ಎಸ್ಡಿಪಿಐಗೆ ಬಿಗ್ ಶಾಕ್ ನೀಡಿದ ರೆಡ್ಡಿ, ಶಾಕಿಂಗ್ ಮಾಹಿತಿ ಹೊರಕ್ಕೆ, ಬಿಜೆಪಿಗೆ ಮಹಾ ಅಸ್ತ್ರ ! ಏನು ಗೊತ್ತಾ??

ಎಸ್ಡಿಪಿಐಗೆ ಬಿಗ್ ಶಾಕ್ ನೀಡಿದ ರೆಡ್ಡಿ, ಶಾಕಿಂಗ್ ಮಾಹಿತಿ ಹೊರಕ್ಕೆ, ಬಿಜೆಪಿಗೆ ಮಹಾ ಅಸ್ತ್ರ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆ ತಿಳಿದಿರುವಂತೆ ಬೆಂಗಳೂರಿನಲ್ಲಿ ನಡೆದ ಘಟನೆಗೆ ಎಸ್ ಡಿ ಪಿ ಐ ಸಂಘಟನೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂಬ ವರದಿಗಳು ಕೇಳಿ ಬಂದಿವೆ. ಹಲವಾರು ಎಸ್ ಡಿ ಪಿ ಐ ಸಂಘಟನೆಯ ನಾಯಕರು ಹಾಗೂ ಬೆಂಬಲಿಗರು ಈ ಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದು ತಿಳಿದು ಬಂದಿದೆ. ಎಂದಿನಂತೆ ಈ ರೀತಿಯ ಘಟನೆಗಳು ನಡೆದಾಗ ಎರಡು ಮೂರು ದಿನಗಳ ಕಾಲ ಎಸ್ಡಿಪಿಐ ಸಂಘಟನೆಯನ್ನು ಬ್ಯಾನ್ ಮಾಡುವಂತೆ ಒತ್ತಾಯ ಕೇಳಿ ಬರುತ್ತಲೇ ಇರುತ್ತದೆ, ಅದರಂತೆಯೇ ಇದೀಗ ರಾಜ್ಯದ ಎಲ್ಲೆಡೆ ಎಸ್ಡಿಪಿಐ ಸಂಘಟನೆಯನ್ನು ಬ್ಯಾನ್ ಮಾಡುವಂತೆ ಅಭಿಯಾನಗಳು ಆರಂಭವಾಗಿವೆ. ಎಲ್ಲಾ ಅಭಿಯಾನಗಳ ನಡುವೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ರವರು ಶಾಕಿಂಗ್ ಮಾಹಿತಿಯೊಂದನ್ನು ಹೊರಹಾಕಿ, ಎಸ್ಡಿಪಿಐ ಸಂಘಟನೆಗೆ ಶಾಕ್ ನೀಡಿದಷ್ಟೇ ಅಲ್ಲದೇ ಕಾಂಗ್ರೆಸ್ ಪಕ್ಷದ ಮತ ಬ್ಯಾಂಕಿನ ಕುರಿತು ಧ್ವನಿಯೆತ್ತಿದ್ದಾರೆ.

ಇದರಿಂದ ಬಿಜೆಪಿ ಪಕ್ಷಕ್ಕೆ ಮಹಾಅಸ್ತ್ರ ಸಿಕ್ಕಿದಂತಾಗಿದ್ದು, ಈಗಾಗಲೇ ಅಡಕತ್ತರಿಯಲ್ಲಿ ಸಿಲುಕಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸಲು ಉಪಯೋಗವಾಗಲಿರುವುದು ಪಕ್ಕಾ ಆಗಿದೆ. ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ರವರು, ನಾನು ರಾಜ್ಯದಲ್ಲಿ ಗೃಹ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಆರ್ಎಸ್ಎಸ್ ಸಂಘಪರಿವಾರ ಹಾಗೂ ಎಸ್ಡಿಪಿಐ ಸಂಘಟನೆಗಳು ಎಲ್ಲವೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎಲ್ಲರ ಸಿದ್ಧಾಂತಗಳು ಒಂದೇ ರೀತಿಯದ್ದಾಗಿರುತ್ತವೆ, ಇನ್ನು ಎಸ್ಡಿಪಿಐ ಸಂಘಟನೆ ಈ ರೀತಿಯ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಕಾರಣ ರಾಜ್ಯ ಸರ್ಕಾರ ಈ ಕೂಡಲೇ ಎಸ್ಡಿಪಿಐ ಸಂಘಟನೆಯನ್ನು ಬ್ಯಾನ್ ಮಾಡಬೇಕು. ಆದರೆ ಅವರು ಮಾಡುವುದಿಲ್ಲ.

