ಐಪಿಎಲ್ ನಲ್ಲಿ ಆರೆಂಜ್ ಕ್ಯಾಪ್ ಗೆಲ್ಲಬಹುದಾದ ಟಾಪ್ 5 ಆಟಗಾರರನ್ನು ಆಯ್ಕೆ ಮಾಡಿದ ಕ್ರಿಕೆಟ್ ವಿಶ್ಲೇಷಕರು.

ಐಪಿಎಲ್ ನಲ್ಲಿ ಆರೆಂಜ್ ಕ್ಯಾಪ್ ಗೆಲ್ಲಬಹುದಾದ ಟಾಪ್ 5 ಆಟಗಾರರನ್ನು ಆಯ್ಕೆ ಮಾಡಿದ ಕ್ರಿಕೆಟ್ ವಿಶ್ಲೇಷಕರು.

ನಮಸ್ಕಾರ ಸ್ನೇಹಿತರೇ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ವಿಶ್ವದ ಅತಿ ಶ್ರೀಮಂತ ಎಂದೇ ಖ್ಯಾತಿ ಪಡೆದು ಕೊಂಡಿರುವ ಐಪಿಎಲ್ ಟೂರ್ನಿಯು ಆರಂಭವಾಗಲಿದೆ. ತಡವಾಗಿ ಆರಂಭವಾಗುತ್ತಿದ್ದರೂ ಕೂಡ ಐಪಿಎಲ್ ಟೂರ್ನಿಯು ಈ ಬಾರಿ ಮತ್ತಷ್ಟು ವರ್ಣರಂಜಿತವಾಗಿ ನಡೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಷ್ಟೇ ಅಲ್ಲದೆ ಅಭಿಮಾನಿಗಳು ಕೂಡ ಐಪಿಎಲ್ ಟೂರ್ನಿಗಾಗಿ ತುದಿಗಾಲಲ್ಲಿ ಕಾದು ಕುಳಿತಿದ್ದಾರೆ. ಈಗಾಗಲೇ ಪ್ರತಿಯೊಬ್ಬರೂ ತಮ್ಮದೇ ಆದ ಲೆಕ್ಕಾಚಾರಗಳಲ್ಲಿ ತೊಡಗಿಕೊಂಡಿದ್ದು, ಇನ್ನು ಕೆಲವೇ ಕೆಲವು ದಿನಗಳಲ್ಲಿ ಐಪಿಎಲ್ ಟೂರ್ನಿ ಆರಂಭವಾಗಲಿದೆ. ಇನ್ನು ಕ್ರಿಕೆಟ್ ವಿಶ್ಲೇಷಕರು ತಮ್ಮದೇ ಆದ ಲೆಕ್ಕಾಚಾರಗಳನ್ನು ಆರಂಭಿಸಿದ್ದು ಇದೀಗ ಈ ವರ್ಷದ ಐಪಿಎಲ್ ನಲ್ಲಿ ಆರೆಂಜ್ ಕ್ಯಾಪ್ ಅಂದರೆ ಅತಿ ಹೆಚ್ಚು ಗಳಿಸಬಹುದಾದ ಟಾಪ್ 5 ಆಟಗಾರರನ್ನು ಹೆಸರಿಸಿದ್ದಾರೆ. ಕ್ರಿಕೆಟ್ ವಿಶ್ಲೇಷಕರ ಆಯ್ಕೆಗಳು ಈ ಕೆಳಗಿನಂತೆ ಇದು ನಿಮ್ಮ ಅಭಿಪ್ರಾಯಗಳನ್ನು ತಿಳಿಸುವುದನ್ನು ಮರೆಯಬೇಡಿ.

5. ಜೋಸ್ ಬಟ್ಲರ್ – ಜೋಸ್ ಬಟ್ಲರ್ ಅವರು 2018 ರಲ್ಲಿ ಇನ್ನಿಂಗ್ಸ್ ಆರಂಭಿಕ ಸ್ಥಾನಕ್ಕೆ ಬಡ್ತಿ ಪಡೆದ ನಂತರ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಬಟ್ಲರ್ ಅವರು 2018 ರಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದ ಮೇಲೆ ರಾಯಲ್ಸ್ ಪರ ಕೆಲವು ಅದ್ಭುತ ಇನ್ನಿಂಗ್ಸ್ ಆಟವಾಡಿದ್ದಾರೆ. ಅವರು 2019 ರಲ್ಲಿ ಕೇವಲ 8 ಪಂದ್ಯಗಳಲ್ಲಿ 311 ರನ್ ಗಳಿಸಿದರೆ, 2018 ರಲ್ಲಿ 54.80 ರ ಸರಾಸರಿಯಲ್ಲಿ 548 ರನ್ ಗಳಿಸಿದರು. ಬಹುತೇಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಉತ್ತಮ ಸರಾಸರಿಯನ್ನು ನಿರ್ವಹಿಸುತ್ತಿದ್ದಾರೆ, ಆದರೆ ಕಳೆದ ಋತುವಿನಲ್ಲಿ ಅವರನ್ನು ರಾಷ್ಟ್ರೀಯ ಕರ್ತವ್ಯಕ್ಕೆ ಕರೆಸಿಕೊಂಡಿದ್ದರಿಂದ ಅರ್ಧಕ್ಕೆ ಟೂರ್ನಿಯನ್ನು ಬಿಟ್ಟು ಹೋಗಿದ್ದರು. ಆದರೆ ಈ ಆರಿ ಜೋಸ್ ಬಟ್ಲರ್ ರವರು ಇಡೀ ಐಪಿಎಲ್ ಆಡುವ ನಿರೀಕ್ಷೆಯಿದೆ.

4. ರೋಹಿತ್ ಶರ್ಮಾ: ರೋಹಿತ್ ಶರ್ಮಾ ರವರು ಕಳೆದ ಒಂದೆರಡು ವರ್ಷಗಳಲ್ಲಿ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಲ್ಲಿ ಯಶಸ್ವಿಯಾಗಿದ್ದರೂ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫವಾಗಿದ್ದಾರೆ, ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕಾರಣ ರೋಹಿತ್ ಶರ್ಮ ರವರು ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬುದು ಕ್ರಿಕೆಟ್ ವಿಶ್ಶ್ಲೇಷಕರ ಲೆಕ್ಕಾಚಾರವಾಗಿದೆ.

3.ವಿರಾಟ್ ಕೊಹ್ಲಿ: ಒಮ್ಮೆಯೂ ಐಪಿಎಲ್ ಗೆಲ್ಲದೆ ಇದ್ದರೂ ಕೂಡ ಎಂದಿಗೂ ನಾಯಕನ ವರ್ಚಸ್ಸಿಗೆ ಧಕ್ಕೆ ಬರದಂತೆ ವಿರಾಟ್ ಕೊಹ್ಲಿ ಅವರು ಪ್ರತಿ ಋತುವಿನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಕಳೆದ ಮೂರು ಐಪಿಎಲ್ ಟೂರ್ನಿಗಳಲ್ಲಿ ಆರ್ಸಿಬಿ ತಂಡವು ಪ್ಲೇ ಆಫ್ ತಲುಪುವುದರಲ್ಲಿ ವಿಫಲವಾಗಿದ್ದರೂ ಕೂಡ ವಿರಾಟ್ ಕೊಹ್ಲಿ ರನ್ ಗಳಿಸುವುದನ್ನು ಮಾತ್ರ ಕಡಿಮೆ ಮಾಡಿಲ್ಲ. ಇನ್ನು ಸದಾ ವಿರಾಟ್ ಕೊಹ್ಲಿ ರವರ ಬ್ಯಾಟ್ನಿಂದ ಹರಿದು ಬರುವ ಕಾರಣ ಈ ಬಾರಿಯೂ ಕೂಡ ವಿರಾಟ್ ಕೊಹ್ಲಿ ರವರು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬುದು ಕ್ರಿಕೆಟ್ ವಿಶ್ಲೇಷಕರ ಲೆಕ್ಕಾಚಾರವಾಗಿದೆ.

2. ಡೇವಿಡ್ ವಾರ್ನರ್: ಇನ್ನುಳಿದಂತೆ ಎರಡನೇ ಸ್ಥಾನದಲ್ಲಿ ಡೇವಿಡ್ ವಾರ್ನರ್ ಅವರು ಸ್ಥಾನ ಪಡೆದುಕೊಂಡಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಒಂದು ವರ್ಷದ ನಿಷೇಧದ ನಂತರ ವಾಪಸಾದ ಬಳಿಕ ಡೇವಿಡ್ ವಾರ್ನರ್ ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಾ ಎಲ್ಲಾ ಪಂದ್ಯಗಳಲ್ಲಿಯು ಮಿಂಚುತ್ತಿದ್ದಾರೆ. ಇನ್ನು ಲಾಕ್ಡೌನ್ ಸಂದರ್ಭದಲ್ಲಿಯೂ ಉತ್ತಮ ಅಭ್ಯಾಸ ನಡೆಸಿ ರುವ ಕಾರಣ ಡೇವಿಡ್ ವಾರ್ನರ್ ಅವರು ಈ ಬಾರಿಯ ಆರೆಂಜ್ ಕ್ಯಾಪ್ ಗೆಲ್ಲಬಹುದು ಎಂಬುದು ಕ್ರಿಕೆಟ್ ವಿಶ್ಲೇಷಕರ ಲೆಕ್ಕಾಚಾರವಾಗಿದೆ.

1.ಕೆಎಲ್ ರಾಹುಲ್: ಇನ್ನು ಮೊದಲನೇ ಸ್ಥಾನದಲ್ಲಿ ನ್ಯೂಜಿಲೆಂಡ್ ಸರಣಿಯಲ್ಲಿ ಅತ್ಯುತ್ತಮವಾದ ಪ್ರದರ್ಶನ ನೀಡಿ, ಯಾವುದೇ ಸ್ಥಾನದಲ್ಲಿ ಬೇಕಾದರೂ ಆಟವಾಡ ಬಲ್ಲೆ ಎಂಬುದನ್ನು ತೋರಿಸಿಕೊಟ್ಟ ಕೆಎಲ್ ರಾಹುಲ್ ರವರು ಸ್ಥಾನ ಪಡೆದುಕೊಂಡಿದ್ದಾರೆ. ಈಗಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್ ಸೇರಿದಂತೆ ದೇಶೀಯ ಕ್ರಿಕೆಟ್ ನಲ್ಲಿಯೂ ಕೂಡ ಉತ್ತಮ ಪ್ರದರ್ಶನ ನೀಡಿರುವ ಕಾರಣ ಕೆ ಎಲ್ ರಾಹುಲ್ ರವರು ಖಂಡಿತ ಈ ಬಾರಿ ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಇವರು ಆರೆಂಜ್ ಕ್ಯಾಪ್ ಗೆಲ್ಲುವ ಮೊದಲನೇ ಆಟಗಾರನಾಗಿ ಕಂಡುಬರುತ್ತಾರೆ ಎಂದು ಕ್ರಿಕೆಟ್ ವಿಶ್ಲೇಷಕರು ಹೇಳುತ್ತಾರೆ.