ಬಿಗ್ ಬ್ರೇಕಿಂಗ್: ಕೆಲವೇ ಕೆಲವು ಕ್ಷಣಗಳಲ್ಲಿ ಅಣ್ಣಮಲೈ ರಾಜಕೀಯಕ್ಕೆ ಕಾರಣ ಸಮೇತ ವಿವರಣೆ ನೀಡಿದ್ದು ಹೇಗೆ ಗೊತ್ತಾ?

ಬಿಗ್ ಬ್ರೇಕಿಂಗ್: ಕೆಲವೇ ಕೆಲವು ಕ್ಷಣಗಳಲ್ಲಿ ಅಣ್ಣಮಲೈ ರಾಜಕೀಯಕ್ಕೆ ಕಾರಣ ಸಮೇತ ವಿವರಣೆ ನೀಡಿದ್ದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಐಪಿಎಸ್ ಹುದ್ದೆಯಲ್ಲಿ ಕಡಕ್ಕಾಗಿ ಕಾರ್ಯ ನಿರ್ವಹಿಸಿ ಇದ್ದಕ್ಕಿದ್ದಂತೆ ತಮ್ಮ ಕ್ಷೇತ್ರದಲ್ಲಿ ಇನ್ನೇನು ಅತ್ಯುತ್ತಮ ಸ್ಥಾನಕ್ಕೆ ಏರಲಿದ್ದಾರೆ ಎಂದು ಎಲ್ಲರೂ ಆಲೋಚನೆ ನಡೆಸುತ್ತಿರುವ ಸಂದರ್ಭದಲ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ನಾನು ದೇಶದಲ್ಲಿ ಬೇರೆ ಬದಲಾವಣೆಯನ್ನು ತರಲು ಆಸಕ್ತಿ ಪಡುತ್ತಿದ್ದೇನೆ ಎಂದು ಹೇಳಿ ರಾಜೀನಾಮೆ ನೀಡಿದ ರಿಯಲ್ ಸಿಂಗಂ ಎಂದು ಹೆಸರು ಪಡೆದಿದ್ದ ಅಣ್ಣಮಲೈ ರವರ ರಾಜಕೀಯ ಎಂಟ್ರಿ ಇದೀಗ ಖಚಿತ ಗೊಂಡಿದೆ. ಹೌದು ಸ್ನೇಹಿತರೇ, ಇನ್ನು ಕೆಲವೇ ಕೆಲವು ಕ್ಷಣಗಳಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಮಲೈ ರವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ.

ಮೊದಲಿನಿಂದಲೂ ಬಿಜೆಪಿ ಪಕ್ಷದ ಹಾಗೂ ಆರೆಸ್ಸೆಸ್ ಪರ ವಿಶೇಷ ಒಲವನ್ನು ಹೊಂದಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೆ ರವರು ಇಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರುವುದು ಖಚಿತವಾಗಿದೆ. ಮೊದಲಿಗೆ ತಮಿಳುನಾಡಿನ ನಟ ರಜನಿಕಾಂತ್ ರವರ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯೆ ನೀಡಿದ ಅಣ್ಣಾಮಲೆ ರವರು ನನ್ನ ಪ್ರಕಾರ ಐಪಿಎಸ್ ಎಂದರೆ ದೇಶ, ರಾಷ್ಟ್ರೀಯ ಭದ್ರತೆ, ನಾನು
ಐಪಿಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಅದೇ ನಿಟ್ಟಿನಲ್ಲಿ ತಮಿಳುನಾಡಿನಲ್ಲಿ ಇದೀಗ ಪರ್ಯಾಯ ಆಡಳಿತದ ಅಗತ್ಯವಿದೆ. ಆ ಮಾರ್ಗವನ್ನು ಬಿಜೆಪಿ ಪಕ್ಷ ಮಾತ್ರ ಒದಗಿಸಬಲ್ಲದು ಎಂದು ನಾನು ಭಾವಿಸಿದ್ದೇನೆ.

ಆದ ಕಾರಣಕ್ಕೆ ನಾನು ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ, ಬಿಜೆಪಿ ಪಕ್ಷ ಒಂದು ರಾಷ್ಟ್ರೀಯವಾದಿ ಪಕ್ಷ ನಾನು ಮೊದಲಿನಿಂದಲೂ ರಾಷ್ಟ್ರೀಯ ವಿಚಾರ ಹೊಂದಿರುವ ವ್ಯಕ್ತಿಯಾಗಿದ್ದಾನೆ. ಹೀಗಾಗಿ ನಾನು ಬೇಷರತ್ತಾಗಿ ಬಿಜೆಪಿ ಪಕ್ಷಕ್ಕೆ ಸೇರಿಕೊಳ್ಳುತ್ತಿದ್ದೇನೆ. ನರೇಂದ್ರ ಮೋದಿ ರವರ ಬಗ್ಗೆ ಇರುವ ಮೆಚ್ಚುಗೆಯ ಅನುಭವ ಈ ನಿರ್ಧಾರವನ್ನು ತೆಗೆದುಕೊಳ್ಳಲು ನನ್ನನ್ನು ಪ್ರೇರೇಪಿಸಿದೆ. ಬಿಜೆಪಿ ಪಕ್ಷ ಸೇರ್ಪಡೆ ಗೊಳ್ಳುವ ನಿರ್ಧಾರ ಬಹಳ ತಡವಾಗಿದ್ದು, ಸಾಮಾಜಿಕ ಬದಲಾವಣೆ ಗಿಂತ ರಾಜಕೀಯದಲ್ಲಿ ಬದಲಾವಣೆ ಬೇಕು ಎಂದು ನನಗೆ ಅನಿಸುತ್ತಿದೆ ಅದಕ್ಕಾಗಿಯೇ ನಾನು ರಾಜಕೀಯ ಪ್ರವೇಶ ಮಾಡಲು ನಿರ್ಧಾರ ತೆಗೆದುಕೊಂಡಿದ್ದೇನೆ. ತಮಿಳುನಾಡಿನಲ್ಲಿ ಬಿಜೆಪಿ ಪಕ್ಷವನ್ನು ತಪ್ಪಾಗಿ ಜನರು ಅರ್ಥಮಾಡಿ ಕೊಂಡಿದ್ದಾರೆ, ಬಿಜೆಪಿ ಪಕ್ಷದ ಕುರಿತು ಇತರ ರಾಜ್ಯಗಳಲ್ಲಿ ಆದ ಅನುಭವ ತಮಿಳುನಾಡಿನಲ್ಲಿ ಆಗಿಲ್ಲ ಇಲ್ಲಿ ಸಂಪೂರ್ಣವಾಗಿ ಬಿಜೆಪಿಯ ಬಗ್ಗೆ ತಪ್ಪು ಮಾಹಿತಿಗಳನ್ನು ನೀಡಲಾಗಿದೆ ಹಾಗೂ ಸೃಷ್ಟಿಸಲಾಗಿದೆ ಎಂದು ಬಿಜೆಪಿ ಪಕ್ಷದ ಪರವಾಗಿ ಹೇಳಿಕೆಗಳನ್ನು ನೀಡಿದ್ದಾರೆ