ಕನ್ನಡದ ಹುಡುಗನಿಗೆ ಭರ್ಜರಿ ಸಿಹಿಸುದ್ದಿ ! ಆರ್ಸಿಬಿಗಾಗಿ ತನ್ನ ನಿರ್ಧಾರ ಬದಲಿಸಿದ ಎಬಿಡಿ ! ಏನು ಗೊತ್ತಾ??

ಕನ್ನಡದ ಹುಡುಗನಿಗೆ ಭರ್ಜರಿ ಸಿಹಿಸುದ್ದಿ ! ಆರ್ಸಿಬಿಗಾಗಿ ತನ್ನ ನಿರ್ಧಾರ ಬದಲಿಸಿದ ಎಬಿಡಿ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಸಿಬಿ ತಂಡವು ಇದೀಗ ಮುಂಬರುವ ಐಪಿಎಲ್ ಟೂರ್ನಿಗಾಗಿ ಭರ್ಜರಿ ಸಿದ್ಧತೆ ನಡೆಸಿದೆ. ಯುಎಇ ದೇಶದಲ್ಲಿ ಕ್ರಿಕೆಟ್ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ, ಇನ್ನು ತಂಡದ ಕುರಿತು ಹಲವಾರು ಮಾತುಗಳು ಕೇಳಿಬಂದಿದ್ದು ವಿರಾಟ್ ಕೊಹ್ಲಿ ರವರ ನಾಯಕತ್ವದಲ್ಲಿ ಯಾವ್ಯಾವ ಆಟಗಾರರು ಆಟವಾಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುತ್ತಾರೆ ಎಂಬ ಲೆಕ್ಕಾಚಾರಗಳು ಈಗಾಗಲೇ ಆರಂಭವಾಗಿ ಬಿಟ್ಟಿವೆ. ಕ್ರಿಕೆಟ್ ಪಂಡಿತರು ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಯಾವ್ಯಾವ ವಿದೇಶಿ ಆಟಗಾರರನ್ನು ಆಯ್ಕೆ ಮಾಡಿದರೇ ಆರ್ಸಿಬಿ ತಂಡ ಬಲಿಷ್ಠವಾಗಲಿದೆ ಹಾಗೂ ಯಾವ್ಯಾವ ಸ್ಥಳೀಯ ಪ್ರತಿಭೆಗಳಿಗೆ ಸ್ಥಾನ ನೀಡಿದರೇ ತಂಡ ಗೆಲ್ಲಬಹುದು ಎಂಬ ಲೆಕ್ಕಾಚಾರಗಳ ಮೂಲಕ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಆರ್ಸಿಬಿ ತಂಡದ ಕುರಿತು ಹೊಸದೊಂದು ಮಾಹಿತಿ ಹೊರಬಿದ್ದಿದ್ದು, ಆರ್ಸಿಬಿ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಅಷ್ಟೇ ಅಲ್ಲದೆ ಕನ್ನಡದ ಕುವರ ದೇವದತ್ ಪಡಿಕಲ್ ರವರಿಗೂ ಕೂಡ ಸಿಹಿ ಸುದ್ದಿ ಕೇಳಿ ಬಂದಿದೆ. ಹೌದು ಸ್ನೇಹಿತರೆ ಆರ್ಸಿಬಿ ತಂಡಕ್ಕೆ ಪ್ರಮುಖವಾಗಿ ಒಂದೆಡೆ ಬೌಲರ್ ಗಳ ಕೊರತೆ ಎದ್ದು ಕಾಣುತ್ತಿದ್ದರೆ ಮತ್ತೊಂದೆಡೆ ಆಲ್-ರೌಂಡರ್ ಗಳು, ಬಲಾಢ್ಯ ಬ್ಯಾಟ್ಸಮನ್ ಗಳು ಇದ್ದರೂ ಕೂಡ ತಂಡದಲ್ಲಿ ಸ್ಥಾನ ನೀಡಲು ಸಾಧ್ಯವಾಗುತ್ತಿರಲಿಲ್ಲ, ಬೆಂಚ್ ಕಾಯಿಸಬೇಕಾಗಿತ್ತು. ಯಾಕೆಂದರೆ ವಿಕೆಟ್ ಕೀಪರ್ ಸ್ಥಾನದಲ್ಲಿ ಪಾರ್ಥಿವ್ ಪಟೇಲ್ ಅವರನ್ನು ಹೊರತುಪಡಿಸಿದರೇ ಇನ್ಯಾವುದೇ ಆಯ್ಕೆ ಇರಲಿಲ್ಲ. ಒಂದು ವೇಳೆ ಇನ್ನಿತರ ಯಾವುದೇ ಬ್ಯಾಟ್ಸ್ಮನ್ಗಳು ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸುವ ಆಲೋಚನೆ ಮಾಡಿದ್ದರೇ ಪಾರ್ಥಿವ್ ಪಟೇಲ್ ರವರ ಸ್ಥಾನಕ್ಕೆ ಮತ್ತೊಬ್ಬ ಬಲಾಡ್ಯ ಬ್ಯಾಟ್ಸ್ಮನ್ ಅಥವಾ ಆಲ್-ರೌಂಡರ್ ಗಳಿಗೆ ಸ್ಥಾನ ನೀಡಿ ತಂಡವನ್ನು ಬಲಿಷ್ಠ ಗೊಳಿಸಬಹುದಿತ್ತು ಎಂಬ ಲೆಕ್ಕಾಚಾರಗಳ ಮಾತುಗಳು ಮೊದಲಿನಿಂದಲೂ ಕೇಳಿಬಂದಿದ್ದವು.

ಅದೇ ಕಾರಣಕ್ಕಾಗಿ ಇದೀಗ ಎಬಿ ಡಿವಿಲಿಯರ್ಸ್ ರವರು ವಿಕೆಟ್ ಕೀಪಿಂಗ್ ಇನ್ನು ಮುಂದೆ ಮಾಡುವುದಿಲ್ಲ ಎಂದು ನಿರ್ಧಾರ ಕೈಗೊಂಡಿದ್ದರೂ ಕೂಡ ಆರ್ಸಿಬಿ ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊರಲು ಸಿದ್ಧರಿರುವುದಾಗಿ ತಿಳಿದುಬಂದಿದೆ, ಇದನ್ನು ಆರ್ಸಿಬಿ ತಂಡದ ಪ್ರಮುಖ ಕೋಚ್ ಸೈಮನ್ ಕ್ಯಾಟಿಚ್ ರವರು ಬಹಿರಂಗಪಡಿಸಿದ್ದು, ಎಬಿ ಡಿವಿಲಿಯರ್ಸ್ ರವರು ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಳ್ಳುವ ಪ್ರಯೋಗ ಮಾಡಲಾಗುತ್ತದೆ, ಪಾರ್ಥಿವ್ ಪಟೇಲ್ ರವರ ಸ್ಥಾನದಿಂದ ತೆರವಾಗುವ ಸ್ಥಾನವನ್ನು ದೇವದತ್ತ ಪಡಿಕಲ್ ರವರು ಪಡೆಯುವ ಸಾಧ್ಯತೆಗಳಿವೆ. ದೇವದತ್ತ ಪಡಿಕಲ್ ಆಸ್ಟ್ರೇಲಿಯಾದ ಆರನ್ ಫಿಂಚ್ ರವರೊಂದಿಗೆ ಇನ್ನಿಂಗ್ಸ್ ಆರಂಭಿಸಬಹುದು. ಅಷ್ಟೇ ಅಲ್ಲದೆ ಜೋಷ್ ಫೀಲಿಪ್ಪೆ ರವರಿಗೂ ಕೂಡ ಸ್ಥಾನ ನೀಡುವ ಕುರಿತು ಆಲೋಚನೆ ಮಾಡುತ್ತಿದ್ದೇವೆ. ಆದರೆ ಅದಕ್ಕಾಗಿ ಯಾವ ವಿದೇಶಿ ಆಟಗಾರರನ್ನು ತಂಡದಿಂದ ಕೈಬಿಡಬೇಕಾಗುತ್ತದೆ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಎಬಿ ಡಿವಿಲಿಯರ್ಸ್ ರವರು ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಳ್ಳುವುದು ಹಾಗೂ ಕನ್ನಡಿಗ ದೇವದತ್ತ ಪಡಿಕಲ್ ರವರಿಗೆ ಆರಂಭಿಕ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ.