ಸಿಬಿಐ ಅಖಾಡಕ್ಕೆ ಇಳಿದ ಕೂಡಲೇ ಹೊರಬೀಳುತ್ತಿವೆ ಶಾಕಿಂಗ್ ಮಾಹಿತಿಗಳು ! ಮಹಾರಾಷ್ಟ್ರ ಪೊಲೀಸರ ಮೇಲೆ ಮತ್ತಷ್ಟು ಅನುಮಾನ

ನಮಸ್ಕಾರ ಸ್ನೇಹಿತರೇ, ಹಲವಾರು ದಿನಗಳಿಂದ ಜನ ಸಾಮಾನ್ಯರು ಸೇರಿದಂತೆ ಹತ್ತು ಹಲವಾರು ಸೆಲೆಬ್ರಿಟಿಗಳು ಹಾಗೂ ವಿವಿಧ ನಾಯಕರು ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯ ತನಿಖೆಯನ್ನು ಸಿಬಿಐ ಸಂಸ್ಥೆಗೆ ವರ್ಗಾಯಿಸಬೇಕು ಎಂದು ಪಟ್ಟು ಹಿಡಿದಿದ್ದರು. ಕೊನೆಗೂ ಸುಪ್ರೀಂಕೋರ್ಟ್ ಎಲ್ಲಾ ವಾದವಿವಾದಗಳನ್ನು ಆಲಿಸಿ ಸುಶಾಂತ್ ಸಿಂಗ್ ರಜಪೂತ್ ಅವರ ಘಟನೆಯ ತನಿಖೆ ಪ್ರಕರಣವನ್ನು ಮುಂಬೈ ಹಾಗೂ ಪಾಟ್ನಾ ಪೊಲೀಸರಿಂದ ಸಿಬಿಐ ಸಂಸ್ಥೆಗೆ ವರ್ಗಾವಣೆ ಮಾಡಿದೆ. ಸಿಬಿಐ ಸಂಸ್ಥೆಗೆ ವರ್ಗಾವಣೆ ಮಾಡಿದಂತೆ ತನಿಖೆ ಚುರುಕುಗೊಳಿಸಿದ್ದು ಶಾಕಿಂಗ್ ಮಾಹಿತಿಗಳು ಹೊರಬೀಳುತ್ತಿವೆ.

ಹೌದು ಸ್ನೇಹಿತರೆ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯ ಕುರಿತು ಇದೀಗ ತನಿಖೆ ಆರಂಭಿಸಿರುವ ಸಿಸಿಬಿ ಪೊಲೀಸರು ಮೊದಲನೇ ಹಂತದಲ್ಲಿಯೇ ಹಲವಾರು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ, ಮಹಾರಾಷ್ಟ್ರ ಪೊಲೀಸರ ಬೆನ್ನತ್ತಿರುವ ಸಿಬಿಐ ಸಂಸ್ಥೆಯು ಯಾಕೆ ಸುಶಾಂತ್ ಸಿಂಗ್ ರಜಪೂತ್ ರವರ ಮರ’- ಣೋತ್ತರ ಪರೀಕ್ಷೆಯನ್ನು ಸರಿಯಾಗಿ ನಡೆಸಿಲ್ಲ, ಘಟನೆ ನಡೆದ ಸಮಯ ಸ್ಥಳಗಳ ಕುರಿತು ಮರ’- ಣೋತ್ತರ ಪರೀಕ್ಷೆಯಲ್ಲಿ ಯಾವುದೇ ವಿವರಗಳನ್ನು ನೀಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಹಾರಾಷ್ಟ್ರ ಪೊಲೀಸರು
ಸುಶಾಂತ್ ಸಿಂಗ್ ರಜಪೂತ್ ರವರ ಮರ’- ಣೋತ್ತರ ಪರೀಕ್ಷೆಗಾಗಿ ವೈದ್ಯರನ್ನಾಗಲಿ ಅಥವಾ ತಜ್ಞರನ್ನಾಗಲಿ ಸಂಪರ್ಕ ಮಾಡಿಲ್ಲ.

ಇನ್ನು ಸಿಬಿಐ ಸಂಸ್ಥೆಯು ಎಲ್ಲಾ ವಿವರಗಳನ್ನು ಕಲೆ ಹಾಕುವ ಮುನ್ನ ಮೊದಲಿಗೆ ಸುಶಾಂತ್ ಸಿಂಗ್ ರಜಪೂತ್ ರವರ ಅಪಾರ್ಟ್ಮೆಂಟ್ಗೆ ತೆರಳಿ ಪರಿಶೀಲನೆ ನಡೆಸಲು ಮುಂದಾದಾಗ, ಮಹಾರಾಷ್ಟ್ರ ಪೊಲೀಸರು ಸಿಬಿಐ ತನಿಖಾಧಿಕಾರಿಗಳಿಗಿಂತ ಮುಂದೆ ಹೋಗಿ ಅಪಾರ್ಟ್ಮೆಂಟ್ನಲ್ಲಿ ಅನುಮಾನ ಬರುವಂತೆ ಕೆಲವೊಂದು ನಡೆಗಳನ್ನು ಅನುಸರಿಸಿದ್ದಾರೆ. ಅಪಾರ್ಟ್ಮೆಂಟ್ ಭದ್ರತಾ ಸಿಬ್ಬಂದಿಯನ್ನು ಮಹಾರಾಷ್ಟ್ರ ಪೊಲೀಸರು ಪ್ರಶ್ನೆ ಮಾಡುತ್ತಿರುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ರಿಪಬ್ಲಿಕ್ ಟಿವಿ ಮಾಧ್ಯಮ ವರದಿ ಮಾಡಲು ಆರಂಭಿಸಿದಂತೆ ಮಹಾರಾಷ್ಟ್ರ ಪೊಲೀಸರು ಕಕ್ಕಾಬಿಕ್ಕಿಯಾಗಿದ್ದಾರೆ, ನೀವು ಯಾವ ಕಾರಣಕ್ಕೆ ಸಿಬಿಐ ತನಿಖಾಧಿಕಾರಿಗಳು ಇಲ್ಲಿಗೆ ಬರುವ ಮುನ್ನವೇ ಭದ್ರತಾ ಸಿಬ್ಬಂದಿಯನ್ನು ಪ್ರಶ್ನೆ ಮಾಡುತ್ತಿದ್ದೀರಾ ಎಂದು ಕೇಳಿದರೆ ನಾವು ನೀರು ಕುಡಿಯಲು ಅಪಾರ್ಟ್ಮೆಂಟ್ಗೆ ಬಂದಿದ್ದೇವೆ ಎಂದು ಉತ್ತರ ಹೇಳಿ ಜಾರಿಕೊಂಡಿದ್ದಾರೆ. ಮಹಾರಾಷ್ಟ್ರ ಪೊಲೀಸರ ಈ ಎಲ್ಲಾ ನಡೆಗಳಿಂದ ದಿನೇ ದಿನೇ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯಲ್ಲಿ ಅನುಮಾನಗಳು ಹೆಚ್ಚಾಗುತ್ತಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Post Author: Ravi Yadav