ಆರ್ಸಿಬಿಯ ಈ 3 ಉತ್ತಮ ಆಟಗಾರರು 11 ರ ಬಳಗದಲ್ಲಿ ಸ್ಥಾನ ಪಡೆಯುವುದು ಬಹುತೇಕ ಅನುಮಾನ !

ಆರ್ಸಿಬಿಯ ಈ 3 ಉತ್ತಮ ಆಟಗಾರರು 11 ರ ಬಳಗದಲ್ಲಿ ಸ್ಥಾನ ಪಡೆಯುವುದು ಬಹುತೇಕ ಅನುಮಾನ !

ನಮಸ್ಕಾರ ಸ್ನೇಹಿತರೇ, ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಐಪಿಎಲ್ ಟೂರ್ನಿಯು ಆರಂಭವಾಗಲಿದೆ. ಈಗಾಗಲೇ ಬಹುತೇಕ ತಂಡಗಳ ಆಟಗಾರರು ಯುಎಇ ದೇಶ ತಲುಪಿ ಅಲ್ಲಿನ ಕಾನೂನಿನ ಪ್ರಕಾರ 14 ದಿನಗಳ ಕ್ವಾರಂಟೈನ್ಗೆ ಒಳಪಟ್ಟಿದ್ದಾರೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಐಪಿಎಲ್ ಟೂರ್ನಿಯು ಆರಂಭವಾಗುತ್ತಿರುವ ಕಾರಣ ಈಗಾಗಲೇ ಕ್ರಿಕೆಟ್ ವಿಶ್ಲೇಷಕರು ತಮ್ಮದೇ ಆದ ಲೆಕ್ಕಚಾರದಲ್ಲಿ ತೊಡಗಿಕೊಂಡಿದ್ದಾರೆ, ಅಭಿಮಾನಿಗಳು ಕೂಡ ತಮ್ಮದೇ ಆದ ತಂಡವನ್ನು ಕಟ್ಟಿಕೊಂಡು ಈ ರೀತಿ ತಂಡ ರಚಿಸಿದರೆ ಪಂದ್ಯಗಳನ್ನು ಗೆಲ್ಲಬಹುದು ಎಂದು ಲೆಕ್ಕಚಾರ ಮಾಡುತ್ತಿದ್ದಾರೆ. ಇದೀಗ ಯುಎಇ ದೇಶ ತಲುಪಿರುವ 25 ಆರ್ಸಿಬಿ ಆಟಗಾರರಲ್ಲಿ, ಈ ಬಾರಿ ‌ತಂಡ ಸಮತೋಲನದಿಂದ ಕೂಡಿರುವ ಕಾರಣ ಈ 3 ಆಟಗಾರರು ಆಟವಾಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯದೆ ಬೆಂಚ್ ಕಾಯಬಹುದು ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಆಟಗಾರರು ಯಾರ್ಯಾರು ಎಂಬುದರ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ.

3. ಪವನ್ ದೇಶಪಾಂಡೆ: ಕರ್ನಾಟಕ ರಾಜ್ಯದ ಆಲ್-ರೌಂಡರ್ ಪವನ್ ದೇಶಪಾಂಡೆಯವರು ಈ ಬಾರಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವುದು ಬಹುತೇಕ ಅನುಮಾನವಾಗಿದೆ. ಆರ್ಸಿಬಿ ತಂಡವು 20 ಲಕ್ಷ ನೀಡಿ ಈ ಆಟಗಾರನನ್ನು ಖರೀದಿ ಮಾಡಿದ್ದು,‌ ಆಫ್-ಸ್ಪಿನ್ನರ್ ಆಲ್-ರೌಂಡರ್ ಆಗಿರುವ ದೇಶಪಾಂಡೆ ರವರು ಇಲ್ಲಿಯವರೆಗೂ 15 ಟಿ-ಟ್ವೆಂಟಿ ಪಂದ್ಯಗಳಲ್ಲಿ ಆಟವಾಡಿ 47 ರ ಸರಾಸರಿಯಲ್ಲಿ 426 ರನ್ಗಳಿಸಿ ತಾವೊಬ್ಬ ಉತ್ತಮ ಆಟಗಾರ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಆದರೆ ಸ್ಪಿನ್ ಆಲ್ರೌಂಡರ್ ಗಳ ಸ್ಥಾನದಲ್ಲಿ ವಾಷಿಂಗ್ಟನ್ ಸುಂದರ್, ಇಂಗ್ಲೆಂಡ್ ತಂಡದ ಮೋಯಿನ್ ಆಲಿ ರವರು ಮತ್ತು ಪವನ್ ನೇಗಿ ಈಗಾಗಲೇ ಐಪಿಎಲ್ ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಕಾರಣ ಈ ಮೂರು ಆಟಗಾರರನ್ನು ಹೆಚ್ಚಾಗಿ ಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಈ ಬಾರಿಯ ಐಪಿಎಲ್ ನಲ್ಲಿ ಇವರಿಗೆ ತಮ್ಮ ಆಟ ಪ್ರದರ್ಶಿಸುವ ಅವಕಾಶ ಸಿಗುವುದು ಬಹುತೇಕ ಅನುಮಾನವಾಗಿದೆ.

