ಟ್ವೀಟ್ ವಿಡಿಯೋ: ಯಾರ್ಕರ್ ಆಟವನ್ನು ಕಂಡು ಕುಣಿದು ಕುಪ್ಪಳಿಸಿದ ಆರ್ಸಿಬಿ ! ಹೇಗಿದೆ ಗೊತ್ತಾ ಬೌಲಿಂಗ್ ಅಭ್ಯಾಸ??

ನಮಸ್ಕಾರ ಸ್ನೇಹಿತರೇ, ಆರ್ಸಿಬಿ ಕ್ರಿಕೆಟ್ ತಂಡವು ಹಲವಾರು ಐಪಿಎಲ್ ಆವೃತ್ತಿಗಳಿಂದ ಬ್ಯಾಟಿಂಗ್ ವಿಭಾಗದಲ್ಲಿ ಅತ್ಯುತ್ತಮ ಆಟಗಾರರನ್ನು ಹೊಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ.‌ ಕೆಲವು ಪಂದ್ಯಗಳಲ್ಲಿ ರನ್ ಗಳಿಸಲು ಸಾಧ್ಯವಾಗದೇ ಇದ್ದರೂ ಕೂಡ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಗಳಾಗಿರುವ ಎಬಿ ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ ರವರು ತಂಡದಲ್ಲಿ ಇರುವ ಕಾರಣ ಆರ್ಸಿಬಿ ತಂಡಕ್ಕೆ ಬ್ಯಾಟಿಂಗ್ ಬಗ್ಗೆ ಚಿಂತೆ ಕೊಂಚ ಕಡಿಮೆ ಎಂದರೆ ತಪ್ಪಾಗಲಾರದು. ಆದರೆ ಆರ್ಸಿಬಿ ತಂಡವು ಮೊದಲಿನಿಂದಲೂ ಸವಾಲನ್ನು ಎದುರಿಸುತ್ತಿರುವುದು ಬೌಲಿಂಗ್ ವಿಭಾಗದಲ್ಲಿ. ಅದರಲ್ಲಿಯೂ ತಂಡ ಇನ್ನೂರರ ಗಡಿ ದಾಟಿದ್ದರೂ ಕೂಡ ಕೊನೆಯ ಓವರ್ ಗಳಲ್ಲಿ ಬೌಲರ್ಗಳು ಹೆಚ್ಚು ರನ್ ಅನ್ನು ಬಿಟ್ಟು ಕೊಡುತ್ತಿದ್ದ ಕಾರಣ ಆರ್ಸಿಬಿ ತಂಡವು ಹಲವಾರು ಪಂದ್ಯಗಳನ್ನು ಸೋಲುವಂತಾಗಿದೆ. ಇದರ ನಡುವೆಯೂ ಪ್ರತಿ ಬಾರಿಯ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ತಂಡಕ್ಕೆ ಪ್ರಮುಖ ಬೌಲರ್ ಆಯ್ಕೆಯಾಗಬೇಕು ಎಂಬ ಲೆಕ್ಕಾಚಾರಗಳು ಕೇವಲ ಲೆಕ್ಕಾಚಾರವಾಗಿಯೇ ಉಳಿದಿದ್ದವು.

ಆದರೆ ಈ ಬಾರಿ ತಂಡ ಬಹಳ ಸಮತೋಲನದಿಂದ ಕೂಡಿದೆ, ಆರ್ಸಿಬಿ ತಂಡದಲ್ಲಿಯೂ ಕೂಡ ಉತ್ತಮ ಬೌಲರ್ ಗಳಿದ್ದಾರೆ. ಆದರೆ ಇಷ್ಟೆಲ್ಲ ಪಂದ್ಯಗಳನ್ನು ಕಳೆದುಕೊಂಡು ಕಪ್ ಗೆಲ್ಲದ ಕಾರಣ ಈ ಬೌಲರ್ಗಳು ಕೊನೆಯ ಓವರ್ ಗಳಲ್ಲಿ ಉತ್ತಮ ಬೌಲಿಂಗ್ ಮಾಡಿ ರನ್ ಗಳಿಗೆ ಕಡಿವಾಣ ಹಾಕಲು ಯಶಸ್ವಿಯಾಗುತ್ತಾರೆಯೇ ಎಂಬ ಆಲೋಚನೆ ಮನದಲ್ಲಿ ಮೂಡಿರುವುದು ಸುಳ್ಳಲ್ಲ. ಒಂದು ವೇಳೆ ನಿಮ್ಮ ಮನದಲ್ಲಿ ಈ ರೀತಿಯ ಆಲೋಚನೆ ಮೂಡಿದ್ದರೇ ಖಂಡಿತ ಈ ಕೆಳಗಿನ ಟ್ವೀಟ್ ನಲ್ಲಿ ನೀಡಿರುವ ವಿಡಿಯೋ ನೋಡಿದರೇ ಖಂಡಿತ ನಿಮಗೆ ಆ ಆಲೋಚನೆ ದೂರವಾಗುತ್ತದೆ.

ಹೌದು ಸ್ನೇಹಿತರೇ ಇದೀಗ ಸತತ ಅಭ್ಯಾಸದಲ್ಲಿ ನಿರತವಾಗಿರುವ ಆರ್ಸಿಬಿ ತಂಡವು ಇತ್ತೀಚೆಗೆ ತನ್ನ ತಂಡದ ಬೌಲರ್ ಗಳ ಯಾರ್ಕರ್ ಸಾಮರ್ಥ್ಯವನ್ನು ಹೆಚ್ಚಿಸಲು ಒಂದು ಆಟವನ್ನು ಆಯೋಜಿಸಲಾಗಿತ್ತು. ಈ ಯಾರ್ಕರ್ ಬೌಲಿಂಗ್ ಮಾಡುವ ಆಟದಲ್ಲಿ ಆರ್ಸಿಬಿ ತಂಡದ ಬೌಲರ್ ಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಈ ಯಾರ್ಕರ್ ಆಟದಲ್ಲಿ ಆರ್ಸಿಬಿ ತಂಡದ ಬೌಲರ್ ಗಳಾದ ನವದೀಪ್ ಸೈನಿ, ಯುಜ್ವೇಂದ್ರ ಚಹಾಲ್, ಶಿವಂ ದುಬೆ, ಇಸುರು ಉದಾನ ರವರು ಯಾರ್ಕರ್ ಬಾಲಗಳನ್ನು ಮಾಡಿರುವ ರೀತಿಯನ್ನು ಕಂಡ ಬ್ಯಾಟ್ಸ್ಮನ್ಗಳು, ಕ್ಯಾಪ್ಟನ್ ಹಾಗೂ ಕೋಚ್ ಗಳು ಫುಲ್ ಖುಷ್ ಆಗಿದ್ದು ಅಭಿಮಾನಿಗಳು ಕೂಡ ಟ್ರೆಂಡಿಂಗ್ ಸೃಷ್ಟಿಸಿದ್ದಾರೆ. ಕೆಳಗಿನ ಟ್ವೀಟ್ ವಿಡಿಯೋ ನೋಡಿ.

Post Author: Ravi Yadav