ರಾಮ ಮಂದಿರದ ಕುರಿತು ಮಾತನಾಡಿದ ಒವೈಸಿಗೆ ಶಿಯಾ ವಕ್ಫ್ ಅಧ್ಯಕ್ಷ ನೀಡಿದ ಉತ್ತರ ಕಂಡು ನೆಟ್ಟಿಗರು ಶಬ್ಬಾಶ್ ಎಂದಿದ್ದು ಯಾಕೆ ಗೊತ್ತಾ?

ರಾಮ ಮಂದಿರದ ಕುರಿತು ಮಾತನಾಡಿದ ಒವೈಸಿಗೆ ಶಿಯಾ ವಕ್ಫ್ ಅಧ್ಯಕ್ಷ ನೀಡಿದ ಉತ್ತರ ಕಂಡು ನೆಟ್ಟಿಗರು ಶಬ್ಬಾಶ್ ಎಂದಿದ್ದು ಯಾಕೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಹಲವಾರು ವರ್ಷಗಳಿಂದ ಬಾಕಿ ಉಳಿದು ಕೊಂಡಿದ್ದ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಗಿದೆ. ಸುಪ್ರೀಂ ತೀರ್ಪಿನ ಬಳಿಕ ಸಾಂವಿಧಾನಿಕವಾಗಿ ಪುಣ್ಯಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ.‌ ಇದೀಗ ಶಿಲಾನ್ಯಾಸ ಕಾರ್ಯಕ್ರಮ ಹಾಗೂ ರಾಮ ಮಂದಿರ ನಿರ್ಮಾಣದ ಕಾರ್ಯಕ್ರಮದ ಕುರಿತು ದೇಶದ ಎಲ್ಲೆಡೆ ಪರ ಹಾಗೂ ವಿರೋಧದ ಹೇಳಿಕೆಗಳು ಕೇಳಿ ಬಂದಿವೆ. ಓವೈಸಿ ರವರು ಕೂಡ ಇದರ ಕುರಿತು ಮಾತನಾಡಿ ನಮೋ ಶಿಲಾನ್ಯಾಸ ಕಾರ್ಯಕ್ರಮಕ್ಕೆ ತೆರಳ ಬಾರದಿತ್ತು, ಇದು ಸಂವಿಧಾನದ ಉಲ್ಲಂಘನೆ ಯಾಗುತ್ತದೆ ಎಂದು ಹೇಳಿ, ಮಂದಿರ ನಿರ್ಮಾಣ ಕಾರ್ಯಕ್ರಮದ ವಿರುದ್ಧವಾಗಿ ಹಲವಾರು ಹೇಳಿಕೆಗಳನ್ನು ನೀಡಿದ್ದರು.

ಇದರ ಕುರಿತು ಇದೀಗ ಭಾರತೀಯ ಮುಸ್ಲಿಮರ ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷ ಸೈಯದ್ ವಾಸಿಮ್ ರಿಜ್ವಿ ರವರು ಓವೈಸಿ ರವರ ಹೇಳಿಕೆಗಳಿಗೆ ಉತ್ತರ ನೀಡಿದ್ದಾರೆ. ಇವರು ನೀಡಿದ ಉತ್ತರಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಸೃಷ್ಟಿಸಿದ್ದು, ಅದ್ಭುತವಾಗಿ ವಿವರಣೆ ನೀಡಿದ್ದೀರಾ, ಓವೈಸಿ ರವರು ಈ ರೀತಿಯ ನಿರ್ಧಾರ ತೆಗೆದುಕೊಂಡರೇ ಯಾವುದೇ ತೊಂದರೆ ಇಲ್ಲ ಎಂದು ಬಹುತೇಕ ಜನ ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು ಸೈಯದ್ ವಾಸಿಮ್ ರಿಜ್ವಿ ಅವರ ಮಾತನ್ನು ಒಪ್ಪಿಕೊಳ್ಳದೇ ನೀವು ಮಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ. ಟ್ರೆಂಡಿಂಗ್ ಸೃಷ್ಟಿಸುವಂತಹ ಉತ್ತರ ನೀಡಿರುವ ಸೈಯದ್ ವಾಸಿಮ್ ರಿಜ್ವಿ ಅವರು ಮಾತನಾಡಿ, ರಾಮ ಮಂದಿರ ನಿರ್ಮಾಣದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಕಾರಣ ಓವೈಸಿ ಮೌನವಾಗಿರಬೇಕು.

ಓವೈಸಿ ರವರು ಪಾಕಿಸ್ತಾನಕ್ಕೆ ತೆರಳಿ ನಮ್ಮ ದೇಶದಲ್ಲಿರುವ ಮುಸ್ಲಿಮರನ್ನು ಹಿಂದೂಗಳ ಜೊತೆ ಶಾಂತವಾಗಿ ಬದುಕಲು ಅನುವು ಮಾಡಿ ಕೊಡಬೇಕು, ದೇಶದ ಪ್ರತಿಯೊಬ್ಬರೂ ಸಂವಿಧಾನದ ನಿಯಮಗಳಿಗೆ ಬದ್ಧರಾಗಿರುತ್ತಾರೆ. ಪ್ರತಿಯೊಬ್ಬರ ವಾದ-ವಿವಾದಗಳನ್ನು ಆಲಿಸುವ ಮೂಲಕ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅಷ್ಟೇ ಅಲ್ಲದೆ ಓವೈಸಿ ರವರು ಇನ್ನು ಮುಂದೆಯಾದರೂ ಹಿಂದೂ ಹಾಗೂ ಮುಸ್ಲಿಂ ಎಂಬ ರಾಜಕೀ-ಯವನ್ನು ನಿಲ್ಲಿಸಬೇಕು. ನಿಮಗೆ ಏನಿದ್ದರೂ ಆಫ್ಘಾನಿಸ್ತಾನ, ಪಾಕಿಸ್ತಾನದಂತಹ ದೇಶಗಳು ಸರಿ, ನೀವು ಅಲ್ಲಿ ಹೋಗಿ ಬದುಕಿ ಇಲ್ಲಿರುವ ಮುಸ್ಲಿಮರು ಹಿಂದೂಗಳ ಜೊತೆ ಶಾಂತವಾಗಿ ಬದುಕುತ್ತಾರೆ. ಓವೈಸಿ ಆಗಲಿ ಅಥವಾ ಇನ್ಯಾರೇ ಆಗಲಿ ಹಿಂದೂಗಳ ಜೊತೆ ಬದುಕುತ್ತಿರುವ ಮುಸ್ಲಿಮರನ್ನು ವಿಭಜನೆ ಮಾಡುವ ಪ್ರಯತ್ನಕ್ಕೆ ಕೈ ಹಾಕಬಾರದು, ಎಲ್ಲರೂ ಸಂವಿಧಾನವನ್ನು ಗೌರವಿಸುತ್ತಾ ದೇಶವನ್ನು ಮುನ್ನಡೆಸಬೇಕು ಎಂದಿದ್ದಾರೆ. ಇವರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಸೃಷ್ಟಿಸಿದ್ದು, ಹಲವಾರು ಜನ ಇವರ ಮಾತುಗಳಿಗೆ ಜೈ ಎಂದಿದ್ದಾರೆ, ನೀವು ಕೂಡ ಇವರ ಮಾತುಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.