ವಿರಾಟ್, ಡಿವಿಲಿಯರ್ಸ್ ಅಲ್ಲಾ ಸಾರ್ವಕಾಲಿಕ ಶ್ರೇಷ್ಠ ಟಿ-20 ಆಟಗಾರನನ್ನು ಆಯ್ಕೆ ಮಾಡಿದ ರಾಹುಲ್ ! ಯಾರು ಗೊತ್ತಾ?

ವಿರಾಟ್, ಡಿವಿಲಿಯರ್ಸ್ ಅಲ್ಲಾ ಸಾರ್ವಕಾಲಿಕ ಶ್ರೇಷ್ಠ ಟಿ-20 ಆಟಗಾರನನ್ನು ಆಯ್ಕೆ ಮಾಡಿದ ರಾಹುಲ್ ! ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಟಿ-ಟ್ವೆಂಟಿ ಸೇರಿದಂತೆ ಇನ್ನಿತರ ಎಲ್ಲಾ ಮಾದರಿಗಳಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರು ಎಂಬ ಪ್ರಶ್ನೆಗೆ ಉತ್ತರ ಮುಗಿಯದ ಚರ್ಚೆಯಾಗಿ ಸದಾ ಉಳಿದು ಕೊಂಡಿದೆ ಹಾಗೂ ಇನ್ನು ಮುಂದೆಯೂ ಕೂಡ ಉಳಿದು ಕೊಳ್ಳಲಿದೆ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಪ್ರತಿಯೊಬ್ಬ ದಿಗ್ಗಜ ಆಟಗಾರರು, ಕ್ರಿಕೆಟ್ ವಿಶ್ಲೇಷಕರು ಹಾಗೂ ಇನ್ಯಾವುದೇ ಇತರ ಕ್ರಿಕೆಟಿಗರು ತಮ್ಮದೇ ಆದ ವೈಯಕ್ತಿಕ ಅಭಿಪ್ರಾಯಗಳನ್ನು ಮಂಡಿಸಿ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಯಾರು ಎಂಬುದನ್ನು ಆಗಾಗ ಬಹಿರಂಗಪಡಿಸಿ ಉತ್ತರ ನೀಡುತ್ತಲೇ ಇರುತ್ತಾರೆ, ಅದೇ ಕಾರಣಕ್ಕೆ ಇದು ಮುಗಿಯದ ಚರ್ಚೆ ಎಂದು ಹೇಳಲಾಗುತ್ತದೆ. ಇದೀಗ ಕನ್ನಡಿಗ ಹಾಗೂ ಕಿಂಗ್ಸ್ ಇಲೆವೆನ್ ತಂಡದ ನಾಯಕ ಕೆಎಲ್ ರಾಹುಲ್ ರವರು ಸಾರ್ವಕಾಲಿಕ ಶ್ರೇಷ್ಠ ಟಿ ಟ್ವೆಂಟಿ ಆಟಗಾರನನ್ನು ಮಾಡಿದ್ದು ಬಾರಿ ಚರ್ಚೆಗೆ ಗ್ರಾಸವಾಗಿದೆ.

ಹೌದು ಸ್ನೇಹಿತರೇ, ಇದೀಗ ಕೆಎಲ್ ರಾಹುಲ್ ರವರು ಸಾರ್ವಕಾಲಿಕ ಶ್ರೇಷ್ಠ ಟಿ-ಟ್ವೆಂಟಿ ಆಟಗಾರರನ್ನು ಆಯ್ಕೆ ಮಾಡಿದ್ದು, ಇವರನ್ನು ಈ ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಸಾಮಾನ್ಯವಾಗಿ ವಿರಾಟ್ ಕೊಹ್ಲಿ ಅಥವಾ ಇನ್ಯಾವುದೇ ಭಾರತೀಯ ಕ್ರಿಕೆಟ್ ಆಟಗಾರನ ಹೆಸರು ಕೇಳಿ ಬರುತ್ತದೆ ಎಂದು ಎಲ್ಲರೂ ಊಹೆ ಮಾಡಿದ್ದರು. ಆದರೆ ಕಾರಣಗಳ ಸಮೇತ ವಿವರಣೆ ನೀಡಿರುವ ಕೆ ಎಲ್ ರಾಹುಲ್ ರವರು ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಹಾಗೂ ಕಿಂಗ್ಸ್ ಇಲೆವೆನ್ ತಂಡದ ಆರಂಭಿಕ ಆಟಗಾರ ಕ್ರಿಸ್ ಗೇಲ್ ರವರನ್ನು ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಟಿ-ಟ್ವೆಂಟಿ ಆಟಗಾರನಾಗಿ ಆಯ್ಕೆ ಮಾಡಿದ್ದಾರೆ ಹಾಗೂ ಈ ಕೆಳಗಿನ ಕಾರಣಗಳನ್ನು ನೀಡಿದ್ದಾರೆ.

