ಕೈಲಾಸದ ಬಳಿ ಚೀನಾ ಸೇನೆ ಕಂಡು ಭಾರತ ಪರ ಅಖಾಡಕ್ಕಿಳಿದು ಕಠಿಣ ಹೆಜ್ಜೆ ಇಟ್ಟ ಅಮೇರಿಕ ! ಲೇಟೆಸ್ಟ್ ಅಪ್ಡೇಟ್ಸ್

ಕೈಲಾಸದ ಬಳಿ ಚೀನಾ ಸೇನೆ ಕಂಡು ಭಾರತ ಪರ ಅಖಾಡಕ್ಕಿಳಿದು ಕಠಿಣ ಹೆಜ್ಜೆ ಇಟ್ಟ ಅಮೇರಿಕ ! ಲೇಟೆಸ್ಟ್ ಅಪ್ಡೇಟ್ಸ್

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಹಾಗೂ ಚೀನಾ ನಡುವಿನ ಮಾತುಕತೆಗಳು ಸಂಪೂರ್ಣವಾಗಿ ವಿಫಲವಾಗುತ್ತಿರುವ ಸಂದರ್ಭದಲ್ಲಿ ಭಾರತ ದೇಶವು ಶಾಂತಿ ಬಯಸುತ್ತದೆ, ಆದರೆ ಗಡಿಯಲ್ಲಿ ಚೀನಾ ತನ್ನ ಬುದ್ಧಿ ಪ್ರದರ್ಶಿಸುವುದನ್ನು ಮುಂದುವರಿಸಿದ್ದೇ ಆದಲ್ಲಿ ಭಾರತದ ಮುಂದೆ ಮಿಲಿಟರಿ ಆಯ್ಕೆ ಕೂಡ ಇವೆ ಎಂದು ಬಿಪಿನ್ ರಾವತ್ ರವರು ಕೇವಲ ಎರಡು ದಿನಗಳ ಹಿಂದಷ್ಟೇ ಚೀನಾ ದೇಶಕ್ಕೆ ಸಂದೇಶವನ್ನು ರವಾನೆ ಮಾಡಿದ್ದರು. ಇಷ್ಟಾದರೂ ಕೂಡ ಚೀನಾ ದೇಶ ಕೈಲಾಸ ಪರ್ವತದ ಸುತ್ತಮುತ್ತಲಿನ ಪ್ರದೇಶದಲ್ಲಿ ಸೇನೆಯನ್ನು ಮತ್ತಷ್ಟು ಪ್ರಮಾಣದಲ್ಲಿ ಜಮಾವಣೆ ಮಾಡುತ್ತಿದೆ. ಭಾರತೀಯ ವಾಯುಪಡೆಯನ್ನು ತಡೆಯುವ ಉದ್ದೇಶದಿಂದ ಯುದ್ಧ ವಿಮಾನಗಳನ್ನು ತಡೆಯುವ ಕ್ಷಿಪಣಿಗಳನ್ನು ಕೂಡ ಗಡಿಗೆ ರವಾನೆ ಮಾಡಿ ಯುದ್ಧದ ಕಾರ್ಮೋಡ ಸೃಷ್ಟಿಸಿದೆ.

