ಆತ್ಮ ನಿರ್ಭರ್ ಅಡಿಯಲ್ಲಿ ಮಿಲಿಟರಿ ರಫ್ತಿಗೆ ಮೊದಲ ಹೆಜ್ಜೆಯಲ್ಲಿಯೇ ಮೊದಲ ಭರ್ಜರಿ ಯಶಸ್ಸು ! ಏನು ಗೊತ್ತಾ?

ಆತ್ಮ ನಿರ್ಭರ್ ಅಡಿಯಲ್ಲಿ ಮಿಲಿಟರಿ ರಫ್ತಿಗೆ ಮೊದಲ ಹೆಜ್ಜೆಯಲ್ಲಿಯೇ ಮೊದಲ ಭರ್ಜರಿ ಯಶಸ್ಸು ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಒಂದು ದೇಶದ ಆರ್ಥಿಕತೆ ಒಂದೆಡೆ ಆಹಾರ ಉತ್ಪನ್ನಗಳ ರಫ್ತಿನ ಮೇಲೆ ಮತ್ತೊಂದೆಡೆ ಮಿಲಿಟರಿ ಉಪಕರಣಗಳ ರಫ್ತಿನ ಮೇಲೆ ಬಹುತೇಕ ಅಂದರೆ ಶೇಕಡ ಎಂಬತ್ತರಷ್ಟು ಆರ್ಥಿಕತೆಯ ವಿಭಾಗ ಈ ಎರಡೂ ವಿಭಾಗಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತವೆ. ಭಾರತ ದೇಶವು ಎಷ್ಟೇ ವಸ್ತುಗಳನ್ನು ರಫ್ತು ಮಾಡಿ ಎಷ್ಟೇ ಯಶಸ್ಸು ಗಳಿಸಿದರೂ ಕೂಡ ಮಿಲಿಟರಿ ಉಪಕರಣಗಳ ಆಮದಿನಿಂದ ಲಕ್ಷಾಂತರ ಕೋಟಿ ಹಣ ಇತರ ದೇಶಗಳಿಗೆ ವರ್ಗಾವಣೆ ಆಗುತ್ತಿತ್ತು. ಕೆಲವು ಮಿಲಿಟರಿ ಉಪಕರಣಗಳನ್ನು ತಯಾರಿ ಮಾಡಿದರೂ ಕೂಡ ಕೇವಲ ಬೆರಳೆಣಿಕೆಯ ವಸ್ತುಗಳು ಮಾತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿ ಇತರ ದೇಶಗಳು ಕೊಂಡುಕೊಳ್ಳಲು ಆಸಕ್ತಿ ಇಲ್ಲಿಯವರೆಗೂ ತೋರಿಸಿದ್ದವು. ಆದರೆ ಇಲ್ಲಿಯವರೆಗೂ ಒಂದು ಲೆಕ್ಕ ಇನ್ನು ಮುಂದೆ ಒಂದು ಲೆಕ್ಕ ಎಂಬಂತೆ ಭಾರತ ದೇಶವು ಆತ್ಮ ನಿರ್ಭಾರ್ ಎಂಬ ಯೋಜನೆಯ ಅಡಿಯಲ್ಲಿ ಭಾರತದಲ್ಲಿ ಮಿಲಿಟರಿ ಉಪಕರಣಗಳನ್ನು ತಯಾರಿ ಮಾಡಲು ಭರ್ಜರಿ ಸಿದ್ಧತೆ ನಡೆಸಿದೆ.

