ಬಿಗ್ ಬ್ರೇಕಿಂಗ್: ಡಿಜೆ ಹಳ್ಳಿ ಘಟನೆಗೆ ಬಿಗ್ ಟ್ವಿಸ್ಟ್ ! ಮಹತ್ವದ ತಿರುವು ಕೊಟ್ಟ ಜೆಡಿಎಸ್ ಮುಖಂಡ

ಬಿಗ್ ಬ್ರೇಕಿಂಗ್: ಡಿಜೆ ಹಳ್ಳಿ ಘಟನೆಗೆ ಬಿಗ್ ಟ್ವಿಸ್ಟ್ ! ಮಹತ್ವದ ತಿರುವು ಕೊಟ್ಟ ಜೆಡಿಎಸ್ ಮುಖಂಡ

ನಮಸ್ಕಾರ ಸ್ನೇಹಿತರೇ, ಬೆಂಗಳೂರಿನಲ್ಲಿ ನಡೆದ ಘಟನೆ ದಿನಕ್ಕೊಂದು ತಿರುವು ಪಡೆದು ಕೊಳ್ಳುತ್ತಿದೆ. ಒಬ್ಬರಲ್ಲ ಒಬ್ಬ ಪ್ರಮುಖ ನಾಯಕರ ಹೆಸರು ಪುಂಡರ ಜಮಾವಣೆ ಗೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಇವರೆಲ್ಲರೂ ಸಾಮಾನ್ಯ ನಾಯಕರಲ್ಲ, ಕೆಲವರು ಶಾಸಕರ ಹೆಸರು, ಮಾಜಿ ಬಿಬಿಎಂಪಿ ಮೇಯರ್, ಹಾಲಿ ಕಾರ್ಪೊರೇಟರ್ ಪತಿ ಎಲ್ಲರ ಹೆಸರುಗಳು ದಿನಕ್ಕೊಂದರಂತೆ ಕೇಳಿ ಬರುತ್ತಿದ್ದವು. ಆದರೆ ಇದೀಗ ಮುಖಂಡರೊಬ್ಬರು ತಪ್ಪೊಪ್ಪಿಕೊಂಡ ಕಾರಣ ಇದೀಗ ಡಿಜೆ ಹಳ್ಳಿ ಘಟನೆಗೆ ಮಹತ್ವದ ತಿರುವು ಸಿಕ್ಕಿದ್ದು ಈ ರೀತಿ ಒಬ್ಬ ಮುಖಂಡರಾಗಿ ಮಾಡಬಹುದು ಎಂಬ ಪ್ರಶ್ನೆ ಕೇಳಿ ಬಂದಿದೆ. ಈ ಮುಖಂಡ ತಪ್ಪೊಪ್ಪಿಕೊಂಡು ಇನ್ನು ಹತ್ತು ಪ್ರಮುಖ ಮುಖಂಡರ ಹೆಸರು ಬಾಯ್ಬಿಟ್ಟಿರುವುದಾಗಿ ಇದೀಗ ತಿಳಿದು ಬಂದಿದೆ.

ಹೌದು ಸ್ನೇಹಿತರೆ ಅವರು ಮತ್ತ್ಯಾರು ಅಲ್ಲ, ಪುಲಿಕೇಶಿ ನಗರದ ಜೆಡಿಎಸ್ ಪಕ್ಷದ ಮುಖಂಡ ಇದೀಗ ತಪ್ಪೊಪ್ಪಿಕೊಂಡು ನಾವು ಡಿಜೆ ಹಳ್ಳಿಯಲ್ಲಿ ಗುಂಪು ಸೇರಿಸಿದ್ದು ನಿಜ, ನಾನು ಮತ್ತು ಇನ್ನೂ ಹತ್ತು ಪ್ರಮುಖ ನಾಯಕರು ಸೇರಿಕೊಂಡು ಹುಡುಗರನ್ನು ಕಲೆ ಹಾಕಿದೆವು, ಆದರೆ ಪರಿಸ್ಥಿತಿ ನಮ್ಮ ಕೈತಪ್ಪಿ ಹೋಯಿತು ಎಂದು ತಪ್ಪೊಪ್ಪಿ ಕೊಂಡಿದ್ದಾರೆ. ಇದರ ನಡುವೆ ಇಷ್ಟು ದಿವಸ ಇದು ಯಾವುದೇ ಪೂರ್ವ ನಿಯೋಜಿತ ಅಲ್ಲ ಎನ್ನುತ್ತಿದ್ದ ರಾಜಕೀಯ ನಾಯಕರಿಗೆ ತಮ್ಮದೇ ಆದ ಪಕ್ಷಗಳ ಮುಖಂಡರು ಇದೀಗ ಇದರಲ್ಲಿ ಭಾಗಿಯಾಗಿರುವುದು ಬಹಳ ಮುಜುಗರವನ್ನು ಉಂಟು ಮಾಡಿದೆ. ಒಂದೆಡೆ ಮಾಜಿ ಬಿಬಿಎಂಪಿ ಮೇಯರ್ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕ, ಮತ್ತೊಂದೆಡೆ ಜೆಡಿಎಸ್ ಪಕ್ಷದ ಮುಖಂಡ ವಾಜಿದ್ ರವರು ಇದರಲ್ಲಿ ಭಾಗಿಯಾಗಿದ್ದಾರೆ.

ಹತ್ತು ಪ್ರಮುಖ ನಾಯಕರನ್ನು ಹೆಸರಿಸಿರುವ ವಾಜಿದ್ ರವರು, ತಪ್ಪೊಪ್ಪಿಕೊಂಡಿರುವ ಕಾರಣ ಇದೀಗ ರಾಜಕೀಯವಾಗಿ ಇದು ಮಹತ್ವದ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ. ಒಂದು ಕಡೆ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರ ಹೆಸರು ಕೇಳಿ ಬರುತ್ತಿದ್ದು ಮತ್ತೊಂದೆಡೆ ಜೆಡಿಎಸ್ ಪಕ್ಷದ ಮುಖಂಡರೇ ತಪ್ಪೊಪ್ಪಿ ಕೊಂಡಿದ್ದಾರೆ. ಹೀಗಿರುವಾಗ ಪೊಲೀಸ್ ಇಲಾಖೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ, ಅಸಲಿಗೆ ಇವರು ಕ್ರಮ ಕೈಗೊಳ್ಳುತ್ತಾರೆಯೇ ಅಥವಾ ದೊಡ್ಡ ಹೆಸರುಗಳು ಕೇಳಿ ಬರುವಂತೆ ಕೈಬಿಡುತ್ತಾರೆಯೇ ಎಂಬುದು ಸಾಮಾನ್ಯ ಜನರ ಪ್ರಶ್ನೆಯಾಗಿದೆ. ಪುಲಿಕೇಶಿ ನಗರದ ಮುಖಂಡ ವಾಜಿದ್ ರವರು ತಾವು ಒಂದು ಪ್ರತಿಷ್ಠಿತ ಮುಖಂಡ ಸ್ಥಾನದಲ್ಲಿ ಇಟ್ಟುಕೊಂಡು ತಾನು ಗುಂಪು ಸೇರಿಸಲು 10 ನಾಯಕರನ್ನು ಸಂಪರ್ಕಿಸಿರುವುದಾಗಿ ತಪ್ಪೊಪ್ಪಿ ಕೊಂಡಿರುವ ಕಾರಣ ಇನ್ನು ಹಲವಾರು ಪ್ರಮುಖ ನಾಯಕರು ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ.