ಭರ್ಜರಿ ಸಿಹಿ ಸುದ್ದಿ ನೀಡಿದ ಐಸಿಎಂರ್ ನಿರ್ದೇಶಕರು ! ಮನಸ್ಸು ಮಾಡುತ್ತಾರಾ ಮೋದಿ?

ಭರ್ಜರಿ ಸಿಹಿ ಸುದ್ದಿ ನೀಡಿದ ಐಸಿಎಂರ್ ನಿರ್ದೇಶಕರು ! ಮನಸ್ಸು ಮಾಡುತ್ತಾರಾ ಮೋದಿ?

ನಮಸ್ಕಾರ ಸ್ನೇಹಿತರೇ ಇದೀಗ ನಮ್ಮ ದೇಶದಲ್ಲಿ ಅಲ್ಲದೆ ವಿಶ್ವದ ಪ್ರತಿಯೊಬ್ಬರು ಕೋರೋನ ಲಸಿಕೆ ಯಾವಾಗ ಬರುತ್ತದೆ ಎಂದು ಕಾದು ಕುಳಿತಿದ್ದಾರೆ. ಹಲವಾರು ತಿಂಗಳುಗಳಿಂದ ಚೀನಿ ವೈರಸ್ನಿಂದ ಇಡಿ ವಿಶ್ವವೇ ಬಹುತೇಕ ನಿಂತು ಹೋಗಿದೆ. ಇತ್ತೀಚಿಗೆ ಎಲ್ಲಾ ದೇಶಗಳಲ್ಲೂ ಲಾಕ್ಡೌನ್ ತೆಗೆದರೂ ಕೂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಮನೆಯಿಂದ ಹೊರಗಡೆ ಕಾಲಿಡುವಂತಿಲ್ಲ. ಯಾವಾಗ ಕೊರೋನಾ ವಕ್ಕರಿಸುತ್ತದೆಯೋ ಎಂದು ಎಲ್ಲರೂ ಆತಂ’ ಕಗೊಂಡಿದ್ದಾರೆ. ಇನ್ನು ರಷ್ಯಾ ದೇಶದ ಲಸಿಕೆ ಬಿಡುಗಡೆ ಮಾಡಿದ್ದರು ಕೂಡ ವಿಶ್ವದ ಯಾವುದೇ ರಾಷ್ಟ್ರಗಳು ನಂಬಲು ತಯಾರಿಲ್ಲ. ಇದರ ನಡುವೆಯೇ ಭಾರತದಲ್ಲಿ ಸ್ವದೇಶಿ ಲಸಿಕೆ ತಯಾರಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಒಂದು ವೇಳೆ ಭಾರತದಲ್ಲಿ ನಡೆಸುತ್ತಿರುವ ಪ್ರಯೋಗಗಳು ಸಂಪೂರ್ಣ ಯಶಸ್ವಿಗೊಂಡರೇ ಇಡೀ ವಿಶ್ವವು ಭಾರತದ ಕದ ತಟ್ಟಲಿದೆ. ಈಗಾಗಲೇ ಹಲವಾರು ರಾಷ್ಟ್ರಗಳು ಕೋರೋನ ವೈರಸ್ಗೆ ಲಸಿಕೆ ಕಂಡು ಹಿಡಿಯುವ ತಾಕತ್ತಿರುವುದು ಭಾರತ ದೇಶಕ್ಕೆ ಮಾತ್ರ, ಇಡೀ ದೇಶವೇ ಭಾರತ ಲಸಿಕೆ ತಯಾರು ಮಾಡಿದೆ ಎಂದರೇ ನಂಬಿ ಕರೀದಿ ಮಾಡಲು ಮುಗಿಬೀಳುತ್ತಾರೆ ಎಂದು ಹೇಳಿವೆ. ಇನ್ನು ರಷ್ಯಾ ಹಾಗೂ ಚೀನಾ ದೇಶಗಳ ಮೇಲೆ ಯಾವುದೇ ರಾಷ್ಟ್ರಗಳು ಭರವಸೆ ನೀಡುವ ಗೋಜಿಗೂ ಕೂಡ ಹೋಗಿಲ್ಲ.

ಹೀಗಿರುವಾಗ ಇದೀಗ ಭಾರತದಲ್ಲಿ ಈಗಾಗಲೇ ಮೂರು ಲಸಿಕೆಗಳ ಪ್ರಯೋಗಗಳು ಆರಂಭವಾಗಿವೆ ಎಂಬುದು ತಿಳಿದು ಬಂದಿತ್ತು. ಇದೀಗ ಇದರ ಕುರಿತು ಮಾಹಿತಿ ಕೇಳಿದಾಗ ಐಸಿಎಂಆರ್ ನಿರ್ದೇಶಕರು ಮಹತ್ವದ ಹೇಳಿಕೆ ನೀಡಿದ್ದು, ಭಾರತದಲ್ಲಿ ಈಗ ಎರಡು ಲಸಿಕೆಗಳ ಎರಡನೇ ಹಂತದ ಪ್ರಯೋಗಗಳು ಬಹುತೇಕ ಪೂರ್ಣಗೊಂಡಿವೆ, ಒಂದು ವೇಳೆ ಕೇಂದ್ರ ಬಯಸಿದ್ದಲ್ಲಿ ತುರ್ತು ದೃಢೀಕರಣದ ಆಧಾರದ ಮೇಲೆ ನಾವು ಲಸಿಕೆಗಳನ್ನು ಸರಬರಾಜು ಮಾಡಲು ಸಿದ್ಧವಿದ್ದೇವೆ. ಆದರೆ ದೇಶದಲ್ಲಿರುವ ಪರಿಸ್ಥಿತಿಯನ್ನು ನೋಡಿಕೊಂಡು ಕೇಂದ್ರವು ತುರ್ತು ದೃಢೀಕರಣವನ್ನು ಪರಿಗಣಿಸಬಹುದೇ ಎಂಬುದು ಮುಖ್ಯವಾಗುತ್ತದೆ. ಕೇಂದ್ರವು ತುರ್ತು ಆದೇಶ ನೀಡಿದಲ್ಲಿ ನಾವು ಮುಂದುವರಿಯಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯವಾಗಿ ಅಂತಿಮ ಹಂತದ ಪ್ರಯೋಗ ಆರರಿಂದ ಒಂಬತ್ತು ತಿಂಗಳು ತೆಗೆದುಕೊಳ್ಳುತ್ತದೆ, ಆದರೆ ಕೇಂದ್ರ ತನ್ನ ತುರ್ತು ಅಧಿಕಾರವನ್ನು ಬಳಸಿಕೊಂಡು ನಿರ್ಧಾರ ಮಾಡಿದರೇ ಅದನ್ನು ನಾವು ಪರಿಗಣಿಸಿ ಶೀಘ್ರ ಲಸಿಕೆ ನೀಡಲಾಗುತ್ತದೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಇನ್ನಷ್ಟು ಮಾಹಿತಿಗಳನ್ನು ಹೊರಹಾಕಲಿದ್ದೇವೆ ಎಂದು ಹೇಳಿದ್ದಾರೆ.