10 ಲಕ್ಷದ ವರೆಗೂ ಸುಲಭವಾಗಿ ಯಾವುದೇ ಖಾತರಿಯಿಲ್ಲದೇ ಸಾಲ ಪಡೆದುಕೊಳ್ಳುವುದು ಹೇಗೆ??

10 ಲಕ್ಷದ ವರೆಗೂ ಸುಲಭವಾಗಿ ಯಾವುದೇ ಖಾತರಿಯಿಲ್ಲದೇ ಸಾಲ ಪಡೆದುಕೊಳ್ಳುವುದು ಹೇಗೆ??

ನಮಸ್ಕಾರ ಸ್ನೇಹಿತರೇ, ಸ್ವಂತ ಉದ್ಯೋಗ ಆರಂಭಿಸುವುದು ಅಥವಾ ಈಗಾಗಲೇ ಆರಂಭಿಸಿರುವ ಉದ್ಯೋಗ ಅಥವಾ ಕುಟುಂಬಿಕವಾಗಿ ನಡೆದುಕೊಂಡು ಬಂದಿರುವ ವ್ಯಾಪಾರವನ್ನು ದೊಡ್ಡ ಮಾರುಕಟ್ಟೆಗೆ ತಲುಪುವಂತೆ ಮಾಡುವುದು ಎಲ್ಲರ ಸಾಮಾನ್ಯ ಕನಸ್ಸುಗಳಲ್ಲಿ ಒಂದಾಗಿದೆ. ಇನ್ನು ಈ ಯಾವುದೇ ಕೆಲಸ ಮಾಡುವುದು ಸುಲಭವಲ್ಲ, ಅದಕ್ಕಾಗಿ ಸಾಕಷ್ಟು ಹಣ ಬೇಕಾಗುತ್ತದೆ. ಆದರೆ ಅದಕ್ಕಾಗಿ ಮೀಟರ್ ಬಡ್ಡಿಯ ರೂಪದಲ್ಲಿ ಹಣ ಪಡೆದುಕೊಳ್ಳುವುದು ಅಥವಾ ಇರುವ ಆಸ್ತಿಯನ್ನು ಮಾರುವುದು ಒಳ್ಳೆಯ ನಿರ್ಧಾರವಲ್ಲ. ಇನ್ನು ಹಲವಾರು ಜನರಲ್ಲಿ ಬ್ಯಾಂಕ್ ನಲ್ಲಿ ಲೋನ್ ತೆಗೆದುಕೊಳ್ಳುವ ಆಸಕ್ತಿಯಿದ್ದರೂ ಕೂಡ ಖಾತರಿಗೆ ನೀಡಲು ಯಾವುದೇ ವ್ಯವಸ್ಥೆ ಇರುವುದಿಲ್ಲ. ಇದರಿಂದ ಬಹುತೇಕರ ಕನಸು ನನಸಾಗಿಯೇ ಉಳಿದುಕೊಳ್ಳಲಿದೆ. ಆದರೆ ನಾವು ತಿಳಿಸುವ ಯೋಜನೆಯಿಂದ ನಿಮಗೆ ಇನ್ನು ಮುಂದೆ ವ್ಯವಹಾರ ಸ್ಥಾಪಿಸಲು ಬಹಳ ಸುಲಭವಾಗಿ ಹಣ ಸಿಗಲಿದೆ.

ಹೌದು ಸ್ನೇಹಿತರೇ, ಇದೀಗ ಒಂದು ವೇಳೆ ನೀವು ನಿಮ್ಮ ಸ್ವಂತ ವ್ಯವಹಾರವನ್ನು ಸ್ಥಾಪಿಸಲು ಅಥವಾ ಇರುವ ವ್ಯವಹಾರವನ್ನು ಮತ್ತಷ್ಟು ವಿಸ್ತರಣೆ ಮಾಡಲು ನಿಮಗೆ ಹಣದ ಅಗತ್ಯ ಇದ್ದಲ್ಲಿ ನೀವು ಯಾವುದೇ ಖಾತರಿ ಇಲ್ಲದೆ ಬಹಳ ಸುಲಭವಾಗಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಮುದ್ರಾ ಯೋಜನೆಯ ಅಡಿಯಲ್ಲಿ ನಿಮಗೆ 10 ಲಕ್ಷದವರೆಗೂ ಸಾಲ ನೀಡಲಾಗುತ್ತದೆ. ಈ ಯೋಜನೆಯ ಹಿಂದಿರುವ ಪ್ರಮುಖ ಉದ್ದೇಶವೇನೆಂದರೆ ಯಾರೇ ಆಗಲಿ ಸ್ವಯಂ ಉದ್ಯೋಗ ಸೃಷ್ಟಿಸುವ ಕನಸನ್ನು ನನಸು ಮಾಡಿಕೊಳ್ಳಬೇಕು ಹಾಗೂ ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳನ್ನು ಸೃಷ್ಟಿ ಮಾಡುವ ಅವಕಾಶ ಸಾಮಾನ್ಯ ಜನರಿಗೆ ನೀಡಬೇಕು ಎಂಬುದಾಗಿದೆ.

