ರಿಯಾ, ಬಾಲಿವುಡ್, ಮಹಾರಾಷ್ಟ್ರಕ್ಕೆ ಇದ್ದ ಕೊನೆ ಭರವಸೆಯನ್ನು ಮುಗಿಸಿ ಬಿಗ್ ಶಾಕ್ ನೀಡಿದ ಸುಪ್ರೀಂ ! ಸುಶಾಂತ್ ಫ್ಯಾನ್ಸ್ ಅಂತೂ ಫುಲ್ ಖುಷ್

ರಿಯಾ, ಬಾಲಿವುಡ್, ಮಹಾರಾಷ್ಟ್ರಕ್ಕೆ ಇದ್ದ ಕೊನೆ ಭರವಸೆಯನ್ನು ಮುಗಿಸಿ ಬಿಗ್ ಶಾಕ್ ನೀಡಿದ ಸುಪ್ರೀಂ ! ಸುಶಾಂತ್ ಫ್ಯಾನ್ಸ್ ಅಂತೂ ಫುಲ್ ಖುಷ್

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲ ತಿಳಿದಿರುವಂತೆ ಕಳೆದ ಕೆಲವು ದಿನಗಳ ಹಿಂದೆ ನಡೆದ ಘಟನೆ ಇಡೀ ದೇಶದ ಮೂಲೆ ಮೂಲೆಯಲ್ಲೂ ಸದ್ದು ಮಾಡಲಾರಂಭಿಸಿದೆ. ಮಹಾರಾಷ್ಟ್ರ ರಾಜ್ಯದ ನಾಯಕರು ಹಾಗೂ ಬಾಲಿವುಡ್ ದಿಗ್ಗಜರು ಸೇರಿದಂತೆ ರಿಯಾ ಚಕ್ರವರ್ತಿ ರನ್ನ ಹೊರತುಪಡಿಸಿದರೇ ಉಳಿದ ಪ್ರತಿಯೊಬ್ಬರು ಸುಶಾಂತ್ ರಜಪೂತರ ಘಟನೆಯ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಪಟ್ಟು ಹಿಡಿದಿದ್ದರು. ಮಹಾರಾಷ್ಟ್ರ ರಾಜ್ಯ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಬಿಹಾರ ರಾಜ್ಯವು ಸಿಬಿಐ ಸಂಸ್ಥೆಗೆ ವಹಿಸಲು ಶಿಫಾರಸು ಮಾಡಿ, ಅನುಮೋದನೆ ಪಡೆದು ಕೊಂಡು ಅಧಿಕೃತವಾಗಿ ಸಿಬಿಐ ಸಂಸ್ಥೆಯು ಕೂಡಲೇ ಆಕ್ಟಿವ್ ಆಗಿ ಇತ್ತೀಚೆಗೆ ಎಫ್ಐಆರ್ ದಾಖಲು ಮಾಡಿತ್ತು. ಘಟನೆಯಾದ ಬಳಿಕ ರಿಯಾ ಚಕ್ರವರ್ತಿ ರವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವ್ಯತಿರಿಕ್ತವಾದ ಮಾತುಗಳು ಕೇಳಿ ಬಂದ ಕಾರಣ ಅವರೇ ಖುದ್ದು ಘಟನೆಯ ತನಿಖೆಯನ್ನು ಸಿಬಿಐ ಸಂಸ್ಥೆಗೆ ವಹಿಸಬೇಕು ಎಂದು ಮೊದಲಿಗೆ ಒತ್ತಾಯ ಮಾಡಿದ್ದರು.

