ಇದ್ದಕ್ಕಿಂದಂತೆ ಗಡಿಯಲ್ಲಿ ಏರಿದ ಕಾವು ! ಒಂದಾದ ಪಾಕ್ ಹಾಗೂ ಚೀನಾ ! ದೊಡ್ಡ ಆದೇಶ ಹೊರಡಿಸಿದ ಭಾರತೀಯ ಸೇನೆ !

ಇದ್ದಕ್ಕಿಂದಂತೆ ಗಡಿಯಲ್ಲಿ ಏರಿದ ಕಾವು ! ಒಂದಾದ ಪಾಕ್ ಹಾಗೂ ಚೀನಾ ! ದೊಡ್ಡ ಆದೇಶ ಹೊರಡಿಸಿದ ಭಾರತೀಯ ಸೇನೆ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಹಾಗೂ ಚೀನಾ ನಡುವೆ ಏರಿದ್ದ ಕಾವು ಕಳೆದ ಕೆಲವು ದಿನಗಳಿಂದ ದಿನೇ ದಿನೇ ಕಡಿಮೆಯಾಗುತ್ತ ಸಾಗುತಿತ್ತು. ಆದರೆ ಇದ್ದಕ್ಕಿಂದಂತೆ ಇದೀಗ ಗಡಿಯಲ್ಲಿ ಮತ್ತೊಮ್ಮೆ ಕಾವು ಏರಿದೆ, ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಉದ್ವಿಗ್ನತೆ ಸೃಷ್ಟಿಯಾಗಿದೆ. ಯಾಕೆಂದರೆ ಈ ಬಾರಿ ಪಾಕ್ ಹಾಗೂ ಚೀನಾ ದೇಶಗಳು ಒಂದಾಗಿ ಭಾರತದ ವಿರುದ್ಧ ತೊಡೆ ತಟ್ಟಲು ಮುಂದಾಗಿವೆ. ಇದರ ಬೆನ್ನಲ್ಲೇ ಭಾರತೀಯ ಭೂಸೇನಾ ಮುಖ್ಯಸ್ಥರಾದ ಮನೋಜ್ ಮುಕುಂದ್ ನರವನೇ ರವರು ಮತ್ತೊಂದು ದೊಡ್ಡ ಆದೇಶವನ್ನು ಹೊರಡಿಸಿದ್ದಾರೆ. ಇದರಿಂದ ಮೂರು ದೇಶಗಳ ನಡುವೆ ಯುದ್ಧ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಸುವರ್ಣ ನ್ಯೂಸ್ ಸುದ್ದಿ ವರದು ಮಾಡಿದೆ. ನಡೆಯುತ್ತಿರುವ ಸಂಪೂರ್ಣ ವಿದ್ಯಮಾನಗಳ ಕುರಿತು ಇಲ್ಲಿದೆ ಸಂಪೂರ್ಣ ಡೀಟೇಲ್ಸ್. ಸ್ನೇಹಿತರೇ, ಕಳೆದ ಕೆಲವು ದಿನಗಳಿಂದ ಚೀನಾ ದೇಶವು ತನ್ನ ಗಡಿ ಪ್ರದೇಶಗಳಲ್ಲಿ ನದಿನಕ್ಕೂ ವಾಯುನೆಲೆಗಳು, ಟ್ಯಾಂಕರ್ಗಳು ಹಾಗೂ ಸೈನಿಕನ ಜಮಾವಣೆಯನ್ನು ಹೆಚ್ಚು ಮಾಡುತ್ತಿದೆ.

ಶಾಂತಿ ಬಯಸುತ್ತೇವೆ ಎಂದು ಮಾತುಕತೆ ನಡೆಸುವ ಚೀನಾ ದೇಶವು ಪ್ರತಿಬಾರಿಯೂ ಮಾತುಕತೆಯ ನಂತರ ಕೆಲವು ಕಿಲೋಮೀಟರ್ಗಳು ಹಿಂದೆ ಸರಿಯುವುದು, ಮತ್ತು ಅಲ್ಲಿ ಮತ್ತೊಮ್ಮೆ ಸೇನೆಯನ್ನ ಜಮಾವಣೆ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಇನ್ನು ಭಾರತ ದೇಶವು ಕೂಡ ಚೀನಾ ದೇಶದ ಪ್ರತಿಯೊಂದು ನಡೆಗೂ ತಕ್ಕ ಉತ್ತರ ನೀಡಲು ಚೀನಾ ದೇಶದ ನಡೆಗಳಿಗೆ ಅನುಗುಣವಾಗಿ ಸೇನೆ, ಶಸ್ತ್ರಾಸ್ತ್ರ ಸೇರಿದಂತೆ ಯುದ್ಧ ವಿಮಾನಗಳನ್ನು ಗಡಿಗೆ ಸಾಗಿಸಿ, ಪ್ರತಿಯೊಂದು ಸಮಯದಲ್ಲಿಯೂ ಚೀನಾ ದೇಶದ ಸವಾಲುಗಳನ್ನು ಎದುರಿಸಲು ಸಿದ್ಧವಾಗಿ ನಿಂತಿದೆ. ಹೀಗಿರುವಾಗ ಇದೀಗ ಮತ್ತೊಮ್ಮೆ ಚೀನಾ ದೇಶದ ಗಡಿಯಲ್ಲಿ ಹಿಂದೆ ಹೋಗುತ್ತೇವೆ ಎಂದು ಹೇಳಿದ ಬಳಿಕವೂ ಮತ್ತೊಮ್ಮೆ ಸೈನಿಕರನ್ನು ನಿಯೋಜನೆ ಮಾಡುತ್ತಿರುವ ಕಾರಣ ಹಾಗೂ ಮತ್ತೊಂದೆಡೆ ಇದ್ದಕ್ಕಿಂತದಂತೆ ಪಾಕಿಸ್ತಾನ ಗಡಿಯಲ್ಲಿ ಕದ-ನ ವಿರಾಮ ಉಲ್ಲಂಘನೆ ನಡೆಸಿ, ಬಾರಿ ಸಂಖ್ಯೆಯಲ್ಲಿ ಗುಂ-ಡಿನ ದಾ-ಳಿ ನಡೆಸಿದ ಕಾರಣ ಭಾರತೀಯ ಸೇನಾ ಮುಖ್ಯಸ್ಥರು ಅತಿ ದೊಡ್ಡ ಆದೇಶ ಹೊರಡಿಸಿದ್ದಾರೆ.

ಇಷ್ಟು ದಿವಸ ಪ್ರತಿಯೊಂದು ಸವಾಲು ಗಳಿಗೂ ಸಿದ್ದರಾಗಿರಿ ಎನ್ನುತ್ತಿದ್ದ ಭಾರತೀಯ ಭೂಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವನೇ ರವರು ಇದ್ದಕ್ಕಿದ್ದಂತೆ ಹೊಸ ಆದೇಶ ಹೊರಡಿಸಿದ್ದಾರೆ. ಹೌದು ಸ್ನೇಹಿತರೇ, ಈ ಸುದ್ದಿ ಇದೀಗ ಸುವರ್ಣ ನ್ಯೂಸ್ ಚಾನಲ್ಗಳಲ್ಲಿ ಪ್ರಸಾರವಾಗುತ್ತಿದ್ದು, ಭಾರತೀಯ ಭೂಸೇನಾ ಮುಖ್ಯಸ್ಥರಾದ ಮನೋಜ್ ಮುಕುಂದ್ ನರವನೇ ಭಾರತೀಯ ಸೇನೆಯ ಮೂರು ಪಡೆಗಳಿಗೂ ಯುದ್ಧಕ್ಕೆ ಸನ್ನದ್ಧವಾಗಿರುವಂತೆ ಆದೇಶ ಹೊರಡಿಸಿದ್ದಾರೆ. ಗಡಿಯಲ್ಲಿ ಭಾರತ ಹಾಗೂ ಚೀನಾ ದೇಶದ ನಡುವೆ ಉದ್ವಿಗ್ನತೆ ಕಡಿಮೆಯಾದ ಕೆಲವು ದಿನಗಳ ಬಳಿಕ ಇದೀಗ ಮತ್ತೊಮ್ಮೆ ಇದ್ದಕ್ಕಿದ್ದಂತೆ ಗಡಿಯಲ್ಲಿ ಕಾವು ಏರತೊಡಗಿದ್ದು, ಚೀನಾ ದೇಶ ತನ್ನ ಸೇನೆಯನ್ನು ಜಮಾವಣೆ ಮಾಡಿದ ಕೆಲವೇ ಕೆಲವು ನಿಮಿಷಗಳಲ್ಲಿ ಭಾರತೀಯ ಕಮಾಂಡರ್ ಗಳಿಗೆ ಸೇನಾ ಮುಖ್ಯಸ್ಥರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಭಾರತ ಹಾಗೂ ಪಾಕ್,ಚೀನಾ ಗಡಿಯಲ್ಲಿ ಮತ್ತೊಮ್ಮೆ ಕಾವು ಏರಿದ್ದು, ಕೊಂಚ ಏರುಪೇರಾದರೂ ಮೂರು ದೇಶಗಳು ಯುದ್ಧಕ್ಕೆ ಇಳಿಯಲಿವೆ.