ಯಾವುದೇ ಬ್ಯಾಕ್ಗ್ರೌಂಡ್ ಇಲ್ಲದೇ, ಕನ್ನಡದಲ್ಲಿ ಮಿಂಚುತ್ತಿರುವ ಟಾಪ್ 7 ಕಲಾವಿದರು ! ಯಾರ್ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ,‌ ಇಂದು ನಾವು ಕನ್ನಡ ಚಿತ್ರರಂಗದಲ್ಲಿ ಯಾವುದೇ ಬ್ಯಾಗ್ರೌಂಡ್ ಇಲ್ಲದೇ ಚಿತ್ರರಂಗಕ್ಕೆ ಪ್ರವೇಶ ಮಾಡಿ ಉತ್ತಮ ಹೆಸರುಗಳಿಸಿ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಕನ್ನಡಿಗರ ಮನಗೆದ್ದಿರುವ ಕೆಲವು ನಟ ನಟಿಯರ ಬಗ್ಗೆ ತಿಳಿದುಕೊಳ್ಳೋಣ. ವಿಶೇಷ ಸೂಚನೆ: ಈ ಪಟ್ಟಿ ಕೇವಲ ಮನರಂಜನೆಗೆ ಸೀಮಿತವಾಗಿದ್ದು ಇತರ ನಟ-ನಟಿಯರನ್ನು ಪರೋಕ್ಷವಾಗಿ ಗುರಿಯಾಗಿಸುವುದು ಈ ಲೇಖನದ ಯಾವುದೇ ಉದ್ದೇಶವಾಗಿರುವುದಿಲ್ಲ.

ಯಶ್: ನಿಮಗೆಲ್ಲರಿಗೂ ತಿಳಿದಿರುವಂತೆ ಯಶ್ ರವರು ಒಬ್ಬ ಸಾಮಾನ್ಯ ಬಸ್ ಚಾಲಕನ ಮಗ. ಇವರ ಕುಟುಂಬದಲ್ಲಿ ಇವರಿಗೂ ಮುನ್ನ ಯಾವುದೇ ಕಲಾವಿದರು ಕನ್ನಡ ಚಿತ್ರರಂಗದಲ್ಲಿ ಅಭಿನಯ ಮಾಡಿರಲಿಲ್ಲ. ಹಲವಾರು ಸವಾಲಿನ ಮೆಟ್ಟಿಲುಗಳನ್ನು ಒಂದೊಂದಾಗಿ ಹತ್ತಿಕೊಂಡು ಧಾರಾವಾಹಿಗಳಿಂದ ತಮ್ಮ ನಟನೆಯನ್ನು ಆರಂಭಮಾಡಿ ಇಂದು ಕೇವಲ ಕನ್ನಡದಲ್ಲಿ ಅಷ್ಟೇ ಅಭಿಮಾನಿಗಳನ್ನು ಹೊಂದಿರದೇ ಇನ್ನಿತರ ಭಾಷೆಗಳಲ್ಲಿಯೂ ಕೂಡ ಅಭಿಮಾನಿ ಬಳಗವನ್ನು ಹೊಂದಿದ್ದು, ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

ರಕ್ಷಿತ್ ಶೆಟ್ಟಿ: ವಿಶೇಷವಾದ ಚಿತ್ರಗಳನ್ನು ಮಾಡುವ ಮೂಲಕ ಕರ್ನಾಟಕದಲ್ಲಿ ಮನೆ ಮಾತಾಗಿರುವ ರಕ್ಷಿತ್ ಶೆಟ್ಟಿ ರವರು, ವೃತ್ತಿಯಲ್ಲಿ ಎಂಜಿನಿಯರ್. ಸಿನಿಮಾ ರಂಗವನ್ನು ಪ್ರವೇಶಿಸಲು ತಮ್ಮ ವೃತ್ತಿಯನ್ನು ತ್ಯಜಿಸಿದರು. ಯಾವುದೇ ಸಿನಿಮಾದ ಬ್ಯಾಕ್ ಗ್ರೌಂಡ್ ಇಲ್ಲದೇ, ಸಿನಿ ಪಯಣ ಆರಂಭಿಸಿದ ರಕ್ಷಿತ್ ಶೆಟ್ಟಿ ರವರು ಇದೀಗ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಕಥೆ ಬರಹಗಾರನಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

ಗಣೇಶ್: ಮುಂಗಾರು ಮಳೆ ಖ್ಯಾತಿಯ ಗಣೇಶ್ ರವರು, ಸಿನಿಮಾ ರಂಗಕ್ಕೆ ಪ್ರವೇಶ ಮಾಡುವ ಮುನ್ನ ಯಾರ ಪರಿಚಯವೂ ಇಲ್ಲದೇ ಪ್ರತಿಯೊಂದು ಅವಕಾಶಗಳಿಗಾಗಿ ಎಷ್ಟೆಲ್ಲಾ ಕಷ್ಟ ಪಟ್ಟು ಬೆಳೆದರು ಎಂಬುದು ಬಹುಶಃ ನಿಮಗೆಲ್ಲರಿಗೂ ತಿಳಿದಿರಬಹುದು. ಆದರೆ ಅವರ ಪರಿಶ್ರಮ ಇಂದು ವ್ಯರ್ಥವಾಗಿಲ್ಲ, ಬದಲಾಗಿ ಕನ್ನಡದ ಉತ್ತಮ ನಟರಲ್ಲಿ ಒಬ್ಬರಾಗುವಂತೆ ಮಾಡಿದೆ. ಟಿವಿಯಲ್ಲಿ ಪಾತ್ರಗಳನ್ನು ನಿರ್ವಹಿಸುವುದರಿಂದ ಹಿಡಿದು ನಂತರ ಪ್ರಮುಖ ನಟನಾಗುವ ವರೆಗೂ ಕನ್ನಡ ಚಿತ್ರರಂಗದಲ್ಲಿ ಇವರ ಹೆಜ್ಜೆಗಳು ಬಹಳ ಸ್ಪೂರ್ತಿದಾಯಕವಾಗಿವೆ.

