ಕಾಂಗ್ರೆಸ್ ಗೆ ಕಂಡುಕೇಳರಿಯದ ರೀತಿಯಲ್ಲಿ ಮರ್ಮಾಘಾತ, ರಾಹುಲ್ ಗೆ ಬುದ್ಧಿ ಕಲಿಸಲು ಮುಂದಾದ ಹಿರಿಯ ನಾಯಕರು !

ಕಾಂಗ್ರೆಸ್ ಗೆ ಕಂಡುಕೇಳರಿಯದ ರೀತಿಯಲ್ಲಿ ಮರ್ಮಾಘಾತ, ರಾಹುಲ್ ಗೆ ಬುದ್ಧಿ ಕಲಿಸಲು ಮುಂದಾದ ಹಿರಿಯ ನಾಯಕರು !

ನಮಸ್ಕಾರ ಸ್ನೇಹಿತರೇ, ಇಂದು ಕಾಂಗ್ರೆಸ್ ಪಕ್ಷ ತನ್ನ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ನಿಮಿತ್ತ ಕಾರ್ಯಕಾರಣಿ ಸಭೆಯನ್ನು ನಡೆಸಿತ್ತು. ಕಾಂಗ್ರೆಸ್ ಪಕ್ಷ ಸಭೆ ಆರಂಭಿಸುವ ಮುನ್ನವೇ ಶಶಿತರೂರು, ಕಪಿಲ್ ಸಿಬಲ್, ಗುಲಾಮ್ ನಬಿ ಆಜಾದ್ ಸೇರಿದಂತೆ ಇನ್ನು 23 ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಇದರಿಂದ ರಾಹುಲ್ ಗಾಂಧಿ ರವರು ಸಭೆ ಆರಂಭವಾಗುತ್ತಿದ್ದಂತೆ ಪತ್ರದ ಹಿಂದೆ ಬಿಜೆಪಿ ಪಕ್ಷದ ಕೈವಾಡವಿದೆ ಎಂದು ಕಾಂಗ್ರೆಸ್ ಪಕ್ಷದ 23 ಪ್ರಮುಖ ನಾಯಕರ ಮೇಲೆ ಬಿಜೆಪಿ ಪಕ್ಷದ ಮೇಲೆ ಸಂಬಂಧ ಹೊಂದಿದ್ದಾರೆ ಎಂಬಂತೆ ಮಾತನಾಡಿದರು.

ಇದರಿಂದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಭಿನ್ನ’ಮತೀಯ ಮಾತುಗಳು ಕೇಳಿಬಂದಿದ್ದವು. ಆದರೆ ಅದು ಅಷ್ಟಕ್ಕೇ ಸುಮ್ಮನಾಗುತ್ತದೆ ಗಾಂಧಿ ಕುಟುಂಬದ ವಿರುದ್ಧ ಕಾಂಗ್ರೆಸ್ಸಿಗರು ಮಾತನಾಡುವ ಧೈರ್ಯ ಮಾಡುವುದಿಲ್ಲ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಬಿಜೆಪಿ ಪಕ್ಷದ ಜೊತೆ ಸಂಬಂಧ ಇದೆ ಎಂದು ಆರೋಪ ಮಾಡಿದ ಕಾರಣಕ್ಕಾಗಿ ಕಪಿಲ್ ಸಿಬಲ್ ಮತ್ತು ಗುಲಾಂ ನಬಿ ಆಜಾದ್ ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ಬಳಿಕ ಇದೀಗ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಗಾಂಧಿ ಕುಟುಂಬದ ವಿರುದ್ಧ ಅಸಮಾಧಾನಗೊಂಡು ರಾಜಿನಾಮೆ ನೀಡಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಆಂತ – ರಿಕ ಯು’ದ್ಧದಲ್ಲಿ ಇದೀಗ ಕಾಂಗ್ರೆಸ್ ಪಕ್ಷ ಸಿಲುಕಿಕೊಂಡಿದ್ದು ಮಾಹಿತಿಗಳ ಪ್ರಕಾರ ಇಡೀ ದೇಶದೆಲ್ಲೆಡೆ ರಾಹುಲ್ ಗಾಂಧಿ ರವರ ಹೇಳಿಕೆಯನ್ನು ವಾಪಸು ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಸಾಮೂಹಿಕವಾಗಿ ಪ್ರಮುಖ ನೂರು ನಾಯಕರು ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬಿಗ್ ಶಾಕ್ ನೀಡಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಅದೇ ನಡೆದಲ್ಲಿ ಈಗಾಗಲೇ ದೇಶದಲ್ಲಿ ಬಹುತೇಕ ಮುಳುಗಿರುವ ಕಾಂಗ್ರೆಸ್ ಪಕ್ಷವು ಖಂಡಿತ ಮು’ಳುಗಿ ಹೋಗಿ ಕಾಂಗ್ರೆಸ್ ಮುಕ್ತ ಭಾರತ ಎಂಬ ಬಿಜೆಪಿ ಪಕ್ಷದ ಕನಸು ನನಸಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಯಾಕೆಂದರೆ ನೂರು ಮುಖಂಡರ ರಾಜೀನಾಮೆ ಎಂದರೆ ಅದು ಸಾಮಾನ್ಯದ ವಿಷಯವಲ್ಲ.