ಅಭಿಯಾನದಲ್ಲಿ ಭಾಗವಹಿಸಿ ವಿಷ್ಣುವರ್ಧನ್ ರವರ ಕುರಿತು ಮಾತನಾಡಿದ ನವೀನ್ ಕೃಷ್ಣ ! ಹೇಳಿದ ಮಹತ್ವದ ಮಾತುಗಳನ್ನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೇ ತಿಂಗಳ 18ನೇ ತಾರೀಖಿನಂದು ಡಾಕ್ಟರ್ ವಿಷ್ಣುವರ್ಧನ್ ರವರ 70ನೇ ವರ್ಷದ ಹುಟ್ಟುಹಬ್ಬವಿದೆ. ಹೀಗಿರುವಾಗ ವಿಷ್ಣುವರ್ಧನ್ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ರವರು ಕನ್ನಡ ಚಿತ್ರರಂಗದ ದಿಗ್ಗಜರ ಸಾಲಿನಲ್ಲಿ ಕಂಡುಬರುವ ನಮ್ಮ ನಿಮ್ಮೆಲ್ಲರ ನೆಚ್ಚಿನ ವಿಷ್ಣುವರ್ಧನ್ ರವರ ಕುರಿತು ವಿಶೇಷ ಅಭಿಯಾನವೊಂದನ್ನು ಆರಂಭಿಸಿ ನಾ ಕಂಡಂತೆ ವಿಷ್ಣುವರ್ಧನ್ ಎಂಬ ಹೆಸರು ಇಟ್ಟು ಈ ಅಭಿಯಾನದಲ್ಲಿ ಪಾಲ್ಗೊಳ್ಳುವವರು ವಿಷ್ಣುವರ್ಧನ್ ರವರ ಕುರಿತು 10 ಸಾಲಿನಲ್ಲಿ ಬರೆದು ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಪೋಸ್ಟ್ ಮಾಡುವಂತೆ ಮನವಿ ಮಾಡಿದ್ದರು.

ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ನಿರ್ಧಾರ ಮಾಡಿದ ನಟ ಹಾಗೂ ಸಂಭಾಷಣೆಕಾರ ನವೀನ ಕೃಷ್ಣರವರು ಸಾಮಾಜಿಕ ಜಾಲತಾಣಗಳಲ್ಲಿ ವಿಷ್ಣುವರ್ಧನ್ ರವರ ಬಗ್ಗೆ ಬರೆದುಕೊಂಡಿದ್ದಾರೆ. ಇದೀಗ ಖ್ಯಾತ ನಟ ಹಾಗೂ ಸಂಭಾಷಣೆಕಾರ ನವೀನ್ ಕೃಷ್ಣರವರು ಮಾತನಾಡಿರುವ ಅಂತರಂಗದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದು, ಅಭಿಮಾನಿಗಳು ಭಾವುಕ ಮಾತುಗಳನ್ನಾಡಿದ್ದಾರೆ. ಬನ್ನಿ ನವೀನ್ ಕೃಷ್ಣರವರು ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ನನ್ನ ಪ್ರಕಾರ ವಿಷ್ಣುವರ್ಧನ್ ರವರು ಅಂದರೇ, ನನ್ನ ದಿನ ಆರಂಭವಾಗುತ್ತಿದ್ದದ್ದು ಅವರ ‘ಸುಪ್ರಭಾತ’ ದಿಂದ ಅಂತ್ಯವಾಗುತ್ತಿದ್ದದ್ದು ಅವರ ‘ಲಾಲಿ’ ಯಿಂದ. ಇಂದಿಗೂ ಕೂಡ ಯಾವುದು ಬೆಸ್ಟ್ ಎಂದರೇ ನೀರು ತೊಟ್ಟಿಕ್ಕುವ ಮುತ್ತಿನಹಾರ ಹಾಗೂ ಪಾರಿವಾಳಗಳ ನಡುವೆ ಚಿತ್ರೀಕರಿಸಿದ ನಿ’ಷ್ಕರ್ಷ ಎಂದು ವಿಷ್ಣುವರ್ಧನ್ ರವರ ಚಿತ್ರಗಳ ಮೂಲಕ ಮಾತುಗಳನ್ನು ಆರಂಭಿಸಿರುವ ನವೀನ್ ಕೃಷ್ಣರವರು ತಮ್ಮ ವೈಯಕ್ತಿಕ ಕಥೆಯನ್ನು ಈ ಪೋಸ್ಟಿನಲ್ಲಿ ಬರೆದಿದ್ದಾರೆ. ಹೌದು ಸ್ನೇಹಿತರೇ ಕದಂಬ ಚಿತ್ರದಲ್ಲಿ ನವೀನ್ ಕೃಷ್ಣರವರಿಗೆ ತಂದೆಯಾಗಿ ನಟನೆ ಮಾಡಿದ್ದ ವಿಷ್ಣುವರ್ಧನ್ ರವರು ಕದಂಬ ಚಿತ್ರ ಸೋಲನ್ನು ಕಂಡಾಗ ನವೀನ್ ಕೃಷ್ಣರವರು ನನ್ನ ಜೀವನದ ಸೋಲಾಗಿತ್ತು ಎಂದು ಹತಾ’ಶೆಯಲ್ಲಿದ್ದರು. ಇದನ್ನು ಕಂಡ ವಿಷ್ಣುವರ್ಧನ್ ರವರು ನವೀನ್ ಕೃಷ್ಣರವರು ತಮ್ಮ ಮನೆಗೆ ಕರೆಸಿಕೊಂಡು ಬಹಳ ನಾಜೂಕಾಗಿ ಬೈ’ದು, ಮುಂದಿನ ಜೀವನಕ್ಕೆ ದಾರಿದೀಪವಾದರು ಎಂಬುದನ್ನು ಕೂಡ ಬಹಿರಂಗಪಡಿಸಿದ್ದಾರೆ.

ಇನ್ನು ಮಾತನ್ನು ಮುಂದುವರಿಸಿದ ನವೀನ್ ಕೃಷ್ಣ ರವರು ನನ್ನ ಪ್ರೀತಿಯ ಕಥೆಯನ್ನು ಕೇಳಿದ ವಿಷ್ಣುವರ್ಧನ್ ರವರು ಅವರೇ ಮದುವೆಗೆ ಶ್ರೀಕಾರ ಹಾಕಿದ್ದರು, ಅವರ ನೆರಳು ನಮಗೆ ಶ್ರೀರಕ್ಷೆ ನಾವು ನಟನೆ ಮಾಡುತ್ತಿರುವ ಪಾತ್ರಗಳು ಅವರು ಜೀವಿಸಿದ ಪಾತ್ರಗಳ ಭಿಕ್ಷೆ ಎಂದು ವಿಷ್ಣುವರ್ಧನ್ ರವರ ಕುರಿತು ತಮ್ಮ ಅಂತರಾಳದ ಮಾತುಗಳನ್ನು ಹೊರಹಾಕಿದ್ದಾರೆ. ಇದನ್ನು ಕಂಡ ನೆಟ್ಟಿಗರು ನವೀನ್ ಕೃಷ್ಣ ರವರ ಮಾತುಗಳಿಗೆ ಭಾವುಕರಾಗಿದ್ದಾರೆ.

Facebook Comments

Post Author: Ravi Yadav