ಶಾಂತಿ’ದೂತರು ದೇಗುಲದ ಸುತ್ತ ಸರಪಳಿ ನಿರ್ಮಿಸಿ ಕಾವಲು ಕಾಯ್ದರು ಎನ್ನುತ್ತಿರುವ ವಿಡಿಯೋ ಅಸಲಿ ಕಥೆ ಬಹಿರಂಗ

ನಮಸ್ಕಾರ ಸ್ನೇಹಿತರೇ, ನಿನ್ನೆ ಬೆಂಗಳೂರಿನಲ್ಲಿ ಯಾವ ರೀತಿಯ ಘಟನೆ ನಡೆದಿದೆ ಎಂಬುದು ಈಗಾಗಲೇ ನಿಮಗೆಲ್ಲರಿಗೂ ತಿಳಿದಿದೆ. ಈ ಘಟನೆ ನಡೆದ ಬೆನ್ನಲ್ಲೇ ನಾಯಕರು ತಮ್ಮ ಮ-‘ತ ಬ್ಯಾಂಕುಗಳನ್ನು ಉಳಿಸಿ ಕೊಳ್ಳಲು ಮಾತಿನಲ್ಲಿಯೇ ದ್ವಂದ ಹೇಳಿಕೆಗಳನ್ನು ನೀಡುವ ಮೂಲಕ ಎಂದಿನಂತೆ ಘಟನೆಯಲ್ಲಿ ಭಾಗಿಯಾದ ಯುವಕರ ಪರೋಕ್ಷ ಬೆಂಬಲಕ್ಕೆ ನಿಂತಿದ್ದಾರೆ. ಎಂದಿನಂತೆ ಮಾಧ್ಯಮಗಳ ಮುಂದೆ ಮೈಕುಗಳಲ್ಲಿ ಮಾತನಾಡಿ ಸಮಾಧಾನ ಮಾಡುವ ಕಾರ್ಯ ನಡೆಸಿದ ನಾಯಕರೇ ತಮ್ಮ ವೈಯಕ್ತಿಕ ಲಾಭಕ್ಕಾಗಿ ಈ ರೀತಿಯ ಕೆಲಸಗಳನ್ನು ಮಾಡಿಸಿದ್ದಾರೆ ಎಂದು ಪೊಲೀಸರು ಪ್ರಾರ್ಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.‌ ಇನ್ನು ಈ ಕುರಿತು ಈಗಾಗಲೇ ಹಲವಾರು ಯುವಕರನ್ನು ಹಾಗೂ ಪ್ರಮುಖ ಮುಖಂಡರನ್ನು ಅರೆಸ್ಟ್ ಮಾಡಲಾಗಿದೆ.

ಈ ಎಲ್ಲಾ ವಿದ್ಯಮಾನಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯಲ್ಲಿ ಭಾಗಿಯಾಗಿದ್ದ ಹಲವಾರು ಯುವಕರು ಹಿಂದೂ ದೇಗುಲವನ್ನು ರಕ್ಷಿಸಲು ಮಾನವ ಸರಪಳಿಯನ್ನು ನಿರ್ಮಿಸಿ ಸೌಹಾರ್ದತೆ ಮೆರೆದಿದ್ದಾರೆ ಎಂಬ ‌ವಿಡಿಯೋ ವೈರಲ್ ಆಗಿದೆ. ಅಸಲಿಗೆ ಈ ವಿಡಿಯೋ ಅನ್ನು ಯಾವ ಮಾಧ್ಯಮಗಳು ರೆಕಾರ್ಡ್ ಮಾಡಲು ಸಾಧ್ಯವಾಗಿಲ್ಲ, ಯಾಕೆಂದರೆ ಯಾವುದೇ ಮಾಧ್ಯಮಗಳಿಗೆ ಅಲ್ಲಿ ಹೋಗಲು ಅವಕಾಶ ಇರಲಿಲ್ಲ. ಹಾಗೆಂದು ಘಟನೆ ನಡೆದಿಲ್ಲ ಎಂದು ನೆಟ್ಟಿಗರು ಹೇಳುತ್ತಿಲ್ಲ, ಹೌದು ಮಾನವ ಸರಪಳಿ ನಿರ್ಮಿಸಿದ್ದಾರೆ ಒಪ್ಪಿಕೊಳ್ಳುತ್ತೇವೆ ಆದರೆ ಯಾವ ಕಾರಣಕ್ಕೆ ಮಾನವ ಸರಪಳಿಯನ್ನು ನಿರ್ಮಿಸಿದ್ದಾರೆ ಎಂದು ಕೇಳಿ, ಈ ನಡೆಯ ಹಿಂದಿರುವ ಅಸಲಿ ಕಥೆಯನ್ನು ಬಹಿರಂಗ ಪಡಿಸಿದ್ದಾರೆ ನೆಟ್ಟಿಗರು. (ವಿಡಿಯೋ ದಲ್ಲಿದೆ ಅಸಲಿಯತ್ತು ಎಂದು ಹೊಸ ವಿಡಿಯೋ ರಿಲೀಸ್ ಮಾಡಿದ್ದಾರೆ.)

