ಅಭ್ಯಾಸದ ವಿಡಿಯೋ ಹಂಚಿಕೊಂಡ ಆರ್ಸಿಬಿ ! ಆರ್ಸಿಬಿಯಲ್ಲಿ ಮಿಂಚುವ ಭರವಸೆ ಮೂಡಿರುವುದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ವಿಜಯ್ ಹಜಾರೆ ಟ್ರೋಫಿ ಹಾಗೂ ಸೈಯದ್ ಅಲಿ ಟ್ರೋಫಿ ಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದುಕೊಂಡು ಐಪಿಎಲ್ ಟೂರ್ನಿಯಲ್ಲಿ ಮಿಂಚುವ ಭರವಸೆ ಮೂಡಿಸಿದ್ದ ದೇವದತ್ ಪಡಿಕ್ಕಲ್ ರವರು ಆರ್ಸಿಬಿ ತಂಡದ ಆರಂಭಿಕ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವುದು ಬಹುತೇಕ ಖಚಿತವಾಗಿದೆ. ಇದರ ಕುರಿತು ಆರ್ಸಿಬಿ ತಂಡದ ಕೋಚ್ ಸೈಮನ್ ಕ್ಯಾಟಿಚ್ ಅವರು ಕೂಡ ಮಾತನಾಡಿದ್ದು, ದೇವದತ್ ಪಡಿಕ್ಕಲ್ ಅವರು ಆರಂಭಿಕರಾಗಿ ಆಟವಾಡುವ ಸಾಧ್ಯತೆ ಇದೆ, ಅದೇ ಕಾರಣಕ್ಕಾಗಿ ಎಬಿ ಡಿವಿಲಿಯರ್ಸ್ ರವರು ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಹೊರಬೇಕಾದ ಪರಿಸ್ಥಿತಿ ಎದುರಾಗಿದೆ. ಅದಕ್ಕಾಗಿ ಅವರು ಅಭ್ಯಾಸ ಕೂಡ ಮಾಡುತ್ತಿದ್ದಾರೆ ಎಂದು ಖುದ್ದು ಅವರೇ ಸ್ಪಷ್ಟಪಡಿಸಿದ್ದಾರೆ.

ಇನ್ನು ಕನ್ನಡಿಗನೊಬ್ಬನು ಆರ್ಸಿಬಿ ತಂಡದಲ್ಲಿ ಮಿಂಚಿ ಭಾರಿ ಸದ್ದು ಮಾಡುವ ಸಂದರ್ಭವನ್ನು ಕಣ್ತುಂಬಿಕೊಳ್ಳಲು ಆರ್ಸಿಬಿ ಅಭಿಮಾನಿಗಳು ಬಹಳಷ್ಟು ವರ್ಷಗಳಿಂದ ಕಾದಿದ್ದಾರೆ. ಅದೇ ಕಾರಣಕ್ಕಾಗಿ ದೇವದತ್ ಪಡಿಕ್ಕಲ್ ರವರಿಗೆ ಸ್ಥಾನ ನೀಡಿದರೇ ಖಂಡಿತ ಅವರು ಅಭಿಮಾನಿಗಳ ನಿರೀಕ್ಷೆಯನ್ನು ಸುಳ್ಳು ಮಾಡುವುದಿಲ್ಲ ಎಂಬ ಭರವಸೆಯ ಮೇಲೆ ಐಪಿಎಲ್ ಟೂರ್ನಿ ಗಾಗಿ ಕಾದು ಕುಳಿತಿದ್ದಾರೆ. ಎಂದಿನಂತೆ ಈ ಸಲ ಕಪ್ ನಮ್ದೆ ಎಂಬ ಘೋಷಣೆ ಮತ್ತೊಮ್ಮೆ ಟ್ರೆಂಡಿಂಗ್ ಆಗುತ್ತಿದೆ. ಹೀಗಿರುವಾಗ ಆರ್ಸಿಬಿ ತಂಡವು ಇದೀಗ ಹೊಸ ವಿಡಿಯೋ ಬಿಡುಗಡೆ ಮಾಡಿದ್ದು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾಗಿದೆ.

ಈ ವಿಡಿಯೋದಲ್ಲಿ ಅಭ್ಯಾಸದಲ್ಲಿ ನಿರತವಾಗಿರುವ ದೇವದಾಸ್ ಪಡಿಕ್ಕಲ್ ರವರು ಯಾವ ರೀತಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂಬುದನ್ನು ರೆಕಾರ್ಡ್ ಮಾಡಲಾಗಿದೆ. ಇನ್ನು ಆರ್ಸಿಬಿ ತಂಡದ ಅಭ್ಯಾಸದ ಕುರಿತು ಮಾತನಾಡಿರುವ ದೇವದತ್ ಪಡಿಕ್ಕಲ್ ರವರು, ನಿಜಕ್ಕೂ ಅದ್ಭುತವಾಗಿದೆ ನಾವು ಮತ್ತೊಮ್ಮೆ ಲಯಕ್ಕೆ ಮರಳುತ್ತಿದ್ದೇವೆ, ಹಲವಾರು ಉತ್ತಮ ಅಭ್ಯಾಸಗಳ ಸೆಶನ್ ಗಳ ನಂತರ ನಾವು ಲಾಕ್ಡೌನ್ ಹಿಂದಿನ ಲಯಕ್ಕೆ ಮರಳುತ್ತಿದ್ದೇವೆ ಎಂದು ಆತ್ಮ ವಿಶ್ವಾಸದಿಂದ ಮಾತನಾಡಿರುವ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಮೇಲಿನ ಟ್ವಿಟರ್ ಪೋಸ್ಟ್ನಲ್ಲಿ ಲಗತ್ತಿಸಲಾಗಿದ್ದು, ಯಾವ ರೀತಿ ಬ್ಯಾಟಿಂಗ್ ಮಾಡಿದ್ದಾರೆ ಹಾಗೂ ಏನು ಹೇಳಿದ್ದಾರೆ ಎಂಬುದನ್ನು ನೀವೇ ನೋಡಿ.

Post Author: Ravi Yadav