ಉದ್ಯೋಗದ ವಿಷಯದಲ್ಲಿ ಕಠಿಣ ಹೆಜ್ಜೆ ಇಟ್ಟ ಮಧ್ಯ ಪ್ರದೇಶ ! ನಮ್ಮಲ್ಲೂ ಹೀಗೆ ಮಾಡಬಾರದೇಕೆ?

ಉದ್ಯೋಗದ ವಿಷಯದಲ್ಲಿ ಕಠಿಣ ಹೆಜ್ಜೆ ಇಟ್ಟ ಮಧ್ಯ ಪ್ರದೇಶ ! ನಮ್ಮಲ್ಲೂ ಹೀಗೆ ಮಾಡಬಾರದೇಕೆ?

ನಮಸ್ಕಾರ ಸ್ನೇಹಿತರೇ, ಮೊದಲಿನಿಂದಲೂ ದೇಶದಲ್ಲಿ ಪ್ರತಿಯೊಂದು ರಾಜ್ಯಗಳು ತಮ್ಮದೇ ಆದ ರೀತಿಯಲ್ಲಿ ತಮ್ಮಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಪರಿಹಾರ ಮಾಡಲು ಶ್ರಮಿಸುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಿರುವಾಗ ಎಷ್ಟೇ ಸ’ರ್ಕಾರಗಳು ಬದಲಾದರೂ ಕೂಡ ನಿರುದ್ಯೋಗ ಸಮಸ್ಯೆ ಮಾತ್ರ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಇಷ್ಟು ಸಾಲದು ಎಂಬಂತೆ, ಇನ್ನು ಈ ನಿರುದ್ಯೋಗ ಸಮಸ್ಯೆಯ ನಡುವೆಯೇ ಇತರ ರಾಜ್ಯಗಳಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋಗಿ ಕೆಲಸ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅಲ್ಲಿನ ರಾಜ್ಯಗಳಲ್ಲಿ ಉದ್ಯೋಗಗಳು ಖಾಲಿ ಇಲ್ಲದಿದ್ದರೆ ಪರವಾಗಿಲ್ಲ, ಆದರೆ ಇಂದಿನ ಪರಿಸ್ಥಿತಿ ಹೇಗಿದೆ ಎಂದರೇ ಅಲ್ಲಿ ಹುದ್ದೆಗಳು ಖಾಲಿ ಇದ್ದರೂ ಕೂಡ ಜನರು ತಾವು ವಾಸಿಸುವ ಸ್ಥಳ ಉನ್ನತ ಮಟ್ಟದ ನಗರ ವಾಗಿರಬೇಕು ಎಂದು ಇತರ ನಗರಗಳಿಗೆ ವಲಸೆ ಹೋಗಿ ಅಲ್ಲಿ ಕೆಲಸ ಮಾಡಲು ಆರಂಭಿಸಿದ್ದಾರೆ. ಇನ್ನು ಕೆಲವು ಕಡೆ ನಿಜವಾಗಲೂ ಎಲ್ಲಾ ಹುದ್ದೆಗಳು ಭರ್ತಿಯಾಗಿ ನಿರುದ್ಯೋಗ ಸಮಸ್ಯೆ ಕಾಣುತ್ತಿದೆ.