ಆದರೆ ಅದ್ಯಾಕೋ ತಿಳಿದಿಲ್ಲ ಇತ್ತೀಚೆಗೆ ರಿಯಾ ಚಕ್ರವರ್ತಿ ರವರು ಘಟನೆಯ ತನಿಖೆಯನ್ನು ಸಿಬಿಐ ಸಂಸ್ಥೆಗೆ ವರ್ಗಾಯಿಸಬಾರದು ಎಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು, ಹಾಗೂ ಇದು ಅವರಿಗೆ ಸಿಬಿಐ ತನಿಖೆಯನ್ನು ತಡೆಯಲು ಕೊನೆಯ ಅವಕಾಶವಾಗಿತ್ತು. ಇದಕ್ಕೆ ಕಾರಣ ಬಾಲಿವುಡ್ ದಿಗ್ಗಜರು ಎಂಬ ಬಲವಾದ ಮಾತುಗಳು ಕೇಳಿ ಬಂದಿದ್ದವು. ಯಾಕೆಂದರೆ ಸ್ವಜನಪಕ್ಷಪಾತದ ವಿಚಾರದಲ್ಲಿ ಪ್ರಮುಖವಾಗಿ ಕೇಳಿ ಬಂದಿರುವ ಸಲ್ಮಾನ್ ಖಾನ್, ಮಹೇಶ್ ಭಟ್ ಸೇರಿದಂತೆ ಇನ್ನೂ ಹತ್ತು ಹಲವಾರು ದಿಗ್ಗಜರು ರಿಯಾ ಚಕ್ರವರ್ತಿ ರವರ ಜೊತೆ ನಿರಂತರ ಸಂಪರ್ಕದಲ್ಲಿ ಇರುವುದಾಗಿ ತಿಳಿದು ಬಂದಿತ್ತು. ಕೆಲವು ಮೂಲಗಳ ಪ್ರಕಾರ ರಿಯಾ ಚಕ್ರವರ್ತಿ ರವರು ತನಿಖೆಗೆ ಹೆದರಿ ತಮ್ಮ ಅಪಾರ್ಟ್ಮೆಂಟ್ ಖಾಲಿ ಮಾಡಿದ ಬಳಿಕ ಸಲ್ಮಾನ್ ಖಾನ್ ಆಪ್ತ ಸ್ನೇಹಿತರ ಮನೆಯಲ್ಲಿ ಆಶ್ರಯ ಪಡೆದಿದ್ದರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಇದಕ್ಕೆ ಪೂರಕವೆಂಬಂತೆ ರಿಯಾ ಚಕ್ರವರ್ತಿ ರವರನ್ನು ಈಡಿ ಅಧಿಕಾರಿಗಳು ವಿಚಾರಣೆಗೆ ಕರೆದಾಗ, ಸಲ್ಮಾನ್ ಖಾನ್ ಆಪ್ತರೇ ಕಾರಿನಲ್ಲಿ ಕರೆದು ಕೊಂಡು ಬಂದು ಮತ್ತೆ ವಾಪಸು ಕರೆದುಕೊಂಡು ಹೋಗಿದ್ದರು.

ಇದನ್ನೆಲ್ಲ ಕಂಡ ಸುಶಾಂತ್ ಸಿಂಗ್ ಫ್ಯಾನ್ಸ್ ಹಾಗೂ ಸುಬ್ರಹ್ಮಣ್ಯಂ ಸ್ವಾಮಿ ಸೇರಿದಂತೆ ಇನ್ನಿತರ ನಾಯಕರು ಖಂಡಿತ ಇದರಲ್ಲಿ ಬಾಲಿವುಡ್ ದಿಗ್ಗಜರ ಕೈವಾಡವಿದೆ. ಆದ್ದರಿಂದ ಸಿಬಿಐ ಸಂಸ್ಥೆ ತನಿಖೆ ನಡೆಸಲೇ ಬೇಕು. ಯಾವುದೇ ಕಾರಣಕ್ಕೂ ಸುಪ್ರೀಂಕೋರ್ಟ್ ನಲ್ಲಿ ದಾಖಲಾಗಿರುವ ಕೇಸಿನಲ್ಲಿ ಸಿಬಿಐ ತನಿಖೆಗೆ ಅಡ್ಡಿಯಾಗಬಾರದು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆದರೆ ಮಹಾರಾಷ್ಟ್ರ ಪೊಲೀಸರ ತನಿಖೆಯು ಬಹುತೇಕ ಮುಗಿದಿರುವ ಕಾರಣ ಕೆಲವು ವಕೀಲರನ್ನು ಸಂಪರ್ಕಿಸಿದಾಗ ತನಿಖೆ ಮುಗಿದಿದೆ, ಯಾವುದೇ ಸಾಕ್ಷಿ ಲಭ್ಯವಾಗಿಲ್ಲ ಎಂದು ಹೇಳಿ ಹಾಗೂ ಸಮಗ್ರ ತನಿಖೆಯ ವರದಿ ನೀಡಿದಲ್ಲಿ ಸುಪ್ರೀಂ ಖಂಡಿತ ಸಿಬಿಐ ಸಂಸ್ಥೆಗೆ ತಡೆ ನೀಡ ಬಹುದು. ಆದರೆ ಒಂದು ಚಿಕ್ಕ ಅನುಮಾನ ಬಂದರೂ ಕೂಡ ಯಾವುದೇ ಕಾರಣಕ್ಕೂ ಸುಪ್ರೀಂ ಅಡ್ಡಗಾಲು ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ರಿಯಾ ಚಕ್ರವರ್ತಿ ಸೇರಿದಂತೆ ಅವರ ಬೆಂಬಲಿಗರು ಖಂಡಿತ ಸಿಬಿಐ ಸಂಸ್ಥೆಗೆ ಸುಪ್ರೀಂ ಅಡ್ಡಗಾಲು ಹಾಕುತ್ತದೆ ಎಂದು ನಂಬಿದ್ದರು ಹಾಗೂ ಇದು ಅವರ ಕೊನೆಯ ಅವಕಾಶವಾಗಿತ್ತು.