ಮಾನವ ಸರಪಳಿ ನಿರ್ಮಿತವಾದ ವಿಡಿಯೋವನ್ನು ಬಳಸಿಕೊಂಡು ಇವರೆಲ್ಲರೂ ಶಾಂತಿ ಕಾಪಾಡಲು ಮೊದಲು ಪೊಲೀಸರ ಬಳಿ ತೆರಳಿದರು, ಪೊಲೀಸರು ನಾಳೆ ಮುಂಜಾನೆ ಕ್ರಮ ಕೈಗೊಳ್ಳುತ್ತೇವೆ ಎಂದ ತಕ್ಷಣ ತಾಳ್ಮೆ ಕಳೆದು ಕೊಂಡರು. ಇವರು ಮಾಡಿರುವುದು ತಪ್ಪಿರಬಹುದು, ಆದರೆ ಅವರು ಕೂಡ ಸೌಹಾರ್ದತೆ ಮೆರೆದಿದ್ದಾರೆ ಎಂದು ಕೆಲವು ಮಾಧ್ಯಮಗಳು ಟಿಆರ್ಪಿ ಬೆಳೆಸಿಕೊಳ್ಳುವ ಕಾರ್ಯಗಳಲ್ಲಿ ನಿರತರಾಗಿದ್ದಾರೆ ಹಾಗೂ ಇನ್ನು ಕೆಲವು ಬುದ್ಧಿ ಜೀವಿಗಳು ಇವರ ಬೆಂಬಲಕ್ಕೆ ಬಹಿರಂಗವಾಗಿ ನಿಂತಿದ್ದಾರೆ. ಆದರೆ ಈ ವಿಡಿಯೋವನ್ನು ಅವರೇ ರೆಕಾರ್ಡ್ ಮಾಡಿ ರಿಲೀಸ್ ಮಾಡಿದ್ದಾರೆ, ಮತ್ತೊಂದು ವಿಡಿಯೋ ಅನ್ನೋ ರೆಕಾರ್ಡ್ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿರುವ ವ್ಯಕ್ತಿ ಸ್ಪಷ್ಟವಾಗಿ ಈ ವಿಡಿಯೋವನ್ನು ಅಪ್ಲೋಡ್ ಬೇಗ ಮಾಡು ಎಂದು ಹೇಳಿರುವ ಮಾತು ವಿಡಿಯೋದಲ್ಲಿ ಮಿಸ್ಸಾಗಿ ರೆಕಾರ್ಡ್ ಹಾಗಿದೆ. ಅಂದರೆ ಈ ವಿಡಿಯೋ ಅನ್ನು ಅಪ್ಲೋಡ್ ಮಾಡಿ, ಒಂದು ಪಬ್ಲಿಕ್ ಸ್ಟಂಟ್ ಮಾಡಲು ಈ ರೀತಿಯ ಕಾರ್ಯಗಳನ್ನು ಮಾಡಿದ್ದಾರೆಯೇ? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.‌ ಇದು ಕೇವಲ ತಮ್ಮ ಬೆಂಬಲಕ್ಕೆ ನಿಲ್ಲುವ ನಾಯಕರು ಹಾಗೂ ಬುದ್ಧಿ ಜೀವಿಗಳಿಗೆ ಒಂದು ಪಾಯಿಂಟ್ ನೀಡಲು ಬಳಸಿದ ಮಾರ್ಗ ಎಂಬುದು ಸ್ಪಷ್ಟವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ವಿಡಿಯೋ ಇದೀಗ ಬಹಿರಂಗಗೊಂಡಿದ್ದು ಮೇಲಿನ ಪೋಸ್ಟ್ನಲ್ಲಿ ಇದೆ ನೀವೇ ನೋಡಿ.

Facebook Comments

Post Author: Ravi Yadav