ಆತ್ಮ ನಿರ್ಭರ್ ಲಸಿಕೆ ! ಭರ್ಜರಿ ಆರಂಭ ! ಭಾರತೀಯರಿಗೆ ಸಿಹಿಸುದ್ದಿ ನೀಡುವತ್ತ ಮೊದಲನೇ ಹೆಜ್ಜೆ !

ಆತ್ಮ ನಿರ್ಭರ್ ಲಸಿಕೆ ! ಭರ್ಜರಿ ಆರಂಭ ! ಭಾರತೀಯರಿಗೆ ಸಿಹಿಸುದ್ದಿ ನೀಡುವತ್ತ ಮೊದಲನೇ ಹೆಜ್ಜೆ !

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇಡೀ ವಿಶ್ವದ ಎಲ್ಲೆಡೆ ಈಗಾಗಲೇ ನೂರಕ್ಕೂ ಹೆಚ್ಚು ಲಸಿಕೆಗಳು ಪ್ರಾಯೋಗಿಕ ಹಂತಗಳಲ್ಲಿ ಇವೆ. ರಷ್ಯಾ ದೇಶ ಲಸಿಕೆ ಬಿಡುಗಡೆ ಮಾಡಿದ್ದರೂ ಕೂಡ ವಿಶ್ವದ ಬಹುತೇಕ ರಾಷ್ಟ್ರಗಳು ತಾವು ಪ್ರಯೋಗಗಳನ್ನು ನಡೆಸದೇ ರಷ್ಯಾ ದೇಶದ ಲಸಿಕೆಗಳನ್ನು ಬಳಸಲು ಸಿದ್ಧರಿಲ್ಲ ಎಂದು ಹೇಳಿಕೆ ನೀಡಿವೆ. ಮತ್ತೊಂದೆಡೆ ಆಕ್ಸ್ಫರ್ಡ್ ಲಸಿಕೆಯ ಮೇಲೆ ಭಾರಿ ನಿರೀಕ್ಷೆ ಇತ್ತಾದರೂ ಇದೀಗ ಆಕ್ಸ್ಫರ್ಡ್ ಲಸಿಕೆಯ ಪ್ರಯೋಗಗಳನ್ನು ನಿಲ್ಲಿಸಲಾಗಿದೆ. ಹೀಗಿರುವಾಗ ಇಡೀ ವಿಶ್ವದ ದೃಷ್ಟಿ ಮತ್ತೊಮ್ಮೆ ಭಾರತದತ್ತ ನೆಟ್ಟಿದೆ, ಮೊದಲಿನಿಂದಲೂ ಒಂದುವೇಳೆ ವಿಶ್ವಕ್ಕೆ ಕೋರೋಣ ಲಸಿಕೆ ಲಭ್ಯವಾದರೇ ಭಾರತದಿಂದ ಮಾತ್ರ ಸಾಧ್ಯ ಎಂದು ಹಲವಾರು ದೇಶಗಳು ನಂಬಿಕೆಯಿಟ್ಟಿದ್ದವು. ಭಾರತದ ಲಸಿಕೆ ಯಶಸ್ವಿಗೊಂಡರೇ ವಿಶ್ವದ ಎಲ್ಲಾ ರಾಷ್ಟ್ರಗಳು ಮರು ಆಲೋಚನೆ ಮಾಡದೆ ನೇರವಾಗಿ ತಮ್ಮ ರಾಷ್ಟ್ರಗಳಲ್ಲಿ ಬಿಡುಗಡೆ ಮಾಡುತ್ತಾರೆ ಅಷ್ಟರಮಟ್ಟಿಗೆ ಭಾರತದೇಶ ನಂಬಿಕೆ ಉಳಿಸಿಕೊಂಡಿದೆ ಎಂಬ ಮಾತುಗಳು ಕೇಳಿಬಂದಿದ್ದವು.

