ಐಪಿಎಲ್ ನಲ್ಲಿ ಅತ್ಯುತ್ತಮ ಸ್ಪಿನ್ ವಿಭಾಗವನ್ನು ಹೊಂದಿರುವ ಟಾಪ್ 3 ತಂಡಗಳು ! ಯಾವ್ಯಾವು ಗೊತ್ತಾ??

ಐಪಿಎಲ್ ನಲ್ಲಿ ಅತ್ಯುತ್ತಮ ಸ್ಪಿನ್ ವಿಭಾಗವನ್ನು ಹೊಂದಿರುವ ಟಾಪ್ 3 ತಂಡಗಳು ! ಯಾವ್ಯಾವು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಬಹುಶಹ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರಬಹುದು ಯುಎಇ ದೇಶದಲ್ಲಿ ಸ್ಪಿನ್ ಬೌಲರ್ಗಳಿಗೆ ನೆರವಾಗುವ ಪಿಚ್ ಗಳು ಇವೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸ್ಪಿನ್ ಬೌಲರ್ ಗಳು ಬಹಳ ಮಹತ್ವದ ಪಾತ್ರವನ್ನು ವಹಿಸಲಿದ್ದಾರೆ ಎಂಬ ಲೆಕ್ಕಾಚಾರಗಳು ಕೇಳಿಬಂದಿವೆ. ಅದೇ ಕಾರಣಕ್ಕಾಗಿ ಮೊದಲಿನಿಂದಲೂ ಯುಎಇ ದೇಶದಲ್ಲಿ ಐಪಿಎಲ್ ಟೂರ್ನಿ ನಡೆಯುತ್ತದೆ ಎಂಬ ಆದೇಶ ಕೇಳಿ ಬಂದ ದಿನದಿಂದಲೂ ಕ್ರಿಕೆಟ್ ವಿಶ್ಲೇಷಕರು ಎಲ್ಲಾ ತಂಡಗಳ ಸ್ಪಿನ್ ಬೌಲಿಂಗ್ ವಿಭಾಗವನ್ನು ಗಮನಿಸಿ ವಿವಿಧ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಯಾವ ತಂಡದಲ್ಲಿ ಸ್ಪಿನ್ ಬೌಲರ್ ಗಳ ಕೊರತೆ ಇದೆ, ಯಾವ ತಂಡದಲ್ಲಿ ಸ್ಪಿನ್ ಬೌಲಿಂಗ್ ವಿಭಾಗ ಬಲಿಷ್ಠವಾಗಿ ಕಾಣುತ್ತಿದೆ ಎಂದೆಲ್ಲಾ ಲೆಕ್ಕಾಚಾರ ಗಳನ್ನು ಹಾಕುತ್ತಿದ್ದಾರೆ. ಇದೀಗ ಅದೇ ರೀತಿ ಮತ್ತೊಮ್ಮೆ ಕ್ರಿಕೆಟ್ ವಿಶ್ಲೇಷಕರು ಬಹಳ ಬಲಿಷ್ಠವಾದ ಸ್ಪಿನ್ ಬೌಲಿಂಗ್ ತಂಡವನ್ನು ಹೊಂದಿರುವ ಟಾಪ್ 3 ತಂಡಗಳನ್ನು ಪ್ರಕಟಿಸಿದ್ದು ಪಟ್ಟಿ ಈ ಕೆಳಗಿನಂತಿದೆ. ಈ ಪಟ್ಟಿಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಟಾಪ್ 3: ಕ್ರಿಕೆಟ್ ವಿಶ್ಲೇಷಕರ ಮೂರನೇ ಸ್ಥಾನದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಸ್ಥಾನ ಪಡೆದುಕೊಂಡಿದ್ದು, ರಶೀದ್ ಖಾನ್, ಮೊಹಮ್ಮದ್ ನಬಿ, ಶಬ್ದಾದ್ ನದೀಮ್, ಅಭಿಷೇಕ್ ಶರ್ಮ ಹಾಗೂ ಫೇಬಿಯನ್ ಅಲ್ಲೆನ್ ರವರನ್ನು ಈ ತಂಡ ಒಳಗೊಂಡಿದೆ. ಅದರಲ್ಲಿಯೂ ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ರವರ ಬೌಲಿಂಗ್ ಮೇಲೆ ಕ್ರಿಕೆಟ್ ವಿಶ್ಲೇಷಕರು ಬಹಳ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿ ಈ ತಂಡವನ್ನು ಮೂರನೇ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಪಂದ್ಯವಾಡುವ ಹನ್ನೊಂದರ ಬಳಗದಲ್ಲಿ ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ರವರು ಸ್ಥಾನ ಪಡೆಯುವುದು ಬಹುತೇಕ ಖಚಿತ ಎಂದು ಅಭಿಪ್ರಾಯಪಟ್ಟಿದ್ದಾರೆ.

