ಭಾರತೀಯ ಸೇನೆಗೆ ಆನೆಬಲ ತುಂಬಲು ಹೊಸ ಪ್ರಸ್ತಾವ ಇರಿಸಿದ ಅಜಿತ್ ದೋವಲ್ !

ಭಾರತೀಯ ಸೇನೆಗೆ ಆನೆಬಲ ತುಂಬಲು ಹೊಸ ಪ್ರಸ್ತಾವ ಇರಿಸಿದ ಅಜಿತ್ ದೋವಲ್ !

ನಮಸ್ಕಾರ ಸ್ನೇಹಿತರೇ, ಗಡಿಯಲ್ಲಿ ಭಾರತ ಹಾಗೂ ಚೀನಾ ದೇಶಗಳ ನಡುವೆ ಅಷ್ಟೇ ಅಲ್ಲದೇ ಪಾಕಿಸ್ತಾನದ ಗಡಿಯಲ್ಲಿಯೂ ಕೂಡ ದಿನ ನಿತ್ಯದ ಪರಿಸ್ಥಿತಿಯ ಆಧಾರದ ಮೇರೆಗೆ ಭಾರತಕ್ಕೆ ಎದುರಾಗುವ ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆಯ ಮಹತ್ವದ ಸಮಸ್ಯೆಗಳಲ್ಲಿ ಒಂದಾದ ಸಮಸ್ಯೆಯನ್ನು ಇದೀಗ ನಿವಾರಿಸಲು ಅಜಿತ್ ದೋವಲ್ ರವರ ಪ್ರಸ್ತಾವಕ್ಕೆ ಕೇಂದ್ರ ಅಸ್ತು ಎಂದಿದೆ. ವಾಯು ಪಡೆಯಲ್ಲಿ ಬಾಲಕೋಟ್ ಏರ್ ಸ್ಟ್ರೈಕ್ ಸಂದರ್ಭದಲ್ಲಿ ಮೊದಲ ಬಾರಿಗೆ ವಾಯುಪಡೆಗೆ ತನ್ನಲ್ಲಿನ ಕೆಲವೊಂದು ಲೋಪ ದೋಷಗಳನ್ನು ಕಂಡುಕೊಂಡಿತು. ಪಾಕಿಸ್ತಾನ ದೇಶವು AWACS ವ್ಯವಸ್ಥೆಯನ್ನು ಬಳಸಿಕೊಂಡು ಭಾರತೀಯ ಯುದ್ಧ ವಿಮಾನಗಳ ಚಲನವಲಗಳನ್ನು ಬಹಳ ಸುಲಭವಾಗಿ ಕಂಡು ಹಿಡಿದಿತ್ತು. ಅವುಗಳನ್ನು ತಡೆಯಲು ತನ್ನ ಯುದ್ಧ ವಿಮಾನಗಳನ್ನು ಕೂಡ ಕಳುಹಿಸಿತ್ತು, ಆದರೆ ಭಾರತೀಯ ಯುದ್ಧ ವಿಮಾನಗಳ ದಂಡನ್ನು ಕಂಡು ಪಾಕ್ ಯುದ್ಧ ವಿಮಾನಗಳು ಪಲಾಯನ ಮಾಡಿದ್ದವು.

