ರಾಜ್ಯದ ಲಾಂಛನದಲ್ಲಿ ಕಂಡು ಬರುವ ಗಂಡಭೇರುಂಡ ಪಕ್ಷಿಯ ಬಗ್ಗೆ ನಿಮಗೆಷ್ಟು ಗೊತ್ತೇ??

ರಾಜ್ಯದ ಲಾಂಛನದಲ್ಲಿ ಕಂಡು ಬರುವ ಗಂಡಭೇರುಂಡ ಪಕ್ಷಿಯ ಬಗ್ಗೆ ನಿಮಗೆಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಕರ್ನಾಟಕ ಅಧಿಕೃತ ಲಾಂಛನದಲ್ಲಿ ಕಂಡು ಬರುವ ಎರಡು ತಲೆಯ ಪಕ್ಷಿಯನ್ನು ನೀವು ಗಮನಿಸಿರಬಹುದು. ಈ ಪಕ್ಷಿಯು ಬಹಳ ವಿಚಿತ್ರವಾಗಿರುವ ಕಾರಣ ಎಲ್ಲರ ಗಮನ ಸೆಳೆಯುತ್ತದೆ. ಎರಡು ತಲೆಗಳನ್ನು ಹೊಂದಿರುವ ಹದ್ದಿನ ರೀತಿ ಕಂಡು ಬರುವ ಈ ಪಕ್ಷಿಯು ಬಹಳ ವಿಚಿತ್ರವಾಗಿ ಹಾಗೂ ಬಹಳ ಬಲಿಷ್ಠವಾಗಿ ನಮ್ಮ ಕಣ್ಣುಗಳಿಗೆ ಕಾಣಿಸುತ್ತದೆ. ಈ ಪಕ್ಷಿಯು ಕೇವಲ ಎರಡು ತಲೆಯನ್ನು ಹೊಂದಿರುವ ಕಾರಣಕ್ಕೆ ಮಾತ್ರ ಎಲ್ಲರನ್ನೂ ಆಕರ್ಷಿಸುವುದಿಲ್ಲ ಬದಲಾಗಿ ಕುಕ್ಕು ಹಾಗೂ ಕಾಲುಗಳಲ್ಲಿ 4 ಆನೆಗಳನ್ನು ಹಿಡಿದಿಟ್ಟುಕೊಂಡಿರುವುದು ಮತ್ತೊಂದು ವಿಶೇಷವೆನಿಸಿದೆ. ಗಂಡಭೇರುಂಡ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಪಕ್ಷಿಯು ಅಸಲಿಗೆ ನಿಜಕ್ಕೂ ಭೂಮಿಯ ಮೇಲೆ ಹಿಂದಿನ ಕಾಲದಲ್ಲಿ ಜನ್ಮತಾಳಿತ್ತಾ? ಅಥವಾ ಲಕ್ಷ್ಮೀ ನರಸಿಂಹ ಸ್ವಾಮಿಯ ಪೌರಾಣಿಕ ಕಥೆಗಳಲ್ಲಿ ಕೇಳಿ ಬರುವ ಪಕ್ಷಿ ಇದೇನಾ? ಅಥವಾ ಈ ಪಕ್ಷಿ ಕೇವಲ ಕಾಲ್ಪನಿಕ ಜಗತ್ತಿಗೆ ಸೀಮಿತವಾಗಿದೆಯೇ? ಅಷ್ಟೇ ಅಲ್ಲದೇ ಇಷ್ಟೆಲ್ಲ ಗಮನ ಸೆಳೆದಿರುವ ಪಕ್ಷಿ ಕರ್ನಾಟಕದ ಲಾಂಛನದಲ್ಲಿ ಸ್ಥಾನವನ್ನು ಹೇಗೆ ಪಡೆಯಿತು ಎಂಬ ಪ್ರಶ್ನೆಗಳು ಸೇರಿದಂತೆ ಇನ್ನು ಹತ್ತು ಹಲವಾರು ಪ್ರಶ್ನೆಗಳು ಬಹುತೇಕರ ತಲೆಯಲ್ಲಿ ಮೂಡಿರುತ್ತವೆ. ಇಂದು ನಾವು ಎರಡು ತಲೆಯ ಗಂಡಭೇರುಂಡ ಪಕ್ಷಿಯ ರಹಸ್ಯ, ಪೌರಾಣಿಕ ಕಥೆಗಳ ಬಗ್ಗೆ ಹಾಗೂ ಹೇಗೆ ಈ ಪಕ್ಷಿ ನಮ್ಮ ರಾಜ್ಯದ ಲಾಂಛನದಲ್ಲಿ ಸ್ಥಾನ ಪಡೆಯಿತು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

