ಕಾಶ್ಮೀರದಲ್ಲಿ ಮತ್ತೊಂದು ಮಹತ್ವದ ವಿದ್ಯಮಾನ ! ಅಖಾಡಕ್ಕೆ ಮತ್ತೊಮ್ಮೆ ಇಳಿಯುತ್ತಾರಾ ಅಮಿತ್ ಶಾ?

ಕಾಶ್ಮೀರದಲ್ಲಿ ಮತ್ತೊಂದು ಮಹತ್ವದ ವಿದ್ಯಮಾನ ! ಅಖಾಡಕ್ಕೆ ಮತ್ತೊಮ್ಮೆ ಇಳಿಯುತ್ತಾರಾ ಅಮಿತ್ ಶಾ?

ನಮಸ್ಕಾರ ಸ್ನೇಹಿತರೇ, ಕಳೆದ ಸರಿ ಸುಮಾರು ಒಂದು ವರ್ಷದ ಹಿಂದೆ ಮೋದಿ ನೇತೃತ್ವದ ಸರ್ಕಾರವು ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಮಾಡಿ ಐತಿಹಾಸಿಕ ನಿರ್ಣಯ ಕೈಗೊಂಡಿತ್ತು. ಇದರಿಂದ ಭಾರತಕ್ಕೆ ಸಾವಿರಾರು ಕೋಟಿಗಳ ವರ್ಷಕ್ಕೆ ಉಳಿತಾಯ ವಾಗುತ್ತಿತ್ತು ಹಾಗೂ ಇದರಿಂದ ಕಾಶ್ಮೀರದಲ್ಲಿ ಅಭಿವೃದ್ಧಿಯ ಪರ್ವ ಕೂಡ ಪರ್ವ ಕೂಡಾ ಆರಂಭವಾಗಿದೆ. ಮಲ್ಟಿನ್ಯಾಷನಲ್ ಕಂಪನಿಗಳು ಕಾಶ್ಮೀರದಲ್ಲಿ ತಮ್ಮ-ತಮ್ಮ ಮಳಿಗೆಗಳನ್ನು ತೆರೆಯಲು ಆರಂಭಿಸಿವೆ, ಹಲವಾರು ಆಸ್ಪತ್ರೆಗಳು, ರಸ್ತೆಗಳು ಹಾಗೂ ಕಾಲೇಜುಗಳ ಬಳಿಕ ಇದೀಗ ಕೆಎಫ್ಸಿ ಸೇರಿದಂತೆ ಇನ್ನಿತರ ಸಾಮಾನ್ಯ ಸ್ಟೋರ್ ಗಳು ಕೂಡ ತಮ್ಮ ತಮ್ಮ ಮಳಿಗೆಗಳನ್ನು ಆರಂಭಿಸುತ್ತಿದ್ದಾರೆ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಕಾರಣ ಜಮ್ಮು ಹಾಗೂ ಕಾಶ್ಮೀರ ದಿಂದ ಇತ್ತೀಚಿಗೆ ಹತ್ತು ಸಾವಿರ ಸೈನಿಕರನ್ನು ವಾಪಸ್ಸು ಕರೆದುಕೊಂಡ ಘಟನೆ ಕೂಡ ನಡೆದಿದೆ.