ಕ್ರಿಸ್ ಗೇಲ್ ರವರಂತಹ ದಿಗ್ಗಜ ಆಟಗಾರರನ್ನು ನಮ್ಮ ತಂಡದಲ್ಲಿ ಹೊಂದಿರುವುದು ಅಪಾರವಾದ ಅನುಭವ ನೀಡುತ್ತದೆ, ಅವರು ಕಿಂಗ್ಸ್ ಇಲೆವೆನ್ ತಂಡದಲ್ಲಿ ಅಷ್ಟೇ ಅಲ್ಲದೆ ಇತರ ಟಿ-ಟ್ವೆಂಟಿ ಲೀಗ್ ಗಳಲ್ಲಿ ನೀಡಿರುವ ಪ್ರದರ್ಶನ ನಂಬಲು ಅಸಾಧ್ಯವಾಗಿದೆ, ಅಷ್ಟೇ ಅಲ್ಲದೆ ಅವರು ಡ್ರೆಸ್ಸಿಂಗ್ ರೂಮ್ ನಲ್ಲಿ ಇದ್ದರೇ ಆ ಪ್ರಭಾವ ಹೇಳಲು ಸಾಧ್ಯವಾಗುವುದಿಲ್ಲ ಕೇವಲ ಅರಿಯಲು ಮಾತ್ರ ಸಾಧ್ಯವಾಗುತ್ತದೆ, ಇನ್ನೂ ಯುವ ಆಟಗಾರರ ಜೊತೆಗೆ ಚರ್ಚಿಸಲು ಹಾಗೂ ಇನ್ನಿತರರಿಗೆ ಸಹಾಯ ಮಾಡಲು ಕ್ರಿಸ್ ಗೇಲ್ ರವರು ಸದಾ ಸಿದ್ಧರಿರುತ್ತಾರೆ. ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ಸಾಕಷ್ಟು ಅನುಭವವನ್ನು ಹೊಂದಿರುವ ಕ್ರಿಸ್ ಗೇಲ್ ರವರು ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ಶ್ರೇಷ್ಠ ಟ್ವೆಂಟಿ ಆಟಗಾರ, ಅವರು ಬ್ಯಾಟಿಂಗ್ ಇಳಿದಾಗ ಲಯ ಕಂಡುಕೊಂಡರೆ ಎಂತಹ ಬಲಿಷ್ಠ ಬೌಲರ್ಗಳಿಗೆ ಇದ್ದರೂ ಧೂಳಿಪಟ ಖಚಿತ,‌ ಏಕಾಂಗಿಯಾಗಿ ಪಂದ್ಯಗಳನ್ನು ಗೆಲ್ಲಿಸಿ ಕೊಡುವ ಸಾಮರ್ಥ್ಯ ವನ್ನು ಕ್ರಿಸ್ ಗೇಲ್ ಅವರು ಹೊಂದಿದ್ದಾರೆ. ಇವರಂತಹ ಆಟಗಾರರು ಕಿಂಗ್ಸ್ ಇಲೆವನ್ ತಂಡದಲ್ಲಿ ಇರುವುದು ನಮ್ಮ ಪಾಲಿಗೆ ನಿಜವಾದ ವರದಾನವಾಗಿದೆ ಎಂದು ಕಾರಣ ಸಮೇತ ವಿವರಣೆ ನೀಡಿದ್ದಾರೆ.

ಇನ್ನು ಮಾತುಗಳನ್ನು ಮುಂದುವರಿಸುತ್ತಾ ಕೆಎಲ್ ರಾಹುಲ್ ರವರು ನನ್ನ ಹಾಗೂ ಕ್ರಿಸ್ ಗೇಲ್ ಅವರ ನಡುವಿನ ಜೊತೆಗಾರಿಕೆ ಹಾಗೂ ನಮ್ಮಿಬ್ಬರ ಹೊಂದಾಣಿಕೆ ಬಹಳ ಅದ್ಭುತವಾಗಿದೆ. ಕೇವಲ ಮೈದಾನದಲ್ಲಿ ಅಷ್ಟೇ ಅಲ್ಲದೆ ಮೈದಾನದಿಂದ ಹೊರಗಡೆಯೂ ಕೂಡ ನಮ್ಮಿಬ್ಬರ ಸ್ನೇಹ ಬಹಳ ಉತ್ತಮವಾಗಿದೆ. ಸದಾ ನನಗೆ ಮಾರ್ಗದರ್ಶನ ನೀಡುವ ವ್ಯಕ್ತಿಯಾಗಿ ಕ್ರಿಸ್ ಗೇಲ್ ರವರು ಗುರುತಿಸಿಕೊಂಡಿದ್ದಾರೆ. ಕ್ರಿಸ್ ಗೇಲ್ ರವರು ಸದಾ ಕ್ರಿಕೆಟ್ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ. ಅವರ ಬಳಿ ನಾನು ಸಾಕಷ್ಟು ವಿಚಾರಗಳ ಕುರಿತು ಚರ್ಚೆ ಮಾಡಿದ್ದೇನೆ, ಟಿ ಟ್ವೆಂಟಿ ಪಂದ್ಯಗಳು ಹಾಗೂ ಆರಂಭಿಕ ಬ್ಯಾಟಿಂಗ್ ಬಗ್ಗೆಯೂ ಕೂಡ ಚರ್ಚೆ ಮಾಡಿದ್ದೇನೆ. ಈ ರೀತಿಯ ಸ್ವಭಾವವನ್ನು ಹೊಂದಿರುವ ಆಟಗಾರರು ನನಗೆ ಹೆಚ್ಚು ಜನರು ತಿಳಿದಿಲ್ಲ, ಕ್ರಿಸ್ ಗೇಲ್ ಅವರು ಬ್ಯಾಟಿಂಗ್ ಮಾಡುವಾಗ ಬಹಳ ಯೋಚನೆ ಮಾಡಿಕೊಂಡು ಬ್ಯಾಟಿಂಗ್ ನಡೆಸುತ್ತಾರೆ ಇದು ಯಾರಿಗೂ ತಿಳಿದೇ ಇರುವುದಿಲ್ಲ ಎಂದು ವಿವರಣೆ ನೀಡಿದ್ದಾರೆ.