ಅಭಿಯಾನಕ್ಕೆ ಮತ್ತೊಂದು ಭರ್ಜರಿ ಗೆಲುವು ! ಸೋಲೋಪ್ಪಿಕೊಂಡ ಚೀನಾ ಕಂಪನಿಗಳು ! ಮಾಡುತ್ತಿರುವುದಾದರೂ ಏನು ಗೊತ್ತಾ??

ಅಭಿಯಾನಕ್ಕೆ ಮತ್ತೊಂದು ಭರ್ಜರಿ ಗೆಲುವು ! ಸೋಲೋಪ್ಪಿಕೊಂಡ ಚೀನಾ ಕಂಪನಿಗಳು ! ಮಾಡುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇಡೀ ದೇಶದಲ್ಲಿ ಭಾರತ ಹಾಗೂ ಚೀನಾ ದೇಶದ ಗಡಿಯಲ್ಲಿ ಕಹಿ ಘಟನೆ ನಡೆದ ಬಳಿಕ ಚೀನಾ ದೇಶದ ವಸ್ತುಗಳನ್ನು ಕೊಂಡು ಕೊಳ್ಳಬೇಡಿ, ಚೀನಾ ದೇಶಕ್ಕೆ ಭಾರತದಿಂದ ಹರಿದು ಹೋಗುವ ಹಣದ ಮೂಲವನ್ನು ನಾವು ನಿಲ್ಲಿಸಬೇಕು ಎಂದು ದೇಶದ ಮೂಲೆ ಮೂಲೆಯಲ್ಲಿಯೂ ಅಭಿಯಾನಗಳು ಕೇಳಿ ಬಂದಿದ್ದವು. ಎಲ್ಲರೂ ಈ ಅಭಿಯಾನಗಳು ಸರ್ವೇ ಸಾಮಾನ್ಯ, ಎರಡು-ಮೂರು ವಾರಗಳ ಕಾಲ ಅಭಿಯಾನಗಳು ನಡೆದ ನಂತರ ಸುಮ್ಮನಾಗುತ್ತಾರೆ ಎಂದು ಅಂದಾಜು ಮಾ ಡಿಕೊಂಡಿದ್ದರು. ಆದರೆ ಭಾರತೀಯರು ಗಡಿಯಲ್ಲಿ ಚೀನಾ ದೇಶ ತನ್ನ ಬುದ್ಧಿ ಪ್ರದರ್ಶಿಸಿದ ಬಳಿಕ ಯಾವುದೇ ಕಾರಣಕ್ಕೂ ಜಗ್ಗದೆ ಮುನ್ನುಗ್ಗುತ್ತಿದ್ದಾರೆ. ಈ ಅಭಿಯಾನದ ಫಲಿತಾಂಶ ಮತ್ತೊಮ್ಮೆ ಹೊರಬಿದ್ದಿದ್ದು, ಬಾಯ್ಕಾಟ್ ಚೀನಾ ಅಭಿಯಾನಕ್ಕೆ ಜಾಹೀರಾತು ರಂಗದಲ್ಲಿ ಅತಿ ದೊಡ್ಡ ಗೆಲುವು ಸಿಕ್ಕಿದೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಚೀನಾ ದೇಶದ ಮೊಬೈಲ್ ಕಂಪನಿಗಳು ಸೇರಿದಂತೆ ಇನ್ನಿತರ ಕಂಪನಿಗಳು ಭಾರತದ ಜಾಹೀರಾತು ಮಾರು ಕಟ್ಟೆಯಲ್ಲಿ ವರ್ಷಕ್ಕೆ ಕನಿಷ್ಠ 10 ಸಾವಿರ ಕೋಟಿ ವ್ಯವಹಾರ ಮಾಡುತ್ತಿದ್ದರು. ಅಂದಾಜು ಮಾಡಿಕೊಳ್ಳಿ ಸ್ನೇಹಿತರೇ ಕೇವಲ ಜಾಹೀರಾತಿಗೆ ಹತ್ತು ಸಾವಿರ ಕೋಟಿ ಖರ್ಚು ಮಾಡುತ್ತಾರೆ ಎಂದರೇ ಅವರ ವ್ಯವಹಾರ ಎಷ್ಟರ ಮಟ್ಟಿಗೆ ಇರಬಹುದು. ಆದರೆ ಈ ಎಲ್ಲಾ ಲೆಕ್ಕಾಚಾರಗಳನ್ನು ಬಾಯ್ಕಾಟ್ ಚೀನಾ ಅಭಿಯಾನವು ತಲೆಕೆಳಗಾಗುವಂತೆ ಮಾಡಿದೆ. ಅಷ್ಟೇ ಅಲ್ಲದೇ, ಇತರ ದೇಶಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟು ಅಧಿಪತ್ಯ ಸ್ಥಾಪಿಸುತ್ತಿರುವ ಚೀನಾ ದೇಶದ ಆಟೋ ಕಂಪನಿ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಈ ಬಾರಿ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟು, ಇಲ್ಲಿರುವ ಕಂಪನಿಗಳಿಂದ ಮಾರುಕಟ್ಟೆಯನ್ನು ತನ್ನತ್ತ ಸೆಳೆಯುತ್ತಾ ಯೋಜನೆ ನಡೆಸಿತ್ತು.

ಆದರೆ ದೇಶದ ಮೂಲೆ ಮೂಲೆಯಲ್ಲಿಯೂ ಅಭಿಯಾನಗಳು ಕೇಳಿ ಬರುತ್ತಿರುವ ಕಾರಣ ಶಿಯೋಮಿ, ವಿವೋ, ಒಪ್ಪೋ ಸೇರಿದಂತೆ ಇನ್ನೂ ಹತ್ತು ಹಲವಾರು ಕಂಪನಿಗಳು ಹತ್ತು ಸಾವಿರ ಕೋಟಿ ಬಿಡಿ, ಒಂದು ಕೋಟಿ ಹೂಡಿಕೆ ಮಾಡಲು ಕೂಡ ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಜಾಹೀರಾತುಗಳಿಂದ ಅನೇಕ ಕಂಪನಿಗಳು ಹಿಂದಕ್ಕೆ ಹೋಗಿವೆ, ಐಪಿಎಲ್ ಟೂರ್ನಿಯಿಂದ ವಿವೋ ಕಂಪನಿ ಹಿಂದೆ ಸರಿದಿದೆ, ಗ್ರೇಟ್ ವಾಲ್ ಕಂಪನಿಯು ಕೂಡ ಭಾರತದ ಮಾರುಕಟ್ಟೆಗೆ ಲಗ್ಗೆ ಇಡುವ ಆಲೋಚನೆಯಿಂದ ಹಿಂದೆ ಸರಿದಿದೆ. ಇದರಿಂದ ಜಾಹಿರಾತುಗಳು ಕಡಿಮೆ ಬೆಲೆಗೆ ಇಳಿಯಲಿದ್ದು ನಮ್ಮಲ್ಲಿನ ಉತ್ಪನ್ನಗಳು ಜಾಹೀರಾತು ನೀಡಿ ಹೆಚ್ಚು ವ್ಯಾಪಾರ ಮಾಡಬಹುದು. ಇದರಿಂದ ಮುಂದೊಂದು ದಿನ ಚೀನಾ ದೇಶದ ಕಂಪನಿಗಳು ಬಂದು ಹೆಚ್ಚು ಹಣ ನೀಡುತ್ತೇವೆ ಎಂದರೂ ಕೂಡ ನಮ್ಮಲ್ಲಿನ ಉತ್ಪನ್ನಗಳು ಚೀನಾ ಕಂಪನಿಗಳ ವಿರುದ್ಧ ಬಿಡ್ ಮಾಡಿ ಬಹಳ ಸುಲಭವಾಗಿ ಗೆಲ್ಲಬಹುದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.