ಅರಿಶಿನವನ್ನು ಬಳಸುವುದರ ಮತ್ತೊಂದು ಲಾಭವನ್ನು ಬಹಿರಂಗಗೊಳಿಸಿದ ಆಸ್ಟ್ರೇಲಿಯಾದ ತಜ್ಞರು ! ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತೀಯ ಪಾಕಪದ್ಧತಿಯಲ್ಲಿ ಬಳಸುವ ಪ್ರಮುಖ ಮಸಾಲಾ ಪದಾರ್ಥಗಳಲ್ಲಿ ಒಂದಾದ ಅರಿಶಿನದ ಮಹತ್ವದ ಬಗ್ಗೆ ಹಲವಾರು ತಜ್ಞರು ಹಲವಾರು ವರ್ಷಗಳಿಂದ ಅಧ್ಯಯನ ಮಾಡುತ್ತಿದ್ದಾರೆ.ಇದರ ಹತ್ತು ಹಲವಾರು ಲಾಭಗಳ ಬಗ್ಗೆ ನಿಮಗೆಲ್ಲರಿಗೂ ತಿಳಿದಿರಬಹುದು.

ನಾವು ಸಾಮಾನ್ಯವಾಗಿ ತಯಾರಿಸುವ ಅಡುಗೆಗಳಲ್ಲಿ ಅರಿಶಿನವನ್ನು ಬಳಸುತ್ತೇವೆ, ಕೇವಲ ಒಂದು ಚಿಟಿಕೆ ಅರಿಶಿನವು ನಮ್ಮ ಆಹಾರಕ್ಕೆ ಬಣ್ಣವನ್ನು ನೀಡುವುದರಿಂದ ಹಿಡಿದು ನಮ್ಮ ಆಹಾರದಲ್ಲಿ ಪೌಷ್ಟಿಕಾಂಶವನ್ನು ಸೇರಿಸುವ ಕೆಲಸ ಮಾಡುತ್ತದೆ. ಇದರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ, ವಿಟಮಿನ್ ಸಿ, ಕಬ್ಬಿಣದ ಅಂಶಗಳು ಸೇರಿದಂತೆ ಇನ್ನೂ ಹಲವಾರು ಖನಿಜಗಳು ಹೇರಳವಾಗಿ ಸಿಗುತ್ತವೆ. ಇದನ್ನು ಅಡುಗೆಯಲ್ಲಿ ಬಳಸುವ ಕಾರಣ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಚಯಾಪಚಯ ಕ್ರಿಯೆಗಳು ಸರಾಗವಾಗಿ ನಡೆಯುತ್ತವೆ ಹಾಕು ಕೊಬ್ಬನ್ನು ಕರಗಿಸಲು ಕೂಡ ಸಹಾಯ ಮಾಡುತ್ತದೆ ಎಂಬ ಮಾಹಿತಿಗಳು ಈಗಾಗಲೇ ನಿಮಗೆಲ್ಲರಿಗೂ ತಿಳಿದ ಇವೆ. ಇಷ್ಟೆಲ್ಲ ಲಾಭಗಳನ್ನು ಹೊಂದಿರುವ ಅರಿಶಿನದ ಮತ್ತೊಂದು ಮಹತ್ವವನ್ನು ಇದೀಗ ಆಸ್ಟ್ರೇಲಿಯಾ ದೇಶದ ತಜ್ಞರು ಬಹಿರಂಗಪಡಿಸಿದ್ದಾರೆ.

ಹೌದು ಸ್ನೇಹಿತರೇ ಇದೀಗ ಆಸ್ಟ್ರೇಲಿಯಾ ದೇಶದ ಟ್ಯಾಸ್ಮೆನಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ಅಧ್ಯಯನವನ್ನು ನಡೆಸಿ ಅರಿಶಿನ ಯಾವ ಲಾಭಗಳನ್ನು ನೀಡಲಿದೆ ಹಾಗೂ ಹೇಗೆ ಬಳಸಬೇಕು ಎಂಬುದನ್ನು ತಿಳಿಸಿ ಕೊಟ್ಟಿದ್ದಾರೆ. ಈ ಅಧ್ಯಯನದಲ್ಲಿ ಪ್ರತಿನಿತ್ಯದ ಪಾಕಪದ್ಧತಿಯಲ್ಲಿ ಅರಿಶಿನ ಬಳಸುವ ಕಾರಣ ನಮ್ಮ ದೇಹದಲ್ಲಿನ ಸಂಧಿವಾತ ಸಂಬಂಧಿತ ನೋ’ವುಗಳು ಅಂದರೇ ಮೊಣಕಾಲು ನೋ’ವು, ದೇಹದ ಇನ್ನಿತರ ಕೀಲು ನೋ’ವುಗಳು ಬಹಳ ಸುಲಭವಾಗಿ ವಾಸಿಯಾಗುತ್ತವೆ ಕ್ರಮೇಣ ಬರುವುದೇ ಇಲ್ಲ ಎಂಬುದನ್ನು ಕಂಡು ಹಿಡಿದಿದ್ದಾರೆ. ಆದರೆ ಯಾರೇ ಆಗಲಿ ಅರಿಶಿನ ಪೂರಕ ಮಾತ್ರೆಗಳನ್ನು ತೆಗೆದುಕೊಳ್ಳಬಾರದು ಬದಲಾಗಿ ದೈನಂದಿನ ಆಹಾರದ ಜೀವನದಲ್ಲಿ ಚಿಟಿಕೆ ಹಳದಿಯನ್ನು ಬಳಸುತ್ತಾ ಜೀವನ ಸಾಗಿಸಿದರೇ ಅವರಿಗೆ ಮಂಡಿನೋವು ಸೇರಿದಂತೆ ಇನ್ನಿತರ ಕೀಳು ನೋ’ವುಗಳು ಬರುವುದಿಲ್ಲ, ದೇಹಕ್ಕೆ ಅಗತ್ಯವಾದ ಎಲ್ಲಾ ಅಂಶಗಳನ್ನು ಅರಿಶಿನ ತನ್ನಲ್ಲಿ ಇಟ್ಟುಕೊಂಡಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ. ಇನ್ನು ಅರಿಶಿನದ ಕುರಿತು ಹೆಚ್ಚಿನ ‌ಅಧ್ಯಯನ ನಡೆಸುತ್ತಿದ್ದೇವೆ ಮತ್ತು ಮಾಹಿತಿಯನ್ನು ಹೊರ ಹಾಕುತ್ತಿದ್ದೇವೆ ಎಂದು ಕೂಡ ಹೇಳಿದ್ದಾರೆ

Post Author: Ravi Yadav