ಅಂದು ಭಾರತದ ಯುದ್ಧ ವಿಮಾನಗಳನ್ನು ಕಂಡು ಹಿಡಿಯಲು ಅತ್ಯಾಧುನಿಕ ಫಾಲ್ಕನ್ ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆಗಳ (AWACS) ಪಾಕ್ ದೇಶ ಬಳಸಿತ್ತು. ಇಂತಹ ಸಂದರ್ಭದಲ್ಲಿ AWACS ವ್ಯವಸ್ಥೆಯ ಮಹತ್ವವನ್ನು ಭಾರತ ಅರಿತುಕೊಂಡಿತ್ತು. ಭಾರತದ ಬಳಿಯೂ ಈ ವ್ಯವಸ್ಥೆ ಇದೆಯಾದರೂ ಅವುಗಳ ಸಂಖ್ಯೆ ಕೇವಲ 3. ಇನ್ನು ಪಾಕಿಸ್ತಾನದ ಬಳಿ 7 ಫಾಲ್ಕನ್ ಹಾಗೂ ಚೀನಾ ಬಳಿ 28 ಇವೆ. ಇದನ್ನು ಮನಗಂಡ ಭಾರತ ದೇಶವು ಇದೀಗ ಇದೀಗ 15 ಸಾವಿರ ಕೋಟಿ ರೂ ವೆಚ್ಚದಲ್ಲಿ ಫಾಲ್ಕೋನ್ ಅವಾಕ್ಸ್ ಖರೀದಿಗೆ ಇಸ್ರೇಲ್ ದೇಶದ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಫಾಲ್ಕನ್ ರೇಡಾರ್‌ಗೆ ಸುಮಾರು 7.5 ಸಾವಿರ ಕೋಟಿ ವೆಚ್ಚವಾಗಲಿದ್ದು, ಮತ್ತೊಂದು 7.5 ಸಾವಿರ ಕೋಟಿ ಪ್ಲಾಟ್‌ಫಾರ್ಮ್ ಖರೀದಿಯತ್ತ ಸಾಗಲಿದೆ, ಈ ಸಂದರ್ಭದಲ್ಲಿ ರಷ್ಯಾದ ಎ -50 ವಿಮಾನ ವನ್ನು ಆಯ್ಕೆ ಮಾಡಲಾಗಿದೆ. ರಾಡಾರ್ ಮತ್ತು ವಿಮಾನವನ್ನು ಇಸ್ರೇಲ್‌ನಲ್ಲಿ ಸಂಯೋಜಿಸಲಾಗುವುದು ಎಂಬುದು ತಿಳಿದು ಬಂದಿದೆ.

ಇದೀಗ ಅಜಿತ್ ದೋವಲ್ ರವರು ಈ ಕುರಿತು ಸಂಪೂರ್ಣ ರಿಪೋರ್ಟ್ ತಯಾರು ಮಾಡಿದ್ದು, ಭಾರತೀಯ ಸೇನೆಯ ಮುಂದೆ ಪ್ರಸ್ತಾವ ಇರಿಸಿದ್ದರು. ಅಜಿತ್ ದೋವಲ್ರ ರವರ ರಿಪೋರ್ಟ್ ಕಂಡು ಕೆಲವೊಂದು ಪ್ರಶ್ನೆಗಳನ್ನು ಕೇಳಿ, ಆ ಪ್ರಶ್ನೆಗಳಿಗೆ ಉತ್ತರಿಸಿ ಮರು ಸಲ್ಲಿಕೆ ಮಾಡುವಂತೆ ಬಿಪಿನ್ ರಾವತ್ ಆದೇಶಿಸಿದ್ದಾರೆ. ಇವುಗಳ ಜೊತೆಗೆ ಭಾರತೀಯ ಸೇನೆಯು ತನ್ನ ಕಾಲ್ನಡಿಗೆಯ ಸೈನಿಕರಿಗೆ ಸಹಾಯ ಮಾಡಲು 200 ಯುದ್ಧತಂತ್ರದ ಡ್ರೋನ್‌ಗಳನ್ನು ಸಹ ಪಡೆದುಕೊಳ್ಳುತ್ತಿದೆ, ಇದರಿಂದ ಗಡಿಯಲ್ಲಿ ಭಾರತೀಯ ಸೇನೆಗೆ ಆನೆಬಲ ಬರಲಿದ್ದು, ಈ ಡ್ರೋನ್ ಗಳನ್ನು ಭಾರತದಲ್ಲಿ ತಯಾರು ಮಾಡಲಾಗುತ್ತಿದ್ದು, DRDO ಸಂಸ್ಥೆಯು ಸಹಭಾಗಿತ್ವವನ್ನು ಹೊಂದಿದೆ.