ಈ ಎಲ್ಲಾ ಪರಿಸ್ಥಿತಿಗಳನ್ನು ಗಮನಿಸಿ ಹಲವಾರು ರಾಜ್ಯಗಳು ತಮ್ಮದೇ ಆದ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ, ಕೆಲವರು ಖಾಸಗಿ ಕ್ಷೇತ್ರಗಳಲ್ಲಿನ ಉದ್ಯೋಗಗಳ ಮೇಲೂ ಕೂಡ ಹಲವಾರು ಷರತ್ತುಗಳನ್ನು ವಿಧಿಸಿದ್ದಾರೆ. ಇನ್ನು ಕೆಲವರು ಸರ್ಕಾರಿ ಉದ್ಯೋಗಗಳಲ್ಲಿ ಆ ರಾಜ್ಯದ ಯುವಕರಿಗೆ ಮಾತ್ರ ಸೀಮಿತ ಎಂಬ ಷರತ್ತು ವಿಧಿಸಿದ್ದಾರೆ. ಖಾಸಗಿ ಕ್ಷೇತ್ರಗಳಲ್ಲಿ ಕೆಲವರು ಸಂಪೂರ್ಣ ರಾಜ್ಯದ ಜನತೆಗೆ ಕೆಲಸ ನೀಡಬೇಕು ಎಂದು ವಿಧಿಸಿದ ಪರಿಣಾಮ ಹಲವಾರು ಕಂಪನಿಗಳು ಕಾಲ್ಕಿತ್ತ ಘಟನೆಯು ಕೂಡ ನಡೆದಿದೆ. ಆದರೆ ಸರ್ಕಾರಿ ಕೆಲಸ ಆ ರೀತಿ ಆಗಲು ಸಾಧ್ಯವಿಲ್ಲ, ಸರ್ಕಾರಿ ಕೆಲಸಗಳು ಅಲ್ಲಿನ ರಾಜ್ಯದ ಜನತೆಗೆ ಸೀಮಿತವಾದರೆ ಖಂಡಿತ ಸಂಪೂರ್ಣವಾಗಿ ಅಲ್ಲದಿದ್ದರೂ ಕೊಂಚರ ಮಟ್ಟಿಗೆ ಖಂಡಿತ ನಿರುದ್ಯೋಗ ಸಮಸ್ಯೆ ಸೇರಿದಂತೆ, ಹಣ ಒಂದೇ ಕಡೆ ಕ್ರೋಡೀಕರಣ ಗೊಳ್ಳುವುದು ನಿಲ್ಲುತ್ತದೆ.

ಇದೇ ಕಾರಣಕ್ಕಾಗಿ ಹಲವಾರು ರಾಜ್ಯಗಳು ಸರ್ಕಾರಿ ಕೆಲಸಗಳನ್ನು ಅಲ್ಲಿನ ಯುವಕರಿಗೆ ಮಾತ್ರ ಸೀಮಿತವಾಗ ಬೇಕು ಎಂದು ಆದೇಶ ಹೊರಡಿಸಿದ್ದಾರೆ. ಇದೀಗ ಈ ಸಾಲಿಗೆ ಮಧ್ಯ ಪ್ರದೇಶ ರಾಜ್ಯ ಕೂಡ ಸೇರಿಕೊಂಡಿದ್ದು ಶಿವರಾಜ ಸಿಂಗ್ ಚೌಹಾಣ್ ಅವರು ಇನ್ನು ಮುಂದೆ ಮಧ್ಯ ಪ್ರದೇಶದ ಯುವ ಜನಾಂಗಕ್ಕೆ ಮಾತ್ರ ಸರ್ಕಾರಿ ಕೆಲಸ ನೀಡಲಾಗುವುದು ಇತರ ರಾಜ್ಯಗಳ ಜನರಿಗೆ ಇನ್ನು ಮುಂದೆ ಯಾವುದೇ ಸರ್ಕಾರಿ ಕೆಲಸ ನೀಡಲಾಗುವುದಿಲ್ಲ ಎಂದು ಅಧಿಕೃತ ಆದೇಶ ಹೊರಡಿಸಿದ್ದಾರೆ. ಇನ್ನು ಖಾಸಗಿ ಕ್ಷೇತ್ರದಲ್ಲಿಯೂ ಕೂಡ, ಶೇಕಡ 70ರಷ್ಟು ಉದ್ಯೋಗಗಳು ಸ್ಥಳೀಯರಿಗೆ ನೀಡಬೇಕು ಎಂಬ ಕಾನೂನು ಮಧ್ಯ ಪ್ರದೇಶದಲ್ಲಿ ಹಲವಾರು ತಿಂಗಳುಗಳಿಂದ ಜಾರಿಯಲ್ಲಿದೆ. ಇತರ ರಾಜ್ಯಗಳು ಈ ರೀತಿ ಆದೇಶ ಹೊರಡಿಸಿಸುತ್ತಿರುವಾಗ (ಖಾಸಗಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳು ಇರಬಹುದು), ಆದರೆ ಕನಿಷ್ಠ ಸರ್ಕಾರಿ ಉದ್ಯೋಗಗಳನ್ನು ಆದರೂ ಇಲ್ಲಿನ ಜನತೆಗೆ ನೀಡಬೇಕು ಎಂಬ ಆದೇಶ ನಮ್ಮ ಕರ್ನಾಟಕದಲ್ಲಿ ಜಾರಿಯಾದರೇ ಎಷ್ಟು ಚಂದ ಎಂಬುದು ನಮ್ಮ ಅಭಿಪ್ರಾಯ.