ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಆಂತರಿಕ ಭಿನ್ನಮತ ! ಈಗಾಗಲೇ ಮುಳುಗುತ್ತಿರುವ ಪಕ್ಷಕ್ಕೆ ಬಿಗ್ ಶಾಕ್ ! ನಡೆಯುತ್ತಿರುವುದಾದರೂ ಏನು ಗೊತ್ತಾ??

ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಆಂತರಿಕ ಭಿನ್ನಮತ ! ಈಗಾಗಲೇ ಮುಳುಗುತ್ತಿರುವ ಪಕ್ಷಕ್ಕೆ ಬಿಗ್ ಶಾಕ್ ! ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಪುಣ್ಯಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿದೆ. ರಾಮ ಮಂದಿರ ನಿರ್ಮಾಣ ಕಾರ್ಯ ಊಹಿಸಿದಂತೆ ಒಂದು ರಾಜಕೀಯ ತಿರುವು ಪಡೆದುಕೊಂಡಿದೆ. ಬಿಜೆಪಿ ಪಕ್ಷವು ಮೊದಲಿನಿಂದಲೂ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿ ಚುನಾವಣೆಗಳಲ್ಲಿ ಪ್ರಮುಖ ಅಂಶವಾಗಿ ತೋರಿಸಿತ್ತು, ಅದರಂತೆ ಇದೀಗ ರಾಮ ಮಂದಿರ ನಿರ್ಮಾಣ ಕಾರ್ಯ ಕೂಡ ನಡೆಯುತ್ತಿದೆ. ಆದರೆ ಕಾಂಗ್ರೆಸ್ ಪಕ್ಷವು ಜಾತ್ಯತೀತ ಎಂಬ ಭಾವನೆಯಿಂದ ಬಿಜೆಪಿ ಪಕ್ಷದ ಪ್ರಣಾಳಿಕೆಯ ವಿರುದ್ಧ ಕಿಡಿಕಾರುತ್ತಾ ಪ್ರಚಾರ ನಡೆಸಿತ್ತು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇದೀಗ ರಾಮ ಮಂದಿರ ನಿರ್ಮಾಣ ವಾಗುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ರಾಮ ಮಂದಿರದ ಪರವಾಗಿ ಧ್ವನಿ ಎತ್ತಿದ್ದಾರೆ, ಒಂದೆಡೆ ಪ್ರಿಯಾಂಕಾ ಗಾಂಧಿ ರವರು ಶುಭ ಕೋರಿದರೇ, ಮತ್ತೊಂದೆಡೆ ಕಮಲ್ನಾಥ್ ರವರು ಮನೆಯಲ್ಲಿ ವಿಶೇಷ ಕಾರ್ಯಕ್ರಮದ ಮೂಲಕ ಹನುಮಾನ್ ಚಾಲೀಸ ಪಠಿಸಿ ಸಂಭ್ರಮ ಪಟ್ಟಿದ್ದಾರೆ. ರಾಜ್ಯದ ಕಾಂಗ್ರೆಸ್ ನಾಯಕರೂ ಕೂಡ ಶ್ರೀ ರಾಮ ಬಿಜೆಪಿ ಪಕ್ಷದ ಸ್ವತ್ತಲ್ಲ, ರಾಮ ಮಂದಿರ ನಿರ್ಮಾಣದಲ್ಲಿ ಬಿಜೆಪಿ ಪಕ್ಷದ ಯಾವುದೇ ಪಾತ್ರವಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ ಹಲವಾರು ನಾಯಕರ ನಡೆ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಭುಗಿಲೇಳುವಂತೆ ಮಾಡಿದೆ. ಹೌದು ಸ್ನೇಹಿತರೇ, ಇದೀಗ ಕಮಲ್ನಾಥ್, ಪ್ರಿಯಾಂಕ ಗಾಂಧಿ ಸೇರಿದಂತೆ ಹಲವಾರು ನಾಯಕರು ರಾಮ ಮಂದಿರ ಪರವಾದ ಹೇಳಿಕೆ ನೀಡಿರುವ ಕಾರಣ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಹುಟ್ಟಿಕೊಂಡಿದ್ದು, ಹಲವಾರು ಹಿರಿಯ ನಾಯಕರು ಜಾತ್ಯತೀತತೆ ಪದದ ಅರ್ಥ ತಿಳಿದುಕೊಳ್ಳಿ ಎಂದು ಧ್ವನಿ ಎತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ಪ್ರಮುಖ ವೋಟ್ಬ್ಯಾಂಕ್ ಆಗಿದ್ದ ಮುಸ್ಲಿಂ ಸಮುದಾಯದ ನಾಯಕರು ಕೂಡ ಕಾಂಗ್ರೆಸ್ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬಹಿರಂಗವಾಗಿ ಬೆಂಬಲಿಸುತ್ತಿದ್ದ ಮುಸ್ಲಿಂ ಸಂಘಟನೆಗಳು ಹಾಗೂ ನಾಯಕರು ಒಟ್ಟಾರೆಯಾಗಿ ಸೇರಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಹಲವಾರು ಪತ್ರಗಳನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಪತ್ರಗಳನ್ನು ಬಿಡುಗಡೆ ಮಾಡಿ, ಕಾಂಗ್ರೆಸ್ ಪಕ್ಷ ಈ ರೀತಿಯ ನಡೆ ಅನುಸರಿಸುತ್ತದೆ ಎಂದು ನಾವು ಎಂದು ಅಂದುಕೊಂಡಿರಲಿಲ್ಲ.

ಕಾಂಗ್ರೆಸ್ ಪಕ್ಷ ಜಾತ್ಯಾತೀತತೆಗೆ ಹೆಸರು ವಾಸಿಯಾಗಿದೆ. ಆದರೆ ಕೆಲವು ನಾಯಕರು ಇಷ್ಟು ದಿವಸ ರಾಮ ಮಂದಿರದ ಕುರಿತು ಎಲ್ಲಿಯೂ ಮಾತನಾಡದೇ ಇದೀಗ ಜಾತ್ಯತೀತತೆ ಮರೆತು, ಮನೆಯಲ್ಲಿ ಹೋಮ-ಹವನಗಳು ಸೇರಿದಂತೆ ರಾಮ ಮಂದಿರ ನಿರ್ಮಾಣದ ಕಾರ್ಯವನ್ನು ಸಂಭ್ರಮಿಸುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಜಾತ್ಯತೀತತೆಗೆ ಧಕ್ಕೆ ತರುತ್ತದೆ ಎಂದು ತಮ್ಮದೇ ಆದ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇನ್ನು ರಾಜಕೀಯ ಪಂಡಿತರ ಲೆಕ್ಕಾಚಾರಗಳ ಪ್ರಕಾರ ಕಾಂಗ್ರೆಸ್ ಪಕ್ಷವು ಒಂದು ವೇಳೆ ಈ ಎಲ್ಲಾ ಮುಸ್ಲಿಂ ಸಮುದಾಯಗಳ ಹಾಗೂ ನಾಯಕರ ವಿಶ್ವಾಸ ಗಳಿಸಲು ವಿಫಲವಾದಲ್ಲಿ ಈಗಾಗಲೇ ದೇಶದಲ್ಲಿ ಬಹುತೇಕ ನೆಲಕಚ್ಚಿರುವ ಕಾಂಗ್ರೆಸ್ ಪಕ್ಷವು ಮುಳುಗಿ ಹೋಗಲಿದೆ. ಈ ಎಲ್ಲಾ ವಿದ್ಯಮಾನಗಳನ್ನು ನೋಡುತ್ತಿದ್ದರೇ, ಕಾಂಗ್ರೆಸ್ ಮುಕ್ತ ಭಾರತ ಎಂಬ ಬಿಜೆಪಿಯ ಆಲೋಚನೆ ಸತ್ಯ ವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.