ಬಿಗ್ ನ್ಯೂಸ್: ಸತ್ಯವಾಯಿತು ಕಂಗನಾ ಮಾತು ! ತಪ್ಪೊಪ್ಪಿಕೊಂಡ ರಿಯಾ ! ಮಹತ್ವದ ಘಟ್ಟ ತಲುಪಿದ ಸುಶಾಂತ್ ಪ್ರಕರಣ

ಬಿಗ್ ನ್ಯೂಸ್: ಸತ್ಯವಾಯಿತು ಕಂಗನಾ ಮಾತು ! ತಪ್ಪೊಪ್ಪಿಕೊಂಡ ರಿಯಾ ! ಮಹತ್ವದ ಘಟ್ಟ ತಲುಪಿದ ಸುಶಾಂತ್ ಪ್ರಕರಣ

ನಮಸ್ಕಾರ ಸ್ನೇಹಿತರೇ, ಕಂಗನಾ ರವರಿಗೆ ಬಾಲಿವುಡ್ನಲ್ಲಿ ಭರ್ಜರಿ ಗೆಲುವು ‌ಸಿಕ್ಕಿಬಿಟ್ಟಿದೆ. ಇಷ್ಟು ದಿವಸ ಕಂಗನಾ ರನೌತ್ ಅವರ ಹೇಳಿಕೆಗಳನ್ನು ಕೇಳಿದ ಹಲವಾರು ಜನ ಕಂಗನಾ ರನೌತ್ ರವರು ಕೇವಲ ಪ್ರಚಾರಕ್ಕಾಗಿ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯಲ್ಲಿ ಕಾರಣವಿಲ್ಲದೆ ಇದ್ದರೂ ಮಾತನಾಡುತ್ತಿದ್ದಾರೆ, ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯಲ್ಲಿ ಯಾವುದೇ ತನಿಖೆ ಅವಶ್ಯಕತೆಯಿಲ್ಲ. ಬಾಲಿವುಡ್ನಲ್ಲಿ ಡ್ರ — ಗ್ಸ್ ನಡೆಯುತ್ತಿದೆ ಎಂದು ಹೇಳುವ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ, ಬಾಲಿವುಡ್ ಚಿತ್ರರಂಗದಲ್ಲಿ ಈ ರೀತಿಯ ಯಾವುದೇ ಕೆಲಸಗಳಿಗೂ ಪ್ರೇರಣೆ ಸಿಗುವುದಿಲ್ಲ, ಇದು ಕೇವಲ ಕಂಗನಾ ರವರು ಕೇವಲ ಪ್ರಚಾರಕ್ಕಾಗಿ ಮಾಡುತ್ತಿರುವ ಕೆಲಸ. ಇನ್ನು ರಿಯಾ ಚಕ್ರವರ್ತಿ ರವರು ಇಂಡಿಯಾ ಟುಡೇ ಸಂದರ್ಶನದಲ್ಲಿ ಹೇಳಿದಂತೆ ಅವರು ಕೂಡ ಯಾವುದೇ ಡ್ರ — ಗ್ಸ್ ತೆಗೆದುಕೊಳ್ಳುವುದಿಲ್ಲ, ಅಷ್ಟೇ ಅಲ್ಲದೆ ಸುಶಾಂತ್ ಸಿಂಗ್ ರಜಪೂತರು ಡ್ರ — ಗ್ಸ್ ತೆಗೆದುಕೊಳ್ಳುತ್ತಿದ್ದರು. ಆದರೆ ಅದಕ್ಕೂ ರಿಯಾ ಚಕ್ರವರ್ತಿಯವರಿಗೆ ಯಾವುದೇ ಸಂಬಂಧ ಇಲ್ಲ ಎಂದು ಬಾಲಿವುಡ್ ಚಿತ್ರರಂಗದ ಹಲವಾರು ‌ಸೆಲೆಬ್ರಿಟಿಗಳು ಅಭಿಪ್ರಾಯ ವ್ಯಕ್ತಪಡಿಸಿ ರಿಯಾ ಚಕ್ರವರ್ತಿ ರವರ ಪರವಾಗಿ ನಿಂತಿದ್ದರು.

