ಭಾರತಕ್ಕೆ ಭರ್ಜರಿ ಗುಡ್ ನ್ಯೂಸ್ ! ಕೊನೆಗೂ ಆಕ್ಸ್ಫರ್ಡ್ ಲಸಿಕೆಗೆ ಮುಹೂರ್ತ ಫಿಕ್ಸ್ ! ಯಾವಾಗ ಗೊತ್ತಾ?

ಭಾರತಕ್ಕೆ ಭರ್ಜರಿ ಗುಡ್ ನ್ಯೂಸ್ ! ಕೊನೆಗೂ ಆಕ್ಸ್ಫರ್ಡ್ ಲಸಿಕೆಗೆ ಮುಹೂರ್ತ ಫಿಕ್ಸ್ ! ಯಾವಾಗ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ವಿಶ್ವದ ಪ್ರತಿಯೊಂದು ದೇಶಗಳು ತಮ್ಮ ಪ್ರಯತ್ನಗಳು ಹಾಗೂ ವಿಶ್ವದ ಇನ್ಯಾವುದೇ ದೇಶದ ಪ್ರಯತ್ನಗಳಾದರೂ ಪರವಾಗಿಲ್ಲ ಕೊರೋನಾ ಲಸಿಕೆ ಯಶಸ್ವಿಯಾದರೆ ಸಾಕು ಎಂದು ಕಾದು ಕುಳಿತಿವೆ. ಕೆಲವು ರಾಷ್ಟ್ರಗಳು ಕೊರೋನಾ ಲಸಿಕೆಯನ್ನು ವ್ಯವಹಾರ ಎಂಬ ಆಧಾರದ ಮೇಲೆ ನೋಡುತ್ತಿದ್ದರೆ ಇನ್ನು ಕೆಲವರು ಹಣದ ಬಗ್ಗೆ ಆಲೋಚನೆ ಮಾಡದೇ ವಿಶ್ವದ ಇಡೀ ಜನ ಸಮೂಹವನ್ನು ಸಾಮಾನ್ಯ ಸ್ಥಿತಿಗೆ ಮರಳುವಂತೆ ಮಾಡಲು ಸಾಧ್ಯವಾದಷ್ಟು ವೇಗವಾಗಿ ಹಾಗೂ ಕಡಿಮೆ ದರದಲ್ಲಿ ಲಸಿಕೆಗಳನ್ನು ಉತ್ಪಾದಿಸಿ ಬಡ ದೇಶಗಳಿಗೆ ಉಚಿತವಾಗಿ ನೀಡಿ, ಮನುಜ ಕುಲವನ್ನು ಕಾಪಾಡುವ ಆಲೋಚನೆಯಲ್ಲಿ ತೊಡಗಿಕೊಂಡಿವೆ. ಒಟ್ಟಿನಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳು ಕೊರೋನಾ ಲಸಿಕೆ ಸಿಕ್ಕರೆ ಸಾಕು ಎಂದು ತುದಿಗಾಲಲ್ಲಿ ಕಾದು ಕುಳಿತಿದೆ. ಹೀಗಿರುವಾಗ ರಷ್ಯಾ ದೇಶ ತಾನು ಲಸಿಕೆ ಸಿದ್ಧಪಡಿಸಿದ್ದೇನೆ ಎಂದು ಹೇಳಿ ತನ್ನ ದೇಶದಲ್ಲಿ ನಾಗರಿಕರಿಗೆ ನೀಡಲು ಆರಂಭ ನೀಡಿದರೂ ಕೂಡ ವಿಶ್ವದ ಇನ್ಯಾವುದೇ ದೇಶಗಳು ರಷ್ಯಾ ದೇಶವನ್ನು ನಂಬಲು ತಯಾರಿಲ್ಲ. ಪ್ರಮುಖವಾಗಿ ದೀರ್ಘಾವಧಿ ಕಾಲದ ಪ್ರಯೋಗ ನಡೆಸುವ ಮೂರನೇ ಹಂತವನ್ನು ರಷ್ಯಾ ದೇಶದ ಲಸಿಕೆಗಳು ಪೂರ್ಣಗೊಳಿಸಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ರಷ್ಯಾ ದೇಶದ ಲಸಿಕೆ ಭಾರೀ ಚರ್ಚೆಗೆ ಗ್ರಾಸವಾಗಿದ್ದರೂ ಕೂಡ ಮೂರನೇ ಹಂತದ ಪ್ರಯೋಗ ಸಂಪೂರ್ಣವಾಗಿ ನಡೆದಿಲ್ಲ ಎಂಬ ಮಾತು ಕೇಳಿ ಬಂದಿರುವ ಕಾರಣ ಯಾವುದೇ ದೇಶಗಳು ರಷ್ಯಾ ದೇಶದಿಂದ ಲಸಿಕೆ ಆಮದು ಮಾಡಿಕೊಳ್ಳಲು ತಯಾರಿಲ್ಲ.