ಆದರೆ ಇದೀಗ ಮಹಾರಾಷ್ಟ್ರ ಪೊಲೀಸರ ತನಿಖೆ ಆರಂಭವಾಗಿದ್ದರೂ ಕೂಡ ಇಲ್ಲಿಯವರೆಗೂ ಎಫ್ಐಆರ್ ದಾಖಲಾಗಿಲ್ಲ ಎಂಬುದು ತಿಳಿದು ಬಂದಿದೆ. ಯಾವುದೇ ಎಫ್ಐಆರ್ ದಾಖಲಿಸದೇ ಬರೋಬರಿ 56 ಜನರ ವಿಚಾರಣೆಯನ್ನು ಮಾಡಿರುವುದಾಗಿ ಮಹಾರಾಷ್ಟ್ರ ಪೊಲೀಸರು ಹೇಳಿ ಕೊಂಡಿದ್ದಾರೆ, ಯಾವುದೇ ಹೇಳಿಕೆಗಳು ಕಾನೂನಿಗೆ ಬದ್ಧವಾಗಿಲ್ಲ. ಅಷ್ಟೇ ಅಲ್ಲದೆ ಯಾವುದೇ ವಿಚಾರಣೆ ಅಥವಾ ಹೇಳಿಕೆಗಳನ್ನು ಪಡೆಯುವ ಮುನ್ನ ಎಫ್ಐಆರ್ ದಾಖಲಿಸಬೇಕು ಎಂಬ ಕನಿಷ್ಠ ಜ್ಞಾನ ಕೂಡ ಮಹಾರಾಷ್ಟ್ರ ಪೊಲೀಸರಿಗೆ ಇಲ್ಲದಂತಾಗಿದೆ ಎಂದು ‌ಸಿಬಿಐ ತನಿಖೆಯ ಪರವಾಗಿ ವಕೀಲರು ವಾದ ಮಂಡಿಸಿದ್ದಾರೆ. ದಾಖಲೆ ಸಮೇತ ನಿರೂಪಿಸಿದ ತಕ್ಷಣ ಸುಪ್ರೀಂಕೋರ್ಟ್ ಈ ಕೇಸು ಇನ್ನು ಮಹಾರಾಷ್ಟ್ರ ಅಥವಾ ಬಿಹಾರ ಪೊಲೀಸರ ವ್ಯಾಪ್ತಿಯಲ್ಲಿ ಬರುವುದಿಲ್ಲ. ಈಗಾಗಲೇ ಸಿಬಿಐ ಸಂಸ್ಥೆಯು ಎಫ್ಐಆರ್ ದಾಖಲಿಸಿದೆ ಹಾಗೂ ಸಿಬಿಐ ಸಂಸ್ಥೆಯು ತನಿಖೆಯನ್ನು ಮುಂದುವರಿಸಲಿದೆ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿ ರಿಯಾ ಸೇರಿದಂತೆ ಬಾಲಿವುಡ್ ದಿಗ್ಗಜ ಕನಸನ್ನು ನುಚ್ಚುನೂರು ಮಾಡಿದೆ. ಇದರಿಂದ ಸುಶಾಂತ ಸಿಂಗ್ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದು, ಎಲ್ಲಿ ನೋಡಿದರೂ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಟ್ರೆಂಡಿಂಗ್ ಸೃಷ್ಟಿಸುತ್ತಿದ್ದಾರೆ.