ಸಚಿನ್ ವಾಪಸ್ಸಾಗುತ್ತಿರುವ ಬೆನ್ನಲ್ಲೇ ಪಕ್ಷಕ್ಕೆ ಮತ್ತೊಂದು ಶಾಕ್ ನೀಡಲು ಮುಂದಾದ ಸಿಎಂ ಅಶೋಕ್ !

ಸಚಿನ್ ವಾಪಸ್ಸಾಗುತ್ತಿರುವ ಬೆನ್ನಲ್ಲೇ ಪಕ್ಷಕ್ಕೆ ಮತ್ತೊಂದು ಶಾಕ್ ನೀಡಲು ಮುಂದಾದ ಸಿಎಂ ಅಶೋಕ್ !

ನಮಸ್ಕಾರ ಸ್ನೇಹಿತರೇ, ಇದೀಗ ಒಂದಂತೂ ಪಕ್ಕ ಆಗಿದೆ ಸಚಿನ್ ಪೈಲೆಟ್ ರವರು ಕಾಂಗ್ರೆಸ್ ಪಕ್ಷದ ಮೇಲೆ ಮುನಿಸಿಕೊಂಡು ನನಗೆ ಮುಖ್ಯಮಂತ್ರಿ ಹುದ್ದೆ ಬೇಕು ಎಂದು ತಮ್ಮದೇ ಆದ ಶಾಸಕರ ಗುಂಪು ರಚಿಸಿಕೊಂಡು ರೆಸಾರ್ಟ್ಗಳಲ್ಲಿ ವಾಸ್ತವ್ಯ ಹೂಡಿ ಸರ್ಕಾರ ಉರುಳಿಸುವ ಹಂತಕ್ಕೆ ತಲುಪಿದ್ದ ವಿದ್ಯಮಾನಗಳ ವಿಚಾರದಲ್ಲಿ ಬಿಜೆಪಿ ಪಕ್ಷದ ಯಾವುದೇ ಕೈವಾಡವಿಲ್ಲ ಎಂದು ಖಚಿತವಾಗಿದೆ. ಯಾಕೆಂದರೆ ಮೊದಲಿನಿಂದಲೂ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿದಂತೆ ಸೋನಿಯಾ ಗಾಂಧಿ ಅವರ ಜೊತೆ ಮಾತುಕತೆ ನಡೆಸಲು ಮನವಿ ಮಾಡುತ್ತಿದ್ದ ಸಚಿನ್ ಪೈಲೆಟ್ ರವರು ಪ್ರತಿಬಾರಿಯೂ ಅವರು ಹೇಳಿದ ಮಾತುಗಳನ್ನು ತಿರಸ್ಕಾರ ಮಾಡುತ್ತಿದ್ದರು. ಆದರೆ ಬಿಜೆಪಿ ಪಕ್ಷಕ್ಕೆ ಸೇರುತ್ತೇನೆ ಎಂದು ಎಲ್ಲೂ ಹೇಳಿರಲಿಲ್ಲ ಹಾಗೂ ಬಿಜೆಪಿ ಪಕ್ಷ ಉಪ ಮುಖ್ಯಮಂತ್ರಿ ಹುದ್ದೆಯನ್ನು ನೀಡುತ್ತೇವೆ ಎಂದರೂ ಕೂಡ ಬೇಡ ಎಂದು ನಯವಾಗಿ ತಿರಸ್ಕರಿಸಿದ್ದರು.

