ಗಡಿಯಲ್ಲಿ ಬಿಗಡಾಯಿಸುತ್ತಿದೆ ಪರಿಸ್ಥಿತಿ ! ಬಿಪಿನ್ ರಾವತ್ ಮಹತ್ವದ ಹೇಳಿಕೆ ! ಒಂದು ವೇಳೆ ಮುಂದಿನ ಮಾತುಕತೆ ವಿಫಲವಾದರೇ ??

ಗಡಿಯಲ್ಲಿ ಬಿಗಡಾಯಿಸುತ್ತಿದೆ ಪರಿಸ್ಥಿತಿ ! ಬಿಪಿನ್ ರಾವತ್ ಮಹತ್ವದ ಹೇಳಿಕೆ ! ಒಂದು ವೇಳೆ ಮುಂದಿನ ಮಾತುಕತೆ ವಿಫಲವಾದರೇ ??

ನಮಸ್ಕಾರ ಸ್ನೇಹಿತರೇ ಇದೀಗ ಚೀನಾ ದೇಶವು ದಿನಕ್ಕೊಂದು ರೀತಿಯಲ್ಲಿ ಸುಖಾ ಸುಮ್ಮನೆ ಭಾರತದ ಜೊತೆ ಕ್ಯಾತೆ ತೆಗೆಯುತ್ತಿದೆ. ಗಡಿಯಲ್ಲಿ ಶಾಂತಿ ಬಯಸುತ್ತೇವೆ ಎನ್ನುವ ಚೀನಾ ದೇಶವು ಇಲ್ಲಿಯವರೆಗೂ ಒಮ್ಮೆಯೂ ಕೂಡ ತನ್ನ ಮಾತಿಗೆ ತಕ್ಕಂತೆ ನಡೆದು ಕೊಂಡಿಲ್ಲ. ಒಂದೆಡೆ ಹಿಂದಕ್ಕೆ ಸರಿದು ಮತ್ತೊಂದೆಡೆ ಸೇನಾ ಜಮಾವಣೆ ಹೆಚ್ಚು ಮಾಡುವುದು ಚೀನಾ ದೇಶದ ಕೆಲಸವಾಗಿ ಬಿಟ್ಟಿದೆ. ಗಡಿಗಳಿಂದ ಸೇನೆಯನ್ನು ಹಿಂತೆಗೆದುಕೊಳ್ಳಲು ಭಾರತ ಹಾಗೂ ಚೀನಾ ದೇಶದ ಸೇನಾಧಿಕಾರಿಗಳು ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಿದ್ದಾರೆ. ಆದರೆ ಚೀನಾ ದೇಶದ ಭರವಸೆಗಳು ಕೇವಲ ಮಾತುಕತೆಯಲ್ಲಿ ಒಪ್ಪಿಗೆ ಸೂಚಿಸುವುದಕ್ಕೆ ಮಾತ್ರ ಸೀಮಿತವಾಗಿದೆ, ಹಿಂದೆ ಸರಿಯುವುದು ಏನೋ ನಿಜ ಆದರೆ ಅಲ್ಲಿ ಮತ್ತೊಮ್ಮೆ ಹೆಚ್ಚು ಸೇನಾ ಜಮಾವಣೆ ಮಾಡುವ ಮೂಲಕ ಚೀನಾ ದೇಶ ಸುಖಾ ಸುಮ್ಮನೆ ಗಡಿಯಲ್ಲಿ ಕಾವು ಏರಿಸುತ್ತಿದೆ.

ಇದೀಗ ಇದರಿಂದ ಸೇನ ಅಧ್ಯಕ್ಷರು ಗರಂ ಆಗಿದ್ದು ಮಹತ್ವದ ಹೇಳಿಕೆಯೊಂದನ್ನು ನೀಡಿ ದ್ದಾರೆ. ಹೌದು ಸ್ನೇಹಿತರೇ ಇದೀಗ ಕೈಲಾಸ ಪರ್ವತದ ಬಳಿ ಚೀನಾ ದೇಶವು ಹೆಚ್ಚು ಸೇನಾ ಜಮಾವಣೆ ಮಾಡುತ್ತಿರುವ ಸುದ್ದಿ ಕೇಳಿ ಬಂದ ತಕ್ಷಣವೇ ಮೂರು ಭಾರತೀಯ ಸೇನಾ ಪಡೆಗಳ ಜೊತೆ ಮಹತ್ವದ ಮಾತುಕತೆ ನಡೆಸುತ್ತ ಬಿಪಿನ್ ರಾವತ್ ರವರು ಮಾತುಕತೆಯ ಬಳಿಕ, ಎರಡು ಸೇನೆಗಳ ನಡುವೆ ಮಾತುಕತೆ ಹಾಗೂ ರಾಜತಾಂತ್ರಿಕ ಮಾತುಕತೆಗಳು ವಿಫಲವಾದರೆ ಭಾರತೀಯ ಸೇನೆಯ ಮೇಜಿನ ಬಳಿ ಮಿಲಿಟರಿ ಆಯ್ಕೆ ಕೂಡ ಇದೆ ಎಂದು ಚೀನಾ ದೇಶಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ. ಒಂದು ವೇಳೆ ಇದೇ ರೀತಿ ಮಾತುಕತೆಗಳು ವಿಫಲವಾಗುತ್ತಿದ್ದಾರೆ ಭಾರತೀಯ ಸೇನೆಯು ಮಿಲಿಟರಿ ನಿರ್ಧಾರ ಕೈಗೊಂಡರು ಅಚ್ಚರಿಪಡಬೇಕಾಗಿಲ್ಲ.

ಭಾರತದ ಗಡಿ ಪ್ರದೇಶದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಕಾರ್ಯಕ್ರಮಗಳು ಆದ್ಯತೆಯಿಂದ ನಡೆಯುತ್ತಿವೆ, ಯಥಾಸ್ಥಿತಿ ಕಾಯ್ದುಕೊಳ್ಳಲು ಭಾರತ ಪ್ರಯತ್ನಿಸುತ್ತದೆ, ಎಲ್ಲಾ ಮೂರು ಪಡೆಗಳಿಗೂ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ ನೀಡಿದ್ದರೂ ಕೂಡ ಚೀನಾ ದೇಶದ ಕಡೆಯಿಂದ ಯಾವುದಾದರೂ ಚಿಕ್ಕ ತೊಂ’ದರೆ ಉಂಟಾದರೂ ಭಾರತೀಯ ಸೇನೆಯು ಸುಮ್ಮನೆ ಕೂರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಇನ್ನು ಚೀನಾ ದೇಶವು ಇದೀಗ ಬಂದ ವರದಿಯ ಪ್ರಕಾರ ಕೈಲಾಸ ಪರ್ವತದ ಸುತ್ತ ಹಲವಾರು ಸೇನಾ ತುಕಡಿಗಳನ್ನು ಜಮಾವಣೆ ಮಾಡಿ ಭೂಮಿಯಿಂದ ಗಾಳಿಗೆ ಹಾರುವ ಕ್ಷಿಪಣಿಗಳನ್ನು ನಿಯೋಜಿಸಿದೆ ಎಂಬುದು ತಿಳಿದು ಬಂದಿದೆ.