ಹನುಮಂತ ತನ್ನ ಗುಣದ ಮೂಲಕ ನಮಗೆ ನೀಡುವ ಜೀವನ ಪಾಠಗಳೇನು ಗೊತ್ತೇ??

ಹನುಮಂತ ತನ್ನ ಗುಣದ ಮೂಲಕ ನಮಗೆ ನೀಡುವ ಜೀವನ ಪಾಠಗಳೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಹಿಂದೂ ದೇವತೆಗಳಲ್ಲಿ ಹನುಮಂತನು ಪ್ರತಿನಿತ್ಯ ಹೆಚ್ಚಿನ ಭಕ್ತರು ನೆನೆಯುವ ದೇವರಲ್ಲಿ ಒಬ್ಬರಾಗಿದ್ದಾರೆ. ರಾಮಾಯಣ ಹಾಗೂ ಮಹಾ ಭಾರತದ ಸೇರಿದಂತೆ ಬಹುತೇಕ ಧಾರ್ಮಿಕ ಗ್ರಂಥಗಳಲ್ಲಿ ಹನುಮಂತನ ಕುರಿತು ಉಲ್ಲೇಖವಿದೆ. ಮಹಾಕಾವ್ಯಗಳಲ್ಲಿ ಹನುಮಂತನು ಶಿವನ ಅವತಾರವೆಂದು ಉಲ್ಲೇಖ ಮಾಡಲಾಗಿದೆ. ರಾಮಾಯಣದಲ್ಲಿ ರಾಮನ ಭಂಟನಾಗಿ ಕಾಣಿಸಿಕೊಂಡ ಹನುಮನು ಸಾಕಷ್ಟು ಪ್ರಸಿದ್ದಿ ಪಡೆದುಕೊಂಡಿದ್ದಾರೆ. ಇವರನ್ನು ಪ್ರತಿಯೊಬ್ಬರು ಅನುಸರಿಸುತ್ತಾರೆ. ಆದರೆ ನಾವು ಹನುಮಂತನನ್ನು ಭಕ್ತಿಯಿಂದ ಬೇಡಿಕೊಂಡರೇ ಸಾಲದು, ಬದಲಾಗಿ ಅವರ ವಿಶಿಷ್ಟ ಗುಣಗಳ ಬಗ್ಗೆ ತಿಳಿದುಕೊಂಡು ನಮ್ಮ ಜೀವನದಲ್ಲಿ ಅನುಸರಿಸುವ ಪ್ರಯತ್ನ ಮಾಡಬೇಕು. ಬನ್ನಿ ಹಾಗಿದ್ದರೇ ಇನ್ಯಾಕೆ ತಡ ನಾವು ಇಂದು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಹನುಮಂತನ ಗುಣಗಳ ಬಗ್ಗೆ ತಿಳಿದುಕೊಳ್ಳೋಣ.

ಪರಿಶ್ರಮ: ಸೀತೆಯನ್ನು ಕಂಡುಕೊಳ್ಳುವ ಹಠ ಮತ್ತು ಅವನ ಪ್ರಭು ಶ್ರೀರಾಮನ ಸ್ಥಿತಿಯನ್ನು ನಿಗ್ರಹ ಮಾಡಲು ಪಣತೊಟ್ಟಿದ್ದ ಹನುಮಂತನ ಅನುಪಸ್ಥಿತಿ ಸೀತೆಯ ಅಪಹರಣವಾದ ಸಮಯದಲ್ಲಿ ಭಗವಾನ್ ರಾಮನಿಗೆ ಹೆಚ್ಚು ಅಗತ್ಯವಿತ್ತು. ತನ್ನ ಸಂಪೂರ್ಣ ಅಸ್ತಿತ್ವವನ್ನು ಸೀತೆಯನ್ನು ಹುಡುಕಲು ಮೀಸಲಿಟ್ಟಿದ್ದ ಹನುಮಂತ ಅಂತಿಮವಾಗಿ ಲಂಕೆಯನ್ನು ತಲುಪಲು ಮತ್ತು ಸೀತೆಯನ್ನು ಹುಡುಕಲು ಹಲವಾರು ಅಡೆತಡೆಗಳನ್ನು ಎದುರಿಸಿದನು ಆದರೆ ಯಾವುದೇ ಕಾರಣಕ್ಕೂ ತನ್ನ ಪ್ರಯತ್ನವನ್ನು ನಿಲ್ಲಿಸಲಿಲ್ಲ. ಲಂಕಾ ದಹನ ಮಾಡುವ ಶಕ್ತಿಯಿದ್ದ ಹನುಮನಿಗೆ ಸೀತೆಯನ್ನು ಕರೆದುಕೊಂಡು ಹೋಗುವುದು ಬಹಳ ಸುಲಭವಾಗಿತ್ತು ಆದರೆ ಸೀತೆಯ ಮಾತಿಗೆ ಬೆಲೆ ನೀಡಿ, ಇದರಿಂದ ಪ್ರಭು ಶ್ರೀ ರಾಮನ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದಾಗ ಸುಮ್ಮನಾದನು.ಇದರಿಂದ ನಾವು ಕಲಿಯಬೇಕಾದ ಪಾಠವೇನೆಂದರೆ, ಎಷ್ಟೇ ಅಡೆತಡೆಗಳು ಬಂದರೂ ನಮ್ಮ ಕೆಲಸವನ್ನು ಪೂರ್ಣಗೊಳಿಸುವತ್ತ ನಾವು ಗಮನ ಹರಿಸಬೇಕು. ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು ಅಷ್ಟೇ ಅಲ್ಲದೇ, ಯಾರ ಗೌರವಕ್ಕೂ ಧಕ್ಕೆ ಬರದಂತೆ ನಮ್ಮ ಕಾರ್ಯವನ್ನು ಪೂರ್ಣಗೊಳಿಸಬೇಕು.

