ಕೊನೆಗೂ ಜನಾದೇಶಕ್ಕೆ ಮಣಿದ ಬಿಸಿಸಿಐ ! ಆದರೆ ಇದು ತಾತ್ಕಾಲಿಕ ! ಹೊಸ ಧಾಳ ಉರುಳಿಸಿ ವಿವೋ ಮಾಡಿರುವ ಪ್ಲಾನ್ ಏನು ಗೊತ್ತಾ?

ಕೊನೆಗೂ ಜನಾದೇಶಕ್ಕೆ ಮಣಿದ ಬಿಸಿಸಿಐ ! ಆದರೆ ಇದು ತಾತ್ಕಾಲಿಕ ! ಹೊಸ ಧಾಳ ಉರುಳಿಸಿ ವಿವೋ ಮಾಡಿರುವ ಪ್ಲಾನ್ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ವಿವೋ ಕಂಪನಿಯು ದೇಶದಲ್ಲೆಡೆ ಚೀನಾ ವಸ್ತುಗಳನ್ನು ಬಳಸದಂತೆ ಅಭಿಯಾನಗಳು ನಡೆಯುತ್ತಿವೆ ಇಂತಹ ಸಂದರ್ಭದಲ್ಲಿ ನಾವು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಐಪಿಎಲ್ ಆಯೋಜನೆ ಮಾಡಲು ಸಾಧ್ಯವಿಲ್ಲ, ನಮ್ಮ ಒಪ್ಪಂದವನ್ನು ರದ್ದುಪಡಿಸಿ ಎಂದು ಬಿಸಿಸಿಐಗೆ ಮನವಿ ಮಾಡಿ ಕೊಂಡಿತ್ತು. ಹಲವಾರು ಸುತ್ತಿನ ಮಾತುಕತೆಗಳ ನಂತರ ಜನಾದೇಶಕ್ಕೆ ಒಪ್ಪಿಕೊಂಡಿರುವ ಬಿಸಿಸಿಐ ಸಂಸ್ಥೆಯು ಇದೀಗ ಅಧಿಕೃತವಾಗಿ ವಿವೋ ಕಂಪನಿಯ ಮನವಿಯನ್ನು ಅಂಗೀಕಾರ ಮಾಡಿ ಆದೇಶ ಹೊರಡಿಸಿದೆ. ಈ ಬಾರಿಯ ಐಪಿಎಲ್ ಟೂರ್ನಿಯು ವಿವೋ ಕಂಪನಿಯ ಪ್ರಾಯೋಜಕತ್ವದ ಬದಲು ಇತರ ಕಂಪನಿಗಳಿಗೆ ಅವಕಾಶ ನೀಡಲು ನಿರ್ಧಾರ ಮಾಡಲಾಗಿದೆ. ಆದರೆ ಹೊಸ ದಾಳ ಉರುಳಿಸಿರುವ ವಿವೊ ಕಂಪನಿಯು ಈಗಾಗಲೇ ಒಪ್ಪಂದ ನಡೆದು ಹೋಗಿರುವ ಕಾರಣ ಬಿಸಿಸಿಐ ಸಂಸ್ಥೆಯನ್ನು ತನ್ನ ಕಪಿ ಮುಷ್ಟಿಯಲ್ಲಿ ಸಿಲುಕಿಕೊಳ್ಳುವಂತೆ ಮಾಡಿದೆ. ವಿವೋ ಕಂಪನಿಯು ಇದೇ ಅವಕಾಶವನ್ನು ಬಳಸಿಕೊಂಡು ಹೊಸ ದಾಳ ಉರುಳಿಸಿದ್ದನ್ನು ಕಂಡ ಕಂಡ ನೆಟ್ಟಿಗರು ವಿವೊ ಕಂಪನಿಗೆ ಬುದ್ಧಿ ಕಲಿಸದೇ ಬಿಡೋಲ್ಲ ಎಂದಿದ್ದಾರೆ.

