ಮಹತ್ವದ ಹೆಜ್ಜೆ ಇಡಲು ಸಜ್ಜಾದ ಭಾರತ ! ಲಸಿಕೆಯ ಕುರಿತು ಹೊರಬಿತ್ತು ಮಹತ್ವದ ಮಾಹಿತಿ

ಮಹತ್ವದ ಹೆಜ್ಜೆ ಇಡಲು ಸಜ್ಜಾದ ಭಾರತ ! ಲಸಿಕೆಯ ಕುರಿತು ಹೊರಬಿತ್ತು ಮಹತ್ವದ ಮಾಹಿತಿ

ನಮಸ್ಕಾರ ಸ್ನೇಹಿತರೇ, ಇದೀಗ ಇಡೀ ವಿಶ್ವವೇ ಕೊರೊನ ಲಸಿಕೆ ಯಾವಾಗ ಅಧಿಕೃತವಾಗಿ ಬಿಡುಗಡೆಯಾಗುತ್ತದೆಯೋ ಎಂದು ಕಾದು ಕುಳಿತಿದೆ. ಒಂದೆಡೆ ರಷ್ಯಾ ದೇಶ ಬಿಡುಗಡೆ ಮಾಡಿದ್ದರೂ ಕೂಡ WHO ಸೇರಿದಂತೆ ವಿಶ್ವದ ಹಲವಾರು ದೇಶಗಳು ನಂಬಿಕೆ ಇಡುತ್ತಿಲ್ಲ. ಭಾರತ ದೇಶ ಕೂಡ ರಷ್ಯಾ ಕಾರ್ಯದ ಬಗ್ಗೆ ತಲೆಕೆಡಿಸಿಕೊಳ್ಳದೇ, ಇಲ್ಲಿ ಬಳಸಬೇಕು ಎಂದರೇ ಕ್ಲಿನಿಕಲ್ ಟ್ರಯಲ್ ನಡೆಸುವ ಆಲೋಚನೆಯಲ್ಲಿ ತೊಡಗಿಕೊಂಡಿದೆ. ಆದರೆ ಈತನ್ಮದ್ಯೆ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತದ ಮೂರು ಲಸಿಕೆಗಳು ಇದೀಗ ಪ್ರಾಯೋಗಿಕ ಹಂತಗಳಲ್ಲಿ ಇವೆ. ಇದನ್ನು ಕೆಂಪು ಕೋಟೆಯ ಮೇಲೆ ನಿಂತು ಪ್ರಧಾನಿ ಕೂಡ ಖಚಿತ ಪಡಿಸಿದ್ದರು. ಇದೀಗ ಆ ಮೂರು ಲಸಿಕೆಗಳ ಕುರಿತು ಮತ್ತೊಂದು ಮಹತ್ವದ ಮಾಹಿತಿ ಹೊರಬಂದಿದೆ.

ಹೌದು ಸ್ನೇಹಿತರೇ, ಇದೀಗ ಎನ್ ಐಟಿಐ ಆಯೋಗದ ಸದಸ್ಯ ಡಾಕ್ಟರ್ ವಿ ಕೆ ಪಾಲ್ ರವರು ಮಾತನಾಡಿ, ಭಾರತದಲ್ಲಿ ಈಗಾಗಲೇ ಮೂರು ಲಸಿಕೆಗಳು ಪ್ರಾಯೋಗಿಕ ಹಂತದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿವೆ. ಪ್ರಾಯೋಗಿಕ ಹಂತಗಳಲ್ಲಿನ ಫಲಿತಾಂಶಗಳನ್ನು ನಾವು ನೋಡಿದರೆ ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂಬ ಆಶಾ ಭಾವನೆ ಮೂಡುತ್ತಿದೆ. ಇನ್ನು ಇದೇ ಸಮಯದಲ್ಲಿ ಮಾತನಾಡಿದ ಪಾಲ್ ರವರು, ಎಲ್ಲಾ ಮೂರು ಲಸಿಕೆಗಳ ಮಾಹಿತಿ ಹೊರ ಹಾಕಿದರು. ಅದರಲ್ಲಿಯೂ ಒಂದು ಲಸಿಕೆಯ (ಹೆಸರು ಬಹಿರಂಗ ಪಡಿಸಿಲ್ಲ) ಕುರಿತು ಸಿಹಿ ಸುದ್ದಿ ಕೇಳು ಬರುವ ಸಾಧ್ಯತೆ ಹೆಚ್ಚಾಗಿದೆ.

ಆ ಮೂರು ಲಸಿಕೆಗಳಲ್ಲಿ ಒಂದು ಲಸಿಕೆ ಮೊದಲನೇ ಹಂತದಲ್ಲಿ ಇದ್ದು, ಇನ್ನೊಂದು ಲಸಿಕೆ ಎರಡನೇ ಹಂತದಲ್ಲಿ ಇದೆ. ಆದರೆ ಮತ್ತೊಂದು ಲಸಿಕೆ (ಹೆಸರು ಬಹಿರಂಗ ಪಡಿಸಿಲ್ಲ) ಇದೀಗ ಎರಡನೇ ಹಂತವನ್ನು ಮುಕ್ತಾಯಗೊಳಿಸಿ ಮೂರನೇ ಹಂತವನ್ನು ತಲುಪಿದೆ. ಇದೇ ಬುಧವಾರ ಅಂದರೆ ಇಂದಿನಿಂದ, ಆ ಲಸಿಕೆಯ ಮೂರನೇ ಹಂತದ ಪ್ರಯೋಗ ಆರಂಭವಾಗಲಿದೆ. ಹಿಂದಿನ ಪ್ರಯೋಗಗಳಲ್ಲಿ ಉತ್ತಮ ಫಲಿತಾಂಶ ಸಿಕ್ಕಿದ್ದು, ಈಗಾಗಲೇ ತಜ್ಞರ ಗುಂಪು ಲಸಿಕೆ ತಯಾರಿಕ ರೊಂದಿಗೆ ಉತ್ಪಾದನೆಯ ಕುರಿತು, ಬೆಲೆಯ ಕುರಿತು ಮತ್ತು ವಿವರಣೆ ಕುರಿತು ನಿರಂತರವಾಗಿ ಚರ್ಚೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಒಂದು ವೇಳೆ ಈ ಹಿಂದಿನ ಹಂತಗಳಲ್ಲಿ ಫಲಿತಾಂಶ ನೀಡಿದಂತೆ ಮೂರನೇ ಹಂತದಲ್ಲಿಯೂ ಕೂಡ ಉತ್ತಮ ಫಲಿತಾಂಶ ನೀಡಿದರೇ, ಕರುನಾ ಮುಕ್ತ ಭಾರತ ಹೆಚ್ಚು ದೂರವಿಲ್ಲ ಎಂದು ಸಂತಸ ವ್ಯಕ್ತಪಡಿಸಿ ಅಧಿಕೃತ ಘೋಷಣೆ ಮಾಡಿದ್ದಾರೆ.