ವಾಯುಪಡೆಗೆ ಗೌರವ ನೀಡಲು ಮೌನ ತಾಳಿದ ಸುಶಾಂತ್ ಫ್ಯಾನ್ಸ್ ! ಆದರೆ ಕರಣ್ ಗೆ ಶಾಕ್ ನೀಡಿದ ವಾಯುಪಡೆ !

ವಾಯುಪಡೆಗೆ ಗೌರವ ನೀಡಲು ಮೌನ ತಾಳಿದ ಸುಶಾಂತ್ ಫ್ಯಾನ್ಸ್ ! ಆದರೆ ಕರಣ್ ಗೆ ಶಾಕ್ ನೀಡಿದ ವಾಯುಪಡೆ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆ ನಡೆದ ತಕ್ಷಣ, ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಗೆ ಬಾಲಿವುಡ್ ಚಿತ್ರರಂಗದಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತವೇ ಕಾರಣ ಎಂಬ ಮಾತುಗಳು ಕೇಳಿ ಬಂದಿದ್ದವು. ಅದರಲ್ಲಿಯೂ ಮಹೇಶ್ ಭಟ್, ಸಲ್ಮಾನ್ ಖಾನ್ ಹಾಗೂ ಕರಣ್ ಜೋಹರ್ ರವರು ಸ್ವಜನಪಕ್ಷಪಾತದ ಮತ್ತೊಂದು ಮುಖವಾಗಿದ್ದಾರೆ ಎಂದು ನೆಟ್ಟಿಗರು ಅಭಿಯಾನಗಳನ್ನು ಆರಂಭಿಸಿದರು. ಮೊದ ಮೊದಲಿಗೆ ಕರಣ್ ಜೋಹರ್ ಅವರ ಹೆಸರು ಬಾರಿ ಸಂಖ್ಯೆಯಲ್ಲಿ ಅಭಿಯಾನಗಳಲ್ಲಿ ಕೇಳಿ ಬಂದ ಕಾರಣ, ಕರನ್ ಜೋಹರ್ ಅವರು ಬಾಲಿವುಡ್ ಚಿತ್ರರಂಗ ನನ್ನ ಕೈ ಬಿಟ್ಟಿದೆ ಎಂದು ಹೇಳಿ ಮುಂಬೈ ನಿರ್ದೇಶಕರ ಅಧ್ಯಕ್ಷ ಮಂಡಳಿಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು, ಈ ಸಂಘದ ಅಧ್ಯಕ್ಷೆ ದೀಪಿಕಾ ಪಡುಕೋಣೆ ರವರು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಕರಣ್ ಜೋಹರ್ ಅವರ ಮನವೊಲಿಸಲು ಸಾಧ್ಯವಾಗಿರಲಿಲ್ಲ.

ಇದಾದ ಮೇಲೆ ಇದೀಗ ಮಹೇಶ್ ಭಟ್ ರವರು ಸಡಕ್ 2 ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದು, ಯೂಟ್ಯೂಬ್ನಲ್ಲಿ ಜನರು ಡಿಸ್ ಲೈಕ್ ಮಾಡುವ ಮೂಲಕ ಮಹೇಶ್ ಭಟ್ ರವರು ಸಿನಿಮಾ ಬಿಡುಗಡೆ ಮಾಡುವ ಮುನ್ನ ಯೋಚನೆ ಮಾಡುವಂತೆ ಮಾಡಿದ್ದಾರೆ. ಈ ಪೋಸ್ಟ್ ಬರೆಯುವ ಹೊತ್ತಿಗೆ ಬರೋಬ್ಬರಿ 82 ಲಕ್ಷ ಜನ ಟ್ರೈಲರ್ ಗೆ ಡಿಸ್ ಲೈಕ್ ಮಾಡಿದ್ದಾರೆ, ಇನ್ನು ಕೇವಲ 4.5 ಲಕ್ಷ ಜನ ಟ್ರೈಲರ್ ಅನ್ನು ಮೆಚ್ಚಿಕೊಂಡಿದ್ದು, ಸುಶಾಂತ್ ಸಿಂಗ್ ರಜಪೂತ್ ರವರ ಅಭಿಮಾನಿಗಳ ಅಭಿಯಾನಗಳು ಎಲ್ಲಾ ರೀತಿಯಲ್ಲೂ ಯಶಸ್ವಿಯಾಗುತ್ತಿವೆ. ಇನ್ನು ಕರನ್ ಜೋಹರ್ ಅವರ ಚಿತ್ರಗಳು ರಿಲೀಸ್ ಆಗಲಿ, ನಾವು ಅವರಿಗೆ ಬುದ್ಧಿ ಕಲಿಸಲೇ ಬಿಡುವುದಿಲ್ಲ ಎಂಬ ಮಾತುಗಳು ಮೊದಲಿಂದಲೂ ಕೇಳಿ ಬರುತ್ತಿವೆ. ಇಷ್ಟೆಲ್ಲಾ ವಿದ್ಯಮಾನಗಳ ನಡುವೆ ಕರಣ್ ಜೋಹರ್ ಅವರು ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿರುವ ಗುಂಜನ್ ಸಕ್ಸೇನ ದಿ ಕಾರ್ಗಿಲ್ ಗರ್ಲ್ ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದೆ. ಇದು ಭಾರತೀಯ ವಾಯುಪಡೆಗೆ ಸಂಬಂಧಿಸಿದ ವಿಶೇಷ ಚಿತ್ರವಾದ ಕಾರಣ ಸುಶಾಂತ್ ಸಿಂಗ್ ಅಭಿಮಾನಿಗಳು ನಾವು ಇದರ ಕುರಿತು ಯಾವುದೇ ಟ್ರೆಂಡಿಂಗ್ ಮಾಡುವುದಿಲ್ಲ ಎಂದಿದ್ದರು. ಯಾರು ನಿರ್ಮಾಣ ಮಾಡಿದ್ದಾರೆ ಎಂಬುದಕ್ಕಿಂತ ಮುಖ್ಯವಾಗಿ ಅದು ನಮ್ಮ ಹೆಮ್ಮೆಯ ಭಾರತೀಯ ವಾಯುಪಡೆಯ ಗುಂಜನ್ ಸಕ್ಸೇನ ರವರ ಕಥೆಯಾಗಿದೆ, ಆದ ಕಾರಣ ನಾವು ಕೂಡ ನೋಡಿ ಹೆಮ್ಮೆ ಪಡುತ್ತೇವೆ ಎಂದಿದ್ದರು.