ವಾಸ್ತವಿಕ- ಸಮಯಕ್ಕೆ/ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳುವುದು: ಸ್ನೇಹಿತರೇ, ಹನುಮಂತನು ರಾಮಾಯಣದಲ್ಲಿ ಪರ್ವತಗಳನ್ನು ಎತ್ತಿದನು, ತನ್ನ ಆಕಾರವನ್ನು ಸಮಯಕ್ಕೆ ತಕ್ಕಂತೆ ಚಿಕ್ಕದು ಹಾಗೂ ದೊಡ್ಡದು ಮಾಡಿಕೊಳ್ಳುತ್ತಿದ್ದನು, ತನ್ನ ಬಾಲದಿಂದ ಲಂಕಾ ದಹನ ಮಾಡಿದನು, ಯುದ್ಧದಲ್ಲಿ ತನ್ನ ಶಕ್ತಿಯ ಪ್ರದರ್ಶನ ಮಾಡಿದ್ದನು. ತನ್ನ ಶಕ್ತಿಯಿಂದ ವಾನರ ಸೇನೆಯನ್ನು ರಕ್ಷಿಸಿದನು. ಇಷ್ಟೆಲ್ಲ ಸಾಧಿಸುವಾಗ ಅಗತ್ಯಕ್ಕೆ ತಕ್ಕಂತೆ ತನ್ನ ಆಕಾರವನ್ನು ಬದಲಾಯಿಸಿಕೊಳ್ಳುತ್ತಿದ್ದನು. ಇದರಿಂದ ನಾವು ಕಲಿಯಬೇಕಾದ ಪಾಠವೇನೆಂದರೆ, ನಮ್ಮ ಜೀವನದಲ್ಲಿಯೂ ನಮಗೆ ಸಾಕಷ್ಟು ಸವಾಲುಗಳು, ಪರಿಸ್ಥಿತಿಗಳು ಎದುರಾಗುತ್ತವೆ. ಅಂತಹ ಪರಿಸ್ಥಿಗಳಲ್ಲಿ ನಾವು ಸಂದರ್ಭಕ್ಕೆ ತಕ್ಕಂತೆ ನಾವು ನಮ್ಮ ಬದಲಾಯಿಸಿಕೊಂಡು ಗುರಿ ತಲುಪಬೇಕು.