ಕೇವಲ ರಷ್ಯಾ ದೇಶ ಅಷ್ಟೇ ಅಲ್ಲದೆ ಇನ್ನಿತರ ವಿಶ್ವದ ರಾಷ್ಟ್ರಗಳು ಕೂಡ ಲಸಿಕೆ ತಯಾರಿಕೆಯಲ್ಲಿ ನಿರತವಾಗಿರುವ ಕಾರಣ ಲಸಿಕೆಗಳು ವಿವಿಧ ಹಂತಗಳಲ್ಲಿ ಪ್ರಯೋಗ ನಡೆಯುತ್ತಿವೆ. ಆದರೆ ಇಡೀ ವಿಶ್ವದ ಬಹುತೇಕ ದೇಶಗಳು ಭಾರತದತ್ತ ಮುಖ ಮಾಡಿ ಕೊರೊನ ಲಸಿಕೆ ಕಂಡು ಹಿಡಿಯಲು ಭಾರತಕ್ಕೆ ಮಾತ್ರ ಸಾಧ್ಯ ಎಂದು ಕಾಯುತ್ತಿವೆ. ಅಷ್ಟೇ ಅಲ್ಲದೆ ಭಾರತದ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಜೊತೆ ಪಾಲುದಾರತ್ವವನ್ನು ಪಡೆದುಕೊಂಡು ಆಕ್ಸ್ಫರ್ಡ್ ನಲ್ಲಿ ತಯಾರಾಗುತ್ತಿರುವ ಲಸಿಕೆಯ ಮೇಲೂ ಕೂಡ ಹಲವಾರು ದೇಶಗಳ ಭರವಸೆ ಇದೆ. ಎರಡನೇ ಹಂತದ ವರೆಗೂ ಆಕ್ಸ್ಫರ್ಡ್ ಲಸಿಕೆ ಶೇಕಡ ನೂರರಷ್ಟು ಯಶಸ್ವಿಯಾಗಿದೆ ಎಂಬ ಸುದ್ದಿ ನಮಗೆಲ್ಲರಿಗೂ ಕೆಲವು ದಿನಗಳ ಹಿಂದೆಯೇ ತಿಳಿದು ಬಂದಿತ್ತು. ಇನ್ನು ಈ ಆಕ್ಸ್ಫರ್ಡ್ ಲಸಿಕೆ ಯಶಸ್ವಿಯಾದರೆ ಭಾರತಕ್ಕೆ ಕೂಡ ಬಹುದೊಡ್ಡ ಲಾಭವಿದೆ ಎಂಬುದು ಬಹುಶಹ ನಿಮ್ಮೆಲ್ಲರಿಗೂ ತಿಳಿದಿರಬಹುದು. ಇದೀಗ ಈ ಲಸಿಕೆಯ ಮೂರನೇ ಹಂತದ ಕುರಿತು ಬ್ರಿಟನ್ ದೇಶ ತನ್ನ ಅಧಿಕೃತ ಆದೇಶ ಹೊರಡಿಸಿದ್ದು, ಇಡೀ ವಿಶ್ವ ನಿಟ್ಟುಸಿರು ಬಿಡುವ ದಿನಗಳು ಹೆಚ್ಚು ದೂರವಿಲ್ಲ ಎಂಬುದು ಸ್ಪಷ್ಟವಾಗಿದೆ. ಹೌದು ಸ್ನೇಹಿತರೇ ಈಗಾಗಲೇ ಮೂರನೇ ಹಂತದ ಪ್ರಯೋಗದಲ್ಲಿರುವ ಆಕ್ಸ್ಫರ್ಡ್ ಲಸಿಕೆಯು ಇದೀಗ ಮೂರನೇ ಹಂತದಲ್ಲಿಯೂ ಕೂಡ ಬಹಳ ಯಶಸ್ಸು ಪಡೆದುಕೊಳ್ಳುತ್ತಿದ್ದು, ಇನ್ನು ಕೇವಲ 42 ದಿನಗಳಲ್ಲಿ ಅಂದರೆ 6 ವಾರಗಳಲ್ಲಿ ಮೂರನೇ ಹಂತದ ಪ್ರಯೋಗಗಳು ಮುಗಿಯಲಿದ್ದು, ಇಲ್ಲಿಯವರೆಗೂ ಶೇಕಡ ನೂರರಷ್ಟು ಫಲಿತಾಂಶ ನೀಡುತ್ತಿರುವ ಕಾರಣ ಲಸಿಕೆ ಸಿದ್ದವಾಗಲಿದೆ ಎಂಬ ಭರವಸೆಯನ್ನು ಬ್ರಿಟನ್ ದೇಶ ಜಗತ್ತಿಗೆ ತನ್ನ ಆದೇಶದ ಮೂಲಕ ತಿಳಿಸಿದೆ.

