ತಮ್ಮಂತೆಯೇ ಬ್ಯಾಟಿಂಗ್ ಮಾಡುವ ಯುವ ಆರ್ಸಿಬಿ ಆಟಗಾರನನ್ನು ಹೆಸರಿಸಿದ ಎಬಿಡಿ ! ಯಾರು ಗೊತ್ತಾ??

ತಮ್ಮಂತೆಯೇ ಬ್ಯಾಟಿಂಗ್ ಮಾಡುವ ಯುವ ಆರ್ಸಿಬಿ ಆಟಗಾರನನ್ನು ಹೆಸರಿಸಿದ ಎಬಿಡಿ ! ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಮ್ಮ- ನಿಮ್ಮೆಲ್ಲರ ಅಚ್ಚುಮೆಚ್ಚಿನ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಎಬಿ ಡಿವಿಲಿಯರ್ಸ್ ರವರು ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಸೇರಿದಂತೆ ವಿವಿಧ ಟೂರ್ನಮೆಂಟ್ ಗಳಲ್ಲಿ ತಮ್ಮದೇ ಆದ ಅದ್ಭುತ ಬ್ಯಾಟಿಂಗ್ ಶೈಲಿಯ ಮೂಲಕ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಆಟಗಾರರ ಸಾಲಿನಲ್ಲಿ ಕಂಡುಬರುವ ಆಟಗಾರರಾಗಿದ್ದಾರೆ. ಎಬಿ ಡಿವಿಲಿಯರ್ಸ್ ಯಾವ ರೀತಿಯ ಅದ್ಭುತ ಬ್ಯಾಟಿಂಗ್ ಮಾಡುತ್ತಾರೆ ಎಂದು ಅವರ ಅಂಕಿ ಅಂಶಗಳನ್ನು ನೋಡಿದ ತಕ್ಷಣ ತಿಳಿಯುತ್ತದೆ. ಕೇವಲ ಅಂಕಿ ಅಂಶಗಳಷ್ಟೇ ಅಲ್ಲದೆ ಕ್ರೀಡಾಂಗಣದ ಯಾವುದೇ ಮೂಲೆಗೆ ಬೇಕಾದರೂ ಯಾವುದೇ ಬಾಲನ್ನು ಬೌಂಡರಿ ಗಿರಿ ದಾಟಿಸುವ ಸಾಮರ್ಥ್ಯ ಹೊಂದಿರುವ ಎಬಿ ಡಿವಿಲಿಯರ್ಸ್ ರವರನ್ನು ಕ್ರಿಕೆಟ್ ಜಗತ್ತಿನ 360 ಡಿಗ್ರಿ ಆಟಗಾರ ಎಂದು ಕರೆಯಲಾಗುತ್ತದೆ.

ಇವರು ಬ್ಯಾಟಿಂಗ್ ಮಾಡುತ್ತಿದ್ದಾರೇ ಎಂದರೇ ಯಾವ ಕಡೆ ಯಾವ ಬಾಲನ್ನು ತಿರುಗಿಸಿ ರನ್ ಗಳಿಸುತ್ತಾರೆ ಎಂಬುದನ್ನು ಹೇಳಲು ಸಾಧ್ಯವೇ ಇರುವುದಿಲ್ಲ. ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್ ನಿವೃತ್ತಿಯ ನಂತರ ಮತ್ತೊಮ್ಮೆ ಐಪಿಎಲ್ ಆಡಲು ಭರದ ಸಿದ್ಧತೆ ನಡೆಸಿರುವ ಎಬಿ ಡಿವಿಲಿಯರ್ಸ್ ರವರು ಸತತ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಆರ್ಸಿಬಿ ತಂಡದ ಕುರಿತು ಮಾತನಾಡಿರುವ ಎಬಿ ಡಿವಿಲಿಯರ್ಸ್ ರವರು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನನ್ನಂತೆಯೇ ಬ್ಯಾಟಿಂಗ್ ಮಾಡುವ ಮತ್ತೊಬ್ಬ ಆಟಗಾರ ಬಂದಿದ್ದಾರೆ ಎಂಬ ಭಾವನೆ ನನ್ನಲ್ಲಿ ಮೂಡುತ್ತಿದೆ.

ಈ ಬಾರಿ ತಂಡ ಬಹಳ ಸಮತೋಲನದಿಂದ ಕೂಡಿದ್ದು ವಿಶ್ವಶ್ರೇಷ್ಠ ಆಟಗಾರರನ್ನು ತನ್ನಲ್ಲಿ ಹೊಂದಿದೆ, ಯುವ ಆಟಗಾರರು ಅನುಭವ ಪಡೆದುಕೊಂಡಿದ್ದಾರೆ. ಹೀಗಾಗಿ ನಾವು ಕೊನೆಯ ಓವರ್ಗಳಲ್ಲಿ ಬೌಲಿಂಗ್ ಮಾಡಬಹುದಾದ ಉತ್ತಮ ಬೌಲಿಂಗ್ ಬಳಗವನ್ನು ಹೊಂದಿದ್ದೇವೆ. ಇನ್ನು ಅಷ್ಟೇ ಬ್ಯಾಟಿಂಗ್ ವಿಭಾಗದಲ್ಲಿ ನನ್ನಂತೆಯೇ ಬ್ಯಾಟಿಂಗ್ ಮಾಡುವ ಹೊಸ ಆಟಗಾರರ ಆರ್ಸಿಬಿ ತಂಡಕ್ಕೆ ಸೇರಿಕೊಂಡಿದ್ದಾರೆ, ಅವರು ಮತ್ತೆ ಯಾರು ಅಲ್ಲ ಆಸ್ಟ್ರೇಲಿಯ ತಂಡದ ಜೋಷ್ ಫೀಲಿಪ್ಪೆ, ಥೇಟ್ ನನ್ನಂತಯೇ ಬ್ಯಾಟಿಂಗ್ ಮಾಡುತ್ತಾನೆ. ಮಧ್ಯಮ ಕ್ರಮಾಂಕದಲ್ಲಿ ಅಷ್ಟೇ ಅಲ್ಲದೆ ಹೊಸ ಚೆಂಡಿನಲ್ಲಿಯೂ ಬ್ಯಾಟಿಂಗ್ ಮಾಡುವ ಅತ್ಯುತ್ತಮ ಕಲೆಯನ್ನು ಹೊಂದಿದ್ದಾರೆ. ಅವರೊಬ್ಬರು ಅದ್ಭುತ ಪ್ರತಿಭೆ ಎಂದು ಹಾಡಿ ಹೊಗಳಿದ್ದಾರೆ. ಇನ್ನು ಕೆಲವೇ ಕೆಲವು ದಿನಗಳ ಹಿಂದೆ ಆಡಮ್ ಗ್ರಿಲ್ ಕ್ರಿಸ್ಟ್ ಅವರು ಕೂಡ ಜೋಷ್ ಫೀಲಿಪ್ಪೆ ಬಗ್ಗೆ ಉತ್ತಮ ಮಾತುಗಳನ್ನು ಹೇಳಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.