ಮೊದಲನೇದಾಗಿ ಎರಡು ತಲೆಗಳು ಪಕ್ಷಿ ಎಂದ ತಕ್ಷಣ ನಮಗೆ ಮಾರ್ಕಂಡಯ್ಯ ಪುರಾಣದಲ್ಲಿ ಕೇಳಿ ಬರುವ ಹಾಗೆ ಹಿರಣ್ಯ ಕಶ್ಯಪನನ್ನು ವಿಷ್ಣು ನರಸಿಂಹನ ಅವತಾರ ತಾಳಿ ಸಂಹಾರ ಮಾಡಿದ ಬಳಿಕ ನರಸಿಂಹನ ಕೋಪ ಕಡಿಮೆಯಾಗಲಿಲ್ಲ ಹಾಗೂ ಇದು ಭೂಲೋಕದಲ್ಲಿ ಹಲವಾರು ಸಮಸ್ಯೆಗಳಿಗೆ ಕಾರಣವಾಯಿತು. ವಿಷ್ಣುವಿನ ಅವತಾರವಾದ ನರಸಿಂಹನನ್ನು ತಡೆಯಬೇಕು ಎಂಬ ಉದ್ದೇಶದಿಂದ ದೇವತೆಗಳ ಮನವಿಯ ಮೇರೆಗೆ ಮಹಾ ಶಿವನು ಶರಬೇಶ್ವರನ ರೂಪ ತಾಳಿ ನರಸಿಂಹನನ್ನು ಯುದ್ಧಕ್ಕೆ ಆಹ್ವಾನಿಸಿದಾಗ ಭಾರಿ ಬಲಿಷ್ಠ ರೂಪದಲ್ಲಿ ಕಂಡು ಬಂದ ಶರಬಿ ರೂಪ ಶಿವನ ವಿರುದ್ದ ಯುದ್ಧ ಭೂಮಿಯಲ್ಲಿ ಹೋ’ರಾಟ ಮಾಡಲು ವಿಷ್ಣುವಿನ ಅವತಾರ ನರಸಿಂಹನು ಎರಡು ತಲೆಯ ಪಕ್ಷಿ ಅಂದರೇ ಗಂಡಭೇರುಂಡ ಪಕ್ಷಿಯ ರೂಪ ತಾಳಿದನು ಎಂಬ ಕಥೆ ಇದೆ.

ಇನ್ನು ಎರಡನೆಯದಾಗಿ ನಾವು ಈ ಗಂಡಭೇರುಂಡ ಪಕ್ಷಿಯ ಹಲವಾರು ಪ್ರಾಚೀನ ದೇವಾಲಯಗಳಲ್ಲಿ ಕಾಣಬಹುದಾಗಿದೆ. ಪ್ರಾಚೀನ ದೇವಾಲಯವಾದ ರಾಮೇಶ್ವರಂ ದೇವಾಲಯದ ಚಾವಣಿಯಲ್ಲಿ ಗಂಡಭೇರುಂಡ ಪಕ್ಷಿ ಯನ್ನು ನಾವು ಕಾಣಬಹುದಾಗಿದೆ. ಕೇವಲ ರಾಮೇಶ್ವರಂ ದೇವಾಲಯದಲ್ಲಿ ಮಾತ್ರವಲ್ಲದೇ ಬೇಲೂರಿನ ಚೆನ್ನಕೇಶವ ದೇಗುಲ ದಿಂದ ಹಿಡಿದು ದೇಶದ ಇನ್ನಿತರ ಹಲವಾರು ಪ್ರಾಚೀನ ದೇವಾಲಯಗಳಲ್ಲಿ ಗಂಡಭೇರುಂಡ ಪಕ್ಷಿಯ ಶಿಲ್ಪ ಕೃತಿಗಳನ್ನು ನಾವು ನೋಡಬಹುದಾಗಿದೆ. ಇನ್ನು ಈ ಪಕ್ಷಿಯ ಇತಿಹಾಸವನ್ನು ನಾವು ಗಮನಿಸುವುದಾದರೆ ಗಂಡಭೇರುಂಡ ಪಕ್ಷಿಗೆ ಮೊದಲ ಬಾರಿಗೆ ಮನುಷ್ಯ ರೂಪವನ್ನು ನೀಡಿದ್ದು ಚಾಲುಕ್ಯರು, ಚಾಲುಕ್ಯರ ಅಧಿಕಾರದ ಅವಧಿಯಲ್ಲಿ ಬಳ್ಳಿಗಾವಿಯ ಕೇದಾರೇಶ್ವರ ದೇಗುಲದಲ್ಲಿ ಬೃಹತ್ ಮಾನವಾಕೃತಿಯ ಗಂಡಭೇರುಂಡ ಪಕ್ಷಿಯ ವಿಗ್ರಹವನ್ನು ಕೆತ್ತಲಾಗಿದೆ. ಇಂದಿಗೂ ಕೂಡ ನೀವು ಈ ದೇವಾಲಯದಲ್ಲಿ ನೋಡಬಹುದಾಗಿದೆ.