2. ಕೆನ್ ರಿಚರ್ಡ್ಸನ್- ಇನ್ನು ಎರಡನೆಯದಾಗಿ ಆಸ್ಟ್ರೇಲಿಯ ತಂಡದ ಕೆನ್ ರಿಚರ್ಡ್ಸನ್ ರವರು ನಾಲ್ಕು ವರ್ಷಗಳ ಬಳಿಕ ಆರ್ಸಿಬಿ ತಂಡಕ್ಕೆ ವಾಪಸಾಗಿದ್ದಾರೆ. ಇವರು ಇಲ್ಲಿಯವರೆಗೂ 127 ವಿಕೆಟ್ ಪಡೆದಿದ್ದು 7.9 ರ ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ತಂಡದ ಡೇಲ್ ಸ್ಟೇನ್ ರವರು ಈಗಾಗಲೇ ತಂಡದಲ್ಲಿ ಆಟವಾಡುವುದು ಖಚಿತವಾಗಿದ್ದು, ಇವರ ಅನುಪಸ್ಥಿತಿಯಲ್ಲಿ ಕೆನ್ ರಿಚರ್ಡ್ಸನ್ ರವರಿಗೆ ತಂಡ ಮಣೆ ಹಾಕುವುದು ಅಸಾಧ್ಯದ ಸಂಗತಿ ಎಂದು ಕ್ರಿಕೆಟ್ ವಿಶ್ಲೇಷಕರು ಹೇಳಿದ್ದಾರೆ.

1.ಜೋಷ್ ಫೀಲಿಪ್ಪೆ: ಇನ್ನು ಈ ಲಿಸ್ಟ್ ನಲ್ಲಿ ಮೊದಲನೇ ಆಟಗಾರನಾಗಿ ಆಸ್ಟ್ರೇಲಿಯಾ ತಂಡದ ಯುವ ಆಟಗಾರ ಹಾಗೂ ಆಟವಾಡಿದ ಕೆಲವೇ ಕೆಲವು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಜೋಷ್ ಫೀಲಿಪ್ಪೆ ರವರು ಕಂಡು ಬರುತ್ತಾರೆ. ಈಗಾಗಲೇ ಆರೋನ್ ಫಿಂಚ್ ಅವರು ಬಹಳ ಅನುಭವವನ್ನು ಹೊಂದಿರುವ ಕಾರಣ, ಆರಂಭಿಕರಾಗಿ ಆರೋನ್ ಫಿಂಚ್ ಅವರ ಬದಲು ಜೋಷ್ ಫೀಲಿಪ್ಪೆ ಅವರನ್ನು ಆಯ್ಕೆ ಮಾಡುವುದು ಕಷ್ಟವೇ ಸರಿ. ಆದರೆ ಕ್ಯಾಪ್ಟನ್ ಕೊಹ್ಲಿ ರವರ ಲೆಕ್ಕಾಚಾರದಲ್ಲಿ ಯಾವ ಆಟಗಾರರು ಆಯ್ಕೆಯಾಗುತ್ತಾರೆ ಎಂಬುದು ಹೇಳಲು ಕಷ್ಟವಾಗುತ್ತದೆ. ಒಂದು ವೇಳೆ ಆರೋನ್ ಫಿಂಚ್ ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ಒಂದೆರಡು ಪಂದ್ಯಗಳಲ್ಲಿ ವಿಫಲರಾದರೆ ಮುಂದಿನ ಆಯ್ಕೆಯೇ ಜೋಷ್ ಫೀಲಿಪ್ಪೆ. ಈ ಮೂವರು ಆಟಗಾರರನ್ನು ಕ್ರಿಕೆಟ್ ವಿಶ್ಲೇಷಕರು ಆಯ್ಕೆ ಮಾಡಿದ್ದು ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.