ಈಗಾಗಲೇ ನೂರಕ್ಕೂ ಹೆಚ್ಚು ಮಿಲಿಟರಿ ಉಪಕರಣಗಳನ್ನು ಯಾವುದೇ ಕಾರಣಕ್ಕೂ ಇತರ ದೇಶಗಳಿಂದ ಆಮದು ಮಾಡಿಕೊಳ್ಳುವುದಿಲ್ಲ ಎಂದು ಅಧಿಕೃತವಾಗಿ ಆದೇಶ ಹೊರಡಿಸುವ ಮೂಲಕ ಈ ಎಲ್ಲಾ ಮಿಲಿಟರಿ ಉಪಕರಣಗಳು ಸದ್ಯ ನಮ್ಮಲ್ಲಿರುವ ಟೆಕ್ನಾಲಜಿಯನ್ನು ಬಳಸಿಕೊಂಡು ನಾವು ತಯಾರು ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಿಲಿಟರಿ ಉಪಕರಣಗಳನ್ನು ಸೇರಿಸಲಾಗುವುದು, ಮೊದಲ ಹಂತವಾಗಿ ನೂರಕ್ಕೂ ಹೆಚ್ಚು ಉಪಕರಣಗಳನ್ನು ಭಾರತದಲ್ಲಿಯೇ ತಯಾರಿ ಮಾಡಲು ಉತ್ತೇಜನ ನೀಡಿ ಇಲ್ಲಿರುವ ಕಂಪನಿಗಳಿಗೆ ಅಗತ್ಯವಿರುವ ಟೆಕ್ನಾಲಜಿ ಹಾಗೂ ಕಚ್ಚಾವಸ್ತುಗಳನ್ನು ಒದಗಿಸಿ ತಯಾರಿ ಮಾಡಲಾಗುವುದು, ಹಾಗೂ ಈ ಉಪಕರಣಗಳ ತಯಾರಿಕೆಯ ಟೆಂಡರ್ಗಳಲ್ಲಿ ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ಯಾವುದೇ ರಾಷ್ಟ್ರಗಳು ಭಾಗವಹಿಸುವಂತಿಲ್ಲ ಎಂಬ ಆದೇಶ ಹೊರಡಿಸಿತ್ತು.

ಇದೀಗ ಮಿಲಿಟರಿ ಉಪಕರಣಗಳನ್ನು ಭಾರತದಲ್ಲಿಯೇ ತಯಾರಿ ಮಾಡಿ ರಫ್ತು ಮಾಡುವ ಮಹತ್ವದ ಆಲೋಚನೆಯನ್ನು ಭಾರತ ದೇಶ ಮಾಡುತ್ತಿರುವ ಸಂದರ್ಭದಲ್ಲಿ‌ ಕೇವಲ ಕೆಲವೇ ಕೆಲವು ದಿನಗಳಲ್ಲಿ ಇದೀಗ ಮೊದಲ ಯಶಸ್ಸು ಸಿಕ್ಕಿದೆ. ಹೌದು ಸ್ನೇಹಿತರೇ, ಆತ್ಮ ನಿರ್ಭರ್ ಭಾರತ ಎಂಬ ನಿಲುವನ್ನು ಬೆಂಬಲಿಸಿರುವ ಥಾಯ್ಲೆಂಡ್ ದೇಶವು ಸ್ಪಷ್ಟವಾಗಿ ಆತ್ಮ ನಿರ್ಭ ಭಾರತ ಎಂಬುದು ಅದ್ಭುತ ಆಲೋಚನೆಯಾಗಿದೆ, ಯೋಜನೆಯಡಿಯಲ್ಲಿ ಇನ್ನು ಕೆಲವೇ ಕೆಲವು ದಿನಗಳಲ್ಲಿ 600 ಟಾಟಾ LPTA ಮಿಲಿಟರಿ ಟ್ರಕ್ ಗಳನ್ನು ನಾವು ಖರೀದಿಸುತ್ತಿದ್ದೇವೆ, ಇವುಗಳು ಬಹಳ ಶಕ್ತಿಶಾಲಿಯಾಗಿದ್ದು, ನಿರ್ವಹಿಸಲು ಬಹಳ ಸುಲಭವಾಗಿರುತ್ತವೆ. ಭಾರತೀಯ ಸೇನೆಗೆ ಹಲವಾರು ವರ್ಷಗಳಿಂದ ಟಾಟಾ ಕಂಪನಿ ತನ್ನ ಟ್ರಕ್ ಸೇರಿದಂತೆ ಶಸ್ತ್ರಸಜ್ಜಿತ ವಾಹನಗಳನ್ನು ರವಾನೆ ಮಾಡುತ್ತಿದೆ. ಅದೇ ಕಾರಣಕ್ಕಾಗಿ ನಾವು ಟಾಟಾ ಮೋಟಾರ್ಸ್ ಕಂಪನಿಯ 600 LPTA ಮಿಲಿಟರಿ ಟ್ರಕ್ ಗಳನ್ನು ಖರೀದಿ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಅಧಿಕೃತ ಆದೇಶವನ್ನು ಥಾಯ್ಲೆಂಡ್ ರಾಯಬಾರಿ ಹೊರಡಿಸಿದ್ದಾರೆ.