ಯಾಕೆಂದರೆ ಎಸ್ಡಿಪಿಐ ಸಂಘಟನೆಯಿಂದ ಬಿಜೆಪಿ ಪಕ್ಷಕ್ಕೆ ಯಾವುದೇ ತೊಂದರೆ ಇಲ್ಲ, ಅಸಲಿಗೆ ಎಸ್ಡಿಪಿಐ ಸಂಘಟನೆಯಿಂದ ತೊಂದರೆಯಿರುವುದು ಕಾಂಗ್ರೆಸ್ ಪಕ್ಷಕ್ಕೆ. ಮತಗಳು ವಿಭಜನೆ ಯಾಗುವುದು ಕಾಂಗ್ರೆಸ್ ಹಾಗೂ ಎಸ್ಡಿಪಿಐ ಪಕ್ಷಗಳ ನಡುವೆ, ಒಂದು ವೇಳೆ ಎಸ್ಡಿಪಿಐ ಸಂಘಟನೆಯನ್ನು ಬ್ಯಾನ್ ಮಾಡಿದರೇ ಬಿಜೆಪಿಗೆ ಹೆಚ್ಚು ನಷ್ಟವಾಗುತ್ತದೆ. ಅದೇ ಕಾರಣಕ್ಕಾಗಿ ಎಸ್ಡಿಪಿಐ ಸಂಘಟನೆಯನ್ನು ಬಿಜೆಪಿ ಪಕ್ಷ ಬ್ಯಾನ್ ಮಾಡಲು ಸಾಧ್ಯವೇ ಇಲ್ಲ. ನಾನು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿ ಕೇಳುತ್ತಿದ್ದೇನೆ ಎಸ್ಡಿಪಿಐ ಸಂಘಟನೆಯನ್ನು ಬ್ಯಾನ್ ಮಾಡಿ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದ ಬಿಜೆಪಿ ಪಕ್ಷಕ್ಕೆ ಇವರ ಮಾತುಗಳು ಮಹಾ ಅಸ್ತ್ರವಾಗಲಿವೆ, ಕಾಂಗ್ರೆಸ್ ಪಕ್ಷ ಇಂತಹ ಘಟನೆ ಇಲ್ಲಿಯೂ ಕೂಡ ತನ್ನ ಮತಬ್ಯಾಂಕ್ ಭದ್ರಪಡಿಸಿಕೊಳ್ಳಲು ತಯಾರಿ ನಡೆಸುತ್ತಿದೆ, ಇವರ ಹೇಳಿಕೆಗಳನ್ನು ನೋಡಿದರೇ ಏನೇ ಮಾಡಿದರೂ ಮತ ಬ್ಯಾಂಕ್ ಭದ್ರ ಪಡಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನ ಮಾಡುತ್ತದೆ ಎಂಬುದು ಸ್ಪಷ್ಟ ವಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ವಿರುದ್ಧ ಇನ್ನೂ ಹತ್ತು ಹಲವಾರು ಆರೋಪಗಳನ್ನು ಮಾಡಿ ಬಾಣ ಬಿಟ್ಟಿದ್ದಾರೆ.