ಸುತ್ತಮುತ್ತಲಿನ ಜನರು ಈ ವಿಗ್ರಹವನ್ನು ಗಂಡಭೇರುಂಡೇಶ್ವರ ಎಂದು ಕರೆಯುತ್ತಾರೆ. ಇನ್ನು ಕೇವಲ ಚಾಲುಕ್ಯರು ಅಷ್ಟೇ ಅಲ್ಲದೇ ಹೊಯ್ಸಳರು ಕೂಡ ಗಂಡಭೇರುಂಡ ಪಕ್ಷಿಯನ್ನು ತಮ್ಮ ಶಿಲ್ಪಕಲೆಯಲ್ಲಿ ಬಳಸಿಕೊಂಡಿದ್ದಾರೆ. ಬೇಲೂರಿನ ಚೆನ್ನಕೇಶ್ವರ ದೇವಾಲಯದಲ್ಲಿ ಚಿತ್ರಿಸಲಾಗಿರುವ ಪ್ರಾಣಿಗಳ ಆಹಾರ ಸರಪಳಿ ಕಲಾಕೃತಿಗಳಲ್ಲಿ ಗಂಡಭೇರುಂಡ ಪಕ್ಷಿಯನ್ನು ನೀವು ಕಾಣಬಹುದಾಗಿದೆ. ಇನ್ನು ಇಷ್ಟೇ ಅಲ್ಲದೇ ಕಲಾಕೃತಿಗಳಲ್ಲಿ ಬಳಕೆಯಾದ ಬಳಿಕ ವಿಜಯನಗರ ಸಾಮ್ರಾಜ್ಯ ಹಾಗೂ ಮೈಸೂರಿನ ರಾಜಮನೆತನದ ಆಡಳಿತ ನಡೆಯುತ್ತಿರುವ ಸಂದರ್ಭದಲ್ಲಿ ಗಂಡಭೇರುಂಡ ಪಕ್ಷಿ ಯನ್ನು ನಾಣ್ಯಗಳಲ್ಲಿ ನಾವು ಕಾಣಬಹುದಾಗಿದೆ.

ವಿಜಯನಗರ ಸಾಮ್ರಾಜ್ಯದ ರಾಜ ಅಚ್ಚುತರಾಯ 1529 ರಿಂದ 1542 ರ ವರೆಗೆ ರಾಜ್ಯ ಆಳುತ್ತಿರುವ ಸಂದರ್ಭದಲ್ಲಿ ನಾಲ್ಕು ದಿಕ್ಕಿಗೆ ಇದ್ದ ಇತರ ರಾಜ್ಯಗಳ ರಾಜರು ವಿಜಯನಗರ ಸಾಮ್ರಾಜ್ಯದ ಮೇಲೆ ಹದ್ದಿನ ಕಣ್ಣು ಇಟ್ಟಿದ್ದರು. ಆದರೆ ಯಾವುದೇ ರಾಜರು ವಿಜಯನಗರ ಸಾಮ್ರಾಜ್ಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ವಿಫಲರಾದರು. ಎಲ್ಲರ ಸವಾಲುಗಳ ನಡುವೆಯೂ ವಿಜಯನಗರ ಸದೃಢವಾಗಿ ಬೆಳೆದಿದ್ದ ಸಾಮ್ರಾಜ್ಯದ ಅಭಿವೃದ್ಧಿ, ರಾಜ್ಯದ ಶಕ್ತಿ ಸಾಮರ್ಥ್ಯದ ಸಂಕೇತವಾಗಿ ಗಂಡಭೇರುಂಡ ಪಕ್ಷಿಯನ್ನು ಚಿನ್ನದ ನಾಣ್ಯಗಳನ್ನು ಮುದ್ರಿಸಿ‌ ತನ್ನ ರಾಜ್ಯದ ಶಕ್ತಿಯನ್ನು ಗಂಡಭೇರುಂಡ ಪಕ್ಷಿಗೆ ಹೋಲಿಸಿದ್ದನ್ನು ವಿಜಯನಗರದ ರಾಜ.