ಹೀಗಿರುವಾಗ ಭಾರತದಲ್ಲಿ ತಯಾರಾಗುತ್ತಿರುವ ಭಾರತ ಬಯೋಟೆಕ್ ವ್ಯಾಕ್ಸಿನ್ ಲಸಿಕೆಯು ಮೊದಲಿನಿಂದಲೂ ವಿಶ್ವದ ಗಮನ ಸೆಳೆಯುತ್ತಾ ಬಂದಿದೆ. ಕಳೆದ ಜುಲೈ ತಿಂಗಳಿನಲ್ಲಿ ಮೊದಲನೇ ಹಂತದ ಪ್ರಯೋಗ ಆರಂಭಿಸಿದ ಭಾರತ್ ಬಯೋಟಿಕ್ ಸಂಸ್ಥೆಯು ಮೊದಲಿಗೆ ಆಗಸ್ಟ್ 15ರೊಳಗೆ ಯಾಕೆ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು ಆದರೆ ಯಾವುದೇ ಕಾರಣಕ್ಕೂ ಅದು ಸಾಧ್ಯವಿಲ್ಲ ಎಂದು ತಜ್ಞರು ತಿಳಿಸಿದ್ದರು, ಯಾಕೆಂದರೆ ಸಂಪೂರ್ಣವಾಗಿ ಎಲ್ಲಾ ಪ್ರಯೋಗಗಳನ್ನು ನಡೆಸದೆ ಬಿಡುಗಡೆ ಮಾಡಿದರೇ ಮೊದಲನೆಯದಾಗಿ ಚಿಕ್ಕ ತೊಂದರೆ ಉಂಟಾದರೂ ತೊಂದರೆಗೆ ಸಿಲುಕುವ ಸಂಖ್ಯೆಗಳು ಹೆಚ್ಚಾಗಿರುತ್ತದೆ ಹಾಗೂ ವಿಶ್ವದ ಬೇರೆ ರಾಷ್ಟ್ರಗಳು ನಮ್ಮ ಲಸಿಕೆಯನ್ನು ನಂಬುವುದಿಲ್ಲ. ಅದೇ ಕಾರಣಕ್ಕಾಗಿ ಸಂಪೂರ್ಣವಾಗಿ ಪ್ರಯೋಗದ ನಂತರವೇ ಲಸಿಕೆ ಬಿಡುಗಡೆ ಮಾಡಲಾಗುತ್ತದೆ ಎಂದು ತಜ್ಞರು ತಿಳಿಸಿದ್ದರು.

ಇದೀಗ ಕಳೆದ ಜುಲೈನಲ್ಲಿ ಆರಂಭಗೊಂಡಿದ್ದ ಮೊದಲನೇ ಹಂತದ ಪ್ರಯೋಗದ ಫಲಿತಾಂಶಗಳು ಹೊರಬಿದ್ದಿದ್ದು, ಭಾರತ ಬಯೋಟಿಕ್ ಸಂಸ್ಥೆಯ ಕೊವಾಕ್ಸಿನ್ ಲಸಿಕೆಯು ಮೊದಲನೇ ಹಂತದಲ್ಲಿ ಬಲವಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಅದ್ಭುತ ಫಲಿತಾಂಶ ನೀಡಿದೆ. ಮಾನವನ ದೇಹಕ್ಕೆ ಅಗತ್ಯವಿರುವ ದೃಢವಾದ ರೋಗ ನಿರೋಧಕ ಪ್ರತಿಕ್ರಿಯೆಗಳನ್ನು ಸೃಷ್ಟಿ ಮಾಡುವುದರಲ್ಲಿ ಲಸಿಕೆ ಯಶಸ್ವಿಯಾಗಿದ್ದು, ಪ್ರಯೋಗ ನಡೆಸಿದ 20 ಪ್ರಾಣಿಗಳಲ್ಲಿ ಯಾವುದೇ ಪ್ರಾಣಿಗಳಿಗೂ ನ್ಯುಮೋನಿಯಾ ಲಕ್ಷಣಗಳು ಕಾಣಿಸಿಲ್ಲ. ಅಷ್ಟೇ ಅಲ್ಲದೇ ಕರೋನ ವೈರಸ್ ಪುನರಾವರ್ತನೆ ಸಂಪೂರ್ಣವಾಗಿ ಕಡಿಮೆಯಾಗಿದೆ, ರೋಗ ನಿರೋಧಕ ಶಕ್ತಿ ಗಣನೀಯವಾಗಿ ಏರಿಕೆಯಾಗಿದ್ದು ಶೇಕಡ ನೂರಕ್ಕೆ 100ರಷ್ಟು ಫಲಿತಾಂಶ ಸಿಕ್ಕಿದೆ ಎಂದು ಭಾರತ್ ಬಯೋಟೆಚ್ ಸಂಸ್ಥೆ ಘೋಷಣೆ ಮಾಡಿದೆ.