ಮುಂಬೈ ಇಂಡಿಯನ್ಸ್ ತಂಡಕ್ಕೆ ಬಿಗ್ ಶಾಕ್ ! ಪ್ರಮುಖ ಬೌಲರ್ ಟೂರ್ನಿಯಿಂದ ಹೊರಕ್ಕೆ !

ಮುಂಬೈ ಇಂಡಿಯನ್ಸ್ ತಂಡಕ್ಕೆ ಬಿಗ್ ಶಾಕ್ ! ಪ್ರಮುಖ ಬೌಲರ್ ಟೂರ್ನಿಯಿಂದ ಹೊರಕ್ಕೆ !

ನಮಸ್ಕಾರ ಸ್ನೇಹಿತರೇ, ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಅಭಿಮಾನಿಗಳು ತುದಿಗಾಲಿನಲ್ಲಿ ಕಾದು ನಿಂತಿರುವ ಮೂರನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭವಾಗಲಿದೆ. ಐಪಿಎಲ್ ಟೂರ್ನಿಯ ಕೇವಲ ಭಾರತದಲ್ಲಷ್ಟೇ ಅಭಿಮಾನಿ ಬಳಗವನ್ನು ಹೊಂದಿಲ್ಲ, ಬದಲಾಗಿ ವಿಶ್ವದ ಮೂಲೆ ಮೂಲೆಯಲ್ಲೂ ಐಪಿಎಲ್ ಟೂರ್ನಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಹೀಗಿರುವಾಗ ವಿಶ್ವದಲ್ಲಿನ ಕ್ರಿಕೆಟ್ ಅಭಿಮಾನಿಗಳು ವರ್ಣರಂಜಿತ ಐಪಿಎಲ್ ಟೂರ್ನಿಯನ್ನು ನೋಡಲು ಕಾದು ಕುಳಿತಿದ್ದಾರೆ. ಈಗಾಗಲೇ ಪ್ರತಿಯೊಂದು ತಂಡಗಳು ತಮ್ಮದೇ ಆದ ಲೆಕ್ಕಾಚಾರ ಹಾಗೂ ಅಭ್ಯಾಸದಲ್ಲಿ ನಿರತವಾಗಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ಹೇಗೆ ನೀಡುವುದು, ಯಾವ ರೀತಿಯಲ್ಲಿ ಹನ್ನೊಂದರ ಬಳಗವನ್ನು ಆಯ್ಕೆ ಮಾಡಿದರೇ ನಾವು ಪಂದ್ಯಗಳನ್ನು ಗೆಲ್ಲಬಹುದು ಎಂಬುದರ ಕುರಿತು ಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡವು ಕೂಡ ಇತರ ತಂಡಗಳಂತೆ ತಮ್ಮ ತಂಡದ ಹನ್ನೊಂದರ ಬಳಗದ ಕುರಿತು ಆಲೋಚನೆ ಮಾಡುತ್ತಾ, ಆಟಗಾರರನ್ನು ಕಠಿಣ ಅಭ್ಯಾಸದಲ್ಲಿ ನಿರತವಾಗಿರಿಸಿದೆ. ಬಹುತೇಕ ಐಪಿಎಲ್ ವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ಇದುವರೆಗೂ ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿರುವ ಮುಂಬೈ ತಂಡವು ಈ ಬಾರಿಯೂ ಕೂಡ ಉತ್ತಮ ಪ್ರದರ್ಶನ ನೀಡಲು ಸಕಲ ಸಿದ್ಧತೆಗಳನ್ನು ನಡೆಸಿದೆ. ಆದರೆ ಕೊನೆ ಗಳಿಗೆಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಹಲವಾರು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡಿ ಹಲವಾರು ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿರುವ ಪ್ರಮುಖ ಬೌಲರ್ ಟೂರ್ನಿಯಿಂದ ಹೊರ ಹೋಗಲು ನಿರ್ಧಾರ ಮಾಡಿರುವುದು ಮುಂಬೈ ಇಂಡಿಯನ್ಸ್ ಗೆ ನುಂಗಲಾರದ ತುತ್ತಾಗಿದೆ.

ಹೌದು ಸ್ನೇಹಿತರೇ ಇದೀಗ ಬಂದಿರುವ ಮಾಹಿತಿಯ ಪ್ರಕಾರ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬೌಲರ್ ಲಸಿತ್ ಮಲಿಂಗ ರವರು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ. ಇವರ ಬದಲಿ ಆಟಗಾರರನ್ನು ಕೂಡ ಆಯ್ಕೆಯಾಗಿದ್ದು ಆಸ್ಟ್ರೇಲಿಯ ತಂಡದ ವೇಗದ ಬೌಲರ್ ಪ್ಯಾಟಿಸ್ಸನ್ ರವರು ಲಸಿತ್ ಮಲಿಂಗಾ ರವರ ಬದಲಿ ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆದು ಕೊಂಡಿದ್ದಾರೆ. ಆದರೆ ಯಾವುದೇ ಬೌಲರ್ ಬಂದರೂ ಲಸಿತ್ ಮಲಿಂಗಾ ರವರು ನೀಡುತ್ತಿದ್ದ ಅಂತಹ ಉತ್ತಮ ಪ್ರದರ್ಶನವನ್ನು ನೀಡಲು ಸಾಧ್ಯವಿಲ್ಲ ಎಂದು ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.