ಇನ್ನು ಈ ಯೋಜನೆಯ ಅಡಿಯಲ್ಲಿ ಮೂರು ವಿಭಾಗಗಳು ಇದ್ದು, ಮೊದಲನೇ ಭಾಗದಲ್ಲಿ ಶಿಶು ಸಾಲ ಎಂಬ ಆಯ್ಕೆಯ ಅಡಿಯಲ್ಲಿ ನಿಮ್ಮ ವ್ಯವಹಾರವನ್ನು ಸ್ಥಾಪಿಸಲು ಐವತ್ತು ಸಾವಿರ ರೂಗಳವರೆಗೆ ಸಾಲ ನೀಡಲಾಗುತ್ತದೆ. ಇನ್ನು ಎರಡನೆಯದಾಗಿ ಕಿಶೋರ್ ಸಾಲ ಎಂಬ ಆಯ್ಕೆಯ ಅಡಿಯಲ್ಲಿ ಫಲಾನುಭವಿಗಳಿಗೆ 50 ಸಾವಿರದಿಂದ ಐವತ್ತು ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಕೊನೆಯದಾಗಿ ತರುಣ್ ಸಾಲ ಎಂಬ ಆಯ್ಕೆಯ ಅಡಿಯಲ್ಲಿ ಜನರು 10 ಲಕ್ಷದವರೆಗೆ ಸಾಲ ಪಡೆದುಕೊಳ್ಳಬಹುದಾಗಿದೆ. ನಿಮ್ಮ ತಿಂಗಳಿನ ಆದಾಯ ಗಳಿಕೆ 17 ಸಾವಿರಕ್ಕಿಂತಲೂ ಹೆಚ್ಚಿದಲ್ಲಿ ನಿಮಗೆ 10 ಲಕ್ಷದವರೆಗೂ ಸಾಲ ನೀಡಲಾಗುತ್ತದೆ. ಯೋಜನೆಯ ಅಡಿಯಲ್ಲಿ ವ್ಯಾಪಾರಿಗಳು, ಮಾರಾಟಗಾರರು, ಸಣ್ಣ ಅಂಗಡಿ ನಡೆಸುವವರು, ಸಣ್ಣ ಕೈಗಾರಿಕಾ ಉದ್ಯಮಿಗಳು, ತಯಾರಕರು ಹಾಗೂ ಕೃಷಿ ಸಂಬಂಧಿಸಿದ ಜನರು ಸಾಲ ತೆಗೆದುಕೊಳ್ಳಬಹುದಾಗಿದೆ.

ಇನ್ನು ಸಾಲಪಡೆಯುವ ಕ್ರಮದ ಕುರಿತು ಗಮನಹರಿಸುವುದಾದರೆ ಮೊದಲು ಮುದ್ರಾ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ಅಲ್ಲಿರುವ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಡೌನ್ಲೋಡ್ ಮಾಡಿಕೊಳ್ಳುವ ಮುನ್ನ ನೀವು ನಾವು ಮೇಲೆ ತಿಳಿಸಿರುವ ಮೂರು ಆಯ್ಕೆಗಳಲ್ಲಿ ನಿಮಗೆ ಯಾವ ಆಯ್ಕೆ ಸರಿ ಹೊಂದುತ್ತದೆ ಎಂದು ತಿಳಿಸಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಿ. ಇದರ ನಂತರ ಅರ್ಜಿಯಲ್ಲಿ ತಿಳಿಸಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ, ನಿಮ್ಮ ವ್ಯವಹಾರ ಪ್ರಾರಂಭಿಸುವ ಅಥವಾ ಈಗಾಗಲೇ ಸ್ಥಾಪಿಸಿದ್ದರೇ ಅದರ ವಿಳಾಸ ನೀಡಬೇಕಾಗುತ್ತದೆ. ಒಂದು ವೇಳೆ ನಿಮಗೆ ವರ್ಗದ ಆಧಾರದ ಮೇಲೆ ಮೀಸಲಾತಿ ಇದ್ದರೆ ನೀವು ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.

