ಮೊಸರಿನ ಲಾಭ, ಹಾಗೂ ಮೊಸರಿನ ಜೊತೆ ಯಾವ ವಸ್ತುಗಳನ್ನು ಸೇವಿಸಬಾರದು ಎಂದು ತಿಳಿಯಿರಿ.

ಮೊಸರಿನ ಲಾಭ, ಹಾಗೂ ಮೊಸರಿನ ಜೊತೆ ಯಾವ ವಸ್ತುಗಳನ್ನು ಸೇವಿಸಬಾರದು ಎಂದು ತಿಳಿಯಿರಿ.

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ, ಜನರು ಬೆಳಿಗ್ಗೆ ಮೊಸರು ಸೇವಿಸುವದನ್ನು ಉತ್ತಮ ಎನ್ನುತ್ತಾರೆ, ಯಾಕೆಂದರೆ ರಾತ್ರಿಯ ವೇಳೆ ಇಂದಿನ ಜೀವನ ಶೈಲಿಯಲ್ಲಿ ಅರಗಿಸಿಕೊಳ್ಳುವುದು ಕಷ್ಟ. ಇನ್ನು ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾ ನಮ್ಮ ಕರುಳಿಗೆ ಶಕ್ತಿ ನೀಡುತ್ತದೆ. ಮೊಸರಿನಲ್ಲಿ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ, ಇದು ಮೂಳೆಗಳನ್ನು ಬಲಪಡಿಸುತ್ತದೆ. ಮೊಸರು ಸೇವಿಸುವುದರಿಂದ ಹೃದಯದಲ್ಲಿನ ಪರಿಧಮನಿಯ ಕಾಯಿಲೆ ತಡೆಯ ಬಹುದು. ಮೊಸರನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇಷ್ಟೆಲ್ಲಾ ಲಾಭವಿರುವ ಮೊಸರನ್ನು ನಾವು ಸೇವಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡಬೇಕು. ಒಂದು ವೇಳೆ ನೀವು ಮೊಸರು ತಿನ್ನುತ್ತಿದ್ದರೆ, ಈ ವಸ್ತುಗಳನ್ನು ಎಂದಿಗೂ ಮೊಸರಿನ ಜೊತೆ ತಿನ್ನಬೇಡಿ. ಹಾಗೇನಾದರೂ ಸೇವಿಸಿದರೇ ನಿಮ್ಮ ಆರೋಗ್ಯವು ಹದಗೆಡಬಹುದು.

ಮೊಸರು ಹುಳಿ ಹೊಂದಿದೆ, ಆದ್ದರಿಂದ ಅದರೊಂದಿಗೆ ಸಿಟ್ರಸ್ ಹಣ್ಣುಗಳನ್ನು(ಆರೆಂಜ್, ನಿಂಬೆ ಹಣ್ಣು ಮುಂತಾದವು) ಎಂದಿಗೂ ಸೇವಿಸಬೇಡಿ, ಏಕೆಂದರೆ ಅದರಲ್ಲಿ ವಿಭಿನ್ನ ಕಿಣ್ವಗಳು ಕಂಡು ಬರುತ್ತವೆ. ಈ ಕಾರಣದಿಂದಾಗಿ ಮೊಸರಿನ ಜೊತೆ ಸೇವಿಸಿದರೇ ಒಟ್ಟಿಗೆ ಜೀರ್ಣಿಸಿಕೊಳ್ಳಲು ತೊಂದರೆ ಮತ್ತು ಜೀರ್ಣಕ್ರಿಯೆ ನಿಧಾನವಾಗುತ್ತದೆ, ಇದು ಅಜೀರ್ಣ, ಅತಿಸಾರ ಮತ್ತು ಮಲಬದ್ಧತೆಗೆ ಕಾರಣವಾಗಬಹುದು.

ಮೊಸರಿನ ಜೊತೆ ಮಾವು ಸೇವನೆಯು ದೇಹಕ್ಕೆ ಪ್ರಯೋಜನಕಾರಿಯಲ್ಲ, ಏಕೆಂದರೆ ಇವೆರಡೂ ಸಂಪೂರ್ಣವಾಗಿ ಭಿನ್ನವಾಗಿವೆ. ಒಂದು ಕಡೆ ಮಾವು ಉಷ್ಣದ ಗುಣಗಳನ್ನು ಹೊಂದಿರುವ ಹಣ್ಣಾಗಿದೆ. ಇನ್ನು ಮೊಸರು ತಂಪಿನ ಅಂಶಗಳನ್ನು ಹೊಂದಿರುತ್ತದೆ. ಇನ್ನು ಮೊಸರಿನ ಜೊತೆ ಯಾವುದೇ ಕಾರಣಕ್ಕೂ ಉದ್ದಿನ ಬೇಳೆ ಯನ್ನು ಎಂದಿಗೂ ಸೇವಿಸಬೇಡಿ. ಇವೆರಡನ್ನೂ ಒಟ್ಟಿಗೆ ತಿನ್ನುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವೈದ್ಯ ಶಾಸ್ತ್ರ ಹೇಳುತ್ತದೆ.