ಸಾಮಾನ್ಯವಾಗಿ ಚೀನಾ ದೇಶದ ಈ ನಡೆ ಅಂತರ್ರಾಷ್ಟ್ರೀಯವಾಗಿ ಸದ್ದು ಮಾಡಲು ಆರಂಭಿಸಿದೆ. ಮೊದಲಿನಿಂದಲೂ ಭಾರತಕ್ಕೆ ಮಿಲಿಟರಿ ಸಹಾಯ ಮಾಡಲು ಕಾದು ಕುಳಿತಿರುವ ಅಮೇರಿಕಾ ದೇಶವು ಇದೀಗ ಭಾರತ ತನ್ನ ಗಡಿಯಲ್ಲಿ ಚೀನಾ ದೇಶಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಿದ್ದರೂ ಕೂಡ ಭಾರತಕ್ಕೆ ಅಗತ್ಯ ಬಂದರೇ ತಾನು ಎಲ್ಲಾ ರೀತಿಯಲ್ಲಿ ಸಿದ್ಧವಾಗಿರಬೇಕು ಎಂಬ ಆಲೋಚನೆ ಮಾಡಿದಂತೆ ಕಾಣುತ್ತಿದೆ. ಅದಕ್ಕಾಗಿಯೇ ಯಾವುದೇ ರೇಡಾರ್ ಗಳಿಗೆ ಮಣ್ಣುಮುಕ್ಕಿಸಿ, ಅಣ್ವಸ್ತ್ರವನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡು ಇಡೀ ವಿಶ್ವದಲ್ಲಿಯೇ ಅತಿ ಬಲಾಡ್ಯ ಯುದ್ಧ ವಿಮಾನ ಎನಿಸಿಕೊಂಡಿರುವ
ಯುಎಸ್ ಸ್ಟೆಲ್ತ್ ಬಿ -2 ಗಳನ್ನು ಅಮೆರಿಕ ಅಖಾಡಕ್ಕೆ ಇಳಿಸಿದೆ. ಇದರ ವಿಶೇಷತೆ ಏನೆಂದರೆ, ಒಂದು ಯುದ್ಧ ವಿಮಾನ ನೌಕೆಗಿಂತ ಹೆಚ್ಚು ಶಸ್ತ್ರಾಸ್ತ್ರವನ್ನು ಹೊತ್ತೊಕೊಂಡು ಆಗಸಕ್ಕೆ ಹಾರಬಲ್ಲದು.

ಹೌದು ಸ್ನೇಹಿತರೇ, ಒಂದೆಡೆ ಭಾರತ ದೇಶವು ತನ್ನ ನೌಕಾಪಡೆಯ ಹಡಗುಗಳನ್ನು ಹಿಂದೂ ಮಹಾ ಸಾಗರದ ಆಯಕಟ್ಟಿನ ಸ್ಥಳದಲ್ಲಿ ನಿಯೋಜಿಸಿ ಎಲ್ಲಾ ರೀತಿಯಲ್ಲೂ ಚೀನಾ ದೇಶದ ನಡೆಗಳಿಗೆ ತಕ್ಕ ಉತ್ತರ ನೀಡಲು, ಎದುರು ನೋಡುತ್ತಿರುವ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯೊಂದಿಗೆ ಕೈಜೋಡಿಸಲು ಹಿಂದೂ ಮಹಾಸಾಗರದಲ್ಲಿರುವ ಹಾಗೂ ಭಾರತಕ್ಕೆ ಹತ್ತಿರವಿರುವ ಡಿಗೊಗಾರ್ಸಿಯಾ ಮಿಲಿಟರಿ ನೆಲೆಯಲ್ಲಿ ಅಮೇರಿಕಾ ದೇಶವು ಯುದ್ಧ ವಿಮಾನಗಳನ್ನು ಆಯೋಜಿಸಿದೆ. ಇದರಿಂದ ಭಾರತದ ಗಡಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಈ ಕೂಡಲೇ ನಿಲ್ಲಿಸುವಂತೆ ಅಮೇರಿಕ ದೇಶ ಪರೋಕ್ಷ ಸಂದೇಶ ರವಾನೆ ಮಾಡಿದೆ. ಒಟ್ಟಿನಲ್ಲಿ ಗಡಿಯಲ್ಲಿ ಒಂದು ಕಡೆ ಭಾರತೀಯ ಸೇನೆಯು ಸಂಪೂರ್ಣ ಸಿದ್ಧವಾಗಿ ಚೀನಾ ದೇಶಕ್ಕೆ ಉತ್ತರ ನೀಡಲು ಕಾದುಕುಳಿತಿದೆ, ಮತ್ತೊಂದೆಡೆ ಅಮೆರಿಕ ದೇಶ ಕೂಡ ತನ್ನ ಸೇನೆಯನ್ನು ಪ್ರತಿಯೊಂದು ಸಂದರ್ಭಗಳಿಗೂ ಸಿದ್ಧವಾಗುವಂತೆ ಆದೇಶಿ ಕಾದು ಕುಳಿತ್ತಿರುವ ಕಾರಣ ಚೀನಾ ದೇಶ ಬುದ್ದಿ ಕಲಿತುಕೊಂಡರೇ ಒಳ್ಳೆಯದು.