ಈ ಲಸಿಕೆ ಇನ್ನು ಕೇವಲ ಆರು ವಾರಗಳಲ್ಲಿ ಪೂರ್ಣಗೊಳ್ಳಲಿದ್ದು, ಒಂದು ವೇಳೆ ಇತರ ಹಂತ ಗಳಂತೆ ಮೂರನೇ ಹಂತದಲ್ಲಿಯೂ ಕೂಡ ಶೇಕಡ 100 ರಷ್ಟು ಫಲಿತಾಂಶ ನೀಡಿದ್ದಲ್ಲಿ ಕ್ಷಣಕ್ಷಣಕ್ಕೂ ಸಾವಿರಾರು ಲಸಿಕೆಗಳನ್ನು ತಯಾರಿ ಮಾಡುವ ಕೆಲಸಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬುದು ತಿಳಿದು ಬಂದಿದೆ. ಇನ್ನು ಭಾರತದಲ್ಲಿಯೂ ಕೂಡ ಈ ಲಸಿಕೆ ತಯಾರಾಗಲಿದ್ದು ಮೊದಲನೇ ಹಂತವಾಗಿ ಒಮ್ಮೆಲೆ 10 ಕೋಟಿ ಲಸಿಕೆಗಳನ್ನು ಭಾರತದಲ್ಲಿ ತಯಾರು ಮಾಡಿ 5 ಕೋಟಿ ಲಸಿಕೆಗಳನ್ನು ಭಾರತೀಯರಿಗೆ ಮೀಸಲು ಮಾಡಿಕೊಂಡು ಉಳಿದ ಐದು ಕೋಟಿ ಲಸಿಕೆಗಳನ್ನು ವಿಶ್ವದ ಇತರ ಬಡ ಹಾಗೂ ಮಧ್ಯಮ ಆದಾಯದ ದೇಶಗಳಿಗೆ ನೀಡಲಾಗುತ್ತದೆ. ಇನ್ನು ಲಸಿಕೆಯ ವೆಚ್ಚದ ಕುರಿತು ಮಾತನಾಡುವುದಾದರೆ ಬಡ ರಾಷ್ಟ್ರಗಳಿಗೆ ಈ ಲಸಿಕೆ ಉಚಿತವಾಗಿ ದೊರೆಯಲಿದ್ದು ಮಧ್ಯಮ ಆದಾಯದ ದೇಶಗಳಿಗೆ ಕೇವಲ ಲಸಿಕೆ ತಯಾರು ಮಾಡುವ ವೆಚ್ಚವನ್ನು ಮಾತ್ರ ತೆಗೆದುಕೊಂಡು ಪ್ರತಿಯೊಬ್ಬರಿಗೂ ಕೈಗೆಟುಕುವ ಬೆಲೆಯಲ್ಲಿ ನೀಡಲಾಗುತ್ತದೆ ಎಂಬುದನ್ನು ಈಗಾಗಲೇ ಸೀರಂ ಸಂಸ್ಥೆಯ ಸಿಇಒ ಖಚಿತ ಪಡಿಸಿದ್ದಾರೆ. ಒಟ್ಟಿನಲ್ಲಿ ಈ ಆದೇಶದ ಮೂಲಕ ಇನ್ನು 42 ದಿನಗಳಲ್ಲಿ ಕೊರೊನ ಲಸಿಕೆ ಲಭ್ಯವಾಗುವುದು ಬಹುತೇಕ ಖಚಿತವಾಗಿದೆ.