ಮತ್ತೊಂದು ಪಕ್ಷ ಕಟ್ಟುವ ಆಲೋಚನೆಯಲ್ಲಿ ಸಚಿನ್ ಪೈಲೆಟ್ ರವರು ಇದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಕೊನೆಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸಚಿನ್ ಪೈಲೆಟ್ ಅವರ ಮನವೊಲಿಸಿ ರಾಜಸ್ಥಾನಕ್ಕೆ ವಾಪಸ್ಸು ಕಳುಹಿಸಲು ಎಲ್ಲಾ ತಯಾರಿ ಮಾಡಿದ್ದಾರೆ. ಇನ್ನೇನು ಕೆಲವೇ ಕೆಲವು ಗಂಟೆಗಳಲ್ಲಿ ಸಚಿನ್ ಪೈಲೆಟ್ ರವರು ತಮ್ಮ ಶಾಸಕರ ಸಂಪೂರ್ಣ ಗುಂಪನ್ನು ಕರೆದುಕೊಂಡು ರೆಸಾರ್ಟ್ ಗಳಿಂದ ರಾಜಸ್ಥಾನದ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ. ಸಚಿನ್ ಪೈಲೆಟ್ ರವರ ಅಸಮಾಧಾನಗಳನ್ನು ಪರಿಹರಿಸಲು ಕಾಂಗ್ರೆಸ್ ಪಕ್ಷವು ಹಿರಿಯ ಮೂರು ನಾಯಕರನ್ನು ಒಟ್ಟಾಗಿ ಸೇರಿಸಿ ಪ್ರತ್ಯೇಕ ಸಮಿತಿಯೊಂದನ್ನು ರಚಿಸಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲೆಟ್ ಅವರ ನಡುವಿನ ಎಲ್ಲ ಅಸಮಾಧಾನಗಳನ್ನು ನಿವಾರಣೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಆದರೆ ಅಷ್ಟರಲ್ಲಾಗಲೇ ಇಂದು ಅಶೋಕ್ ಗೆಹ್ಲೋಟ್ ರವರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ನಿರ್ಧಾರಗಳಿಂದ ಬೇಸತ್ತಿರುವ ಅಶೋಕ ಗೆಹ್ಲೊಟ್ ರವರು ಸಚಿನ್ ಪೈಲೆಟ್ ರವರು, ರಾಜಸ್ಥಾನಕ್ಕೆ ಆಗಮಿಸಿದ ತಕ್ಷಣ ಈಗಾಗಲೇ ಹೊರಡಿಸಿರುವ ಎಲ್ಲಾ ಆದೇಶಗಳನ್ನು ವಾಪಸು ಪಡೆದ ನಂತರ ತಾವು ಕೂಡ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ ರಾಜೀನಾಮೆ ನೀಡಿದ ಬಳಿಕ ಮುಂದೇನು ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ, ಬಹುಶಹ ಅಶೋಕ್ ಗೆಹ್ಲೋಟ್ ರವರು ರಾಜೀನಾಮೆ ನೀಡಿದರೇ ಸಚಿನ್ ಪೈಲೆಟ್ ರವರು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಡಲಿದ್ದಾರೆ, ಆಗ ಪಕ್ಷದಲ್ಲಿ ಭಿನ್ನಮತಗಳು ಹುಟ್ಟಿಕೊಳ್ಳುತ್ತವೆ, ಆ ಸಮಯದಲ್ಲಿ ತಮ್ಮ ನಾಯಕತ್ವನ್ನು ಪ್ರದರ್ಶಿಸಿ ತಾನು ಯಾಕೆ ಕಾಂಗ್ರೆಸ್ ಗೆ ಮುಖ್ಯ ಎಂಬುದನ್ನು ಸಾಭೀತು ಪಡಿಸಲು ಅಶೋಕ್ ಗೆಹಲೋಟ್ ರವರು ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಒಂದು ವೇಳೆ ಅದೇ ನಡೆದಲ್ಲಿ ಕಾಂಗ್ರೆಸ್ ಪಕ್ಷ ರಾಜಸ್ಥಾನದಲ್ಲಿ ಪ್ರತ್ಯೇಕ ಗುಂಪುಗಳಾಗಿ ವಿಭಜನೆ ಯಾಗಲಿದೆ ಎಂದು ಹೇಳಲಾಗುತ್ತಿದೆ.