ಆದರೆ 10,000 ಭಾರತೀಯ ಸೈನಿಕರು ವಾಪಸ್ಸು ಬಂದ ಎರಡು-ಮೂರು ದಿನಗಳಲ್ಲಿ ಇದೀಗ ಮತ್ತೊಂದು ಮಹತ್ವದ ಘಟನೆ ನಡೆದಿದ್ದು ಜಮ್ಮು ಹಾಗೂ ಕಾಶ್ಮೀರದ ಆರು ಪ್ರಮುಖ ಪಕ್ಷಗಳು ಜಮ್ಮು ಹಾಗೂ ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಕುರಿತು ಚರ್ಚೆ ಆರಂಭಿಸಿವೆ. ಈ ಪಕ್ಷಗಳ ಬಹುತೇಕ ನಾಯಕರನ್ನು ಶಾಂತಿ ಕಾಪಾಡುವ ಆಧಾರದ ಮೇಲೆ ಗೃಹ ಬಂಧ- ನದಲ್ಲಿ ಇರಿಸಲಾಗಿತ್ತು, ಇತ್ತೀಚೆಗೆ ಕ್ರಮೇಣ ಒಬ್ಬೊಬ್ಬರನ್ನಾಗಿ ಬಿಡುಗಡೆ ಮಾಡಲಾಗಿತ್ತು. ಆದರೆ ಎಲ್ಲರೂ ಬಿಡುಗಡೆಯಾದ ಕೆಲವು ದಿನಗಳ ಬಳಿಕ ಸಾಮಾನ್ಯ ಸ್ಥಿತಿ ಇದೆ ಎಂದು ಸೈನಿಕರು ವಾಪಸ್ಸು ಮರಳಿದ ಸಂದರ್ಭದಲ್ಲಿ ಇದೀಗ ಮತ್ತೊಮ್ಮೆ ಜಮ್ಮು ಹಾಗೂ ಕಾಶ್ಮೀರ ದಲ್ಲಿ ವಿಶೇಷ ಸ್ಥಾನಮಾನದ ಕುರಿತು ಚರ್ಚೆ ಆರಂಭಿಸಲಾಗಿದೆ.

6 ಪಕ್ಷದ ಪ್ರಮುಖ ನಾಯಕರು ಆರಂಭಿಸಿದ್ದನ್ನು ನೋಡಿ ಕಾಂಗ್ರೆಸ್ ಪಕ್ಷ ಕೂಡ ಈ ಸಭೆಗೆ ಬೆಂಬಲ ಸೂಚಿಸಿದ್ದು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿರುವ ಪಿ ಚಿದಂಬರಂ ರವರು, ಮಹತ್ವದ ಹೇಳಿಕೆ ನೀಡಿದ್ದಾರೆ. ಹೌದು ಸ್ನೇಹಿತರೇ, ಆರು ಪ್ರಮುಖ ವಿರೋಧ ಪಕ್ಷಗಳು ವಿಶೇಷ ಸ್ಥಾನಮಾನ ಪದ್ಧತಿಯ ಕುರಿತು ಹೋ’ರಾಟ ಮಾಡಲು ತೋರುತ್ತಿರುವ ಧೈರ್ಯ ಹಾಗೂ ಒಗ್ಗಟ್ಟಿಗೆ ನನ್ನ ಸೆಲ್ಯೂಟ್ ಎಂದು ಟ್ವೀಟ್ ಮಾಡಿದ್ದಾರೆ. ಇದೀಗ ಜಮ್ಮು ಹಾಗೂ ಕಾಶ್ಮೀರ ದಲ್ಲಿ ರಾಜಕೀಯ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ವಿಶೇಷ ಸ್ಥಾನಮಾನ ರದ್ದತಿಯ ಕುರಿತು ಮಹತ್ವದ ರಾಜಕೀಯ ದೊಂಬರಾಟ ಗಳು ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಬೆನ್ನಲ್ಲೇ ಈ ಕುರಿತು ಅಮಿತ್ ಶಾ ರವರು ಸಂಪೂರ್ಣ ಗಮನ ಹರಿಸಿದ್ದು, ಯಾವುದೇ ಕ್ಷಣದಲ್ಲಿ ಬೇಕಾದರೂ ಅಮಿತ್ ಶಾ ರವರು ಜಮ್ಮು ಹಾಗೂ ಕಾಶ್ಮೀರ ದ ವಿಚಾರವಾಗಿ ಮತ್ತೊಮ್ಮೆ ಕ’ಠಿಣ ನಿರ್ಧಾರ ತೆಗೆದು ಕೊಳ್ಳಬಹುದು ಎಂಬ ಮಾಹಿತಿ ಕೇಳಿ ಬಂದಿದೆ. ಆದರೆ ಅಮಿತ್ ಶಾ ರವರ ನಡೆ ಈಗಲೂ ಕೂಡ ನಿಗೂ’ಢವಾಗಿದೆ.