷ್ಣನ್ ಅಲಿಯಾಸ್ ರೌಡಿಬೇಬಿ ರವರು ಮುಂದೊಂದು ದಿನ ಸ್ಯಾಂಡಲ್ವುಡ್ನಲ್ಲಿ ಖಚಿತವಾಗಿ ಮಿಂಚುತ್ತಾರೆ ಎಂಬುದು ಗಾಂಧಿ ನಗರದ ಲೆಕ್ಕಾಚಾರ. ಇವರ ಅದ್ಬುತ ನಟನೆಯಿಂದ ಇಡೀ ಕರ್ನಾಟಕದ ಮನೆ ಮಾತಾಗಿರುವ ನಿಶಾ ರವಿಕೃಷ್ಣನ್ ರವರು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಧಾರವಾಹಿಯನ್ನು ಕೇವಲ ಇವರ ನಟನೆಗಾಗಿ ಮಾತ್ರ ನೋಡುವವರು ಕೂಡ ಇದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತವೆ. ಕೆಲವು ಮಾಹಿತಿಗಳ ಪ್ರಕಾರ ಈಗಾಗಲೇ ಇವರಿಗೆ ಸ್ಯಾಂಡಲ್ವುಡ್ನಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.