ಆದರೆ ಇವರೆಲ್ಲರ ಬೆಂಬಲದ ನಂತರವೂ ಕೂಡ ಕಂಗನಾ ರನೌತ್ ರವರು, ತಮ್ಮ ಮಾತುಗಳಲ್ಲಿ ಯಾವುದೇ ಬದಲಾವಣೆ ತಂದು ಕೊಂಡಿರಲಿಲ್ಲ, ಬದಲಾಗಿ ಮತ್ತಷ್ಟು ಗಟ್ಟಿಯಾಗಿ ತಮ್ಮ ಮಾತುಗಳನ್ನು ಸ್ಪಷ್ಟ ಪಡಿಸಿದ್ದರು. ಆದರೆ ಇದೀಗ ಈ ಹಲವಾರು ದಿಗ್ಗಜ ಸೆಲೆಬ್ರಿಟಿಗಳು ಹಾಗೂ ರಿಯಾ ಚಕ್ರವರ್ತಿ ರವರ ವಿರುದ್ಧ ಕಂಗನಾ ರಾವತ್ ರವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದೀಗ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯಲ್ಲಿ ಮಹತ್ವದ ತಿರುವು ಪಡೆದುಕೊಂಡಿದ್ದು ರಿಯಾ ಚಕ್ರವರ್ತಿ ರವರು ಪ್ರಕರಣಕ್ಕೆ ಬಾರಿ ತಿರುವನ್ನು ನೀಡುವಂತಹ ಹೇಳಿಕೆ ನೀಡಿ ತಪ್ಪೊಪ್ಪಿಕೊಂಡಿದ್ದಾರೆ. ಹೌದು ಸ್ನೇಹಿತರೇ, ಈಗಾಗಲೇ ನಿಮಗೆ ತಿಳಿದಿರುವಂತೆ ರಿಯಾ ಚಕ್ರವರ್ತಿ ರವರ ಸಹೋದರ, ನನ್ನ ಸಹೋದರಿಯ ರಿಯಾ ಚಕ್ರವರ್ತಿ ರವರು ಹೇಳಿದಂತೆ ನಾನು ಅವರಿಗೆ ಡ್ರ — ಗ್ಸ್ ಖರೀದಿ ಮಾಡಿ ನೀಡುತ್ತಿದೆ ಎಂದು ಕೆಲವು ದಿನಗಳ ಹಿಂದೆ ತಪ್ಪೊಪ್ಪಿಕೊಂಡಿದ್ದರು . ಇವರ ಹೇಳಿಕೆಯ ಆಧಾರದ ಮೇರೆಗೆ ರಿಯಾ ಚಕ್ರವರ್ತಿ ರವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಂಸ್ಥೆಯು ವಿಚಾರಣೆಗೆ ಒಳಪಡಿಸಿತ್ತು.

ವಿಚಾರಣೆಯ ವೇಳೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಂಸ್ಥೆಯು ಕೇಳಿದ 15 ರಿಂದ 20 ಪ್ರಶ್ನೆಗಳಲ್ಲಿ ಸುಶಾಂತ್ ಸಿಂಗ್ ರಜಪೂತ್ ರವರಿಗೆ ಡ್ರ — ಗ್ಸ್ ನೀಡಲಾಗಿದೆಯೇ ಎಂಬ ಪ್ರಶ್ನೆಯೂ ಕೂಡ ಇತ್ತು ಎಂಬ ಮಾಹಿತಿ ಸಿಕ್ಕಿದೆ. ಈ ಕುರಿತು ತಪ್ಪೊಪ್ಪಿಕೊಂಡಿರುವ ರಿಯಾ ಚಕ್ರವರ್ತಿ ರವರು, ಸುಶಾಂತ್ ಸಿಂಗ್ ರಜಪೂತ್ ರವರಿಗಾಗಿ ನನ್ನ ಸಹೋದರರನ್ನು ಬಳಸಿಕೊಂಡು ನಾನು ಡ್ರ — ಗ್ಸ್ ಗಳನ್ನು ಖರೀದಿಸಿದ್ದೇನೆ ಹಾಗೂ ಸುಶಾಂತ್ ಸಿಂಗ್ ರಜಪೂತ್ ರವರಿಗೆ ನೀಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾರೆ. ರಿಯಾ ಚಕ್ರವರ್ತಿ ರವರು ತಪ್ಪೊಪ್ಪಿಕೊಂಡು ಹೇಳಿಕೆ ನೀಡಿದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದು, ಡ್ರ — ಗ್ಸ್ ಎಂದರೇನು ಎಂದು ತಿಳಿದಿಲ್ಲ, ಸುಶಾಂತ್ ಸಿಂಗ್ ರಜಪೂತ್ ರವರು ತೆಗೆದುಕೊಳ್ಳುತ್ತಿದ್ದರು ಎಂಬುದು ತಿಳಿದಿತ್ತು. ಆದರೆ ಅದನ್ನು ನೋಡಿಲ್ಲ ನನಗೆ ಆ ಕುರಿತು ಹೆಚ್ಚಿನ ಮಾಹಿತಿ ಇಲ್ಲ ಎಂದು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದ ರಿಯಾ ಚಕ್ರವರ್ತಿ ರವರ ಅಸಲಿ ಮುಖ ಬಯಲಾಗಿದೆ ಎಂದು ಕಂಗನಾ ಅಭಿಮಾನಿಗಳು ಹಾಗೂ ಸುಶಾಂತ್ ಸಿಂಗ್ ಅಭಿಮಾನಿಗಳು ಟ್ರೆಂಡಿಂಗ್ ಸೃಷ್ಟಿ ಮಾಡಿದ್ದಾರೆ.