ವಿದಾಯ ಪಂದ್ಯವಾಡದ 11 ಆಟಗಾರರ ತಂಡ ರಚಿಸಿ, ಪಂದ್ಯವಾಡಿಸಿ ಎಂದ ಇಫ್ರಾನ್ ಪಠಾಣ್ !

ವಿದಾಯ ಪಂದ್ಯವಾಡದ 11 ಆಟಗಾರರ ತಂಡ ರಚಿಸಿ, ಪಂದ್ಯವಾಡಿಸಿ ಎಂದ ಇಫ್ರಾನ್ ಪಠಾಣ್ !

ನಮಸ್ಕಾರ ಸ್ನೇಹಿತರೇ, ಭಾರತ ಕ್ರಿಕೆಟ್ ತಂಡದಲ್ಲಿ ಯಾವುದಾದರೂ ಒಬ್ಬ ಆಟಗಾರರು ನಿವೃತ್ತಿ ನೀಡಿದ ತಕ್ಷಣ ಮೊದಲಿಗೆ ಕೇಳಿ ಬರುವುದು ವಿದಾಯದ ಪಂದ್ಯ. ರಾಷ್ಟ್ರಕ್ಕಾಗಿ ಹಲವಾರು ವರ್ಷಗಳ ಕಾಲ ಕ್ರಿಕೆಟ್ ತಂಡದಲ್ಲಿ ಸೇವೆ ಸಲ್ಲಿಸಿ ತಮ್ಮ ವಿದಾಯದ ಪಂದ್ಯದಲ್ಲಿ ಭಾಗವಹಿಸದೆ ತೆರಳಿದರೇ ಅಭಿಮಾನಿಗಳಲ್ಲಿ ಭಾರೀ ನಿರಾಶೆ ಉಂಟಾಗುತ್ತದೆ. ಹಲವಾರು ದಿಗ್ಗಜ ಆಟಗಾರರು ವಿದಾಯದ ಪಂದ್ಯವನ್ನು ಕಾಣದೇ ತಂಡದಿಂದ ನಿರ್ಗಮಿಸಿದ್ದಾರೆ ಹಾಗೂ ಸಾಮಾನ್ಯ ಆಟಗಾರರಲ್ಲ ಬದಲಾಗಿ ಹಲವಾರು ದಿಗ್ಗಜ ಆಟಗಾರರು ಕೂಡ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದಾರೆ.

ಕೆಲವರಿಗೆ ಬಿಸಿಸಿಐ ಸಂಸ್ಥೆಯು ಅವಕಾಶ ನೀಡುವುದಿಲ್ಲ, ಇನ್ನೂ ಕೆಲವರು ಅವಕಾಶ ಸಿಕ್ಕರೂ ಕೂಡ ಸಂತೋಷದಿಂದ ತಂಡದಿಂದ ನಿರ್ಗಮಿಸುತ್ತಿದ್ದೇವೆ ಎಂದು ಹೇಳಿ ಮೈದಾನದಿಂದ ಹೊರಗಡೆ ನಿವೃತ್ತಿ ಘೋಷಣೆ ಮಾಡುತ್ತಾರೆ. ಇದೀಗ ಮಹೇಂದ್ರ ಸಿಂಗ್
ಧೋನಿ ರವರು ಪಂದ್ಯಗಳು ನಡೆಯದೆ ಇದ್ದ ಸಮಯದಲ್ಲಿ ನಿವೃತ್ತಿ ಘೋಷಣೆ ಆಗಿರುವ ಕಾರಣ, ಧೋನಿ ರವರಿಗೆ ವಿದಾಯದ ಪಂದ್ಯವನ್ನು ಆಯೋಜಿಸುತ್ತಾರೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ. ಇದು ಕೇವಲ ಒಬ್ಬರ ಕಥೆಯಲ್ಲ, ಇನ್ನು ಧೋನಿ ರವರಿಗೆ ವಿದಾಯದ ಪಂದ್ಯವಾಡಲು ಅವಕಾಶವಿತ್ತು ಆದರೆ ಇನ್ನೂ ಕೆಲವು ದಿಗ್ಗಜರಿಗೆ ವಿದಾಯದ ಪಂದ್ಯಗಳನ್ನು ಆಟವಾಡಲೂ ಕೂಡ ಬಿಸಿಸಿಐ ಸಂಸ್ಥೆಯು ಅವಕಾಶ ನೀಡಲಿಲ್ಲ.

ಇದೀಗ ಇತರ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟ್ ಆಟಗಾರ ಇಫ್ರಾನ್ ಪಠಾಣ್ ರವರು ವಿದಾಯದ ಪಂದ್ಯಗಳಲ್ಲಿ ಆಟವಾಡದ ಆಟಗಾರರನ್ನು ಆಯ್ಕೆ ಮಾಡಿ ತಂಡವೊಂದನ್ನು ರಚಿಸಿದ್ದು, ಈ ಎಲ್ಲಾ ಕ್ರಿಕೆಟ್ ಆಟಗಾರರು ವಿದಾಯದ ಪಂದ್ಯಗಳಲ್ಲಿ ಆಟವಾಡುವ ಅವಕಾಶ ಪಡೆದುಕೊಂಡಿಲ್ಲ. ಆದ ಕಾರಣದಿಂದ ಈ ತಂಡ ಹಾಗೂ ಇಂದಿನ ಭಾರತೀಯ ಕ್ರಿಕೆಟ್ ತಂಡದ ನಡುವೆ ಪಂದ್ಯ ಏರ್ಪಡಿಸಿ, ಬಂದ ಹಣವನ್ನು ಯಾವುದಾದರೂ ‌ಉತ್ತಮ ಕಾರ್ಯಕ್ಕೆ ದೇಣಿಗೆಗೆ ಉಪಯೋಗಿಸಿ ಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ. ಇಫ್ರಾನ್ ಪಠಾಣ್ ರವರು ಆಯ್ಕೆ ಮಾಡಿರುವ ತಂಡ ಈ ಕೆಳಗಿನಂತೆ ಇದ್ದು, ಇವರ ಈ ಆಲೋಚನೆಯ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ. ಇರ್ಫಾನ್ ಪಠಾಣ್ ಅವರ ವಿದಾಯ ಇಲೆವೆನ್: ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ವಿ.ವಿ.ಎಸ್. ಲಕ್ಷ್ಮಣ್, ಯುವರಾಜ್ ಸಿಂಗ್, ಸುರೇಶ್ ರೈನಾ, ಎಂ.ಎಸ್.ಧೋನಿ, ಇರ್ಫಾನ್ ಪಠಾಣ್, ಅಜಿತ್ ಅಗರ್ಕರ್, ಜಹೀರ್ ಖಾನ್, ಪ್ರಜ್ಞಾನ್ ಓಜಾ