ನಮ್ಮ ಪೂರ್ವಜರು ತಾಮ್ರದ ಪಾತ್ರೆಗಳಲ್ಲಿ ನೀರು ಕುಡಿಯಲು ವೈಜ್ಞಾನಿಕ ಕಾರಣಗಳಾದರೂ ಏನು ಗೊತ್ತಾ?

ನಮ್ಮ ಪೂರ್ವಜರು ತಾಮ್ರದ ಪಾತ್ರೆಗಳಲ್ಲಿ ನೀರು ಕುಡಿಯಲು ವೈಜ್ಞಾನಿಕ ಕಾರಣಗಳಾದರೂ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಮ್ಮ ಪೂರ್ವಜರ ಹಲವಾರು ಅಭ್ಯಾಸಗಳನ್ನು ಅವೈಜ್ಞಾನಿಕ ಎಂದು ವಿದೇಶಿಗರು ಕರೆದಾಗ ನಮ್ಮಲ್ಲಿನ ಕೆಲವು ಜನರು ಕೂಡ ಅವರ ಬೆಂಬಲಕ್ಕೆ ನಿಂತು ಹಲವಾರು ಅಭ್ಯಾಸಗಳನ್ನು ಬದಲಾಯಿಸಿಕೊಂಡರು. ಆದರೆ ಇದೀಗ ಅದೇ ಅಭ್ಯಾಸಗಳನ್ನು ಜನರು ಮತ್ತೆ ಆರಂಭಿಸಿದ್ದಾರೆ, ಆದರೆ ಅವುಗಳ ಬಗ್ಗೆ ಪ್ರಶ್ನೆ ಕೇಳಿದರೇ, ಇದನ್ನು ಅಮೇರಿಕ, ಬ್ರಿಟನ್, ಜರ್ಮನಿ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ ಎನ್ನುತ್ತಾರೆ. ಆದರೆ ಆ ಅಭ್ಯಾಸಗಳ ಲಾಭಗಳು ನಮ್ಮ ಪೂರ್ವಜರಿಗೆ ತಿಳಿದಿತ್ತು ಎಂಬುದನ್ನು ಮರೆತಿದ್ದಾರೆ. ಹೌದು ಸ್ನೇಹಿತರೇ, ಇದೀಗ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ತಾಮ್ರದ ವಾಟರ್ ಬಾಟಲಿ ಗಳು ಕಾಣ ಸಿಗುತ್ತವೆ, ಯಾಕೆ ಎಂದು ಪ್ರಶ್ನೆ ಮಾಡಿದರೇ, ಅಂಗಡಿಯವ ಇದರಿಂದ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗುತ್ತದೆ, ಅಷ್ಟೇ ಅಲ್ಲ ತಾಮ್ರದಲ್ಲಿ ದೇಹಕ್ಕೆ ಅಗತ್ಯವಾದ ಅಂಶಗಳು ಇವೆ ಎಂದು ಉತ್ತರಿಸುತ್ತಾರೆ. ಇವುಗಳನ್ನು ಅದೇ ಕಾರಣಕ್ಕೆ ತಾಮ್ರದ ಪಾತ್ರೆಗಳನ್ನು ನಮ್ಮ ಪೂರ್ವಜರು ಬಳಸುತ್ತಿದ್ದರು, ಬನ್ನಿ ನಾವು ಇಂದು ಆ ಕಾರಣಗಳ ಬಗ್ಗೆ ತಿಳಿದು ಕೊಳ್ಳೋಣ.

ಚರ್ಮ: ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಉಂಟು ಮಾಡುವ ನೀರಿನ ಅಶುದ್ಧತೆಯನ್ನು ತಾಮ್ರ ತೆಗೆದು ಹಾಕುತ್ತದೆ, ಅಷ್ಟೇ ಅಲ್ಲದೇ ತಾಮ್ರದಲ್ಲಿರುವ ಕೆಲವೊಂದು ಅಂಶಗಳು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಬರದಂತೆ ತಡೆಯುತ್ತದೆ. ತಾಮ್ರದ ಪಾತ್ರೆಯಲ್ಲಿ ಇರಿಸಲಾದ ನೀರಿನಿಂದ ಮುಖವನ್ನು ತೊಳೆಯಬಹುದು. ಇದರಿಂದ ವಿವಿಧ ರೀತಿಯ ಸೌಂದರ್ಯ ವರ್ಧಕಗಳ ಮೇಲಿನ ವೆಚ್ಚವನ್ನು ಕಡಿಮೆ ಮಾಡಿಕೊಳ್ಳ ಬಹುದಾಗಿದೆ, ಯಾಕೆಂದರೆ ಸೌಂದರ್ಯಕ್ಕೆ ಅಗತ್ಯವಾಗಿರುವ ಎಲ್ಲಾ ಅಂಶಗಳನ್ನು ತಾಮ್ರ ನಿಮಗೆ ನೀಡುತ್ತದೆ.

ಹೃದಯರೋಗ: ಪ್ರಸ್ತುತ, ಹೆಚ್ಚಿನ ಜನರು ಕೆಲಸ, ಹಣಕಾಸು ಮತ್ತು ಮನೆಯ ಸಮಸ್ಯೆಗಳ ಬಗ್ಗೆ ಚಿಂತಿತರಾಗಿದ್ದಾರೆ. ಇದರಿಂದಾಗಿ ರಕ್ತ ದೊತ್ತಡದ ಸಮತೋಲನವು ತೊಂದರೆಗೊಳಗಾಗುತ್ತದೆ ಮತ್ತು ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತವೆ. ಈ ಸಂದರ್ಭದಲ್ಲಿ, ತಾಮ್ರದ ನೀರು ನಿಮ್ಮನ್ನು ಶಾಂತವಾಗಿರಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಇದು ಹೃದಯ ಸಂಬಂಧಿತ ಕಾಯಿಲೆಗಳನ್ನು ನಿವಾರಿಸುತ್ತದೆ.

ಥೈರಾಯ್ಡ್ ಕಾಯಿಲೆಯಲ್ಲಿ ಪ್ರಯೋಜನಕಾರಿ: ಥೈರಾಯ್ಡ್ ಕಾಯಿಲೆ ಥೈರಾಕ್ಸಿನ್ ಹಾರ್ಮೋನುಗಳ ಅಸಮತೋಲನದಿಂದ ಉಂಟಾಗುತ್ತದೆ. ಈ ರೋಗದಲ್ಲಿ, ರೋಗಿಯ ತೂಕವು ಹೆಚ್ಚಾಗುತ್ತದೆ ಅಥವಾ ಕಡಿಮೆಯಾಗುತ್ತದೆ. ತಾಮ್ರ ಸ್ಪರ್ಶ ನೀರನ್ನು ಕುಡಿಯುವುದರಿಂದ ಥೈರಾಕ್ಸಿನ್ ಹಾರ್ಮೋನ್ ಸ್ರವಿಸುವಿಕೆಯನ್ನು ನಿಯಂತ್ರಿಸುತ್ತದೆ ಮತ್ತು ಈ ರೋಗವನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ ಎಂದು ವೈದ್ಯರು ನಂಬುತ್ತಾರೆ.