ಇನ್ನು ಅರ್ಜಿಯನ್ನು ಭರ್ತಿ ಮಾಡುವಾಗ ನಿಮಗೆ ಎರಡು ಪಾಸ್ಪೋರ್ಟ್ ಗಾತ್ರದ ಫೋಟೋಗಳು ಅಗತ್ಯವಿರುತ್ತದೆ. ಇದಾದ ಬಳಿಕ ನೀವು ತುಂಬಿದ ಅರ್ಜಿಯನ್ನು ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಈಗಾಗಲೇ ನೀವು ಅಕೌಂಟ್ ಸೃಷ್ಟಿ ಮಾಡಿರುವ ಬ್ಯಾಂಕಿಗೆ ತೆರಳಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿ. ಈ ಸಮಯದಲ್ಲಿ ಬ್ಯಾಂಕಿನ ವ್ಯವಸ್ಥಾಪಕರು ನಿಮ್ಮ ವ್ಯವಹಾರದ ಕುರಿತು ಮೌಖಿಕವಾಗಿ ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಾರೆ. ಅವುಗಳಿಗೆ ಉತ್ತರ ನೀಡಿ, ಇದಾದ ಕೆಲವೇ ಕೆಲವು ಗಂಟೆಗಳಲ್ಲಿ ನಿಮಗೆ ಸಾಲವನ್ನು ಅನುಮೋದಿಸಲಾಗುತ್ತದೆ. ಅನುಮೋದಿಸಿದ ಕೆಲವು ದಿನಗಳ ಬಳಿಕ ನಿಮಗೆ ಒಂದು ಡೆಬಿಟ್ ಕಾರ್ಡ್ ನೀಡಲಾಗುತ್ತದೆ, ಈ ಡೆಬಿಟ್ ಕಾರ್ಡ್ ನಲ್ಲಿ ನಿಮ್ಮ ಆಯ್ಕೆಗೆ ಅನುಸಾರ ಹಣ ಇರುತ್ತದೆ. ನೀವು ಈ ಡೆಬಿಟ್ ಕಾರ್ಡನ್ನು ನಿಮ್ಮ ವ್ಯವಹಾರಗಳನ್ನು ಪ್ರಾರಂಭಿಸಲು ಬಳಸಬಹುದಾಗಿದೆ.

ಇನ್ನು ಬಡ್ಡಿದರ ಹಾಗೂ ಶುಲ್ಕದ ಕುರಿತು ಗಮನಹರಿಸುವುದಾದರೇ ಮುದ್ರಾ ಯೋಜನೆಗೆ ಯಾವುದೇ ಸಂಸ್ಕರಣಾ ಶುಲ್ಕ ಇರುವುದಿಲ್ಲ. ಬಡ್ಡಿದರವು ಸಂಪೂರ್ಣವಾಗಿ ನೀವು ನಡೆಸುವ ವ್ಯವಹಾರದ ಮೇಲೆ ಅವಲಂಬಿತವಾಗಿದ್ದು ನಿಮ್ಮ ಕೆಲಸದ ಸ್ವರೂಪವನ್ನು ಗಮನಿಸಿಕೊಂಡು ಬಡ್ಡಿ ದರವನ್ನು ನಿಗದಿ ಮಾಡಲಾಗುತ್ತದೆ. ಅದ್ಯಾಗೋ ಕನಿಷ್ಠ ಬಡ್ಡಿ ದರಗಳು ಸುಮಾರು ಶೇಕಡಾ 12ರಷ್ಟು ಆಗಿದೆ. ಈ ಯೋಜನೆಯಲ್ಲಿ ಸಾಮಾನ್ಯವಾಗಿ ಸಾಲ ತಿರಸ್ಕಾರ ಆಗುವುದಿಲ್ಲ, ಒಂದು ವೇಳೆ ನೀವು ಯಾವುದಾದರೂ ಬ್ಯಾಂಕಿನಿಂದ ಸಾಲವನ್ನು ಪಡೆದುಕೊಂಡು ವಾಪಸ್ಸು ನೀಡದೇ ಇದ್ದಲ್ಲಿ ಮಾತ್ರ ಈ ಸಾಲವನ್ನು ನಿಮಗೆ ನೀಡಲಾಗುವುದಿಲ್ಲ.