ಹಾಸ್ಯ ಪ್ರಜ್ಞೆ- ರಾಮಾಯಣದಲ್ಲಿ ಬಹಳ ಮುಖ್ಯ ಪಾತ್ರವನ್ನು ಹೊಂದಿರುವ ಹನುಮಂತನ ಹಲವಾರು ಸವಾಲುಗಳು, ಯುದ್ಧಗಳ ನಡುವೆಯೂ ಕೂಡ ತನ್ನ ಹಾಸ್ಯ ಪ್ರಜ್ಞೆಯನ್ನು ಮರೆಯಲಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೇ ಹನುಮಂತನು ತಾನೇ ಸ್ವ-ಇಚ್ಛೆಯಿಂದ ರಾವಣನ ಮಗ ಇಂದ್ರಜಿತ್ ಬಳಿ ಸಿಕ್ಕಿಕೊಂಡಾಗ ಇಂದ್ರಜಿತ್ ಹನುಮನ ಬಾಲಕ್ಕೆ ಬೆಂಕಿ ಇಡುವುದಾಗಿ ಹೇಳುತ್ತಾನೆ, ಈ ಪ್ರಸಂಗವನ್ನು ಹಾಸ್ಯ ಪ್ರಸಂಗವಾಗಿ ಬದಲಾಯಿಸುವ ಹನುಮಂತನ ಬಾಲವನ್ನು ಬೆಳೆಸುತ್ತಾ ಇಂದ್ರಜಿತ್ ನಿಗೆ ಸವಾಲಾಗಿ ಪರಿಣಮಿಸುತ್ತಾನೆ. ಬಹುಶಹ ನೀವು ರಾಮಾಯಣದ ಧಾರವಾಹಿ ಹಾಗೂ ಸಿನಿಮಾಗಳಲ್ಲಿ ನೋಡಿರಬಹುದು ಈ ಪ್ರಸಂಗವು ಎಷ್ಟು ಹಾಸ್ಯಮಯವಾಗಿದೆ ಎಂದು. ಇನ್ನು ಇದಾದ ತಕ್ಷಣ ಕೂಡಲೇ ತನ್ನ ಕರ್ತವ್ಯವನ್ನು ಪಾಲಿಸುವುದಕ್ಕಾಗಿ ಲಂಕಾದಹನ ಮಾಡಿ ರಾವಣ ಸೇನೆಗೆ ಬುದ್ಧಿ ಕಲಿಸುತ್ತಾನೆ. ಇದರಿಂದ ನಾವು ಅರಿತುಕೊಳ್ಳಬೇಕಾದ ಪಾಠ ಏನೆಂದರೇ ಜೀವನದಲ್ಲಿ ಸವಾಲುಗಳು ಹಲವಾರು ಇರುತ್ತವೆ. ಆದರೆ ನಮ್ಮ ಮುಖದ ಮೇಲೆ ಮುಗುಳುನಗೆ ಇರಬೇಕು, ನಮ್ಮ ಹಾಸ್ಯಪ್ರಜ್ಞೆಯನ್ನು ನಾವು ಎಂದಿಗೂ ಮರೆಯಬಾರದು, ಅದರ ಜೊತೆಗೆ ನಮ್ಮ ಕರ್ತವ್ಯವನ್ನು ಕೂಡ ಮರೆಯಬಾರದು. ಹಾಸ್ಯಪ್ರಜ್ಞೆಯ ಜೊತೆ ಎಲ್ಲಾ ಸವಾಲುಗಳನ್ನು ಜಯಿಸಬೇಕು..

ನಿಸ್ವಾರ್ಥತೆ, ನಿಷ್ಠೆ ಮತ್ತು ನಮ್ರತೆ: ನಿಷ್ಠೆ ಮತ್ತು ನಮ್ರತೆ: ಸ್ನೇಹಿತರೇ ಹನುಮಂತ ಎಂತಹ ಬಲಶಾಲಿ ಎಂದು ನಿಮಗೆ ಕೇಳುವ ಅವಶ್ಯಕತೆ ಇಲ್ಲ. ಹೀಗಿರುವಾಗ ತನಗೆ ಎಷ್ಟೇ ಬಲಿಷ್ಠವಾಗಿದ್ದರೂ ಕೂಡ ತನ್ನ ಇಡೀ ಜೀವನವನ್ನು ಪ್ರಭು ಶ್ರೀ ರಾಮನಿಗಾಗಿ ಮುಡಿಪಾಗಿಟ್ಟಿದ್ದಾರೆ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಅತ್ಯಂತ ಬಲಿಷ್ಠವಾಗಿ ರಾಮನಿಗೆ ಯುದ್ಧದಲ್ಲಿ ಸಹಾಯ ಮಾಡಿದ್ದರೂ ಕೂಡ ಎಂದಿಗೂ ಪ್ರಭು ಶ್ರೀರಾಮನ ಆಜ್ಞೆಯನ್ನು ಮೀರಿಲ್ಲ. ಅಷ್ಟೇ ಅಲ್ಲಾ ನೀವು ಯಾವುದೇ ಚಿತ್ರಗಳನ್ನು ಗಮನಿಸಿದರೂ ಕೂಡ ಶ್ರೀ ರಾಮನ ಪಾದದ ಕೆಳಗಡೆ ಹನುಮಂತನು ಬಹಳ ನಮ್ರತೆಯಿಂದ ಕೈಮುಗಿದು ಕುಳಿತಿರುತ್ತಾರೆ. ಇದರಿಂದ ನಾವು ಕಲಿಯಬೇಕಾದ ಪಾಠ ಏನೆಂದರೆ ನಮ್ಮ ಶಕ್ತಿ-ಸಾಮರ್ಥ್ಯಗಳು ಎಷ್ಟೇ ಇದ್ದರೂ ಕೂಡ ನಿಷ್ಠೆಯಿಂದ ಕೆಲಸಗಳನ್ನು ಮಾಡಬೇಕು ಹಾಗೂ ನಮ್ರತೆಯಿಂದ ನಮ್ಮ ಜೀವನವನ್ನು ನಡೆಸಬೇಕು. ಯುದ್ಧದಲ್ಲಿ ಅಗತ್ಯವಿದ್ದಾಗ ಶಕ್ತಿ ತೋರಿಸಿ ಯುದ್ಧ ವಿಲ್ಲದೆ ಇದ್ದಾಗ ರಾಮನ ಪಾದದ ಬಳಿ ನಮ್ರತೆಯಿಂದ ಹನುಮಂತನ ಜೀವನ ನಡೆಸಿದ್ದರು.