ಟಾಪ್ 2: ಈ ಬಾರಿ ಉತ್ತಮ ಬೌಲಿಂಗ್ ವಿಭಾಗವನ್ನು ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ ವೇಗದ ಬೌಲಿಂಗ್ ವಿಭಾಗದಲ್ಲಿ ಮಾತ್ರವಲ್ಲದೇ ಸ್ಪಿನ್ ವಿಭಾಗದಲ್ಲಿಯೂ ಕೂಡ ದೇಶಿಯ ಪ್ರತಿಭೆಗಳನ್ನು ಒಳಗೊಂಡಿದೆ. ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರರಾದ ರವಿಚಂದ್ರನ್ ಅಶ್ವಿನ್ ಹಾಗೂ ಅಮಿತ್ ಮಿಶ್ರಾ ರವರು ಸ್ಪಿನ್ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದು ಇವರ ಜೊತೆಗೆ ಅಕ್ಷರ್ ಪಟೇಲ್, ಸಂದೀಪ್ ಲಮಿಚ್ಚೆನೆ ಹಾಗೂ ಲಲಿತ್ ಯಾದವ್ ರವರು ಡೆಲ್ಲಿ ತಂಡದಲ್ಲಿ ಇದ್ದಾರೆ. ಪಂದ್ಯವಾಡುವ ಹನ್ನೊಂದರ ಬಳಗದಲ್ಲಿ ಈ ಮೇಲಿನ ಸ್ಪಿನರ್ ಗಳಲ್ಲಿ ಕನಿಷ್ಠ ಮೂರು ಜನರು ಸ್ಥಾನ ಪಡೆಯುವುದು ಬಹುತೇಕ ಖಚಿತ ಎಂದು ಅಭಿಪ್ರಾಯಪಟ್ಟಿದ್ದಾರೆ.

ಟಾಪ್ 1: ಈಗಾಗಲೇ ಹರ್ಭಜನ್ ಸಿಂಗ್ ರವರು ಐಪಿಎಲ್ ಟೂರ್ನಿಯಿಂದ ಹೊರ ಹೋಗಿದ್ದರೂ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕ್ರಿಕೆಟ್ ಪಂಡಿತರ ಲೆಕ್ಕಚಾರದಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ]ದಕ್ಷಿಣ ಆಫ್ರಿಕಾ ತಂಡದ ಇಮ್ರಾನ್ ತಾಹಿರ್, ಭಾರತ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ರವೀಂದ್ರ ಜಡೇಜಾ ರವರ ಜೊತೆ ಹಿರಿಯ ಆಟಗಾರ ಪಿಯುಷ್ ಚಾವ್ಲಾ, ನ್ಯೂಜಿಲೆಂಡ್ ತಂಡದ ಆಲ್-ರೌಂಡರ್ ಮಿಚೆಲ್ ಸ್ಯಾಂಟರ್, ಸ್ಥಳೀಯ ಪ್ರತಿಭೆ ಕರಣ್ ಶರ್ಮಾ ಹಾಗೂ ಸಾಯಿ ಕಿಶೋರ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದಾರೆ. ಇಷ್ಟು ಸಾಲದು ಎಂಬಂತೆ ಪಾರ್ಟ್ ಟೈಮ್ ಬೌಲರ್ ಆಗಿ ಕೇದಾರ್ ಜಾಧವ್ ರವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಬಳಸಿಕೊಳ್ಳಬಹುದಾಗಿದೆ ಆದ ಕಾರಣ ಈ ತಂಡ ಮೊದಲನೇ ಸ್ಥಾನ ಪಡೆದುಕೊಂಡಿದೆ ಎಂದು ಹೇಳಿದ್ದಾರೆ.