ಆದರೆ ಈ ಚಿತ್ರ ಇದೀಗ ಬಿಡುಗಡೆಯಾದ ಮೇಲೆ ಭಾರತೀಯ ವಾಯುಪಡೆಯು ಕರಣ್ ಜೋಹರ್ ರವರ ಚಿತ್ರದ ಕುರಿತು ಆಕ್ಷೇಪ ವ್ಯಕ್ತಪಡಿಸಿದೆ. ಈ ಚಿತ್ರದಲ್ಲಿ ಕೆಲವು ಭಾವನಾತ್ಮಕ ಸಂಗತಿಗಳನ್ನು ಪ್ರೇಕ್ಷಕರ ಮುಂದಿಟ್ಟು ಉತ್ತಮ ರೇಟಿಂಗ್ ಪಡೆದು ಕೊಳ್ಳಲು ಭಾರತೀಯ ವಾಯುಪಡೆಯಲ್ಲಿ ಮಹಿಳೆಯರಿಗೂ ಹಾಗೂ ಪುರುಷರಿಗೂ ವ್ಯತ್ಯಾ’ಸವಿದೆ ಎಂಬಂತೆ ತೋರಿಸಲಾಗಿದೆ, ಇದರ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ವಾಯುಪಡೆಯು ಭಾರತೀಯ ವಾಯುಪಡೆಯಲ್ಲಾಗಲಿ ಅಥವಾ ಭಾರತೀಯ ಸೇನೆಯಯಲ್ಲಾಗಲಿ ಯಾವುದೇ ರೀತಿಯ ತಾರ-ತಮ್ಯ ಇರುವುದಿಲ್ಲ. ಒಮ್ಮೆ ವಾಯುಪಡೆಗೆ ಆಯ್ಕೆಯಾದ ಬಳಿಕ ಪ್ರತಿಯೊಬ್ಬರು ಇಲ್ಲಿ ಸಮಾನರು, ನಿಮ್ಮ ಚಿತ್ರದ ಲಾಭಕ್ಕಾಗಿ ಈ ರೀತಿ ತೋರಿಸಲಾಗಿದೆ ಇಂದು ಲೀಗಲ್ ನೋಟಿಸ್ ಕಳುಹಿಸಲಾಗಿದೆ.. ಈ ಕೂಡಲೇ ಚಲನಚಿತ್ರ ಪ್ರದರ್ಶನವನ್ನು ರದ್ದು ಮಾಡಿ, ತಮ್ಮ ಚಿತ್ರದಲ್ಲಾಗಿರುವ ತಪ್ಪುಗಳನ್ನು ಸರಿಪಡಿಸಿ ಬಿಡುಗಡೆ ಮಾಡಬೇಕು ಎಂದು ಒತ್ತಾಯ ಮಾಡಲಾಗಿದೆ. ಈ ಮೂಲಕ ಸುಶಾಂತ್ ಅಭಿಮಾನಿಗಳು ವಾಯುಪಡೆಯ ಮೇಲೆ ಗೌರವವಿಟ್ಟು ಸುಮ್ಮನಾದರೂ ಕೂಡ, ಕರನ್ ಜೋಹರ್ ಅವರಿಗೆ ಮತ್ತೊಂದು ಶಾಕ್ ಎದುರಾಗಿದೆ. ಇದನ್ನು ಕಂಡ ನೆಟ್ಟಿಗರು ಒಂದು ವೇಳೆ ವಾಯುಪಡೆ ಹೇಳಿದಂತೆ ದೃಶ್ಯಗಳನ್ನು ಸರಿಪಡಿಸದೇ ಹೋದಲ್ಲಿ, ಮುಂದೇನಾಗುತ್ತದೆ ಎಂಬುದು ನಿಮಗೆ ತಿಳಿದಿರಬಹುದು ಎಂದು ಹೇಳಿದ್ದಾರೆ.