ಹೌದು ಸ್ನೇಹಿತರೇ, ಭಾರತದಲ್ಲಿ ಈ ಹಿಂದೆಯೂ ಹಲವಾರು ಬಾರಿ ಚೀನಾ ವಸ್ತುಗಳನ್ನು ಖರೀದಿಸಬಾರದು ಎಂಬ ಅಭಿಯಾನಗಳು ಆರಂಭವಾಗಿತ್ತಾದರೂ ಅದು ಕೇವಲ ಸಾಮಾನ್ಯ ಜನರಿಗೆ ಸೀಮಿತವಾಗಿತ್ತು. ಆದರೆ ಈ ಬಾರಿ ಸೆಲೆಬ್ರಿಟಿಗಳಿಂದ ಹಿಡಿದು ಪ್ರತಿಯೊಬ್ಬರು ಚೀನಾ ವಸ್ತುಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡೋಣ ದಿನೇ ದಿನೇ ಇಲ್ಲಿಯೇ ಉತ್ಪಾದನೆ ಮಾಡೋಣ, ಒಮ್ಮೆಲೆ ಎಲ್ಲವನ್ನು ನಿಲ್ಲಿಸುವುದು ಅಸಾಧ್ಯವಾಗ ಬಹುದು. ಆದರೆ ಖಂಡಿತ ಮುಂದೊಂದು ದಿನ ನಾವು ಸ್ವದೇಶಿ ಭಾರತವನ್ನು ಕಟ್ಟಬಹುದು ಹಾಗೂ ಚೀನಾ ವಸ್ತುಗಳಿಗೆ ಸಂಪೂರ್ಣವಾಗಿ ಬ್ರೇಕ್ ಹಾಕಬಹುದು ಎಂದು ಅಭಿಯಾನಗಳನ್ನು ಆರಂಭಿಸುವ ಮೂಲಕ ಇಡೀ ದೇಶದ ಮೂಲೆ ಮೂಲೆಯಲ್ಲಿಯೂ ಸದ್ದು ಕೇಳಿಬರುವಂತೆ ಮಾಡಿದ್ದಾರೆ, ಈ ಅಭಿಯಾನಗಳಿಂದ ವಿವೊ ಕಂಪನಿಯ ಮೊಬೈಲ್ ಗಳ ಸೇಲ್ ಕುಸಿದಿದೆ. ಅದೇ ಕಾರಣಕ್ಕಾಗಿ ವಿವೋ ಕಂಪನಿಯು ಈ ಬಾರಿ ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ.

ಆದರೆ ಇದರ ಬೆನ್ನಲ್ಲೇ ಮತ್ತೊಂದು ದಾಳ ಉರುಳಿಸಿರುವ ವಿವೊ ಕಂಪನಿಯು ಮುಂದಿನ ವರ್ಷದ ವೇಳೆಗೆ ಈ ಎಲ್ಲಾ ಅಭಿಯಾನಗಳು ಕಡಿಮೆಯಾಗಿರುತ್ತವೆ, ಆದ ಕಾರಣ ಹೇಗಿದ್ದರೂ ನಾವು ನಿಮ್ಮ ಬಳಿ 2022 ರ ವರೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಈ ಒಪ್ಪಂದದ ಆಧಾರದ ಮೇರೆಗೆ ಮುಂದಿನ ವರ್ಷ ಮತ್ತೆ ನಮಗೆ ಐಪಿಎಲ್ ಪ್ರಾಯೋಜಕತ್ವವನ್ನು ನೀಡಬೇಕು ಎಂದು ಮನವಿ ಮಾಡಿದೆ. ಬಿಸಿಸಿಐ ಸಂಸ್ಥೆಯಲ್ಲಿ ಒಪ್ಪಂದ ರದ್ದು ಮಾಡುವ ಮಾತುಗಳು ಕೇಳಿಬಂದರೂ ಕೂಡ ವಿವೋ ಕಂಪನಿಯು ಒಪ್ಪದೇ ಮುಂದಿನ ವರ್ಷ ಈ ರೀತಿ ಯಾವುದೇ ಅಭಿಯಾನಗಳು ಇರುವುದಿಲ್ಲ, ಪರಿಸ್ಥಿತಿಯ ಅವಲೋಕನ ಮಾಡಿ ನಾವು ನಿರ್ಧಾರ ತೆಗೆದು ಕೊಳ್ಳುತ್ತೇವೆ ಎಂಬ ದಾಳ ಉರುಳಿಸಿದೆ. ಒಟ್ಟಿನಲ್ಲಿ ಈ ಬಾರಿಯಂತೂ ಐಪಿಎಲ್ ಟೂರ್ನಿಯ ಪ್ರಾಯೋಜಕತ್ವವನ್ನು ವಿವೊ ಕಂಪನಿ ನಡೆಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಇದನ್ನು ಕಂಡ ನೆಟ್ಟಿಗರು, ಈ ಬಾರಿಯಲ್ಲ ಇನ್ನು ಎಷ್ಟೇ ಐಪಿಎಲ್ ಗಳು ನಡೆದರೂ ವಿವೋ ಕಂಪನಿ ಪ್ರಾಯೋಜಕತ್ವ ನೀಡುವ ಆಲೋಚನೆ ಕೂಡ ಮಾಡಬಾರದು, ಈ ಅಭಿಯಾನಗಳು ಇಷ್ಟಕ್ಕೆ ನಿಲ್ಲುವುದಿಲ್ಲ ಎಂದಿದ್ದಾರೆ. ಮತ್ತೊಂದೆಡೆ ಅಮೆಜಾನ್, ಕೋಕೋ ಕೋಲಾ, ಬೈಜು, ಮತ್ತು ಜಿಯೋ ಕಂಪನಿಗಳು ಐಪಿಎಲ್ ಟೂರ್ನಿಯ ಪ್ರಯೋಕತ್ವವನ್ನು ಪಡೆಯಲು ಬಿಡ್ ಆರಂಭಿಸಿವೆ ಎಂಬುದು ತಿಳಿದುಬಂದಿದೆ.