ರಾಧಿಕಾ ಪಂಡಿತ್: ರಾಧಿಕಾ ಪಂಡಿತ್ ರವರು ಕೂಡ ಯಾವುದೇ ಸಂಪರ್ಕವಿಲ್ಲದೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಧಾರಾವಾಹಿಗಳಲ್ಲಿ ತಮ್ಮ ನಟನೆಯ ಜೀವನವನ್ನು ಆರಂಭಿಸಿದ ಇವರು ಮೊಗ್ಗಿನಾ ಮನಸ್ಸು ಚಿತ್ರದಲ್ಲಿ ತಮ್ಮ ಅತ್ಯುತ್ತಮ ನಟನೆಯ ನಂತರ ಹಿಂತುರುಗಿ ನೋಡಲೇ ಇಲ್ಲ. ಇಂದಿಗೂ ಕೂಡ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಇವರು, ಬಹುತೇಕ ಟಾಪ್ ನಟರೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ ಹಾಗೂ ಕನ್ನಡದ ಟಾಪ್ ನಟಿಯರಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.

ಧನಂಜಯ: ಇತ್ತೀಚಿನ ದಿನಗಳನ್ನು ತಮ್ಮ ನಟನೆಯ ಮೂಲಕ ಬಾರಿ ಸದ್ದು ಮಾಡುತ್ತಿರುವ ಧನಂಜಯ ರವರು ಕೂಡ ಕನ್ನಡ ಚಿತ್ರ ರಂಗಕ್ಕೆ ಯಾವುದೇ ಹಿರಿಯ ಕಲಾವಿದರ ಬೆಂಬಲವಿಲ್ಲದೇ ಎಂಟ್ರಿ ಕೊಟ್ಟರು. ತಮ್ಮ ಅದ್ಭುತ ನಟನೆಯ ಮೂಲಕ ಚಿತ್ರ ರಂಗದ ಗಮನ ಸೆಳೆದ ಧನಂಜಯ ರವರು, ಇಂದು ಕನ್ನಡ ಚಿತ್ರರಂಗ ಬಹುತೇಕ ದೊಡ್ಡ ಚಿತ್ರಗಳಲ್ಲಿ ಸ್ಥಾನ ಪಡೆಯುವ ಕಲಾವಿದರಲ್ಲಿ ಒಬ್ಬರಾಗಿದ್ದಾರೆ.

ಹರಿಪ್ರಿಯಾ: ಕಿಂಚಿತ್ತೂ, ಅಂದರೆ ಒಂದು ಚಿಕ್ಕ ವಿವಾದವು ಇಲ್ಲದೇ, ಕನ್ನಡ ಚಿತ್ರ ರಂಗದಲ್ಲಿ ಮಿಂಚುತ್ತಿರುವ ಹರಿಪ್ರಿಯಾ ರವರು ಕೂಡ ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟರು. ನಟನೆಯ ವಿಷಯಕ್ಕೆ ಬಂದರೆ, ಹರಿಪ್ರಿಯಾ ರವರು ನಿಸ್ಸಂದೇಹವಾಗಿ ಉತ್ತಮ ನಟಿ. ಇತರ ನಾಯಕಿಯರಿಗಿಂತ ಭಿನ್ನವಾಗಿ ನಟಿಸುವ ಹರಿಪ್ರಿಯಾ ರವರು, ನಿಧಾನವಾಗಿ ಒಂದೊಂದೇ ಮೆಟ್ಟಿಲುಗಳನ್ನು ಹತ್ತಿಕೊಂಡು ಮೇಲೆಕ್ಕೆ ಬಂದಿದ್ದಾರೆ.

ವಸಿಷ್ಠ ಎನ್ ಸಿಂಹಾ: ಗಾಯಕನಾಗಲು ಎಲ್ಲಾ ತಯಾರಿ ಮಾಡಿಕೊಂಡು ಕನ್ನಡ ಚಿತ್ರ ರಂಗದಲ್ಲಿ ಅವಕಾಶ ಪಡೆಯಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿದ ವಸಿಷ್ಠ ರವರು ಕೂಡ ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಗಾಯಕನಾಗಲು ಬಯಸಿದ ಇವರನ್ನು ಕನ್ನಡ ಚಿತ್ರ ರಂಗ ಕಲಾವಿದನನ್ನಾಗಿ ಮಾಡಿದೆ. ನೋಡಿದಿರಲ್ಲ ಸ್ನೇಹಿತರೇ, ಇದೇ ರೀತಿ ಹಲವಾರು ಕಲಾವಿದರು ಚಿತ್ರರಂಗದಲ್ಲಿ ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ಇಂದು ಮಿಂಚುತ್ತಿದ್ದಾರೆ. ಇನ್ನು ಕೆಲವರು ನಟ ನಟಿಯರು ಬ್ಯಾಕ್ ಗ್ರೌಂಡ್ ಇದ್ದರೂ ಕೂಡ ಪ್ರತಿಯೊಂದು ಅವಕಾಶಕ್ಕಾಗಿಯೂ ಬಹಳ ಶ್ರಮ ವಹಿಸಿದ್ದಾರೆ. ಅವರ ಬಗ್ಗೆ ಮುಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

Facebook Comments

Post Author: Ravi Yadav