ವಿಜಯನಗರದ ಸಾಮ್ರಾಜ್ಯದ ನಂತರ ಮೈಸೂರಿನ ರಾಜಮನೆತನ ಆಡಳಿತದ ಸಂದರ್ಭದಲ್ಲಿ ಗಂಡಭೇರುಂಡ ಪಕ್ಷಿಯನ್ನು ಮೊಟ್ಟ ಮೊದಲ ಬಾರಿಗೆ ತಮ್ಮ ಲಾಂಛನದಲ್ಲಿ ಬಳಸರು ಆರಂಭಿಸಿದರು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ. ಸರಿ ಸುಮಾರು 16ನೇ ಶತಮಾನದ ಮಧ್ಯ ಭಾಗದಲ್ಲಿ ಮೈಸೂರು ಸಂಸ್ಥಾನದಲ್ಲಿ ಗಂಡಭೇರುಂಡ ಪಕ್ಷಿಯ ಚಿನ್ಹೆಯ ಲಾಂಛನವನ್ನು ಬಳಸಲಾರಂಭಿಸಲಾಯಿತು, ಅಂದು ಮೈಸೂರಿನಲ್ಲಿ ಯದುರಾಯರು ಆಡಳಿತ ನಡೆಸುತ್ತಿದ್ದರು, ಇವರು ಮೊಟ್ಟ ಮೊದಲ ಬಾರಿಗೆ ಗಂಡಭೇರುಂಡ ಲಾಂಛನವನ್ನು ಹೊಂದಿರುವ ಧ್ವಜವನ್ನು ತಮ್ಮ ವಿಜಯ ಯಾತ್ರೆಗೆ ಬಳಸಿದರು ಎನ್ನಲಾಗುತ್ತದೆ. ಇದಾದ ಬಳಿಕ ಗಂಡಭೇರುಂಡ ಪಕ್ಷಿ ಯನ್ನು ಹೊಂದಿದ್ದ ಕೆಂಪು ಬಾವುಟ ಮೈಸೂರು ರಾಜ್ಯದ ಬಾವುಟ ವಾಗಿ ಬದಲಾಗಿತ್ತು. ಸತ್ಯ ಹಾಗೂ ಧರ್ಮದ ಸಂಕೇತವಾಗಿ ರಾರಾಜಿಸಲು ಆರಂಭಿಸಿತು. 1947 ರಲ್ಲಿ ಸ್ವಾತಂತ್ರ ಬಂದರೂ ಕೂಡ 1956 ರವರೆಗೂ ಗಂಡಭೇರುಂಡ ಪಕ್ಷಿಯನ್ನು ಬಾವುಟದಲ್ಲಿ ಬಳಸಲಾಗುತಿತ್ತು. 1973 ರಲ್ಲಿ ನಮ್ಮ ರಾಜ್ಯ ಕರ್ನಾಟಕ ಎಂದು ಹೆಸರು ಪಡೆದ ನಂತರವೂ ಕೂಡ ಗಂಡಭೇರುಂಡ ಪಕ್ಷಿಯನ್ನು ಲಾಂಛನದಲ್ಲೇ ಉಳಿಸಲು ನಿರ್ಧಾರ ಮಾಡಲಾಗಿದೆ, ಇಂದಿಗೂ ಕೂಡ ಇದು ನಮ್ಮ ಕರ್ನಾಟಕದ ಹೆಮ್ಮೆಯ ಹಾಗೂ ಘನತೆಯ ಸಂಕೇತ ಎನಿಸಿಕೊಂಡಿದೆ.