ಆಗಸ್ಟ್ 15 ರಂದು ಭಾಷಣದ ಮೂಲಕ ಮೋದಿ ಮಾಡಲಿರುವ ಅತಿದೊಡ್ಡ ಘೋಷಣೆ ಬಹಿರಂಗ ! ಏನು ಗೊತ್ತಾ??

ಆಗಸ್ಟ್ 15 ರಂದು ಭಾಷಣದ ಮೂಲಕ ಮೋದಿ ಮಾಡಲಿರುವ ಅತಿದೊಡ್ಡ ಘೋಷಣೆ ಬಹಿರಂಗ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಭಾರತ ದೇಶವು ಸ್ವತಂತ್ರ ದಿನಾಚರಣೆಯ ಸಂಭ್ರಮದಲ್ಲಿ ತೊಡಗಿಕೊಳ್ಳಲಿದೆ. ದೇಶದಲ್ಲಿ ಕೊರೋನಾ ಪರಿಸ್ಥಿತಿ ಇಲ್ಲದಿದ್ದರೆ ಎಲ್ಲಾ ಕಡೆ ಒಟ್ಟಾಗಿ ಸೇರಿ ದ್ವಜಾರೋಹಣದ ಮೂಲಕ ಸ್ವತಂತ್ರ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ಇನ್ನು ಕೆಂಪು ಕೋಟೆಯ ಮೇಲೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಿ ದೇಶದ ಕುರಿತು ಹಲವಾರು ಮಹತ್ವದ ಸುದ್ದಿಗಳನ್ನು ಹೊರ ಹಾಕಿ ಮುಂದಿನ ವರ್ಷದಲ್ಲಿ ಯಾವ ರೀತಿಯ ಯೋಜನೆ ರೂಪಿಸುತ್ತೇವೆ ಎಂಬುದರ ಕುರಿತು ಚಿತ್ರಣ ನೀಡುತ್ತಿದ್ದರು. ಆದರೆ ಈ ಬಾರಿ ಕೆಂಪು ಕೋಟೆಯಲ್ಲಿ ಬಾರಿ ಜನಸ್ತೋಮಕ್ಕೆ ಅನುಮತಿ ಇಲ್ಲ, ಬೆರಳೆಣಿಕೆಯ ಜನರ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ನಡೆಯಲಿದೆ. ಈ ಸಮಯದಲ್ಲಿ ಪ್ರತಿ ವರ್ಷದಂತೆ ಯಾವ ರೀತಿಯ ಯೋಜನೆಗಳನ್ನು ನರೇಂದ್ರ ಮೋದಿ ರವರು ಘೋಷಿಸಬಹುದು ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ.

ಇದೀಗ ನರೇಂದ್ರ ಮೋದಿ ಅವರ ಭಾಷಣದ ಪ್ರಮುಖ ಅಂಶ ಏನು ಎಂಬುದು ಎಲ್ಲರಿಗೂ ತಿಳಿದಿರಬಹುದು, ಆದರೆ ನಮ್ಮೆಲ್ಲರ ಲೆಕ್ಕಾಚಾರ ಕೇವಲ ಊಹೆಗಳು ಮಾತ್ರ, ಅಧಿಕೃತವಾಗಿ ಆದೇಶ ಬರುವವರೆಗೂ ಎಲ್ಲೋ ಒಂದು ಕಡೆ ಅನುಮಾನ ಇದ್ದೇ ಇರುತ್ತದೆ. ಆದರೆ ಇದೀಗ ಕೇಂದ್ರ ಸಚಿವರಾಗಿರುವ ರಾಜನಾಥ್ ಸಿಂಗ್ ರವರು ಮಾತನಾಡಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಮೇಲೆ ನಿಂತು ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಮಾತನಾಡುವ ಭಾಷಣದ ಪ್ರಮುಖ ಕಾರ್ಯಸೂಚಿ ಯೋಜನೆಯ ಬಗ್ಗೆ ಮಾತನಾಡಿದ್ದಾರೆ. ಈ ಕುರಿತು ನರೇಂದ್ರ ಮೋದಿ ಯವರು ಕೆಂಪು ಕೋಟೆಯ ಮೇಲೆ ನಿಂತು ಯಾವುದರ ಕುರಿತು ಮಾತನಾಡಲಿದ್ದಾರೆ ಎಂಬುದು ಸ್ಪಷ್ಟವಾದಂತಿದೆ.

ಹೌದು ಸ್ನೇಹಿತರೇ ಇದೀಗ ನರೇಂದ್ರ ಮೋದಿ ಅವರ ಭಾಷಣದ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಈಗಾಗಲೇ ಭಾರತ ದೇಶವನ್ನು ಸ್ವಾವಲಂಬಿ ಮಾಡುವ ಸಲುವಾಗಿ ಹಲವಾರು ಹೆಜ್ಜೆಗಳನ್ನು ಇಟ್ಟಿದ್ದೇವೆ. ಕೇವಲ ನೆನ್ನೆಯಷ್ಟೇ ರಕ್ಷಣಾ ಕ್ಷೇತ್ರದಲ್ಲಿ 101 ಸರಕುಗಳನ್ನು ಭಾರತದಲ್ಲಿಯೇ ತಯಾರಿ ಮಾಡೋಣ ಎಂಬ ನಿರ್ಧಾರದ ಮೂಲಕ ನಾವು ಒಂದು ಕಠಿಣ ಹೆಜ್ಜೆಯನ್ನು ಇಟ್ಟಿದ್ದೇವೆ. ಇದು ಕೇವಲ ಆರಂಭ ಮಾತ್ರ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಮೇಲೆ ನಿಂತು ಭಾಷಣದಲ್ಲಿ ಇನ್ನೂ ಸ್ವಾವಲಂಬಿ ಭಾರತದ ಪ್ರಮುಖ ಕಾರ್ಯಸೂಚಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಭಾರತ ದೇಶವು ಸ್ವಾವಲಂಬಿ ಭಾರತದ ಹೊಸ ಹೆಜ್ಜೆ ಇಡುವ ಸಲುವಾಗಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಲೆಕ್ಕಾಚಾರಗಳಿಗೆ ತೆರೆ ಎಳೆದಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ನರೇಂದ್ರ ಮೋದಿ ರವರ ಭಾಷಣ ಪ್ರಮುಖವಾಗಿ ಸ್ವದೇಶಿ ಭಾರತವನ್ನು ಕಟ್ಟುವತ್ತ ಹೆಜ್ಜೆಗಳ ಕುರಿತು ಕೇಂದ್ರ ಸರ್ಕಾರ ತೆಗೆದು ಕೊಳ್ಳಬೇಕಾದ ನಿರ್ಧಾರಗಳು ಹಾಗೂ ಕಾರ್ಯಸೂಚಿಗಳ ಬಗ್ಗೆ ಇರಲಿದೆ ಎಂಬುದು ಸ್ಪಷ್ಟವಾಗಿದೆ. ಆದರೆ ಇನ್ನು ಹಲವಾರು ಕಾರ್ಯ ಸೂಚಿಗಳನ್ನು ಬಿಡುಗಡೆ ಮಾಡಿದರೂ ಆಶ್ಚರ್ಯ ಪಡಬೇಕಿಲ್ಲ.